For Quick Alerts
ALLOW NOTIFICATIONS  
For Daily Alerts

ಹಚ್ಚೆಯನ್ನು ಎಲ್ಲೆಲ್ಲಿ ಹಾಕಿಸಿಕೊಳ್ಳುವುದು ಈಗೀನ ಟ್ರೆಂಡ್

|

ಕೈ ಮತ್ತು ಹಣೆಗೆ ಹಚ್ಚೆ ಹಾಕಿಸುವುದು ಹಿಂದಿನ ಕಾಲದಲ್ಲಿ ಸಂಪ್ರದಾಯವಾಗಿತ್ತು. ಆದರೆ ಇಂದು ಹಚ್ಚೆ ಹಾಕಿಸುವುದು ಫ್ಯಾಷನ್ ಆಗಿದೆ. ಈ ಹಚ್ಚೆಯನ್ನು ಕೈಗೆ ಮಾತ್ರವಲ್ಲ ದೇಹದಲ್ಲಿ ತಮಗೆ ಇಷ್ಟ ಬಂದ ಕಡೆ ಹಾಕಿಸಿಕೊಳ್ಳುತ್ತಾರೆ.

ತಾನು ಪ್ರೀತಿಸುತ್ತಿರುವ ವ್ಯಕ್ತಿಯ ಹೆಸರು, ತಮಗೆ ಇಷ್ಟವಾದ ಚಿಹ್ನೆ ಇವುಗಳನ್ನು ಹಚ್ಚೆ ಹಾಕಿಸುವುದನ್ನು ಕಾಣಬಹುದು. ಅದರಲ್ಲೂ ಈ ಕೆಳಗೆ ಹೇಳಿರುವ ಭಾಗಗಳಿಗೆ ಹಚ್ಚೆ ಹಾಕಿಸಿಕೊಳ್ಳುವುದು ಸೆಲೆಬ್ರಿಟಿಗಳಲ್ಲಿ ಮತ್ತು ಯುವಜನರಲ್ಲಿ ಕಂಡು ಬರುತ್ತಿರುವ ಈಗೀನ ಟ್ರೆಂಡ್ ಆಗಿದೆ.

 ಕುತ್ತಿಗೆ

ಕುತ್ತಿಗೆ

ದೀಪಿಕಾ ಪಡುಕೋಣೆ ರಣಬೀರ್ ಕಪೂರ್ ಹೆಸರಿನ ಮೊದಲ ಅಕ್ಷರವನ್ನು ಹಚ್ಚೆ ಹಾಕಿಸಿಕೊಂಡಿದ್ದು ಸುದ್ಧಿ ಆಗಿತ್ತು. ರಣಬೀರ್ ಮತ್ತುದೀಪಿಕಾಳ ಸಂಬಂಧ ಮುರಿದು ಬಿದ್ದರೂ ಅವಳ ಕುತ್ತಿಗೆಯಲ್ಲಿ ಆ ಹಚ್ಚೆ ಈಗಲೂ ಇದೆ. ದೀಪಿಕಾಳಂತೆ ಕುತ್ತಿಗೆಯ ಹಿಂಭಾಗದಲ್ಲಿ ಹಚ್ಚೆ ಹಾಕಿಸುವುದು ಈಗ ಜನಪ್ರಿಯವಾದ ಟ್ರೆಂಡ್. ಈ ರೀತಿ ಹಚ್ಚೆ ಹಾಕಿ ಕೂದಲನ್ನು ಎತ್ತಿ ಕಟ್ಟಿದರೆ ಈ ಹಚ್ಚೆ ನೋಡುಗರ ಗಮನ ಸೆಳೆಯುವುದು.

ಬೆನ್ನು

ಬೆನ್ನು

ಕುತ್ತಿಗೆ ಕೆಳಗೆ ಬೆನ್ನಿನಲ್ಲಿ ಹಚ್ಚೆ ಹಾಕಿಸಿ ಬ್ಯಾಕ್ ಡೀಪ್ ಇರುವ ಡ್ರೆಸ್ ಹಾಕುವ ಫ್ಯಾಷನ್ ಕೂಡ ಈಗೀನ ಟ್ರೆಂಡ್.

 ಕೈ ರಟ್ಟೆ

ಕೈ ರಟ್ಟೆ

ಕೈ ರಟ್ಟೆಯಲ್ಲಿ ಹಚ್ಚೆ ಹಾಕಿಸಿಕೊಂಡರೆ ಸ್ತ್ರೀಯರು ಸ್ಲೀವ್ ಲೆಸ್ ಡ್ರೆಸ್ ಹಾಕಬೇಕು. ಪುರುಷರು ಸ್ಲೀವ್ ಲೆಸ್ ಟೀ ಶರ್ಟ್ ಧರಿಸಬೇಕು.

ಮೊಣಕೈ ಕೆಳಗೆ

ಮೊಣಕೈ ಕೆಳಗೆ

ಮೊಣ ಕೈ ಕೆಳಗೆ ಮಣಿಗಂಟಿನವರೆರೆಗೆ ದೊಡ್ಡದಾದ ಚಿತ್ರಗಳ ಹಚ್ಚೆ ಹಾಕಿ ಶರ್ಟ್ ನ ಕೈಯನ್ನು ಮಡಚಿ ಇಡುವುದು, ಅಥವಾ ಮೊಣ ಕೈವರೆಗೆ ಇರುವ ಶರ್ಟ್ ಹಾಕಿದರೆ ಫ್ಯಾಷನಬಲ್ ಆಗಿ ಕಾಣುವಿರಿ.

ಮೇಲ್ತೋಳಿನ ಸ್ನಾಯು

ಮೇಲ್ತೋಳಿನ ಸ್ನಾಯು

ಜಿಮ್ ಗೆ ಹೋಗಿ ಕೈಗಳಲ್ಲಿ ಸ್ನಾಯು ಬೆಳೆಸಿಕೊಂಡವರಿಗೆ ಆ ಭಾಗಕ್ಕೆ ಹಚ್ಚೆ ಹಾಕಿಸಿದರೆ ಅದು ನಿಮಗೆ ಸ್ಟೈಲಿಷ್ ಲುಕ್ ನೀಡುತ್ತದೆ.

ಭುಜದ ಕೆಳಗೆ

ಭುಜದ ಕೆಳಗೆ

ಮಹಿಳೆಯರಿಗೆ ಪುರುಷರಿಗೆ ಇರುವಂತೆ ದಪ್ಪವಾದ ತೋಲೀನಲ್ಲಿ ದಪ್ಪವಾದ ಸ್ನಾಯು ಇಲ್ಲದಿದ್ದರೂ ತೋಳಿಗೆ ಹಾಕಿಸಿಕೊಂಡರೆ ಸ್ಲೀವ್ ಡ್ರೆಸ್ ಗೆ ಅದು ಫ್ಯಾಷನಬಲ್ ಲುಕ್ ನೀಡುತ್ತದೆ.

ಹಿಮ್ಮಡಿಯ ಗಂಟು

ಹಿಮ್ಮಡಿಯ ಗಂಟು

ಹಿಮ್ಮಡಿಯ ಗಂಟಿಗೆ ಕಾಲ್ ವೈನ್ ಹಾಕುವ ಫ್ಯಾಷನ್ ಇತ್ತು, ನಂತರ ದಾರ ಕಟ್ಟುವ ಫ್ಯಾಷನ್ ಬಂತು. ಈಗ ಆ ಭಾಗಕ್ಕೆ ಹಚ್ಚೆ ಹಾಕುವುದು ಫ್ಯಾಷನ್ ಆಗಿದೆ.

ಹೊಕ್ಕಳು ಮತ್ತು ಎದೆ ಭಾಗದಲ್ಲಿ

ಹೊಕ್ಕಳು ಮತ್ತು ಎದೆ ಭಾಗದಲ್ಲಿ

ಹಾಟ್ ಸ್ಟೈಲ್ ಇಷ್ಟ ಪಡುವ ಬೆಡಗಿಯರು ಹೊಕ್ಕಳು ಮತ್ತು ಎದೆಯ ಸಮೀಪ ಹಚ್ಚೆ ಹಾಕಿಸಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಹಾಟ್ ಸೆಲೆಬ್ರಿಟಿಗಳಿಗೆ ಹಚ್ಚೆ ಹಾಕಿಸಿಕೊಳ್ಳಲು ತುಂಬಾ ಪ್ರಿಯವಾದ ಸ್ಥಳ ಹೊಕ್ಕಳಾಗಿದೆ.

ಎದೆ

ಎದೆ

ಎದೆ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡು ತಮ್ಮ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡುವುದು ಸೆಲೆಬ್ರಿಟಿಗಳಲ್ಲಿ ಸಾಮಾನ್ಯ.

English summary

10 Spots On Your Body To Get Tattooed | Fashion And Lifestyle | ಹಚ್ಚೆಯನ್ನು ಎಲ್ಲೆಲ್ಲಿ ಹಾಕಿಸಿಕೊಳ್ಳುವುದು ಈಗೀನ ಟ್ರೆಂಡ್ | ಫ್ಯಾಷನ್ ಮತ್ತು ಜೀವನ ಶೈಲಿ

Getting a tattoo on your body or getting 'inked' as they say now, is not an easy decision. You cannot be impulsive about getting tattoos. You need to analyse and visualise how a tattoo will look on your body. Just because you like some celebrity tattoos does not mean that a similar design will suit you
X
Desktop Bottom Promotion