For Quick Alerts
ALLOW NOTIFICATIONS  
For Daily Alerts

74 ವರ್ಷದ ವೃದ್ಧೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಕಥೆ

|

ಐವತ್ತು ವರ್ಷ ದಾಟಿತು ಎಂದರೆ ವೃದ್ಧರು ಎನ್ನುವ ಕಲ್ಪನೆಗೆ ಬಂದು ಬಿಡುತ್ತೇವೆ. ಏಕೆಂದರೆ ಐವತ್ತು ವರ್ಷ ದಾಟುತಿದ್ದಂತೆ ದೇಹದಲ್ಲಿ ಶಕ್ತಿಯು ಇಳಿ ಮುಖವಾಗುತ್ತಾ ಹೋಗುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆ, ವಿಟಮಿನ್‍ಗಳ ಕೊರತೆ, ಜೀರ್ಣಾಂಗ ಕ್ರಿಯೆಯಲ್ಲಿ ತೊಂದರೆ, ಮೂತ್ರ ಸಮಸ್ಯೆ, ಹಾರ್ಮೋನ್‍ಗಳ ಬದಲಾವಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹೀಗೆ ಹಲವಾರು ಸಮಸ್ಯೆಗಳು ಒಂದಾದ ಮೇಲೆ ಒಂದರಂತೆ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ಅನಾರೋಗ್ಯಕ್ಕೆ ಎಂದು ಪಡೆದ ಔಷಧಗಳೇ ಅಡ್ಡ ಪರಿಣಾಮ ಬೀರುವುದರ ಮೂಲಕ ಇನ್ನೊಂದು ಆರೋಗ್ಯ ಸಮಸ್ಯೆಯನ್ನು ಹುಟ್ಟಿಸಿಬಿಡುತ್ತದೆ. ಒಟ್ಟಿನಲ್ಲಿ ಐವತ್ತರ ನಂತರದ ಜೀವನ ಮಾತ್ರೆಗಳ ಮೇಲೆ ನಿಂತಿರುತ್ತದೆ ಎಂದು ಹೇಳಲಾಗುವುದು.

ಹಾಗಾಗಿ, ವೃದ್ಧರಾದ ಮೇಲೆ ಯಾವುದೇ ಶ್ರಮದಾಯಕವಾದ ಕೆಲಸ ಮಾಡಲು ಸಾಧ್ಯವಿಲ್ಲ. ದೇಹದ ಎಲ್ಲಾ ಅಂಗಾಂಗಗಳು ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಆಕಾರಣಕ್ಕಾಗಿ ಆದಷ್ಟು ವಿಶ್ರಾಂತಿಯ ಮೊರೆ ಹೋಗಬೇಕು. ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವಷ್ಟು ಗಟ್ಟಿಯಾಗಿ ಇರಬೇಕು ಎನ್ನುವ ಕಾರಣಕ್ಕೆ ವಾಕಿಂಗ್, ಲಘು ವ್ಯಾಯಾಮವನ್ನು ಕೈಗೊಳ್ಳುತ್ತಾರೆ. ಇಂತಹ ವಯಸ್ಸಿನ ಮಹಿಳೆ ಗರ್ಭಧಾರಣೆ ಹೊಂದುವುದು ಎಂದರೆ ಅಚ್ಚರಿಯ ಸಂಗತಿ ಹಾಗೂ ಹಾಸ್ಯಾಸ್ಪದ ಎನಿಸುವುದು.

74 Years Andhra woman gives birth to twins

ಮಹಿಳೆಯರಿಗೆ ಸಾಮಾನ್ಯವಾಗಿ ಐವತ್ತು ವರ್ಷದ ಒಳಗೆ ಅಂಡಾಣು ಬಿಡುಗಡೆಯಾಗುವ ಕ್ರಿಯೆಯು ನಿಂತಿರುತ್ತದೆ. ಮಗುವನ್ನು ಹೊರುವಂತಹ ದೇಹ ಸ್ಥಿತಿಯು ಇರುವುದಿಲ್ಲ. ಹಾಗಾಗಿ ಆ ವಯಸ್ಸಿನಲ್ಲಿ ಮಗುವನ್ನು ಪಡೆಯುವುದು ಎಂದರೆ ಅದೊಂದು ಆಶ್ಚರ್ಯದ ಸಂಗತಿಯಾಗುವುದು. ನಿಜ, ಇಂತಹ ಆಶ್ಚರ್ಯವನ್ನು ಹುಟ್ಟಿಸುವಂತಹ ಘಟನೆ ಒಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

ದಾಖಲೆ ಮುರಿದ ಮಂಗಯಮ್ಮ

ಹೌದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ 74 ವರ್ಷದ ಮಹಿಳೆಯೊಬ್ಬರು ಇನ್ ವಿಟ್ರೋ ಫಲೀಕರಣದ (ಐವಿಎಫ್) ಮೂಲಕ ಗರ್ಭಧರಿಸಿ, ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. 2016ರಲ್ಲಿ ಪಂಜಾಬ್ ನ ದಲ್ಜಿಂದರ್ ಪ್ರದೇಶದಲ್ಲಿ 70ನೇ ವರ್ಷದಲ್ಲಿ ಮೊದಲ ಬಾರಿಗೆ ತಾಯಿಯಾಗಿದ್ದರು. ಇದೀಗ ಇವರ ದಾಖಲೆಯನ್ನು 74 ವರ್ಷದ ಮಂಗಯಮ್ಮ ಮುರಿದಿದ್ದಾಳೆ.

ಒಂದಲ್ಲ ಎರಡು ಮಗುವಿಗೆ ಜನ್ಮ ನೀಡಿದ ಮಂಗಯಮ್ಮ

74 Years Andhra woman gives birth to twins

ಪೂರ್ವ ಗೋದಾವರಿ ಜಿಲ್ಲೆಯ ದೃಷ್ಟರಾಮಂ ಬ್ಲಾಕ್, ನೆಲಪಾರ್ತಿಗಾಡು ಗ್ರಾಮದ ನಿವಾಸಿ 80 ವರ್ಷದ ಇ. ರಾಜರಾವ್, ಇವರ ಪತ್ನಿ ಎರ್ರಮಟ್ಟಿ ಮಂಗಯಮ್ಮ 74 ವರ್ಷದವರು. ಇವರು ಸೆಪ್ಟೆಂಬರ್ 5ರಂದು ಗುರುವಾರ ಬೆಳಿಗ್ಗೆ 10.30 ರ ಹೊತ್ತಿಗೆ ಕೋಥಾಪೇಟೆಯ ಅಹಲ್ಯ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆಯು ಸರಾಗವಾಗಿ ನಡೆದಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿ ಇದ್ದಾರೆ. ತಾಯಿ ಕೆಲವು ಗಂಟೆಗಳ ಕಾಲ ಸಾಕಷ್ಟು ನೋವನ್ನು ಅನುಭವಿಸಿದ್ದರಿಂದ ಅವರ ಆರೋಗ್ಯದ ನಿಮಿತ್ತ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಗಿದೆ ಎಂದು ಸಿ-ವಿಭಾಗವನ್ನು ನಿರ್ವಹಿಸಿದ ಆಸ್ಪತ್ರೆಯ ನಿರ್ದೇಶಕ ಡಾ. ಸನಕಯ್ಯಲಾ ಉಮಾಶಂಕರ್ ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆ ಇಲ್ಲದಿರುವುದೇ ಗುಟ್ಟು

ವೈದ್ಯರು ಹೇಳುವ ಪ್ರಕಾರ ಇದೊಂದು ಅಪರೂಪದ ಪ್ರಕರಣ. ಮಂಗಯಮ್ಮ ಅವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ಇರುವುದರಿಂದ ತನ್ನ ಈ ವಯಸ್ಸಿನಲ್ಲೂ ಗರ್ಭವನ್ನು ಧರಿಸಿ, ಮಕ್ಕಳನ್ನು ಪಡೆಯಲು ಸಾಧ್ಯವಾಯಿತು. ಗರ್ಭವತಿಯಾಗಿದ್ದಾಗ ಹಾಗೂ ಪ್ರಸವದ ಸಮಯದಲ್ಲಿ ಅವರ ಆರೋಗ್ಯದಿಂದಲೂ ಯಾವುದೇ ತೊಂದರೆ ಉಂಟಾಗಲಿಲ್ಲ. ಅಂತೆಯೇ ಪ್ರಸವದ ನಂತರವೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆ ಉಂಟಾಗದು ಎಂದು ಭಾವಿಸಿದ್ದಾರೆ. ಆಕೆಯ ಒಂದು ದುರಾದೃಷ್ಟ ಎಂದರೆ ಎದೆ ಹಾಲು ಇಲ್ಲದಿರುವುದು, ಆದರೆ ಚಿಂತೆಯಿಲ್ಲ. ಹಾಲಿನ ಬ್ಯಾಂಕ್ ನಿಂದ ಪಡೆದ ಹಾಲಿನೊಂದಿಗೆ ಶಿಶುಗಳಿಗೆ ಆಹಾರವನ್ನು ನೀಡಬಹುದು ಎಂದು ವೈದ್ಯರು ಧೈರ್ಯ ತುಂಬಿದ್ದಾರೆ.

57 ವರ್ಷಗಳಿಂದಲೂ ಮಕ್ಕಳಾಗಿರಲಿಲ್ಲ

ಮಂಗಯಮ್ಮ ಮತ್ತು ರಾಜರಾವ್ ಜೋಡಿಯು ಮಾರ್ಚ್ 22, 1962ರಲ್ಲಿ ವಿವಾಹವಾಗಿದ್ದರು. ಕೃಷಿಯನ್ನು ನಂಬಿ ಜೀವನ ನಡೆಸುವ ಇವರಿಗೆ 57 ವರ್ಷಗಳಿಂದಲೂ ಮಕ್ಕಳಾಗಿರಲಿಲ್ಲ. ಹಲವಾರು ಆಸ್ಪತ್ರೆಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದಿದ್ದರೂ ಗರ್ಭಧರಿಸಲು ಸಾಧ್ಯವಾಗಿರಲಿಲ್ಲ. 25 ವರ್ಷಗಳ ಹಿಂದೆ ಮೆನೋಪಾಸ್ ಹೊಂದಿದಾಗಲೂ ತಾನು ಗರ್ಭವತಿಯಾಗಬೇಕು ಎನ್ನುವಂತಹ ಗಾಢವಾದ ಬಯಕೆಯನ್ನು ಹೊಂದಿದ್ದಳು. ಕಳೆದ ವರ್ಷ ತನ್ನ ನೆರೆಹೊರೆಯ ಮಹಿಳೆಯೊಬ್ಬಳು ಐವಿಎಫ್ ಮೂಲಕ ಗರ್ಭಿಣಿಯಾಗಿರುವುದನ್ನು ತಿಳಿದುಕೊಂಡಿದ್ದಳು. ಬಳಿಕ ತನ್ನಲ್ಲಿದ್ದ ನೋವನ್ನು ನಿವಾರಿಸಿಕೊಳ್ಳಲು ಮುಂದಾದಳು.

ಐವಿಎಫ್ ಮೂಲಕ ಮಗು ಪಡೆದ ದಂಪತಿಗಳು

74 Years Andhra woman gives birth to twins

ಮಂಗಮ್ಮ ತನ್ನ ಇಷ್ಟದಂತೆ ಐವಿಎಫ್ ಮೂಲಕ ಗರ್ಭ ಧರಿಸಲು ಮುಂದಾದಳು. ಅವಳ ಇಚ್ಛಾಶಕ್ತಿ ಹಾಗೂ ದೇಹದ ಆರೋಗ್ಯವು ಉತ್ತಮವಾಗಿರುವುದರಿಂದ ಗರ್ಭಧಾರಣೆ ಹೊಂದಲು ಸಹಾಯವಾಯಿತು. ಗರ್ಭಧಾರಣೆ ಹೊಂದಲು ಯಾವುದೇ ತೊಂದರೆ ಉಂಟಾಗದು ಎನ್ನುವುದನ್ನು ವೈದ್ಯರು ಅರಿತಿದ್ದರು. ಮಂಗಯಮ್ಮನಿಗೆ ಋತುಚಕ್ರದ ಅವಧಿ (ಮೆನೋಪಾಸ್) ಮುಗಿದಿದ್ದರಿಂದ ಅಂಡಾಣು ಉತ್ಪಾದಿಸುವ ಶಕ್ತಿ ಇರಲಿಲ್ಲ. "ಹಾಗಾಗಿ ಒಬ್ಬ ದಾನಿಗಳಿಂದ ಮೊಟ್ಟೆಯನ್ನು ಪಡೆದು ಐವಿಎಫ್ ವಿಧಾನದ ಮೂಲಕ ರಾಜರಾವ್ ಅವರ ವೀರ್ಯದೊಂದಿಗೆ ಫಲವತ್ತಾಗುವಂತೆ ಮಾಡಲಾಯಿತು". ಅದೃಷ್ಟವಶಾತ್ ಮಂಗಮ್ಮ ಮೊದಲು ಚಕ್ರದಲ್ಲಿಯೇ ಗರ್ಭಧರಿಸಿದಳು ಎಂದು ವೈದ್ಯರು ಹೇಳಿದ್ದಾರೆ.

ನಿರಂತರ ವೀಕ್ಷಣೆ

ಮಂಗಯಮ್ಮ ಗರ್ಭಧರಿಸಿದ ಬಳಿಕ ನಿರಂತರವಾಗಿ ವೀಕ್ಷಣೆಗೆ ಒಳಪಡಿಸಲಾಯಿತು. ಹೃದ್ರೋಗ ತಜ್ಞರು, ಶ್ವಾಸಕೋಶ ಶಾಸ್ತ್ರಜ್ಞರು, ಸ್ತ್ರೀರೋಗ ತಜ್ಞರು ಮತ್ತು ಪೌಷ್ಟಿಕ ತಜ್ಞರು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದರು. ಹೆರಿಗೆಯ ಸಮಯದಲ್ಲಿ ಅವಳಿಗೆ ಕಷ್ಟವಾಗಬಹುದು, ಅವಳ ವಯಸ್ಸನ್ನು ಗಮನದಲ್ಲಿ ಇರಿಸಿಕೊಂಡು ಸಿಸೇರಿಯನ್ ಮೂಲಕ ಪ್ರಸವ ಮಾಡಿಸಿದೆವು ಎಂದು ವೈದ್ಯರು ಹೇಳಿದ್ದಾರೆ.

ಏನೇ ಇರಲಿ, ಇಚ್ಛಾಶಕ್ತಿ ಹಾಗೂ ಆರೋಗ್ಯ ಭಾಗ್ಯವನ್ನು ಹೊಂದಿದ್ದರೆ ಎಂತಹ ಸಮಯವನ್ನಾದರೂ ಜಯಿಸಬಲ್ಲೆವು ಎನ್ನುವುದಕ್ಕೆ ಮಂಗಯಮ್ಮನ ಕಥೆಯು ಒಂದು ನಿದರ್ಶನವಾಗುವುದು.

English summary

74 Years Andhra woman gives birth to twins

A 74-year old woman gave birth to twin girls, conceived through in-vitro fertilisation, in Andhra Pradesh’s Guntur district on Thursday. Mangayamma and Raja Rao, an agriculturist, got married on March 22, 1962, and had been childless for the past 57 years. they could not succeed in her attempts to conceive even after visiting several hospitals. Even after she attained menopause nearly 25 years ago, she had a strong desire to become a mother.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more