ಶುಕ್ರವಾರದ ದಿನ ಭವಿಷ್ಯ

Posted By: Divya Pandit
Subscribe to Boldsky

 ಹಿಂದೂ ಪಂಚಾಗದ ಪ್ರಕಾರ ಸೂರ್ಯೋದಯದಿಂದ ಸೂರ್ಯಾಸ್ತದ ತನಕದ ಅವಧಿಯನು ಒಂದು ದಿನ ಎಂದು ಪರಿಗಣಿಸಲಾಗುತ್ತದೆ. ಈ ವೇಳೆಯಲ್ಲಿ ಉಂಟಾಗುವ ಬದಲಾವಣೆ ಹಾಗೂ ಪರಿಣಾಮಗಳು ನಮ್ಮ ಬದುಕಿನಲ್ಲಿ ಮಹತ್ತರದ ಪಾತ್ರವಹಿಸುತ್ತವೆ. ಈ ಸಮಯದಲ್ಲಿ ಗ್ರಹಗತಿಗಳು ನಮ್ಮ ಬದುಕಿನಲ್ಲಿ ಯಾವ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ನಮ್ಮ ಜಾತಕದ ಕುಂಡಲಿಯೇ ಮೂಲಾಧಾರವಾಗಿರುತ್ತದೆ ಎನ್ನುವುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು.

ಶುಕ್ರವಾರದ ಈ ಶುಭ ದಿನ ಗ್ರಹಗತಿಳು ಹನ್ನೆರಡು ರಾಶಿಯವರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ. ಇದರಿಂದ ಈ ದಿನ ನೀವು ಯಾವೆಲ್ಲಾ ಬದಲಾವಣೆಗಳನ್ನು ಅನುಭವಿಸುತ್ತೀರಿ? ಲಕ್ಷ್ಮಿ ದೇವಿ ಒಲಿಯುವಳೇ? ಇಲ್ಲವೇ? ಎನ್ನುವ ವಿಚಾರದ ಕುರಿತು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ನಾವಿಲ್ಲಿ ನೀಡಿರುವ ದಿನ ಭವಿಷ್ಯವನ್ನು ಪರಿಶೀಲಿಸಿ ಫಲಾಫಲಗಳನ್ನು ಅರಿಯಿರಿ.

ಮೇಷ:

ಮೇಷ:

ಶುಕ್ರವಾರವಾದ ಈ ಶುಭ ದಿನದಂದು ನಿಮ್ಮ ಕಾರ್ಯಗಳು ಸುಗಮವಾಗಿ ಸಾಗುವುದು. ಬಂಧುಮಿತ್ರರ ಸಹಕಾರವು ಅನಿರೀಕ್ಷಿತವಾಗಿ ಒದಗಿ ಬರುವುದು. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಲಾಭ, ಸ್ವಂತ ಉದ್ಯೋಗದಲ್ಲಿರುವವರಿಗೆ ಹಾಗೂ ಷೇರು ಮಾರುಕಟ್ಟೆಯಲ್ಲಿ ಹಣವಿನಿಯೋಗಿಸಿದವರಿಗೂ ಉತ್ತಮ ಲಾಭಾಂಶ ದೊರೆಯುವ ಸಾಧ್ಯತೆ ಇದೆ. ಮನೆಯಲ್ಲಿಯೂ ಸಂತೋಷದ ವಾತಾವರಣ ನೆಲೆಸುವುದು. ಸಂಗಾತಿಯಿಂದ ಸಹಕಾರ ದೊರೆಯುವುದು. ಇನ್ನಷ್ಟು ಒಳಿತಿಗಾಗಿ ಲಕ್ಷ್ಮಿ ಪ್ರಾರ್ಥನೆ ಮಾಡುವುದು ಉತ್ತಮ. ಮನೆಯಿಂದ ಹೊರಡುವಾಗ ಬಲಗಾಲನ್ನು ಮುಂದಿಟ್ಟು ಹೊರಡುವುದನ್ನು ಮರೆಯದಿರಿ.

ವೃಷಭ:

ವೃಷಭ:

ಇಂದು ನಿಮಗೆ ದೇಹದಲ್ಲಿ ಆಯಾಸ ಹಾಗೂ ಆಲಸ್ಯ ಮುಂದುವರಿಯುವುದು. ಮಾನಸಿಕ ಕಿರಿಕಿರಿ ಹಾಗೂ ಅಸಮಧಾನವು ನಿಮ್ಮನ್ನು ಕಾಡುವುದು. ಅನಿರೀಕ್ಷಿತವಾದ ಸೋಲನ್ನು ನೀವು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಒದಗಿ ಬರುವುದು. ಕಲಾವಿದರಿಗೆ ಮಾನಸಿಕ ಕಿರಿಕಿರಿ ಉಂಟಾಗುವುದು. ಅಪವಾದಗಳು ನಿಮ್ಮ ಬೆನ್ನೇರುವ ಸಾಧ್ಯತೆ ಇದೆ. ಬಂಧುಗಳ ಅಸಹಕಾರ. ಮಕ್ಕಳಿಂದ ಕಿರಿಕಿರಿ ಹಾಗೂ ಅವರಿಗಾಗಿ ಸಾಲ ಮಾಡುವ ಪರಿಸ್ಥಿತಿ ಒದಗಿ ಬರುವುದು. ವಿದ್ಯಾರ್ಥಿಗಳು ವಾಹನ ಚಲಾವಣೆ ಮಾಡುವಾಗ ಬಹಳ ಜಾಗೃತೆಯಿಂದ ಓಡಿಸಬೇಕು. ರಾಹುಕಾಲದಲ್ಲಿ ಪ್ರಯಾಣ ಮುಂದುವರಿಸದಿರುವುದು ಸೂಕ್ತ. ಉತ್ತಮ ಭವಿಷ್ಯಕ್ಯಾಗಿ ಗಣೇಶ ಹಾಗೂ ಶಿವನ ಆರಾಧನೆ ಮಾಡಿ.

ಮಿಥುನ:

ಮಿಥುನ:

ಇಂದು ನಿಮಗೆ ಸಮಾಧಾನದ ದಿನ ಎಂದು ಹೇಳಬಹುದು. ಬಂಧು ಮಿತ್ರರ ಅನಿರೀಕ್ಷಿತ ಭೇಟಿ ಹಾಗೂ ಸಹಕಾರ ದೊರೆಯುವುದು. ಅಲ್ಲದೆ ವಿಶೇಷ ಸ್ಥಳಗಳಿಗೆ ಪ್ರಯಾಣಿಸುವ ಅವಕಾಶವು ಕೈಗೂಡಿ ಬರಲಿದೆ. ಕೆಲವರಿಗೆ ದೂರ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾದರೆ ಇನ್ನೂ ಕೆಲವರಿಗೆ ಇತರರಲ್ಲಿ ಹಣ ಕೇಳಿ ಪಡೆಯ ಸಂದರ್ಭ ಒದಗಿ ಬರುವ ಸಾಧ್ಯತೆ ಇದೆ. ವಿಜ್ಞಾನ ಕ್ಷೇತ್ರದಲ್ಲಿ ಹಾಗೂ ಇಂಜಿನೀಯರ್ ಕೆಲಸದಲ್ಲಿರುವವರಿಗೆ ಸಂಪೂರ್ಣ ಪ್ರಮಾಣದ ಜಯ ಲಭಿಸದು. ಬದಲಿಗೆ ಅಸಮಧಾನ ಕಾಡುವ ಸಾಧ್ಯತೆ ಹೆಚ್ಚು. ಸಮಾಧಾನದ ಬದುಕಿಗಾಗಿ ಲಕ್ಷ್ಮಿ ದೇವಿಯ ಪ್ರಾರ್ಥನೆ ಹಾಗೂ ಆರಾಧನೆ ಮಾಡುವುದು ಉತ್ತಮ. ಮನೆಯಿಂದ ಹೊರಗೆ ಹೋಗುವ ಮುನ್ನ ಪಶುಗಳಿಗೆ ಆಹಾರ ನೀಡಿ ಹೊರಡುವುದು ಉತ್ತಮ.

ಕರ್ಕ:

ಕರ್ಕ:

ಈ ಶುಭ ಶುಕ್ರವಾರ ನಿಮಗೆ ಅದೃಷ್ಟದ ದಿನ ಎಂದು ಹೇಳಬಹುದು. ಎಲ್ಲಾ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುವುದು. ಎರಡು ವರೆ ವರ್ಷಗಳಿಂದ ನೀವು ಅನುಭವಿಸಿದ ಕಷ್ಟ ಹಾಗೂ ಅವಮಾನಗಳು ಇಂದು ದೂರವಾಗುತ್ತವೆ. ಜೀವನದಲ್ಲಿ ಧನಾತ್ಮಕ ಚಿಂತನೆ ನಡೆಸಿದರೆ ಉತ್ತಮ ಭವಿಷ್ಯ ನಿಮ್ಮದಾಗುವುದು. ವಿದೇಶ ಪ್ರಯಾಣ ನಡೆಸುವ ಕನಸು ನನಸಾಗುವುದು. ಹೆಣ್ಣುಮಕ್ಕಳಿಂದ ಶುಭವಾಗುವುದು. ತಾಂತ್ರಿಕ ವಿಚಾರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸುಂದರ ಬದುಕಿಗೆ ಲಕ್ಷ್ಮಿ ಪ್ರಾರ್ಥನೆ ಮಾಡಿ.

ಸಿಂಹ:

ಸಿಂಹ:

ಇಂದು ನಿಮಗೆ ವಿಪರೀತ ಆಯಾಸ ಹಾಗೂ ಇಲ್ಲಸಲ್ಲದ ವಿಚಾರಗಳಿಂದ ನಿಮ್ಮ ಮೇಲೆ ಅಪವಾದ ಬರುವುದು. ಆಂತರಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಮಕ್ಕಳಿಂದ ಅಶುಭ ವಾರ್ತೆ ಕೇಳಿಬರುವ ಸಾಧ್ಯತೆ ಇದೆ. ಕೆಲವು ಹೆಣ್ಣು ಮಕ್ಕಳಿಗೆ ಚಿನ್ನದ ಖರೀದಿ ಮಾಡುವ ಅವಕಾಶ ಒದಗಿ ಬರುವುದು. ಇನ್ನೂ ಕೆಲವರಿಗೆ ದೇಹದಲ್ಲಿ ಆಯಾಸ ಹಾಗೂ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ನೆಮ್ಮದಿಯ ಬದುಕಿಗೆ ದೇವಿ ಆರಾಧನೆ ಮಾಡಿ.

ಕನ್ಯಾ:

ಕನ್ಯಾ:

ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಿರಿ. ಇತರ ಮೂಲದಿಂದ ಬರಬೇಕಾದ ಹಣ ನಿಮ್ಮ ಕೈಸೇರುವ ಸಾಧ್ಯತೆ ಇದೆ. ಮಕ್ಕಳಿಗೆ ಕ್ರೀಡಾ ವಲಯದಲ್ಲಿ ಗೆಲುವು ಹಾಗೂ ಮನೆಯಲ್ಲಿ ಸಂತೋಷದ ವಾತಾವರಣ ತುಂಬಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಂಪೂರ್ಣ ಸಮಾಧಾನ ಲಭಿಸುವುದು. ಯಶಸ್ವಿ ಬದುಕಿಗೆ ಕುಲದೇವರು ಹಾಗೂ ಇಷ್ಟ ದೇವರ ಆರಾಧನೆ ಮಾಡಿ.

ತುಲಾ:

ತುಲಾ:

ಈ ಶುಭ ದಿನದಂದು ಸಮಾಧಾನ ಎನ್ನುವುದು ನಿಮ್ಮನ್ನು ಅರಸಿಕೊಂಡು ಬರುವುದು. ನೀವು ಕೈಗೊಂಡ ಕೆಲಸದಲ್ಲಿ ಜಯ ಹಾಗೂ ಲಾಭ ಸಿಗುವುದು. ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಉತ್ತಮ ಲಾಭ ಲಭಿಸುವುದು. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೂ ನೆಮ್ಮದಿ ಸಿಗುವುದು. ಉತ್ತಮ ಭವಿಷ್ಯಕ್ಕಾಗಿ ಲಕ್ಷ್ಮಿ ಆರಾಧನೆಮಾಡಿ.

ವೃಶ್ಚಿಕ:

ವೃಶ್ಚಿಕ:

ಸಮಾಧಾನದ ಬದುಕು ನಿಮಗೆ ಕಷ್ಟ ಎಂದು ಹೇಳಬಹುದು. ಯಾವುದೇ ವಿಚಾರಕ್ಕೆ ಬೇರೆಯವರ ಮಧ್ಯಸ್ಥಿಕೆಯನ್ನು ಬಯಸದಿರಿ. ಇತರರಿಗೆ ಸಾಲ ನೀಡುವುದು ಅಥವಾ ಸಾಲ ಪಡೆಯುವ ಗೋಜಿಗೆ ಹೋಗದಿರಿ. ನೀವು ಕೈಗೊಂಡ ಕೆಲಸದಲ್ಲಿ ಕೊಂಚ ಏರು ಪೇರು ಉಂಟಾಗುವ ಸಾಧ್ಯತೆ ಇದೆ. ಸ್ಥಿರಾಸ್ತಿಯ ಕುರಿತು ಸಹೋದರರಲ್ಲಿ ಜಗಳ ಮಾಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ನೆಮ್ಮದಿಯ ಬದುಕಿಗೆ ಕುಲದೇವರ ಆರಾಧನೆ ಮಾಡಿ.

ಧನು:

ಧನು:

ಇಂದು ನಿಮಗೆ ಸ್ವಲ್ಪ ಅಸಮಧಾನದ ದಿನ ಎಂದು ಹೇಳಬಹುದು. ದೇಹದಲ್ಲಿ ಆಯಾಸ. ಅವಮಾನ ಹಾಗೂ ಹಣಕ್ಕಾಗಿ ಕಿತ್ತಾಟಗಳು ನಡೆಯುವ ಸಾಧ್ಯತೆ ಇದೆ. ಜಂಟಿಯಾಗಿ ಕೈಗೊಂಡ ಕೆಲಸದಲ್ಲೂ ಏರು ಪೇರು ಉಂಟಾಗುವ ಸಾಧ್ಯತೆ ಇದೆ. ಮಿತ್ರರಿಂದ ದ್ರೋಹ ಉಂಟಾಗುವ ಲಕ್ಷಣವಿದೆ. ಉತ್ತಮ ಭವಿಷ್ಯಕ್ಕಾಗಿ ಆಂಜನೇಯ ಹಾಗೂ ದೇವಿ ಉಪಾಸನೆಯನ್ನು ಕೈಗೊಳ್ಳುವುದು ಉತ್ತಮ.

ಮಕರ:

ಮಕರ:

ಇಂದು ನಿಮಗೆ ಸ್ವಲ್ಪ ಮಟ್ಟಿಗೆ ಉತ್ತಮ ಸಮಯವೆಂದು ಹೇಳಬಹುದು. ಕೈಗೊಂಡ ಕೆಲಸದಲ್ಲಿ ಉತ್ತಮ ಲಾಭ ಉಂಟಾಗದಿದ್ದರೂ ಕೊಂಚ ಸಮಾಧನದ ಲಾಭಾಂಶ ದೊರೆಯುವುದು. ಬಂಧು-ಮಿತ್ರರ ಸಹಕಾರ ದೊರೆಯುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಮಧ್ಯಮ ಮಟ್ಟದ ಲಾಭಾಂಶ ದೊರೆಯುವುದು. ಯಶಸ್ಸಿನ ಬದುಕಿಗೆ ಗಣೇಶನ ಆರಾಧನೆ ಮಾಡುವುದು ಉತ್ತಮ.

ಕುಂಬ:

ಕುಂಬ:

ಸಮಾಧನದ ಬದುಕನ್ನು ಕಾಣಲಿದ್ದೀರಿ. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ತಂತೆ-ತಾಯಿಯ ಪ್ರೀತಿ ಹಾಗೂ ಆಶೀರ್ವಾದಕ್ಕೆ ಒಳಗಾಗುವಿರಿ. ಪತ್ರಕರ್ತರಿಗೆ ಉತ್ತಮ ಸಮಯ ಎನ್ನಬಹುದು. ಉತ್ತಮ ಬದುಕಿಗೆ ದೇವಿ ಆರಾಧನೆಯನ್ನು ಕೈಗೊಳ್ಳಿ.

ಮೀನ:

ಮೀನ:

ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸುವುದು. ಸ್ತ್ರೀಯರು ಪ್ರೀತಿ ಪ್ರೇಮದ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಬೇಕು. ಮೋಸ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಕೈಗೊಂಡ ಕೆಲಸದಲ್ಲಿ ಯಶಸ್ಸು ಹಾಗೂ ಲಾಭ ದೊರೆಯುವುದು. ಯಶಸ್ಸಿನ ಬದುಕಿಗಾಗಿ ಗಣೇಶ ಹಾಗೂ ದೇವಿಯ ಆರಾಧನೆ ಕೈಗೊಳ್ಳುವುದು ಉತ್ತಮ.

Read more about: ಭವಿಷ್ಯ
English summary

ಶುಕ್ರವಾರದ ದಿನ ಭವಿಷ್ಯ

Astrology for 3rd of November