For Quick Alerts
ALLOW NOTIFICATIONS  
For Daily Alerts

ವಿಜಯದಶಮಿ 2021: ದಿನಾಂಕ, ಶುಭಮಹೂರ್ತ ಹಾಗೂ ದಸರಾದ ಮಹತ್ವ ಇಲ್ಲಿದೆ

|

ನಾಡಹಬ್ಬ ದಸರಾಗೆ ಕ್ಷಣಗಣನೆ ಆರಂಭವಾಗಿದೆ. ಒಂಬತ್ತು ದಿನಗಳ ನವರಾತ್ರಿ ಸಂಭ್ರಮ ವಿಜಯ ದಶಮಿಯ ಮೂಲಕ ಅಂದ್ರೆ ಅದ್ದೂರಿ ದಸರಾದ ಅಂತ್ಯಗೊಳ್ಳುತ್ತದೆ. ಇದು ಶ್ರೀರಾಮ ರಾವಣನ ವಿರುದ್ಧ ವಿಜಯವನ್ನು ಸಾಧಿಸಿರುವ ಸಂಕೇತದ ಜೊತೆಗೆ ಮಹಿಷಾಸುರನ ವಿರುದ್ಧ ದುರ್ಗಾ ದೇವಿಯ ಜಯವನ್ನು ಸೂಚಿಸುತ್ತದೆ. ಹಾಗಾದರೆ ಈ ವರ್ಷ ದಸರಾ ಯಾವಾಗ ಬಂದಿದೆ? ಅದಕ್ಕಿರುವ ಶುಭ ಮುಹೂರ್ತ ಹಾಗು ಈ ದಸರಾದ ಮಹತ್ವವೇನು ಎಂಬುದನ್ನು ನೋಡಿಕೊಂಡು ಬರೋಣ.

ದಸರಾ/ವಿಜಯದಶಮಿಯ ದಿನಾಂಕ:

ದಸರಾ/ವಿಜಯದಶಮಿಯ ದಿನಾಂಕ:

ಈ ವರ್ಷ, ದಸರಾವನ್ನು ಅಕ್ಟೋಬರ್ 15, 2021 ರಂದು ಆಚರಿಸಲಾಗುತ್ತದೆ. ಶಮಿ ಪೂಜೆ, ಅಪರಾಜಿತ ಪೂಜೆ ಮತ್ತು ಸೀಮೋಲಂಘನವು ಕೆಲವು ಆಚರಣೆಗಳಾಗಿದ್ದು, ಹಿಂದೂ ನಂಬಿಕೆಯ ಪ್ರಕಾರ, ಈ ಆಚರಣೆಗಳನ್ನು ಅಪರಾಹ್ನ ಸಮಯದಲ್ಲಿ ಮಾಡಬೇಕು.

ದಸರಾದ ಶುಭ ಸಮಯ:

ದಸರಾದ ಶುಭ ಸಮಯ:

ವಿಜಯ ಮುಹೂರ್ತ - 02:02 PM ನಿಂದ 02:48 PM

ಅಪರಹಣ ಪೂಜೆಯ ಸಮಯ - 01:16 PM ನಿಂದ 03:34 PM

ದಶಮಿ ತಿಥಿ ಆರಂಭ - 06:52 PM ಅಕ್ಟೋಬರ್ 14, 2021

ದಶಮಿ ತಿಥಿ ಅಂತ್ಯ- 06:02 PM ಅಕ್ಟೋಬರ್ 15, 2021 ರಂದು

ಶ್ರಾವಣ ನಕ್ಷತ್ರ ಆರಂಭ - 09:36 AM ಅಕ್ಟೋಬರ್ 14, 2021

ಶ್ರವಣ ನಕ್ಷತ್ರ ಅಂತ್ಯ - 09:16 AM ಅಕ್ಟೋಬರ್ 15, 2021 ರಂದು

ವಿಜಯದಶಮಿಯ ಇತಿಹಾಸ ಮತ್ತು ಮಹತ್ವ:

ವಿಜಯದಶಮಿಯ ಇತಿಹಾಸ ಮತ್ತು ಮಹತ್ವ:

ವಿಜಯದಶಮಿ ಎಂದರೆ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವು. ಹಿಂದೂ ಪುರಾಣದ ಪ್ರಕಾರ, ಮಹಿಷಾಸುರ ಮೂರು ಲೋಕಗಳಲ್ಲಿ ವಿನಾಶವನ್ನು ಮಾಡಲು ಪ್ರಾರಂಭಿಸಿ, ದೇವರುಗಳನ್ನೂ ಭಯಭೀತಗೊಳಿಸಿದನು. ಆಗ ದುರ್ಗಾ ದೇವಿಯು ಅವರ ರಕ್ಷಣೆಗೆ ಬಂದಳು. ಅವಳು ರಾಕ್ಷಸನನ್ನು ಕೊಲ್ಲುವುದಾಗು ಸವಾಲು ಹಾಕಿ ಒಂಬತ್ತು ದಿನಗಳ ಸುದೀರ್ಘ ಯುದ್ಧದಲ್ಲಿ ಅವನೊಂದಿಗೆ ಹೋರಾಡಿದಳು, ಅಂತಿಮವಾಗಿ ಹತ್ತನೇ ದಿನದಂದು ಶಕ್ತಿಯುತ ಅಸುರನನ್ನು ಸಂಹರಿಸಿದಳು. ಇದಕ್ಕಾಗಿಯೇ ನವರಾತ್ರಿ ಹಬ್ಬದಲ್ಲಿ ದುರ್ಗಾ ದೇವಿಯ 9 ಅವತಾರವನ್ನು 9 ದಿನಗಳವರೆಗೆ ಪೂಜಿಸಲಾಗುತ್ತದೆ. ಹತ್ತನೇ ದಿನ ದುರ್ಗಾ ಪೂಜೆ ಆಚರಣೆಯೊಂದಿಗೆ ಮುಕ್ತಾಯವಾಗುತ್ತದೆ.

ಇನ್ನೂ ಇನ್ನೊಂದು ಪುರಾಣದ ಪ್ರಕಾರ, ರಾಮನು ಅಶ್ವಿನ ಮಾಸದ ವೇಳೆ ಸಮುದ್ರ ತಟದಲ್ಲಿ ಕುಳಿತು ದುರ್ಗಾ ದೇವಿಯ ಹೊಸ ರೂಪಗಳನ್ನು ಪೂಜಿಸಲು ಆರಂಭಿಸಿದನು. ಚಂಡಿ ಪೂಜೆ ಇದರಲ್ಲಿ ಅತ್ಯಂತ ವಿಶೇಷವಾಗಿತ್ತು. ಮರ್ಯಾದಾ ಪುರುಷೋತ್ತಮ ಶ್ರೀರಾಮನು ಲಂಕೆಯನ್ನು ವಶಪಡಿಸಿಕೊಳ್ಳುವ ಆಕಾಂಕ್ಷೆಯಿಂದ 9 ದಿನಗಳ ಕಾಲ ನಿರಂತರವಾಗಿ ಶಕ್ತಿ ದೇವತೆಯನ್ನು ಪೂಜಿಸುತ್ತಿದ್ದನು. ಆತನ ಪೂಜೆಯಿಂದ ಸಂತೋಷಗೊಂಡ ದುರ್ಗಾ ದೇವಿಯು 9 ನೇ ದಿನದಂದು ಭಗವಾನ್ ರಾಮನಿಗೆ ವಿಜಯವನ್ನು ಆನುಗ್ರಹಿಸುತ್ತಾಳೆ. ದುರ್ಗೆಯ ಅನುಗ್ರಹದಿಂದ ರಾಮನು ಹತ್ತನೇ ದಿನ ಲಂಕೆಯನ್ನು ತಲುಪಿ ರಾವಣನನ್ನು ಕೊಂದನು. ಅಂದಿನಿಂದ ನವರಾತ್ರಿ ಪೂಜೆಯ ನಂತರ ಹತ್ತನೇ ದಿನ, ಅಧರ್ಮದ ವಿರುದ್ಧ ಧರ್ಮವು ಜಯ ಸಾಧಿಸಿರುವ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನೇ ವಿಜಯದಶಮಿ ಎನ್ನಲಾಗುತ್ತದೆ.

English summary

Dasara 2021 Date, Time, History and Significance of Vijayadashami

Here we talking about Dussehra 2021 Date, Time, History and Significance of Vijayadashami , read on
X
Desktop Bottom Promotion