For Quick Alerts
ALLOW NOTIFICATIONS  
For Daily Alerts

ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ

|

ಮನುಕುಲವನ್ನು ಬೆಚ್ಚಿಬೀಳಿಸಿದ ಕೊರೊನಾ ಅಟ್ಟಹಾಸಕ್ಕೆ ಅಂತೂ ಪೂರ್ಣವಿರಾಮ ನೀಡುವ ಕಾಲ ಸನ್ನಿಹಿತವಾಗಿದೆ. ಹೌದು, ಕೊರೊನಾ ವಿರುದ್ಧ ಲಸಿಕೆ ದೊರೆತಿದ್ದು, ಅದನ್ನು ಜಗತ್ತಿನಾದ್ಯಂತ ವಿತರಣೆ ಕೂಡ ಮಾಡಲಾಗುತ್ತಿದೆ.

ವಿಶ್ವದ ಅತೀ ದೊಡ್ಡ ಲಸಿಕೆ ವಿತರಣಾ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಜನವರಿ 16 ರಂದು ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಆದರೆ ಆರೋಗ್ಯ ಕಾರ್ಯಕರ್ತರಲ್ಲೂ ಯಾರಿಗೆ ಲಸಿಕೆ ನೀಡಬೇಕು? ಯಾವ ನಿಯಮ ಅನುಸರಿಸಬೇಕು? ಗಮನಹರಿಸಬೇಕಾದ ವಿಷಯಗಳೇನು? ಈ ಕುರಿತ ಸಂಪೂರ್ಣ ಮಾಹಿತಿಗಳ ಮಾರ್ಗಸೂಚಿ ಪ್ರಕಟಿಸಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ

Contraindications For Covid vaccine | Known COVID-19 Contraindications In Kannada

1. 18 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡುವಂತಿಲ್ಲ.

2. ಕೋವಿಡ್ ವ್ಯಾಕ್ಸಿನ್ ಕೊಟ್ಟ ಬಳಿಕ, ಇತರೆ ಯಾವುದೇ ಲಸಿಕೆ ಪಡೆಯುವವರಿದ್ದರೆ 14 ದಿನ ಅಂತರ ಇರಬೇಕು.

3. ಇನ್ನು ಮೊದಲ ಡೋಸ್ ನಲ್ಲಿ ಯಾವ ಲಸಿಕೆ ಪಡೆದಿದ್ದಿರೋ, ಅದೇ ಲಸಿಕೆಯನ್ನು ಎರಡನೇ ಡೋಸ್ ನಲ್ಲೂ ಪಡೆಯಬೇಕು. ಅನುಮತಿ ನೀಡಿದ ಎರಡೂ ಲಸಿಕೆಯನ್ನು ಬಳಸುವಂತಿಲ್ಲ.

4. ಹೊಸ ವೈರಸ್ ಅಥವಾ ಸೋಂಕು ಇರುವವರಿಗೆ ಲಸಿಕೆ ಕೊಡಬೇಕಾ ಬೇಡವಾ? ಅವರು ಯಾವ ನಿಯಮ ಅನುಸರಿಸಬೇಕು ಅನ್ನೋ ಕುರಿತು ಕೇಂದ್ರ ಸ್ಪಷ್ಟವಾಗಿ ಹೇಳಿದ್ದು, ಆರೋಗ್ಯ ಕಾರ್ಯಕರ್ತರಿಗೆ ಹೊಸ ವೈರಸ್ ತಗುಲಿದ್ದರೆ, ಚೇತರಿಸಿಕೊಂಡ ಬಳಿಕ ವ್ಯಾಕ್ಸಿನ್ ಕೊಡಬಹುದು.

5. ಆರ್ ಟಿಪಿಸಿಆರ್ ನಲ್ಲಿ ಸೋಂಕು ದೃಢಪಟ್ಟು ಗುಣಮುಖರಾದ ಮೇಲೆ ಸುಸ್ತು, ಅನಾರೋಗ್ಯ ಇದ್ದರೂ ವ್ಯಾಕ್ಸಿನ್ ಕೊಡಬಹುದು. ಅಸ್ವಸ್ಥತೆ, ದೀರ್ಘಕಾಲದ ‌ಖಾಯಿಲೆಯಿಂದ ಬಳಲುತ್ತಿದ್ದವರಿಗೆ ವ್ಯಾಕ್ಸಿನ್ ಕೊಡಬಹುದು.

6. ವ್ಯಾಕ್ಸಿನ್ ಕೊಟ್ಟಾಗ ಯಾರ ಮೇಲೆ ಹೆಚ್ಚು ನಿಗಾ ಇಡಬೇಕು ಅಂದ್ರೆ, ಇತರ ಆರೋಗ್ಯ ಸಮಸ್ಯೆ ಇರುವವರು, ಹೈ ಬಿಪಿ, ಶುಗರ್ ಇರುವವರು, ಉಸಿರಾಟದ ಸಮಸ್ಯೆ ಇರುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು.

7. ಬ್ಲೀಡಿಂಗ್ ಸಮಸ್ಯೆ ಇರುವ ಇತಿಹಾಸ ಇದ್ದರೆ, ಪ್ಲೇಟ್ಲೆಟ್ಸ್ ಕಡಿಮೆ ಹೆಚ್ಚು ಕಂಡುಬಂದಿರುವ ಇತಿಹಾಸ ಇದ್ದವರ ಮೇಲೆಯೂ ಸಹ ಹೆಚ್ಚು ನಿಗಾ ಇಡಬೇಕು.

8. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಕೋವಿಡ್ -19 ಲಸಿಕೆ ನೀಡಬಾರದು. ಏಕೆಂದರೆ ಗರ್ಭಿಣಿಯರು, ಹಾಲುಣಿಸುವ ಅಥವಾ ಗರ್ಭಧಾರಣೆಯ ದೃಡೀಕರಣವನ್ನು ನಿರೀಕ್ಷಿಸುವ ಮಹಿಳೆಯರು ಯಾವುದೇ ಲಸಿಕೆ ಪ್ರಯೋಗಗಳ ಭಾಗವಾಗಿರಲಿಲ್ಲ.

9. ಕೋವಿಡ್ -19 ಲಸಿಕೆಯ ಹಿಂದಿನ ಡೋಸ್ ಗೆ (ಪ್ರಯೋಗಗಳ ಸಮಯದಲ್ಲಿ) ಅನಾಫಿಲ್ಯಾಕ್ಟಿಕ್ ಅಥವಾ ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿರುವವರು ಲಸಿಕೆ ಸ್ವೀಕರಿಸಬಾರದು.

10. ಲಸಿಕೆಗಳು ಅಥವಾ ಚುಚ್ಚುಮದ್ದಿನ ಚಿಕಿತ್ಸೆಗಳು, ಔಷಧೀಯ ಉತ್ಪನ್ನಗಳು ಅಥವಾ ಆಹಾರ ಪದಾರ್ಥಗಳಿಗೆ ತಕ್ಷಣದ ಅಥವಾ ವಿಳಂಬವಾದ ಅನಾಫಿಲ್ಯಾಕ್ಸಿಸ್ ಅಥವಾ ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿರುವ ಯಾರಾದರೂ ಲಸಿಕೆ ತೆಗೆದುಕೊಳ್ಳಬಾರದು.

11. ಕೋವಿಡ್ -19 ರ ಸಕ್ರಿಯ ಲಕ್ಷಣಗಳನ್ನು ತೋರಿಸುವವರು ಚೇತರಿಸಿಕೊಂಡ 4-8 ವಾರಗಳ ನಂತರ ಮಾತ್ರ ಲಸಿಕೆ ತೆಗೆದುಕೊಳ್ಳಬಹುದು.

12. ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದ SARS-COV-2 ರೋಗಿಗಳು ಚೇತರಿಸಿಕೊಂಡ 4-8 ವಾರಗಳ ನಂತರ ಲಸಿಕೆ ಪಡೆಯಬೇಕು.

13. ತೀವ್ರ ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾದ ಯಾರಾದರೂ (ಕೋವಿಡ್ -19 ಅಲ್ಲದ ಸಂಬಂಧಿತ ಕಾಯಿಲೆಗಳಿದ್ದರೂ ಸಹ) ಈಗ ಲಸಿಕೆ ತೆಗೆದುಕೊಳ್ಳಬಾರದು. ಸಂಪೂರ್ಣ ಚೇತರಿಕೆಯ ನಂತರ ತೆಗೆದುಕೊಳ್ಳಬಹುದು.

14. ಥ್ರಂಬೋಸೈಟೋಪೆನಿಯಾ (ಅಸಹಜವಾಗಿ ಕಡಿಮೆ ಪ್ಲೇಟ್‌ಲೆಟ್‌ಗಳು) ಇರುವವರಿಗೆ ಕೋವಿಶೀಲ್ಡ್ ಅನ್ನು ಎಚ್ಚರಿಕೆಯಿಂದ ಪಡೆದುಕೊಳ್ಳಬೇಕು.

English summary

Contraindications For Covid vaccine | Known COVID-19 Contraindications In Kannada

Here we tol about Contraindications for Covid vaccine | Known COVID-19 Contraindications in Kannada, have a look
X
Desktop Bottom Promotion