For Quick Alerts
ALLOW NOTIFICATIONS  
For Daily Alerts

ವ್ಯಕ್ತಿತ್ವ ವಿಕಾಸವಾಗಬೇಕಾದರೆ ಓದಿ!

|
Benefits of Reading
ಈಗೀನ ಪೀಳಿಗೆಯಲ್ಲಿ ಪೇಪರ್, ಕಾದಂಬರಿಗಳನ್ನು ಓದುವ ಅಭ್ಯಾಸ ಕಡಮೆಯಾಗುತ್ತದೆ. ಟಿವಿ, ಕಂಪ್ಯೂಟರ್, ವೀಡಿಯೊ ಗೇಮ್, ಇಂಟರ್ ನೆಟ್ ಹೀಗೆ ಮನರಂಜನೆ ಮತ್ತು ಮಾಹಿತಿಗೆ ನಾನಾ ಸಾಧನಗಳು ಇರುವಾಗ ದೊಡ್ಡ ಪುಸ್ತಕಗಳನ್ನು ಗಂಟೆ ಗಟ್ಟಲೆ ಓದುವುದು ಯಾರು ಅನ್ನುವ ಉದಾಸೀನ ಹೆಚ್ಚಿನವರಲ್ಲಿ ಬಂದು ಬಿಟ್ಟಿದೆ. ಆದರೆ ಒಂದು ವಿಷಯ ನೆನೆಪಿಟ್ಟುಕೊಳ್ಳಿ. ಓದುವ ಅಭ್ಯಾಸವನ್ನು ಬಿಟ್ಟರೆ ಅನೇಕ ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ಓದುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಲು ಇದನ್ನು ಓದಿ:

1. ಮೆದುಳಿಗೆ ವ್ಯಾಯಾಮ:
ಓದುವಾಗ ಮೆದುಳು ಓದಿದನ್ನು ಅರ್ಥೈಸಿಕೊಳ್ಳುತ್ತಾ, ಕಲ್ಪನೆ ಮಾಡುತ್ತಾ ಹೋಗುತ್ತದೆ. ಇದರಿಂದ ಮೆದುಳಿಗೆ ಹೆಚ್ಚಿನ ಕೆಲಸ ಬೀಳುವುದರಿಂದ ಅದರ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಮೆದುಳಿಗೆ ಉತ್ತಮ ರೀತಿಯ ವ್ಯಾಯಾಮ ಉಂಟಾಗುತ್ತದೆ.

2. ಮನಸ್ಸಿಗೆ ತೃಪ್ತಿ: ಕತೆಪುಸ್ತಕಗಳನ್ನು ಓದುತ್ತಾ ಹೋಗುವಾಗ ವಾಸ್ತವನ್ನು ಮರೆತು ಕಾಲ್ಪನಿಕ ಲೋಕದಲ್ಲಿರುತ್ತವೆ. ಕತೆಯಲ್ಲಿರುವ ಪಾತ್ರಗಳನ್ನು ಮನಸ್ಸು ಆನಂದಿಸುತ್ತದೆ. ಅನೇಕ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತದೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ.

3. ಕಲ್ಪನಾ ಸಾಮರ್ಥ್ಯ ಹೆಚ್ಚುತ್ತದೆ:
ಓದುವಾಗ ಅದರ ಬಗ್ಗೆ ಚಿತ್ರಿಸಿಕೊಳ್ಳುವುದರಿಂದ ಕಲ್ಪನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಆದರೆ ಟಿವಿ ನೋಡಿದಾಗ ಅದರಲ್ಲಿರುವ ಚಿತ್ರಗಳನ್ನು ನೋಡುತ್ತಾ ಕಲ್ಪನೆಯನ್ನು ಮಾಡಿಕೊಳ್ಳುವುದಿಲ್ಲ.

4.ದೂರದೃಷ್ಟಿತ್ವ: ಪುಸ್ತಕ ಓದುವುದರಿಂದ ಜೀವನದದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿಯಬಹುದು. ಇವು ನಿಜ ಜೀವನದಲ್ಲಿ ನಿರ್ಧಾರಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

5. ಜ್ಞಾನಾಭಿವೃದ್ಧಿ ಹೆಚ್ಚಾಗುತ್ತದೆ: ಜ್ಞಾನ ವ್ಯಕ್ತಿಗೆ ಉತ್ತಮ ವ್ಯಕ್ತಿತ್ವ ಕೊಡುತ್ತದೆ. ಉತ್ತಮವಾದ ಜ್ಞಾನ ಪಡೆಯ ಬೇಕೆಂದರೆ ಓದಬೇಕು.

6. ವಾಗ್ಮಿ: ಉತ್ಮವಾದ ವಾಗ್ಮಿ ಅನಿಸಿಕೊಳ್ಳಬೇಕಾದರೆ ಅವನು ತುಂಬಾ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿರಬೇಕು.

7. ಜೀವಿಸುವ ಕಲೆ: ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿದರೆ ಅದು ನಮಗೆ ಬದುಕಲು ಮಾರ್ಗದರ್ಶನ ನೀಡುತ್ತದೆ. ಆದ್ದರಿಂದಲೆ ಪುಸ್ತಕಗಳು ಜೀವನದ ಅತ್ಯುತ್ತವಾದ ಸಂಗತಿಗಳಾಗಿವೆ.

8. ಸಂಸ್ಕೃತಿ:
ಪುಸ್ತಕ ಓದುವುದರಿಂದ ತರ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬಹುದು. ಟಿವಿಯಲ್ಲಿ ಅಥವಾ ನೆಟ್ ನಲ್ಲಿ ನಡಿದರೆ ತುಂಬಾ ಕಾಲ ತಲೆಯಲ್ಲಿ ಉಳಿಯುವುದಿಲ್ಲ. ಆದರೆ ಓದಿದರೆ ಅದು ಮರೆಯುವುದು ತುಂಬಾ ವಿರಳ. ಇದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು.

English summary

Benefits of Reading | Life Style Reduced Reading Habit | ಓದುವುದರಿಂದ ಸಿಗುವ ಪ್ರಯೋಜನಗಳು |ಆಧುನಿಕ ಜೀವನಶೈಲಿಯಿಂದ ಕಡಿಮೆಯಾಗುತ್ತಿರುವ ಓದುವ ಅಭ್ಯಾಸ

With the popularity of computers and video games reading habit reducing among people. Reading helps to build good personality to a person, cultivates sensitivity towards people of different cultures.
Story first published: Thursday, April 19, 2012, 17:11 [IST]
X
Desktop Bottom Promotion