For Quick Alerts
ALLOW NOTIFICATIONS  
For Daily Alerts

ಮೇ 7 ರಿಂದ ಮೇ 14. 2018 ರ ನಿಮ್ಮ ವಾರ ಭವಿಷ್ಯ ಹೇಗಿದೆ ಗೊತ್ತಾ..

By Sushma Charhra
|

ನಿಮ್ಮ ಈ ವಾರವನ್ನು ಹೀಗೆ ಆರಂಭಿಸಿ. ಯಾಕೆಂದರೆ ನಿಮ್ಮ ದಿನಚರಿ ಈ ವಾರದಲ್ಲಿ ಹೇಗಿರುತ್ತೆ ಅನ್ನುವ ಲೆಕ್ಕಾಚಾರವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ಮಾಹಿತಿಗಳು ನಿಮ್ಮ ಕರಿಯರ್, ಮದುವೆ, ಸಂಬಂಧ, ಗೆಲುವು,ಆರೋಗ್ಯ ಹಾಗೂ ಇತರೆ ಹಲವಾರು ಅಂಶಗಳನ್ನು ಒಳಗೊಂಡಿರುತ್ತೆ. ಉದಾಹರಣೆಗೆ ನಕ್ಷತ್ರಗಳು ಹೇಳುವ ಪ್ರಕಾರ ಪ್ರತಿ ರಾಶಿಯವರ ಜೀವನದಲ್ಲಿ ಈ ವಾರ ಬರುವ ಬರುವ ಘಟನೆಗಳನ್ನು ವಿವರಿಸುತ್ತೆ. ಈ ಲೇಖನದಲ್ಲಿ ನಾವು ಪ್ರತಿಯೊಂದು ರಾಶಿಯವರ ಜೀವನದಲ್ಲಿ ಈ ವಾರ ಏನನ್ನು ನಿರೀಕ್ಷಿಸಬಹುದು ಅನ್ನುವ ಮಾಹಿತಿಯನ್ನು ನೀಡಲಾಗಿದೆ. ಮುಂದೆ ಓದಿ

ವೃಷಭ ಎಪ್ರಿಲ್ 20 ಮೇ 20 :

ವೃಷಭ ಎಪ್ರಿಲ್ 20 ಮೇ 20 :

ಈ ವಾರವನ್ನು ನೀವು ಆಶಿರ್ವಾದದ ಭಾವನೆಯಿಂದ, ಬಹಳ ಆತ್ಮವಿಶ್ವಾಸ ಮತ್ತು ಶಕ್ತಿಯೊಂದಿಗೆ ಆರಂಭಿಸುತ್ತೀರಿ. ದೊಡ್ಡ ಕೆಲಸಗಳನ್ನು ಮಾಡಲು ಈ ವಾರ ಪ್ರಶಸ್ತವಾಗಿದೆ. ಕುಳಿತಲ್ಲೇ ಕೂತು ನಿಮ್ಮ ಸುತ್ತಲಿನ ವಾತಾವರಣವನ್ನು ಗ್ರಹಿಸುತ್ತಿದ್ದರೆ ಸಾಕು, ಯಶಸ್ಸು ನಿಮಗೆ ಸುಲಭದಲ್ಲಿ ಸಿಗಲಿದೆ ಅನ್ನುವುದು ಅರ್ಥವಾಗುತ್ತೆ. ಆದರೆ ಈ ವಾರ ನೀವು ಬದಲಾವಣೆಗೊಂದು ಅವಕಾಶ ನೀಡಬೇಕಾಗಿದೆ ಯಾಕೆಂದರೆ, ಕೆಲವು ವಿಚಾರಗಳು ನಿಮ್ಮ ಹಾದಿಯಲ್ಲೇ ಬರಲಿವೆ.

ಮಿಥುನ ಮೇ 21 ಜೂನ್ 20 :

ಮಿಥುನ ಮೇ 21 ಜೂನ್ 20 :

ಈ ವಾರ ನಿಮ್ಮನ್ನು ಯಾರೋ ನೋಡುತ್ತಿರುತ್ತಾರೆ ಮತ್ತು ನೀವು ಮಾಡಿದ ಪ್ರತಿ ಕೆಲಸದಲ್ಲೂ ತಪ್ಪು ಹುಡುಕಿ ನಿಮ್ಮನ್ನು ತಿದ್ದುತಿರುತ್ತಾರೆ. ಆದರೆ ನೀವು ತುಂಬಾ ತಾಳ್ಮೆಯಿಂದ ಇರಬೇಕಾಗುತ್ತೆ. ಮತ್ತು ಈ ವಾರದ ಪ್ರತಿ ದಿನವನ್ನು ಹೊಸದಾಗಿ ಸ್ವೀಕರಿಸಿ ನಿಮ್ಮನ್ನು ನೀವು ಹೊಸ ಬದಲಾವಣೆ ಮುಂದಿನ ದಿನಗಳಲ್ಲಿ ಬರಲಿವೆ ಅನ್ನೋ ನಿರೀಕ್ಷೆಯೊಂದಿಗೆ ಬದುಕಬೇಕಾಗುತ್ತದೆ.

ಕರ್ಕಾಟಕ (ಜೂನ್ 21 -ಜುಲೈ 22)

ಕರ್ಕಾಟಕ (ಜೂನ್ 21 -ಜುಲೈ 22)

ನೀವು ನಿಮ್ಮ ಸಂಗಾತಿಗೆ ಇಲ್ಲವೇ ಗೆಳೆಯರಿಗೆ ಈ ವಾರ ಅಯಸ್ಕಾಂತವಾಗುವ ಸಾಧ್ಯತೆಯಿದೆ. ಯಾರಾದರೂ ನಿಮ್ಮ ಬಳಿ ಬಂದು ಅವರು ನಿಮ್ಮ ಅಭಿಮಾನಿ ಎಂದು ನಿಮ್ಮನ್ನು ಹೊಗಳಿದರೆ, ಆಶ್ಚರ್ಯಗೊಳ್ಳಬೇಡಿ. ಯಾರೊಂದಿಗಾದರೂ ನೀವು ಬೆರೆತು ಮಾತನಾಡಲು ಬಯಸಿದರೆ ಅವರೊಂದಿಗೂ ನೀವು ಉತ್ತಮ ವಾತಾವರಣವನ್ನು ಕಲ್ಪಿಸಿಕೊಳ್ಳುತ್ತೀರಿ ಮತ್ತು ಈ ವಾರವಿಡೀ ಆರಾಮಾಗಿರುತ್ತೀರಿ.

ಸಿಂಹ (ಜುಲೈ 23 -ಆಗಸ್ಟ್ 23)

ಸಿಂಹ (ಜುಲೈ 23 -ಆಗಸ್ಟ್ 23)

ಬಹಳ ಗೆಲವುಗಳು ನಿಮ್ಮ ಹಾದಿಯಲ್ಲಿ ಈ ವಾರ ಬರಲಿವೆ. ಆದರೆ ಶಾಶ್ವತ ಗೆಲವಿಗಾಗಿ ನೀವು ನಿಮ್ಮ ಉಪಾಯಗಳನ್ನು ಮತ್ತು ಆಲೋಚನೆಗಳನ್ನು ಹೇಗೆ ನಿಮ್ಮ ಕೆಲಸದಲ್ಲಿ ನಿರ್ವಹಿಸುತ್ತೀರಿ ಅನ್ನೋದು ಈ ವಾರ ಬಹಳ ಮುಖ್ಯವಾಗುತ್ತೆ. ಒಂದು ವೇಳೆ ಗುಂಪಾಗಿ ಕೆಲಸ ನಿರ್ವಹಿಸುವ ಅವಕಾಶ ಬಂದರೆ , ನೀವೇ ನಾಯಕನಾಗುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದು ನಿಮಲ್ಲಿ ಈಗಾಗಲೇ ಅಡಗಿರುವ ನಾಯಕತ್ವದ ಗುಣವನ್ನು ಹೊರಗೆ ಹಾಕಲು ಸಿಗುವ ಅವಕಾಶವಾಗಿರುತ್ತೆ.ಇನ್ನೊಂದೆಡೆ, ಈ ವಾರ ಅಚಾನಕ್ ಆಗಿ ಬದಲಾಗುವ ರೊಮ್ಯಾಂಟಿಕ್ ಭಾವನೆಗಳಿಗೆ ಸಿದ್ಧವಾಗಿರಬೇಕಾಗುತ್ತದೆ.

ಕನ್ಯಾ ಆಗಸ್ಟ್ 24- ಸೆಪ್ಟೆಂಬರ್ 23

ಕನ್ಯಾ ಆಗಸ್ಟ್ 24- ಸೆಪ್ಟೆಂಬರ್ 23

ಈ ವಾರ ನಿಮ್ಮನ್ನು ನೀವು ಯಾವುದೇ ವಿಚಾರಗಳಿಗೂ ಅತಿಯಾದ ಬದ್ಧತೆ ತೋರಿಸುವ ಅಗತ್ಯವಿಲ್ಲ. ಈ ವಾರ ನೀವು ಕೆಲವೊಂದು ಮಿತಿಗಳನ್ನು ಮೀರಿ ವರ್ತಿಸಿದರೆ, ಮುಂದೆ ಬರುವ ಉತ್ತಮ ಲಾಭದಿಂದ ಸಂತೋಷಗೊಳ್ಳುವಿರಿ. ಇವುಗಳ ಜೊತೆಗೆ ಅದೃಷ್ಟ ಈ ವಾರ ನಿಮ್ಮ ಜೊತೆಗಿರುತ್ತೆ. ಆದರೆ ಪ್ರಯತ್ನವಿಲ್ಲದೆ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಒಳ್ಳೆಯ ಅವಕಾಶಗಳ ಬಾಗಿಲು ನಿಮ್ಮನ್ನು ತಟ್ಟಿದಾಗ ಅದನ್ನು ಬಳಸಿಕೊಳ್ಳದೆ ಸುಮ್ಮನಾಗಬೇಡಿ.

ತುಲಾ ಸೆಪ್ಟೆಂಬರ್ 24 – ಅಕ್ಟೋಬರ್ 23

ತುಲಾ ಸೆಪ್ಟೆಂಬರ್ 24 – ಅಕ್ಟೋಬರ್ 23

ಈ ವಾರ ನೀವು ಕೆಲವು ವಿಚಾರಗಳನ್ನು ಸುಲಭವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೆ ನೀವು ಈ ವಾರ ಸಿಟ್ಟು ಮಾಡುವ ಸಾಧ್ಯತೆಗಳಿವೆ. ಈಗ ನಿಮ್ಮ ಬಳಿ ಬಹಳಷ್ಟು ಶಕ್ತಿ ಇದೆ. ಅದು ಧನಾತ್ಮಕ ಕೆಲಸಗಳಿಗೆ ಹಾತೊರೆಯುತ್ತಿದ್ದು, ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳದಂತೆ ಮಾಡುತ್ತಿದೆ. ಜೊತೆಗೆ ಈ ವಾರ ನೀವು ಕೆಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಲೇಸು. ಹೆಚ್ಚು ಸಮಯ ಆರಾಮಿಸಿದರೆ ನೀವು ಜಡಗೊಂಡವರಂತೆ ಆಗುತ್ತೀರಿ. ಪ್ರಯಾಣಕ್ಕೆ ಹೊರಟರೆ, ನಿಮ್ಮ ವೇಗಕ್ಕೆ ಮಿತಿ ಇರಲಿ

ವೃಶ್ಚಿಕ ಅಕ್ಟೋಬರ್ 24- ನವೆಂಬರ್ 22

ವೃಶ್ಚಿಕ ಅಕ್ಟೋಬರ್ 24- ನವೆಂಬರ್ 22

ಈ ವಾರ ನೀವು ಬಹಳ ವಿಚಿತ್ರ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಸುತ್ತ ನಡೆಯುವ ಸಣ್ಣ ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಕೆಲವು ವಿಚಾರಗಳು ನಿಮ್ಮಿಂದ ಏನನ್ನೋ ಬಯಸುತ್ತವೆ ಮತ್ತು ಅದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತೆ. ಆಗುವುದನ್ನು ಆಗಲು ಬಿಡಿ. ಆಗ ನೀವು ರಚನಾತ್ಮಕವಾಗಿ ಇರಲು ಸಾಧ್ಯವಾಗುತ್ತೆ.

ಧನು ನವೆಂಬರ್ 23- ಡಿಸೆಂಬರ್ 22

ಧನು ನವೆಂಬರ್ 23- ಡಿಸೆಂಬರ್ 22

ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಬೇಕು ಎಂದು ನೀವು ಬಯಸಿದರೂ ಅದು ಈ ವಾರ ಕೈಗೂಡುವುದಿಲ್ಲ. ಅದು ಬಾಗಶಃ ನೆರವೇರುವುದು ಮುಂದಿನ ವಾರಗಳಲ್ಲಿ. ಹಾಗಾಗಿ ಎಲ್ಲರೊಡನೆ ಇರಲು ಬಯಸಿ ಬೆಂದುಹೋಗುವ ಬದಲು, ಸ್ವಲ್ಪ ಆರಾಮಾಗಿ ಇದ್ದುಬಿಡಿ. ಈ ವಾರ ಒಮ್ಮೊಮ್ಮೆ ನೀವು ಏಕಾಂಗಿಯಾಗಿ ಇರಲು ಇಚ್ಛಿಸುತ್ತೀರಿ. ಆದಷ್ಟು ದೊಡ್ಡ ಹೆಜ್ಜೆ ಹಾಕುವ ಪ್ರಯತ್ನ ಮಾಡಿ, ನಿಮ್ಮಿಂದ ಸಾಧ್ಯವಾಗುವಷ್ಟು ಉತ್ತಮವಾಗಿರಲು ಪ್ರಯತ್ನಿಸಿ.

ಮಕರ ಡಿಸೆಂಬರ್ 23 ಜನವರಿ 20

ಮಕರ ಡಿಸೆಂಬರ್ 23 ಜನವರಿ 20

ನಿಮ್ಮ ಉತ್ಸಾಹದಿಂದಾಗಿ, ಬೇರೆಯವರನ್ನು ಗೆಲ್ಲಿಸಲು ನೀವು ಪ್ರಯತ್ನಿಸಿದರೆ, ಅವರು ನಿಮ್ಮಿಂದ ಪ್ರಭಾವಿತರಾಗುತ್ತಾರೆ ಮತ್ತು ನಿಮಗೆ ನೀವೇ ನ್ಯಾಯ ದೊರಕಿಸಿಕೊಳ್ಳಲು ಪ್ರಯತ್ಮ ಮಾಡಿದರೆ ಅವರು ನಿಮ್ಮ ವಿರುದ್ಧ ನಿಲ್ಲುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ನೀವು ನೇರ ನುಡಿಯಿಂದ ಇರಬೇಕು ಮತ್ತು ಹರ್ಷಚಿತ್ತದಿಂದ ಇರಬೇಕು. ಆಗ ಅವರು ನಿಮ್ಮನ್ನು ಪೂಜಿಸುತ್ತಾರೆ. ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ಸಮಯ ಮತ್ತು ವಿವರ ನಿಮ್ಮ ಬಳಿ ಇದೆ ಅನ್ನುವುದನ್ನು ಮರೆಯಬೇಡಿ.

ಕುಂಭ ಜನವರಿ 21- ಫೆಬ್ರವರಿ 18

ಕುಂಭ ಜನವರಿ 21- ಫೆಬ್ರವರಿ 18

ನಿಮ್ಮ ಭಾವನೆಗಳನ್ನು ಸುಲಭವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ಇದು ಯಾವಾಗವೆಂದರೆ ಯಾರಾದರೂ ನಿಮ್ಮ ಭಾವನೆಗಳ ಜೊತೆ ಚೆಲ್ಲಾಟವಾಡಲು ಪ್ರಯತ್ನಿಸಿದರೆ ಅಥವಾ ಯಾವುದೋ ಕಾರಣಕ್ಕೆ ನಿಮಗೆ ನೀವೇ ತಪ್ಪಿತಸ್ಥರಂತೆ ಭಾವಿಸುತ್ತಿದರೆ, ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡಿಕೊಳ್ಳಬೇಕಾದ ವಾರವಿದು. ಈ ವಾರವಿಡೀ ನೀವು ಗೊಂದಲಮಯವಾಗಿ ಮತ್ತು ಬೇಸರದಲ್ಲಿ ಇರುವ ಸಾಧ್ಯತೆಗಳಿದ್ದು, ಕೆಲಸ ಮಾಡಲು ಕಷ್ಟಪಡಬೇಕಾದೀತು.

ಮೀನ ಫೆಬ್ರವರಿ 19- ಮಾರ್ಚ್ 20

ಮೀನ ಫೆಬ್ರವರಿ 19- ಮಾರ್ಚ್ 20

ಈ ವಾರ ನೀವು ಬಹಳ ವ್ಯಾವಹಾರಿಕವಾಗಿರುತ್ತೀರಿ. ಹಣಕಾಸಿನ ವಿಚಾರಗಳು ತಹಬದಿಗೆ ಬರುವ ಬಗ್ಗೆ ನಿಮ್ಮದು ಈ ವಾರ ಒಳ್ಳೆಯ ಆಲೋಚನೆಗಳಾಗಿರುತ್ತೆ. ಆದರೆ ಅದಕ್ಕಾಗಿ ನೀವು ವೆಚ್ಚ ಮಾಡಿದ ಹಣದ ಬಗ್ಗೆ ನೀವು ಲೆಕ್ಕಹಾಕಬೇಕಾಗುತ್ತದೆ. ಈ ವಾರ ನೀವು ನಿಮ್ಮ ಹಣಕಾಸಿನ ವ್ಯವಹಾರವನ್ನು ಸ್ವಲ್ಪ ಆಚೆ - ಈಚೆ ಮಾಡಿಕೊಂಡು ಹೊಸ ಕೆಲಸಕ್ಕಾಗಿ ಬಳಸಿದರೆ ಮುಂದಿನ ದಿನಗಳಲ್ಲಿ ಒಳಿತನ್ನು ಕಾಣಬಹುದಾಗಿದೆ.

English summary

WEEKLY PREDICTION FOR EACH ZODIAC SIGN

Our astro experts have revealed what is in store for your zodiac sign this week. Everything that you need to know about your stars has been revealed by our astro gurus. Check out on what you need to know about your zodiac sign and these predictions are based on your sun sign predictions.
Story first published: Tuesday, May 8, 2018, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more