For Quick Alerts
ALLOW NOTIFICATIONS  
For Daily Alerts

ಡಯಾನಳ ಸೊಸೆ ರೂಲ್ಸ್ ಬ್ರೇಕ್ ಮಾಡುತ್ತಿದ್ದಾಳಾ?

|

ಇಂಗ್ಲೇಂಡ್ ನ ರಾಜ ಮನೆತನದ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ಅಲ್ಲಿ ಪ್ರತಿಯೊಂದು ಕಾರ್ಯವು ರಾಜಮನೆತನ ತಲಾ-ತಲಾಂತರಗಳಿಂದ ಪಾಲಿಸಿ ಬಂದ ನಿಯಮದಂತೆ ನಡೆಯುವುದು. ಅಂತಹ ಕುಟುಂಬಕ್ಕೆ ಮದುವೆಯಾಗಿ ಬಂದ ಸಾಮಾನ್ಯ ಹೆಣ್ಣು ಕೇಟ್ ಮಿಡಲ್ಟನ್! ತನ್ನ ಹೆಸರಿನ ಮುಂದೆ ಯಾವುದೇ ಬಿರುದಿನ ಕಿರೀಟವಿರಲಿಲ್ಲ, ಇಂಗ್ಲೇಂಡ್ ನ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್ ನ ಮದುವೆಯಾದ ಬಳಿಕ ಲೇಡಿ ಕೇಟ್ ಮಿಡಲ್ಟನ್ ಆದಳು. ಇವರಿಬ್ಬರ ಮದುವೆಯೇ ಸಂಪ್ರದಾಯಕ್ಕೆ ಸ್ವಲ್ಪ ಭಿನ್ನವಾಗಿದೆ.

ರಾಣಿ ಇಲ್ಲಿಯ ಉತ್ತಾರಾಧಿಕಾರಿಗಳು ತಮಗೆ ಮನ ಮೆಚ್ಚಿದವರ ಕೈ ಹಿಡಿಯಬಹುದೆಂಬ ಕಾನೂನು ತಂದಳು. ಆದರೆ ಇದುವರೆಗೆ ಯಾರೂ ರಾಜಮನೆದವರನ್ನು ಬಿಟ್ಟು ಹೊರಗಿನವರನ್ನು ಮದುವೆಯಾಗಿರಲಿಲ್ಲ. ಆದರೆ ವಿಲಿಯಮ್ಸ್ ತಾನು ಇಷ್ಟಪಟ್ಟ ಕೇಟ್ ಮಿಡಲ್ಟನ್ ಳ ಕೈ ಹಿಡಿದನು. ಹೀಗೆ ಕೇಟ್ ಬ್ರಿಟಿಷ್ ರಾಯಲ್ ನ ಸದಸ್ಯಳಾದಳು.

ರಾಜ ಮನೆತನಕ್ಕೆ ಬಂದ ಮೇಲೆ ಕೇಟ್ ಇಲ್ಲಿಯ ಅನೇಕ ಕಾನೂನುಗಳನ್ನು ತನಗೆ ಇಷ್ಟಬಂದಂತೆ ಪರಿವರ್ತಿಸಿದ್ದಾಳೆ. ಈಗ ಗರ್ಭಿಣಿಯಾಗಿರುವ ಕೇಟ್ ರಾಜಮನೆತನದ ಮೂಲ ಸಂಪ್ರದಾಯವನ್ನು ಮುರಿಯುತ್ತಿದ್ದಾಳೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅವುಗಳೆಂದರೆ...

Kate Middleton Breaking Too Many Rules?

* ರಾಜ ಮನೆತನದ ಸಂಪ್ರದಾಯದಂತೆ ಅರಮನೆಯಲ್ಲಿಯೇ ಹೆರಿಗೆಯಾಗಬೇಕು. ಆದರೆ ಕೇಟ್ ಅರಮನೆಯಲ್ಲಿ ಹೆರಿಗೆಯಾಗಲು ನಿರಾಕರಿಸಿದ್ದಾಳೆ.

* ಅದಲ್ಲದೆ ಕೇಟ್ ಸೇಂಟ್ ಮೇರಿ ಆಸ್ಪತ್ರೆಯಲ್ಲೂ ಹೆರಿಗೆಯಾಗಲು ಇಚ್ಛೆಯಿಲ್ಲ ಅಂದಿದ್ದಾರೆ. ಕೇಟ್ ಅತ್ತೆ ಡಯಾನ ಇದೇ ಆಸ್ಪತ್ರೆಯಲ್ಲಿ ಕೇಟ್ ಳ ಗಂಡನಿಗೆ ಜನ್ಮ ನೀಡಿದ್ದಳು ಅನ್ನುವುದನ್ನು ಇಲ್ಲಿ ಸ್ಮರಿಸಬಹುದು. ಕೇಟ್ ರಾಯಲ್ ಬರ್ಕ್ಷೈರ್ ಆಸ್ಪತ್ರೆಯಲ್ಲಿ ತನ್ನ ಮಗುವಿಗೆ ಜನ್ಮ ನೀಡಲಿದ್ದಾಳೆ. ಈ ಆಸ್ಪತ್ರೆ ಬಕಿಂಗ್ಹ್ಯಾಮ್ ಅರಮನೆಯಿಂದ ದೂರವಿದ್ದು, ಕೇಟ್ ಳ ಮನೆಗ ಸಮೀಪವಾಗಿದೆ.

* ಅದಲ್ಲದೆ ಜನಿಸುವ ಮಗು ವಂಶಪಾರಂರ್ಯವಾಗಿ ಧರಿಸುತ್ತಿದ್ದ royal hand-me-downs ಉಡುಗೆಯನ್ನು ಧರಿಸುವುದಿಲ್ಲ! ವಿಲಿಯಮ್ಸ್ ಮತ್ತು ಕೇಟ್ ಈಗಾಗಲೇ ಹುಟ್ಟಲಿರುವ ಮಗುವಿಗೆ ಡ್ರೆಸ್ ಕೊಂಡುಕೊಂಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.

* ಅದಲ್ಲದೆ ಅವರ ಮಗುವಿಗೆ ಯಾವುದೇ ಆರ್ಮಿ ಹಾಗೂ ದಾದಿಯರ ಕಾವಲು ಬೇಕಾಗಿಲ್ಲ ಎಂದು ದಂಪತಿಗಳು ನಿರ್ಧರಿಸಿದ್ದಂತೆ ಇದೆ. ತನ್ನ ಮಗು ಉಸಿರುಕಟ್ಟುವ ದಾದಿಯರ ಸೇವೆಗಿಂತ ತನ್ನ ಮಗು ಮುಕ್ತವಾಗಿ ಬೆಳೆಯಬೇಕೆನ್ನುವುದೇ ಕೇಟ್ ಳ ಆಶಯವಾಗಿದೆ.

* ಕೇಟ್ ಸೀಮಂತ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಇದೆ. ಆದರೆ ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ, ಆದರೆ ಸಾರ್ವಜನಿಕವಾಗಿ ಸೀಮಂತ ಮಾಡಿಸಿಕೊಳ್ಳುವುದು ಅರಮನೆಯ ನಿಯಕ್ಕೆ ವಿರುದ್ಧವಾದದು.

ಅರಮನೆಯ ನಿಯಮಗಳನ್ನು ಬದಲಾಯಿಸಲು ಎದೆ ಗುಂಡಿಗೆ ಗಟ್ಟಿ ಇರುವವರಿಗೆ ಮಾತ್ರ ಸಾಧ್ಯ. ಅದನ್ನು ಕೇಟ್ ನಿರೂಪಿಸುತ್ತಿದ್ದಾಳೆಯೇ?!

English summary

Kate Middleton Breaking Too Many Rules? | ಇಂಗ್ಲೇಂಡ್ ಪ್ರಿನ್ಸ್ ಕೈಹಿಡಿದ ಕೇಟ್ ರೂಲ್ಸ್ ಬ್ರೇಕ್ ಮಾಡುತ್ತಿದ್ದಾಳಾ?

Middleton was married into the British royal family, she has changed the rules in her own graceful manner. Now that Kate Middleton's baby is about to come, she is bending more than few royal traditions.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more