For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ ಶಾಸ್ತ್ರ: ಏನಿದು ಜನ್ಮ ನಕ್ಷತ್ರ? ಏನಿದರ ಹಿಂದಿನ ರಹಸ್ಯ?

By jaya subramanya
|

ಮಾನವನ ಜೀವನದಲ್ಲಿ ಜನನ ಮರಣಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಮಗುವಿನ ಜನನದಿಂದ ಹಿಡಿದು ಅದು ಮರಣಿಸುವವರೆಗೆ ನಡೆಯುವ ಪ್ರತಿಯೊಂದು ಘಟನೆಗಳಿಗೂ ಸಂಬಂಧವಿದ್ದು ಇದನ್ನು ಹಿಂದಿನ ಜನ್ಮದ ಫಲಗಳ ಮುಂದುವರಿಕೆ ಎಂಬುದಾಗಿ ಕರೆಯಲಾಗುತ್ತದೆ.

ತನ್ನ ಹಿಂದಿನ ಜನ್ಮದಲ್ಲಿ ದುಷ್ಟತನವನ್ನು ಮಾಡಿದ ವ್ಯಕ್ತಿಯು ಮುಂದಿನ ಜನ್ಮದಲ್ಲಿ ಇತರರಿಗೆ ಮಾಡಿದ ಅದೇ ನೋವನ್ನು ಸ್ವತಃ ತಾನೇ ಅನುಭವಿಸುತ್ತಾನೆ. ಅಂತೆಯೇ ಪೂರ್ವ ಜನ್ಮದಲ್ಲಿ ಒಳಿತನ್ನು ಉಂಟುಮಾಡಿದ್ದಲ್ಲಿ ಮುಂದಿನ ಜನ್ಮದಲ್ಲಿ ಆತ ಒಳಿತಿನ ಫಲವನ್ನು ಅನುಭವಿಸುತ್ತಾನೆ. ಹೀಗೆ ಒಳಿತು ಮತ್ತು ಕೆಡುಕುಗಳ ಲೆಕ್ಕಾಚಾರ ಪೂರ್ವ ಮತ್ತು ಮುಂದಿನ ಜನ್ಮಗಳೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿದೆ.

Nakshathras

ಜನ್ಮ ಕುಂಡಲಿಯನ್ನು ರಚಿಸುವ ಸಂದರ್ಭದಲ್ಲಿ ಈ ಒಳಿತು ಕೆಡುಕುಗಳ ಸಮಗ್ರ ಮಾಹಿತಿಯನ್ನು ನಮಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಜನನ ದಿನಾಂಕ, ಗ್ರಹಗಳು, ಹುಟ್ಟಿದ ಸಮಯ, ಗಳಿಗೆ, ದಿನ ವಾರ, ತಿಂಗಳು ಇದೆಲ್ಲವನ್ನೂ ಆಧರಿಸಿ ಜನ್ಮ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಜನ್ಮ ಪತ್ರಿಕೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುವಂತಹವು ನಕ್ಷತ್ರಗಳಾಗಿವೆ.

ವೇದ ಶಾಸ್ತ್ರಗಳ ಪ್ರಕಾರ 28 ನಕ್ಷತ್ರಗಳಿದ್ದು ಆದರೆ ಹೆಚ್ಚಾಗಿ 27 ನಕ್ಷತ್ರಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ನಕ್ಷತ್ರದ ಸಂಸ್ಕೃತ ಪದವಾಗಿದೆ ನಕ್‌ಸತ್ ಎಂದಾಗಿದ್ದು ಸಮೀಪಿಸುತ್ತಿರುವ ಎಂಬರ್ಥವನ್ನು ಇದು ನೀಡುತ್ತದೆ. ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಪುಷ್ಯಾ, ಆಶ್ಲೇಷಾ, ಮಘ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಹಸ್ತಾ, ಚಿತ್ರಾ, ಸ್ವಾತಿ, ವಿಶಾಖಾ, ಅನುರಾಧ, ಜ್ಯೇಷ್ಟ, ಮೂಲಾ, ಪೂರ್ವಶಾಡಾ, ಉತ್ತರಶಾಡಾ, ಶ್ರಾವಣ, ಧನಿಷ್ಟ, ಶತವಿಷ, ಪೂರ್ವ ಭಾದ್ರಪದ, ಉತ್ತರ ಭಾದ್ರಪದಾ, ರೇವತಿ ಇವುಗಳು ನಕ್ಷತ್ರಗಳ ಹೆಸರುಗಳಾಗಿದ್ದು ಇವರುಗಳ ಸಹೋದರನ ಹೆಸರಾಗಿದೆ ಅಭಿಜಿತ್. ನಕ್ಷತ್ರಗಳ ಗುಂಪಿನಲ್ಲಿ ಈ ಹೆಸರನ್ನು ಎಣಿಕೆ ಮಾಡುವುದಿಲ್ಲ ಇದು ಬಿದ್ದ ಧ್ರುವವಾಗಿದೆ.

ಚಂದ್ರ ಮತ್ತು ನಕ್ಷತ್ರಗಳ ಕಥೆ
ದಕ್ಷನು ತನ್ನ 27 ಮಗಳಂದಿರನ್ನು ಚಂದ್ರನಿಗೆ ವಿವಾಹ ಮಾಡಿಕೊಡುತ್ತಾರೆ. ತನ್ನ ಮಕ್ಕಳನ್ನು ಚಂದ್ರನು ಪತ್ನಿಯಾಗಿ ಸ್ವೀಕರಿಸಿದ ನಂತರ ಎಲ್ಲರನ್ನೂ ಸಮನಾಗಿ ಕಾಣಬೇಕೆಂದು ದಕ್ಷನು ಚಂದ್ರನಿಗೆ ಷರತ್ತನ್ನು ವಿಧಿಸಿರುತ್ತಾನೆ. ಅದಾಗ್ಯೂ ಚಂದ್ರನು ರೋಹಿಣಿಯನ್ನು ಹೆಚ್ಚು ಪ್ರೀತಿಸಿ ಉಳಿದ ಪತ್ನಿಯರನ್ನು ಕಡೆಗಣಿಸುತ್ತಾನೆ. ಇದರಿಂದ ಕೋಪಗೊಂಡ ಚಂದ್ರನ ಪತ್ನಿಯರು ಪಿತನಾದ ದಕ್ಷನಲ್ಲಿ ತಮ್ಮ ದುಃಖವನ್ನು ತೋಡಿಕೊಳ್ಳುತ್ತಾರೆ. ಕ್ರೋಧಿತ ದಕ್ಷನು ಚಂದ್ರನನ್ನು ಶಪಿಸುತ್ತಾನೆ. ಇದರಿಂದ ಚಂದ್ರನು ತನ್ನ ಹೊಳಪನ್ನು ಕಳೆದುಕೊಳ್ಳುತ್ತಾನೆ ಇದುವೇ ಚಂದ್ರನ ಕಳೆಗುಂದಿದ ಮತ್ತು ಪ್ರಕಾಶರಹಿತವಾದ ನೋಟವಾಗಿದೆ.

ವೇದಶಾಸ್ತ್ರಗಳ ಪ್ರಕಾರ ಚಂದ್ರನು ತನ್ನ ಪತ್ನಿಯರನ್ನು ಭೇಟಿ ಮಾಡಲು ಹೋಗುತ್ತಾನೆ ಆದರೆ ನಕ್ಷತ್ರಗಳು ತಮ್ಮ ಜಾಗವನ್ನು ಬಿಟ್ಟು ಕದಲುವುದಿಲ್ಲ. ಆದ್ದರಿಂದಲೇ ಸಮೀಪಿಸುತ್ತಿದೆ ಎಂಬರ್ಥವನ್ನು ನಕ್ಷತ್ರಗಳು ಸಾರುತ್ತಿವೆ. ಪ್ರತಿ 2 1/2 ದಿನಗಳಿಗೆ ಚಂದ್ರನು ಪತ್ನಿಯರನ್ನು ಸಮೀಪಿಸುತ್ತಾನೆ. ನಕ್ಷತ್ರಗಳು ತಮ್ಮ ಜಾಗವನ್ನು ಬಿಟ್ಟು ಅತ್ತಿತ್ತ ಕದಲುವುದಿಲ್ಲ. ಕ್ಷರ ಎಂದರೆ ಚಲಿಸಿದ ಎಂಬರ್ಥವನ್ನು ನೀಡುತ್ತಿದ್ದು, ಚಲಿಸದೇ ಇರುವಂತಹವುಗಳು ನಕ್ಷತ್ರಗಳು ಎಂದಾಗಿದೆ. ಹಿಂದೂ ಗ್ರಂಥಗಳ ಪ್ರಕಾರ ನಕ್ಷತ್ರವು ಕದಲದೇ ನಿಂತಲ್ಲೇ ಇರುವಂತವುಗಳಾಗಿದ್ದು ತಮ್ಮ ಪತಿ ಚಂದ್ರನಿಗಾಗಿ ತಾಳ್ಮೆಯಿಂದ ಕಾಯುತ್ತಿವೆ ಎಂದಾಗಿದೆ.

ವ್ಯಕ್ತಿಯ ಜನನ ಸಮಯದಲ್ಲಿ ನಕ್ಷತ್ರವನ್ನು ಹೇಗೆ ಗುರುತಿಸಲಾಗುತ್ತದೆ
ನಿಮ್ಮ ಜನನ ಸಮಯದಲ್ಲಿ, ಚಂದ್ರನು ಎಲ್ಲಿದ್ದಾನೆ ಎಂಬುದನ್ನು ಆಧರಿಸಿ ನಕ್ಷತ್ರವನ್ನು ನಿರ್ಧರಿಸಲಾಗುತ್ತದೆ. ಈ ನಕ್ಷತ್ರಗಳು 12 ರಾಶಿಗಳ ನಡುವೆ ಚದುರಿ ಹೋಗಿರುತ್ತವೆ ನಿಮ್ಮ ಜನನ ಸಮಯದಲ್ಲಿ ಚಂದ್ರನು ಸಾಗಣೆಯಾಗುವ ರಾಶಿಯು ನಿಮ್ಮ ಚಂದ್ರ ರಾಶಿಯಾಗಿದೆ. ಒಂದು ರಾಶಿಯು 2 1/2 ನಕ್ಷತ್ರಗಳನ್ನು ಹೊಂದಿದೆ. ಉದಾಹರಣೆಗೆ ಮೇಷ ಮೊದಲ ರಾಶಿಯು ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರದ ಅರ್ಧಭಾಗವನ್ನು ಹೊಂದಿದೆ. ಅಂತೆಯೇ 27 ನಕ್ಷತ್ರಗಳು 12 ರಾಶಿಗಳ ನಡುವೆ ಚದುರಿವೆ. ಜನ್ಮ ನಕ್ಷತ್ರ-ಹುಟ್ಟಿದ ದಿನಾಂಕ ಆಧರಿಸಿ ಹೇಳುವ 'ಸಂಖ್ಯಾಶಾಸ್ತ್ರ'

ಎಲ್ಲಾ ಗ್ರಹಗಳು ನಕ್ಷತ್ರಗಳ ಮೂಲಕ ಸಂಚರಿಸುತ್ತವೆ. ನಿಮ್ಮ ಜನ್ಮ ಕುಂಡಲಿಯನ್ನು ತೆಗೆದಾಗ ನಕ್ಷತ್ರ ಮತ್ತು ಗ್ರಹಗಳು ಎಲ್ಲಿವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಅದಾಗ್ಯೂ ಜನ್ಮ ನಕ್ಷತ್ರಗಳನ್ನು ಒಂದು ಅಂದಾಜಿನ ಮೇಲೆ ಸಿದ್ಧಪಡಿಸಲಾಗಿದೆ ಮತ್ತು ನಕ್ಷತ್ರ ಹಾಗೂ ಗ್ರಹಗಳ ಸ್ಥಿತಿಗತಿಯನ್ನು ಕೂಡ ಇದೇ ಆದಾರದಲ್ಲಿ ತಾಳೆ ಹಾಕಲಾಗಿದೆ.

ನಕ್ಷತ್ರ ಪುಂಜದ ಸ್ಥಾನದ ಮೂಲಕ ನಾವು ಪರಿಶೀಲಿಸಿದಾಗ ನಮಗೆ ನಿಖರವಾದ ಜ್ಯೋತಿಷ್ಯ ಮಾಹಿತಿ ದೊರೆಯುತ್ತದೆ. ಪ್ರತೀ ನಕ್ಷತ್ರವೂ ಆಳುವ ಗ್ರಹ ಮತ್ತು ದೈವವನ್ನು ಹೊಂದಿದೆ. ನಿಮ್ಮ ಲಗ್ನ ನಕ್ಷತ್ರವಾಗಿ ಅಶ್ವಿನಿ ಇದೆ ಎಂಬುದಾಗಿ ತಿಳಿದುಕೊಳ್ಳೋಣ. ಉನ್ನತಿಯ ಗ್ರಹವಾಗಿದೆ. ನಿಮ್ಮ ಕುಂಡಲಿಯ ಮೊದಲ ಮನೆಯಲ್ಲಿ ಈ ಗ್ರಹವಿದ್ದರೆ ಉನ್ನತಿ ಎಂದಾಗಿದೆ. ನಿಮ್ಮ ಲಗ್ನವು ಅಶ್ವಿನಿಯಲ್ಲಿ ಇರಿಸುವುದನ್ನು ನೀವು ಕಂಡಾಗ ಆಳ್ವಿಕೆಯ ಗ್ರಹ ಮತ್ತು ದೈವವನ್ನು ನೋಡಿ. ಅಶ್ವಿನಿಯ ಆಳ್ವಿಕೆಯ ಗ್ರಹ ಕೇತುವಾಗಿರುತ್ತದೆ ಮತ್ತು ದೈವವು ಅಶ್ವಿನಿ ಕುಮಾರರಾಗಿರುತ್ತಾರೆ.

ದೇವ ವೈದ್ಯರುಗಳು ಎಂದು ಕರೆಯಿಸಿಕೊಂಡಿರುವ ಅಶ್ವಿನಿ ಕುಮಾರರು ಯಾವುದೇ ರೋಗವನ್ನು ಗುಣಪಡಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಆದ್ದರಿಂದ ಇವುಗಳ ಪರಿಣಾಮ ನಿಮ್ಮ ಮೇಲೆ ಉಂಟಾಗುತ್ತದೆ. ಸಮಸ್ಯೆಯನ್ನು ಪರಿಹರಿಸುವ ತಾಕತ್ತು ನಿಮ್ಮಲ್ಲಿರುತ್ತದೆ. ಇದು ನಿಮ್ಮ ವೃತ್ತಿಯಾಗಿರಲೂಬಹುದು. ನೀವು ಈ ವಿಷಯಗಳಲ್ಲಿ ಉನ್ನತಿಯನ್ನು ಕಂಡುಕೊಳ್ಳುತ್ತೀರಿ.

ಅಶ್ವಿನಿಯ ಆಡಳಿತ ಗ್ರಹ ಕೇತುವಿನೆಡೆಗೆ ಗಮನ ಹರಿಸಿದಾಗ ಆ ಮನೆಯಲ್ಲಿರುವ ಸಾಮರ್ಥ್ಯಗಳನ್ನು ಆಧರಿಸಿ ನೀವು ಕಾರ್ಯನಿರ್ವಹಿಸುತ್ತೀರಿ. ನಿಮ್ಮ ಕೇತು ಮೂರನೇ ಮನೆಯಲ್ಲಿದ್ದರೆ ಬರಹ, ಮಾಧ್ಯಮ, ಸಂವಹನ ಮತ್ತು ತಂತ್ರಜ್ಞಾನದ ಮೇಲೆ ಇದು ಪರಿಣಾಮ ಬೀರುತ್ತದೆ. ನಿಮ್ಮ ಸಂವಹನಗಳ ಮೂಲಕ ಇತರರ ಸಮಸ್ಯೆಯನ್ನು ಪರಿಹರಿಸುವ ಛಾತಿ ನಿಮ್ಮಲ್ಲಿರುತ್ತದೆ. ಕೇತುವು ಆಧ್ಯಾತ್ಮಿಕತೆಯ ಪ್ರತೀಕವಾಗಿರುವುದರಿಂದ ನಿಮ್ಮಲ್ಲೂ ಆಧ್ಯಾತ್ಮಿಕ ಅಂಶ ಇರುತ್ತದೆ.

ಇನ್ನು ನಕ್ಷತ್ರವನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ. ನಕ್ಷತ್ರ ದೇವತೆ, ದೈವ ಮಿಶ್ರವಾಗಿರುವುದರಿಂದ ಕೊನೆಯಲ್ಲಿ ಅವನ್ನು ಕಂಡುಹಿಡಿಯಬೇಕಾಗುತ್ತದೆ. ಇದು ಆರಂಭದಲ್ಲಿ ಕಷ್ಟವೆನಿಸಿದರೂ ನಂತರ ನಿಮಗೆ ಇದು ಅರಿವಾಗುತ್ತದೆ.

ನಕ್ಷತ್ರದ ಆಡಳಿತ ಮತ್ತು ಸಾಮರ್ಥ್ಯಗಳನ್ನು ನೀವು ತಿಳಿದುಕೊಂಡಲ್ಲಿ ವ್ಯಕ್ತಿಯ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಅರಿತುಕೊಳ್ಳಬಹುದು. ಉದಾಹರಣೆಗೆ ಗುರುವು ಪೂರ್ವಶಾಡಾದಲ್ಲಿದ್ದರೆ ಜಾಣ್ಮೆ, ಹೆಚ್ಚಿನ ತಿಳುವಳಿಕೆಯನ್ನು ನೀವು ಪಡೆದುಕೊಳ್ಳುತ್ತೀರಿ. ಪೂರ್ವ ಆಶಾಡಾದ ಆಳ್ವಿಕೆಯ ಗ್ರಹ ಯಾವುದು ಮತ್ತು ಈ ನಕ್ಷತ್ರದ ದೈವವವನ್ನು ನೀವು ಕಂಡುಕೊಳ್ಳಬೇಕಾಗುತ್ತದೆ.

ಪೂರ್ವ ಆಷಾಢದ ಆಳ್ವಿಕೆಯ ಗ್ರಹ ಶುಕ್ರನಾಗಿದ್ದಾನೆ ಮತ್ತು ಜಲದೇವತೆ ದೈವವಾಗಿದ್ದಾರೆ. ಜನರ ಜೀವನದಲ್ಲಿ ನೀವು ಆಶಾಭಾವವನ್ನು ತರುತ್ತೀರಿ ಎಂದಾಗಿದೆ. ಶುಕ್ರನು ಪ್ರೀತಿಗೆ ಹೆಸರಾಗಿದ್ದು ಈ ಗ್ರಹದ ಅಂಶವೂ ನಿಮ್ಮಲ್ಲೂ ಪರಿಣಾಮವನ್ನು ಬೀರಲಿದೆ.

ಜ್ಯೋತಿಷ್ಯರ ಭವಿಷ್ಯ ವಾಣಿ
ಜ್ಯೋತಿಷ್ಯವನ್ನು ಓದುವುದು ಎಂದರೆ ಮುಂದಿನ ವರ್ಷ ಅಥವಾ ಮುಂದಿನ ತಿಂಗಳು ಏನು ನಡೆಯಲಿದೆ ಎಂಬುದನ್ನು ತಿಳಿಸುವುದಾಗಿದೆ. ಹೆಚ್ಚಿನ ಜ್ಞಾನವುಳ್ಳ ಕ್ಷೇತ್ರ ಇದಾಗಿದ್ದು ಒಬ್ಬರ ಜೀವನದಲ್ಲಿ ಸ್ವಯಂ ಜಾಗೃತಿಯನ್ನು ತರಲು ಇದು ಸಹಕಾರಿಯಾಗಿದೆ. ನೀವು ಈ ಮಟ್ಟವನ್ನು ತಲುಪಿದಾಗ ನಿಮ್ಮ ಜೀವನ ಆನಂದಮಯವಾಗುತ್ತದೆ. ನಿಮ್ಮ ಹಣೆಯಲ್ಲಿ ಏನು ಬರೆದಿದೆ ಎಂಬುದು ನಿಮಗೆ ಅರಿವಾಗುತ್ತದೆ ಮತ್ತು ಅದಕ್ಕೆ ಹೊಂದಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಇದನ್ನು ಜ್ಞಾನ ಎಂಬುದಾಗಿ ಕರೆಯಲಾಗುತ್ತದೆ.

ಆದರೆ ಇದನ್ನು ಅರಿತುಕೊಳ್ಳುವುದು ಕಷ್ಟದ ಮಾತಾಗಿದೆ. ಇಲ್ಲಿರುವ ಒಳಾರ್ಥಗಳನ್ನು ಮನನ ಮಾಡಿಕೊಳ್ಳಲು ತಾಳ್ಮೆ, ಏಕಾಗ್ರತೆ ಅತ್ಯಗತ್ಯವಾಗಿ ಬೇಕಾಗಿದೆ. ಈ ಶಾಸ್ತ್ರದ ಆಳಕ್ಕೆ ನೀವು ಇಳಿದಾಗ ಜೀವನದ ಪ್ರತಿಯೊಂದು ಮಜಲನ್ನು ಇದು ತಿಳಿಸಿಕೊಡುತ್ತದೆ. ನಿಮ್ಮ ಬಲಹೀನತೆ ಮತ್ತು ಬಲವನ್ನು ಇದು ತಿಳಿಸಿಕೊಡುತ್ತದೆ. ದೇವರ ನಿಶ್ಚಯದಂತೆ ಇಲ್ಲಿ ನಮ್ಮ ಬದುಕಿದೆ ಎಂಬುದನ್ನು ನಾವು ಅರಿತುಕೊಳ್ಳಬಹುದಾಗಿದೆ. ನಮ್ಮ ಮೂಲವನ್ನು ನಾವು ತಲುಪುವವರೆಗೆ ನಾವು ಅಸಂಪೂರ್ಣರಾಗಿರುತ್ತೇವೆ.

English summary

Your Secrets From The Nakshathras

Nakshathras add more strength to astrology. Vedic astrology can't be studied without knowing what a Nakshathra is. Majority of Indians do have an idea about their Nakshathras, but most of them are not well aware of the details of the Nakshathra. Nakshathra is based on the Sanskrit word "Naks/Naksat", meaning "which is approaching". There are 28 Nakshathras as per Vedic astrology, but we generally look only at 27 Nakshathras
Story first published: Saturday, May 20, 2017, 19:50 [IST]
X
Desktop Bottom Promotion