For Quick Alerts
ALLOW NOTIFICATIONS  
For Daily Alerts

ಮೇ 2021: ಇಲ್ಲಿದೆ ಶುಭ ಕಾರ್ಯಕ್ಕೆ ಉತ್ತಮ ದಿನಾಂಕಗಳು

|

ನಾವು ಕೈಗೊಳ್ಳುವ ಪ್ರತಿಯೊಂದು ಶುಭ ಸಮಾರಂಭಗಳಿಗೆ ಉತ್ತಮವಾದ ದಿನ, ಶುಭ ಮುಹೂರ್ತಗಳನ್ನು ನೋಡುವುದು ರೂಢಿ. ಇದರಿಂದ ಶ್ರೇಷ್ಠ ಫಲಗಳು ಪ್ರಾಪ್ತವಾಗುತ್ತವೆ ಎಂಬುದು ಎಲ್ಲರ ನಂಬಿಕೆ. ಸದ್ಯ ಕೊರೋನಾ ತಡೆಯಲು ರಾಜ್ಯದಲ್ಲಿ ಲಾಕ್ ಡೌನ್ ವಿಧಿಸಿದ್ದು, ದೊಡ್ಡ ಮಟ್ಟದ ಸಭೆ-ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ.

ಆದಾಗ್ಯೂ, ಕೊರೋನಾದ ಯಾವುದೇ ಮಾರ್ಗಸೂಚಿಗಳಿಗೆ ಧಕ್ಕೆಯಾಗದಂತೆ, ಕೇವಲ ಮನೆ ಸದಸ್ಯರಷ್ಟೇ ಭಾಗಿಯಾಗಿ ಶುಭ ಕಾರ್ಯಗಳನ್ನು ನೆರವೇರಿಸುತ್ತೇವೆ ಎನ್ನುವರಿಗಾಗಿ ಮೇ ತಿಂಗಳಲ್ಲಿ ಇರುವ ಶುಭ ದಿನಾಂಕ ಮತ್ತು ಮುಹೂರ್ತಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

ಮೇ ತಿಂಗಳಲ್ಲಿ ಶುಭ ಸಮಾರಂಭಗಳಿಗೆ ಇರುವ ಉತ್ತಮ ದಿನಾಂಕಗಳು ಮತ್ತು ಮುಹೂರ್ತಗಳನ್ನು ಈ ಕೆಳಗೆ ನೀಡಲಾಗಿದೆ:

ನಾನಾ ಕಾರಣಗಳಿಂದ ಮುಂದೂಡಿಕೊಂಡು ಬಂದಿದ್ದ, ಶುಭ ಕಾರ್ಯಗಳನ್ನು ಮೇ ತಿಂಗಳಲ್ಲಿ ಮಾಡುವ ಯೋಚನೆಯಲ್ಲಿದ್ದರೆ, ಅಥವಾ ಏಪ್ರಿಲ್ ನಲ್ಲಿ ನಿಮ್ಮ ಕಾರ್ಯಕ್ಕೆ ಉತ್ತಮ ದಿನಾಂಕಗಳು ದೊರೆಯದೇ ಇದ್ದಿದ್ದರೇ ಅಂತಹವರಿಗಾಗಿ ನಾವು ಮೇ ಯಲ್ಲಿ ಇರುವ ಉತ್ತಮ ದಿನಾಂಕಗಳ ಮಾಹಿತಿಯನ್ನು ನೀಡಿದ್ದೇವೆ. ಈಗಲೇ ನಿಮ್ಮ ದಿನಾಂಕಗಳನ್ನು ಬುಕ್ ಮಾಡಿಕೊಳ್ಳಿ. ಬೇಸಿಗೆ ಕಾಲದಲ್ಲಿ ಶುಭ ಸಮಾರಂಭಗಳನ್ನು ಮಾಡಲು ಸಿದ್ದರಾಗಿ.

ಮೇ ತಿಂಗಳಲ್ಲಿ ಶುಭ ಸಮಾರಂಭಗಳಿಗೆ ಇರುವ ಉತ್ತಮ ದಿನಾಂಕಗಳು:

ಮೇ 05 ಗುರುವಾರ ಇಡೀ ದಿನ

ಮೇ 11 ಬುಧವಾರ ಬೆಳಿಗ್ಗೆ 9.14ರ ನಂತರ

ಮೇ 15 ಭಾನುವಾರ ಬೆಳಿಗ್ಗೆ 9.52ರಿಂದ ಸಂಜೆ 5.16ರವರೆಗೆ

ಮೇ 16 ಸೋಮವಾರ ಮಧ್ಯಾಹ್ನ 1.30ರಿಂದ ರಾತ್ರಿ 8.42ರವರೆಗೆ

ಮೇ 17 ಮಂಗಳವಾರ ಬೆಳಿಗ್ಗೆ 8.10ರ ನಂತರ

ಮೇ 18 ಬುಧವಾರ ಸಂಜೆ 4.40ರವರೆಗೆ

ಮೇ 21 ಶನಿವಾರ ಮಧ್ಯಾಹ್ನ 2.46ರ ನಂತರ

ಮೇ 22 ಭಾನುವಾರ ಇಡೀ ದಿನ

ಮೇ 23 ಸೋಮವಾರ ಇಡೀ ದಿನ

ಮೇ 24 ಮಂಗಳವಾರ ಬೆಳಿಗ್ಗೆ 7.14ರವರೆಗೆ

ಮೇ 26 ಗುರುವಾರ ಮಧ್ಯಾಹ್ನ 12.44ರ ನಂತರ

ಮೇ 27 ಶುಕ್ರವಾರ ಸಂಜೆ 6.00ಗಂಟೆಯ ನಂತರ

ಮೇ 28 ಶನಿವಾರ ಇಡೀ ದಿನ

ಮೇ 29 ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 10.30ವರೆಗೆ

English summary

Auspicious Dates in The Month of May 2021

Here we talking about Auspicious Dates in the month of May 2011, read on
X