For Quick Alerts
ALLOW NOTIFICATIONS  
For Daily Alerts

Shravan Somvar : ಶ್ರಾವಣ ಸೋಮವಾರ 2021: ದಿನಾಂಕಗಳು, ವ್ರತ ನಿಯಮ ಹಾಗೂ ಮಹತ್ವ

|

ಆಗಸ್ಟ್‌ 9ರಿಂದ ಹಿಂದೂ ಕನ್ನಡ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸ ಪ್ರಾರಂಭ. ಶ್ರಾವಣ ಎಂದರೆ ಪಂಚಾಂಗದ ಪ್ರಕಾರ 5ನೇ ತಿಂಗಳು. ಹಿಂದೂಗಳಿಗೆ ಇದು ತುಂಬಾ ಪವಿತ್ರವಾದ ತಿಂಗಳಾಗಿದೆ. ಶ್ರಾವಣ ತಿಂಗಳಿನ ಪ್ರತಿಯೊಂದು ದಿನವು ವಿಶೇಷವಾದದ್ದೇ. ಈ ತಿಂಗಳಿನಲ್ಲಿ ಶಿವನ ಆರಾಧನೆ ಮಾಡಲಾಗುವುದು, ಅದರಲ್ಲೂ ಶ್ರಾವಣ ಸೋಮವಾರ ಶಿವನ ಆರಾಧನೆಗೆ ಮೀಸಲಿಡಲಾಗಿದೆ.

ಈ ವರ್ಷ ಯಾವೆಲ್ಲಾ ದಿನಾಂಕಗಳಲ್ಲಿ ಶ್ರಾವಣ ಸೋಮವಾರ ಆಚರಿಸಲಾಗುವುದು, ಈ ದಿನದ ವ್ರತ ನಿಯಮಗಳೇನು, ಶ್ರಾವಣ ಸೋಮವಾರದ ಮಹತ್ವವೇನು ಎಂಬ ಮಾಹಿತಿ ನೋಡಿ ಇಲ್ಲಿದೆ:

2021ರಲ್ಲಿ ಶ್ರಾವಣ ಸೋಮವಾರದ ದಿನಾಂಕಗಳು

2021ರಲ್ಲಿ ಶ್ರಾವಣ ಸೋಮವಾರದ ದಿನಾಂಕಗಳು

ಆಗಸ್ಟ್ 9 , 2021

ಆಗಸ್ಟ್ 16, 2021

ಆಗಸ್ಟ್ 23, 2021

ಆಗಸ್ಟ್‌ 30, 2021

ಸೆಪ್ಟೆಂಬರ್ 6, 2021

ಸೆಪ್ಟೆಂಬರ್‌ 7ಕ್ಕೆ ಶ್ರಾವಣ ತಿಂಗಳು ಮುಕ್ತಾಯವಾಗುವುದು.

ಶ್ರಾವಣ ಸೋಮವಾರದ ಮಹತ್ವ

ಶ್ರಾವಣ ಸೋಮವಾರದ ಮಹತ್ವ

ಕೆಲವರು ಶ್ರಾವಣ ಮಾಸ ಪೂರ್ತಿ ಸಾತ್ವಿಕ ಆಹಾರ ಸೇವಿಸಿ, ವ್ರತಾಚರಣೆ ಮಾಡಿದರೆ ಇನ್ನು ಕೆಲವರು ಶ್ರಾವಣ ಸೋಮವಾರದಂದು ಉಪವಾಸವಿದ್ದು ವ್ರತವನ್ನು ಪಾಲಿಸುತ್ತಾರೆ. ಈ ದಿನ ಬೆಳಗ್ಗೆ ಬೇಗ ಎದ್ದು ನದಿ ಸ್ನಾನ ಅಥವಾ ಮನೆಯಲ್ಲಿ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಹಾಕಿ ಸ್ನಾನ ಮಾಡಿ, ಮಡಿ ವಸ್ತ್ರ ಧರಿಸಬೇಕು. ನಂತರ ಉಪವಾಸವಿದ್ದು ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು, ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಪೂಜೆ ಮಾಡಬಹುದು.

ಮನೆಯಲ್ಲಿ ಪೂಜಾ ವಿಧಿ ಹೇಗಿರಬೇಕು

ಮನೆಯಲ್ಲಿ ಪೂಜಾ ವಿಧಿ ಹೇಗಿರಬೇಕು

ಶಿವಲಿಂಗಕ್ಕೆ ಅಥವಾ ಶಿವನಿಗೆ ಬಿಲ್ವೆ ಪತ್ರೆ ಅರ್ಪಿಸಬೇಕು, ನಂತರ ದೀಪವನ್ನು ಹಚ್ಚಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು ಜೊತೆಗೆ ಓಂ ನಮಃ ಶಿವಾಯ ಅಂತ ಜಪಿಸುತ್ತಲೇ ಇರಬೇಕು. ದೇವರಿಗೆ ಹಾಲು, ತುಪ್ಪ, ಮೊಸರು, ನೀರು, ಜೇನು ಇವುಗಳಿಂದ ತಯಾರಿಸಿದ ನೈವೇದ್ಯ ಅರ್ಪಿಸಬೇಕು.

ಶ್ರಾವಣ ಸೋಮವಾರದಂದು ಭಕ್ತರು ಸಂಪೂರ್ಣ ಉಪವಾಸವಿರಲು ಸಾಧ್ಯವಾಗದಿದ್ದರೆ ಹಣ್ಣುಗಳು ಹಾಗೂ ನೀರು ಸೇವಿಸಬಹುದು.

ಈ ತಿಂಗಳು ಮಾಂಸಾಹಾರ ಹಾಗೂ ಮದ್ಯವನ್ನು ಮುಟ್ಟಬಾರದು.

ಇಷ್ಟಾರ್ಥ ಸಿದ್ಧಿಗಾಗಿ ಶಿವನ ಆರಾಧನೆ

ಇಷ್ಟಾರ್ಥ ಸಿದ್ಧಿಗಾಗಿ ಶಿವನ ಆರಾಧನೆ

ಯಾರು ಭಕ್ತಿಯಿಂದ ಶ್ರಾವಣ ಸೋಮವಾರ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರುವುದು ಎಂಬುವುದು ಶಿವನನ್ನು ನಂಬಿರುವ ಭಕ್ತರ ಅಚಲ ನಂಬಿಕೆ. ಅಲ್ಲದೆ ವೈವಾಹಿಕ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿಗಾಗಿ ಶ್ರಾವಣ ಸೋಮವಾರ ವ್ರತ ಪಾಲಿಸಲಾಗುವುದು. ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಪ್ರಾರ್ಥಿಸಿ ವಿವಾಹಿತ ದಂಪತಿ ಈ ಶ್ರಾವಣ ಸೋಮವಾರ ವ್ರತ ಆಚರಿಸುತ್ತಾರೆ. ಇದನ್ನು ಶ್ರಾವಣ ತಿಂಗಳ ಮೊದಲ ಸೋಮವಾರ ಪ್ರಾರಂಭಿಸಿದರೆ 15 ಸೋಮವಾರ ವ್ರತ ನಿಯಮ ಪಾಲಿಸಬೇಕು. ಮನಸ್ಸಿನಲ್ಲಿ ಏನಾದರೂ ಸಂಕಲ್ಪ ತೆಗೆದುಕೊಂಡು ಈ ವ್ರತ ಮಾಡಿದರೆ ಅದು ನೆರವೇರುವುದು.

ಇನ್ನು ಮದುವೆಯಾಗದವರು ಶ್ರಾವಣ ಸೋಮವಾರ ವ್ರತ ಮಾಡಿದರೆ ಉತ್ತಮವಾದ ಸಂಗಾತಿಯನ್ನು ಪಡೆಯುತ್ತಾರೆ.

ಶಿವನಿಗೆ ಆರಾಧನೆ ಮಾಡುವ ಮುನ್ನ ಗಣೇಶನಿಗೆ ಪೂಜೆ ಮಾಡಬೇಕು. ಶಿವನ ಪೂಜೆಯ ಬಳಿಕ ಶ್ರಾವಣ ವ್ರತ ಕತೆ ಹೇಳಬೇಕು.

ಶ್ರಾವಣ ವ್ರತ ಕತೆ

ಶ್ರಾವಣ ವ್ರತ ಕತೆ

ಒಂದು ಊರಿನಲ್ಲಿ ಶ್ರೀಮಂತ ದಂಪತಿ ಇದ್ದರು. ಅವರಿಗೆ ಜೀವನದಲ್ಲಿ ಎಲ್ಲಾ ಇದ್ದರೂ ಮಕ್ಕಳಿಲ್ಲ ಎಂಬ ಕೊರಗು ಕಾಡುತ್ತಿತ್ತು... ಎಷ್ಟು ವರ್ಷಗಳಾದರೂ ಅವರಿಗೆ ಮಕ್ಕಳಾಗಿರಲಿಲ್ಲ. ಆ ಶ್ರೀಮಂತ ಶಿವನ ಭಕ್ತನಾಗಿದ್ದ, ಪ್ರತಿದಿನ ಪತ್ನಿ ಸಮೇತ ಶಿವನ ದೇವಾಲಯಕ್ಕೆ ಭೇಟಿ ನೀಡಿ ತಮಗೆ ಪುತ್ರ ಭಾಗ್ಯ ನೀಡುವಂತೆ ಕೋರುತ್ತಿದ್ದರು. ಶಿವನು ಆತನ ಭಕ್ತಿಗೆ ಮೆಚ್ಚಿ, ಒಂದು ಷರತ್ತು ಮೇಲೆ ಪುತ್ರ ಭಾಗ್ಯ ಕರುಣಿಸುತ್ತಾನೆ. ಆ ಷರತ್ತು ಪ್ರಕಾರ ಆತನ ಮಗನ ಆಯುಸ್ಸು 12 ವರ್ಷಗಳಾಗಿತ್ತು.

ಶ್ರೀಮಂತ ದಂಪತಿಗೆ ಮಗ ಜನಿಸುತ್ತಾನೆ, ಎಲ್ಲರಿಗೆ ತುಂಬಾ ಖುಷಿಯಾಗುತ್ತದೆ. ಆದರೆ ಶ್ರೀಮಂತನಿಗೆ ನನ್ನ ಮಗ ಬರೀ 12 ವರ್ಷಗಳ ಕಾಲ ಬದುಕಿರುತ್ತಾನೆ ಎಂಬ ಸತ್ಯ ಗೊತ್ತಿತ್ತು, ಈ ಕುರಿತು ಯೋಚಿಸುತ್ತಲೇ ಇರುತ್ತಾನೆ. ಮಗ ಬೆಳೆದು ದೊಡ್ಡವನಾಗುತ್ತಾನೆ. 11 ವರ್ಷಗಳು ತುಂಬಿ 12 ಪ್ರಾರಂಭವಾಗುವುದು, ಆಗ ಇನ್ನೇನು ನನ್ನ ಮಗನ ಆಯುಸ್ಸು ಸಮೀಸುತ್ತಿದೆ ಎಂದರ್ಥ ವ್ಯಾಪಾರಿ ಮಗನನ್ನು ಹುಡುಗನ ಮಾವನ ಜೊತೆ ಕಾಶಿಯಾತ್ರೆಗೆ ಕಳುಹಿಸುತ್ತಾರೆ. ಅವರು ಕಣ್ಣಿಗೆ ಕಂಡ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಹುಡುಗ ಕಾಯಿಲೆ ಬೀಳುತ್ತಾನೆ, ಆತನ ಆಯುಸ್ಸು ಮುಗಿದು ಕಣ್ಮುಚ್ಚುತ್ತಾನೆ... ಪೋಷಕರು , ಊರಿನವರೆಲ್ಲಾ ಹುಡುಗ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಾರೆ... ಶಿವ-ಪಾರ್ವತಿ ಆ ದಂಪತಿಯ ಭಕ್ತಿಗೆ ಮೆಚ್ಚಿ ಮಗನ ಜೀವ ಮರಳಿ ನೀಡುತ್ತಾರೆ.. ಶಿವನನ್ನು ನಂಬಿದರೆ ಅವರ ಇಷ್ಟಾರ್ಥ ನೆರವೇರುವುದು ಎಂಬುವುದು ಇದರ ಸಾರಾಂಶವಾಗಿದೆ.

English summary

Shravan Somvar Vrat 2021 Dates: Shravan Somwar Vrat Fasting days, Significance And Relevant Details

Shrava Somvar Vrat 2021 dates: Shravan Somwar Vrat Fasting days, significance and relevant details, read on...
X
Desktop Bottom Promotion