For Quick Alerts
ALLOW NOTIFICATIONS  
For Daily Alerts

ಅಪರೂಪದ ಕಾಯಿಲೆ: ಈ ಬಾಲಕನಿಗೆ 6 ವರ್ಷ ಆದರೆ ಮುದುಕನಂತೆ ಕಾಣುತ್ತಾನೆ!

|

ಅಂಬೆಗಾಲಿಡುವಂತಹ ಮಗು 60 ವಯೋವೃದ್ಧರಂತೆ ಕಂಡರೆ ನಿಮಗೆ ಹೇಗಾಗಬಹುದು. ಇದು ತುಂಬಾ ವಿಚಿತ್ರವೆಂದು ನಿಮಗೆ ಕಾಣಿಸಿದರೂ ಆರು ವರ್ಷದ ಬಾಲಕನೊಬ್ಬ ಮಾನವರಲ್ಲಿ ಕಂಡುಬರುವಂತಹ ತುಂಬಾ ಅಪರೂಪದ ಕಾಯಿಲೆಗೆ ಗುರಿಯಾಗಿದ್ದಾನೆ.

ಈ ಬಾಲಕನು 'ಎಹ್ಲೆರ್ಸ್-ಡಾನ್ಲೋಸ್ ಸಿಂಡ್ರೋಮ್'ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹುಟ್ಟಿದ ಒಂದು ತಿಂಗಳಲ್ಲೇ ಇದು ಆತನಿಗೆ ಬಂದಿದೆ ಎಂದು ವರದಿಗಳು ಹೇಳಿವೆ. ಈ ಬಾಲಕನ ಚರ್ಮವು ವಯೋವೃದ್ಧರಂತೆ ಜೋತು ಬಿದ್ದಿದೆ. 50 ಸಾವಿರ ಮಂದಿಯಲ್ಲಿ ಒಬ್ಬರಿಗೆ ಕಾಡುವಂತಹ ಈ ವಿಚಿತ್ರ ಕಾಯಿಲೆ ಬಗ್ಗೆ ನೀವು ಮುಂದೆ ಓದುತ್ತಾ ತಿಳಿಯಿರಿ....

ಬಾಲಕನಿಗೆ ಹುಟ್ಟುತ್ತಲೇ ಈ ಕಾಯಿಲೆ ಕಂಡುಬಂದಿದೆ

ಬಾಲಕನಿಗೆ ಹುಟ್ಟುತ್ತಲೇ ಈ ಕಾಯಿಲೆ ಕಂಡುಬಂದಿದೆ

ಕಝಕಿಸ್ತಾನದ ಆರರ ಹರೆಯದ ಯೆರ್ನರ್ ಅಲಿಬೆಕೊವ್ ಎಂಬ ಬಾಲಕನಿಗೆ ಈ ಕಾಯಿಲೆ ಬಂದಿದೆ. ಈ ಪರಿಸ್ಥಿತಿಯನ್ನು ಎಹ್ಲೆರ್ಸ್-ಡಾನ್ಲೋಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಹುಟ್ಟಿದ ಒಂದು ತಿಂಗಳಲ್ಲೇ ಇದು ಬಾಲಕನನ್ನು ಕಾಡಿದೆ.

ಈ ಕಾಯಿಲೆಯ ಆರಂಭಿಕ ಲಕ್ಷಣಗಳು…

ಈ ಕಾಯಿಲೆಯ ಆರಂಭಿಕ ಲಕ್ಷಣಗಳು…

ಬಾಲಕನ ಮುಖದಲ್ಲಿ ಜೋತು ಬಿದ್ದಿರುವಂತಹ ಹುಬ್ಬುಗಳು ಕಂಡುಬಂದಿದೆ. ಇದು ಈ ಕಾಯಿಲೆಯ ಆರಂಭಿಕ ಲಕ್ಷಣಗಳಾಗಿವೆ. ಯೆರ್ನರ್ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯುವ ಮೊದಲೇ ವಯೋವೃದ್ಧರಂತೆ ಕಂಡುಬಂದಿದ್ದಾನೆ. ಈ ಪರಿಸ್ಥಿತಿಯಿಂದಾಗಿ ಸಂಧಿವಾತ, ಸ್ಕೋಲಿಯೋಸಿಸ್, ದೀರ್ಘಕಾಲದ ನೋವು ಮತ್ತು ಗಂಟು ಸ್ಥಳಾಂತರ ಕಂಡುಬರಬಹುದು.

ತಾಯಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲು ಬಯಸಿರುವರು

ತಾಯಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲು ಬಯಸಿರುವರು

ಜಿಬೆನ್ಸ ಟಲೆಪ್ ಬರ್ನೊವಾ ತನ್ನ ಮಗನಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಬಯಸಿದ್ದಾರೆ. ಇದರಿಂದ ಜೋತು ಬಿದ್ದಿರುವಂತಹ ಚರ್ಮವನ್ನು ಸರಿಪಡಿಸಬಹುದು. ಆದರೆ ಕಝಕಿಸ್ತಾನದಲ್ಲಿ 18ರ ಹರೆಯದ ಕೆಳಗಿನವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಕಾನೂನಿನಲ್ಲಿ ಅನುಮಿತಿಯಿಲ್ಲ.

ಯೆರ್ನರ್ ಅದೃಷ್ಟವಂತ ಬಾಲಕ

ಯೆರ್ನರ್ ಅದೃಷ್ಟವಂತ ಬಾಲಕ

18ರ ಹರೆಯದ ತನಕ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಕಾನೂನಿನಲ್ಲಿ ಅಡೆತಡೆಗಳಿದ್ದರೂ ಅಸ್ತಾನ ನಗರದಲ್ಲಿರುವ ಸ್ಥಳೀಯ ಆಸ್ಪತ್ರೆಯೊಂದು ಈ ನಿಯಮದಿಂದ ಹೊರಬಂದು ಜೋತುಬಿದ್ದಿರುವ ಚರ್ಮವನ್ನು ಸರಿಪಡಿಸುವಂತಹ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದೆ.

ಆತನಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ

ಆತನಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ

ಬಾಲಕನಿಗೆ ಆಸ್ಪತ್ರೆಯು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದೆ. ಮಗುನ ಜೀವನದ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಇತರ ಖರ್ಚಿಗಾಗಿ ಸುಮಾರು 245 ಡಾಲರ್ ವೆಚ್ಚ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ವೆಚ್ಚವನ್ನು ಭರಿಸುವಷ್ಟು ಶ್ರೀಮಂತ ಕುಟುಂಬವು ಇದಲ್ಲ. ಸ್ನೇಹಿತರು ಹಾಗೂ ಕೆಲವು ಸಂಬಂಧಿಕರು ನೆರವಾಗಿದ್ದಾರೆ.

Most Read:ಕೊನೆಯುಸಿರಿರುವವರೆಗೂ ಸಂಗಾತಿಯೊಂದಿಗೇ ಇರುವ ರಾಶಿಯವರಿವರು

ವೈದ್ಯರು ಹೇಳುವ ಪ್ರಕಾರ

ವೈದ್ಯರು ಹೇಳುವ ಪ್ರಕಾರ

ವೈದ್ಯರ ಪ್ರಕಾರ ಬಾಲಕನನ್ನು ಶಸ್ತ್ರಚಿಕಿತ್ಸೆ ಒಳಪಡಿಸಿದರೂ ಆತನ ಚರ್ಮದ ಪರಿಸ್ಥಿತಿಯು ಸುಧಾರಣೆಯಾಗುವುದಿಲ್ಲ ಮತ್ತು ಜೋತು ಬಿದ್ದ ಚರ್ಮವು ಸರಿಯಾಗಲ್ಲ. ಈ ಪರಿಸ್ಥಿತಿಯಿಂದ ಹೊರಬರಲು ಅತ್ಯುತ್ತಮವಾಗಿರುವ ವಿಧಾನವೆಂದರೆ ಬಾಲಕನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು.ಬಾಲಕನು ಆರೋಗ್ಯಕಾರಿ ಜೀವನ ಸಾಗಿಸಲು ಎಂದು ಬೋಲ್ಡ್ ಸ್ಕೈ ಆಶಿಸುತ್ತದೆ. ನಿಮ್ಮ ಮನದ ಮಾತನ್ನು ಕಮೆಂಟ್ ಸೆಕ್ಸನ್ ಗೆ ಹಾಕಿಬಿಡಿ.

All Image Source

English summary

Rare Condition Left This 6-year-old Looking Like A Pensioner

Yernar Alibekov is a 6-year-old boy from Kazakhstan who was diagnosed with a rare disorder condition known as Ehlers-Danlos syndrome when he was one month old. His mother Zibensa Tulepbergenova has revealed that she wants to get a surgery done on him to fix the sagging skin. His condition has been so bad that it left him with sagging skin and itchy eyelids.
X
Desktop Bottom Promotion