ಜನ್ಮ ನಕ್ಷತ್ರ-ಹುಟ್ಟಿದ ದಿನಾಂಕ ಆಧರಿಸಿ ಹೇಳುವ 'ಸಂಖ್ಯಾಶಾಸ್ತ್ರ'

By: Jaya subramanya
Subscribe to Boldsky

ಶಾಸ್ತ್ರ ಸಂಪ್ರದಾಯಗಳು ಇಂದಿನ ಆಧುನಿಕ ಲೋಕದಲ್ಲಿ ಕಣ್ಮರೆಯಾಗಿದ್ದರೂ ಕೆಲವೊಂದು ಅಂಶಗಳನ್ನು ದೃಢೀಕರಿಸುವಲ್ಲಿ ಇಂದಿಗೂ ಇವುಗಳ ಮೊರೆ ಹೋಗುವವರು ಸಾಕಷ್ಟು ಜನರಿದ್ದಾರೆ. ಈ ನಂಬಿಕೆಗಳು ನಿಮ್ಮನ್ನು ದೃಢಗೊಳಿಸುತ್ತವೆ ಮತ್ತು ಏನೇ ಆಗಲಿ ನಾವು ಹಿಂಜರಿಯುವುದಿಲ್ಲ ಎಂಬುದಾಗಿ ನಮ್ಮಲ್ಲಿ ಆತ್ಮವಿಶ್ವಾಸವನ್ನು ತರುತ್ತದೆ. ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ' 

ಇದರಲ್ಲೂ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ನಿಮ್ಮ ವಿವಾಹ, ಸಂಬಂಧ, ಪ್ರೇಮವನ್ನು ಅರಿತುಕೊಳ್ಳುವುದರ ಟ್ರಿಕ್ಸ್ ಅನ್ನೇ ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು. ನಿಮ್ಮ ಜನ್ಮ ನಕ್ಷತ್ರ ಹುಟ್ಟಿದ ದಿನಾಂಕ ಮತ್ತು ದಿನವನ್ನು ಆಧರಿಸಿ ಸಂಖ್ಯಾಶಾಸ್ತ್ರವನ್ನು ಅರಿತುಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಈ ಕುರಿತಾಗಿ ನಾವು ಮಾಹಿತಿಯನ್ನು ನೀಡುತ್ತಿದ್ದು ಇದರಿಂದ ನಿಮ್ಮ ಜೀವನವನ್ನು ಇನ್ನಷ್ಟು ಸುಖಮಯಾಗಿಸಿಕೊಳ್ಳಬಹುದಾಗಿದೆ.....

ಸಂಖ್ಯೆ 1

ಸಂಖ್ಯೆ 1

ಈ ಸಂಖ್ಯೆಯ ಪ್ರಕಾರ ಈ ವ್ಯಕ್ತಿಯು ಲೈಂಗಿಕ ವಿಷಯಗಳ ಮೇಲೆ ಹೆಚ್ಚು ಅಸ್ಥೆಯನ್ನು ಇರಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಇದು ಅವರ ತೀವ್ರತೆ ಮತ್ತು ಇತರರು ಅವರ ಮೇಲೆ ಇಟ್ಟಿರುವ ಪ್ರೇಮವನ್ನು ಸೂಚಿಸುತ್ತದೆ.

ಸಂಖ್ಯೆ 2

ಸಂಖ್ಯೆ 2

ವ್ಯಕ್ತಿಯು ಹೆಚ್ಚು ಸೂಕ್ಷ್ಮ ಎಂಬುದನ್ನು ತೋರಿಸುತ್ತದೆ. ಅವರು ಒಂದು ರೀತಿಯ ನಿಗೂಢ ಸ್ವಭಾವದವರಾಗಿದ್ದು ನಾಚಿಕೆಯನ್ನು ಹೊಂದಿದವರಾಗಿದ್ದಾರೆ. ಅವರು ಪ್ರಣಯದಲ್ಲಿ ಒಲವನ್ನು ಇರಿಸಿಕೊಂಡಿದ್ದರೂ ತಮ್ಮ ಪ್ರಣಯ ಪ್ರವೃತ್ತಿಯನ್ನು ಅವರು ಮುಚ್ಚಿಡುತ್ತಾರೆ.

ಸಂಖ್ಯೆ 3

ಸಂಖ್ಯೆ 3

ಇದು ಅವರ ನಾಟಕೀಯ ಲೈಂಗಿಕತೆಯನ್ನು ಸೂಚಿಸುತ್ತದೆ. ಅವರುಗಳು ಲೈಂಗಿಕ ಚಟುವಟಿಕೆಗಳನ್ನು ಪರಿಗಣಿಸಿದರೂ ಅವರಿಗೆ ಇದು ಒಂದು ರೀತಿಯ ಮೋಜಿನ ಕ್ರಿಯೆಯಾಗಿದೆ.

ಸಂಖ್ಯೆ 4

ಸಂಖ್ಯೆ 4

ಸಂಖ್ಯಾಶಾಸ್ತ್ರದ ಪ್ರಕಾರ ಇವರುಗಳು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೂ ತಮ್ಮ ಹಿಂಸೆ ಮತ್ತು ಸೂಕ್ಷ್ಮ ಸ್ವಭಾವದಿಂದ ಅದನ್ನು ಮುಚ್ಚಿಡುತ್ತಾರೆ.

ಸಂಖ್ಯೆ 5

ಸಂಖ್ಯೆ 5

ಇವರುಗಳೂ ಲೈಂಗಿಕವಾಗಿ ಆಕರ್ಷಣೆಯನ್ನು ಹೊಂದಿರುತ್ತಾರೆ. ಇವರು ಹೊಸ ಸಂಗತಿಗಳನ್ನು ಅರಿತುಕೊಂಡು ಅದನ್ನು ಪ್ರಯೋಗಿಸುವುದರಲ್ಲಿ ಸಂತಸವನ್ನು ಕಂಡುಕೊಳ್ಳುತ್ತಾರೆ. ತಮ್ಮ ಸಂಗಾತಿಯ ಲೈಂಗಿಕ ತೃಪ್ತಿಯನ್ನು ನೀಗಿಸುವುದರಲ್ಲೂ ಇವರು ಗಮನ ನೀಡುತ್ತಾರೆ.

ಸಂಖ್ಯೆ 6

ಸಂಖ್ಯೆ 6

ಇವರು ಕಡಿಮೆ ಪ್ರಣಯ ಸ್ವಭಾವವನ್ನು ಹೊಂದಿದವರಾಗಿದ್ದಾರೆ. ಲೈಂಗಿಕತೆ ಎಂಬುದು ಮರುಉತ್ಪಾದನೆ ಮತ್ತು ಪ್ರೀತಿಯ ಇನ್ನೊಂದು ಭಾಗವೆಂದೇ ಇವರುಗಳು ನಂಬುತ್ತಾರೆ.

ಸಂಖ್ಯೆ 7

ಸಂಖ್ಯೆ 7

ಇವರು ಸೂಕ್ತ ಮತ್ತು ಸಮಯಕ್ಕೆ ಸರಿಯಾಗಿ ವರ್ತಿಸುವ ಸ್ವಭಾವವನ್ನು ಹೊಂದಿದವರಾಗಿದ್ದಾರೆ. ಆದರೆ ಲೈಂಗಿಕತೆಯಲ್ಲಿ ಜ್ವಾಲಾಮುಖಿಯನ್ನೇ ಇವರು ಇಟ್ಟುಕೊಂಡಿರುತ್ತಾರೆ. ಶಕ್ತಿಯುತ ಜನರಿಗೆ ಇವರು ಬೇಗನೇ ಆಕರ್ಷಿತರಾಗುತ್ತಾರೆ ಮತ್ತು ಅದರಿಂದ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ.

ಸಂಖ್ಯೆ 8

ಸಂಖ್ಯೆ 8

ಈ ಸಂಖ್ಯೆಯ ವ್ಯಕ್ತಿಗಳು ಹೆಚ್ಚು ಪ್ರಭಾವಿಗಳು ಮತ್ತು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಇವರು ಸ್ವಭಾವದಲ್ಲಿ ಶಾಂತರಾಗಿದ್ದರೂ ಲೈಂಗಿಕವಾಗಿ ರಸಿಕರಾಗಿದ್ದಾರೆ.

ಸಂಖ್ಯೆ 9

ಸಂಖ್ಯೆ 9

ಈ ಸಂಖ್ಯೆಯ ವ್ಯಕ್ತಿಗಳು ಲೈಂಗಿಕತೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸುವವರಾಗಿದ್ದಾರೆ ಮತ್ತು ಉತ್ಪ್ರೇಕ್ಷೆಯ ವ್ಯಕ್ತಿಗಳಾಗಿದ್ದಾರೆ. ಇವರು ಒಬ್ಬರಿಗೆ ನಿಷ್ಟರಾಗಿರುವುದಿಲ್ಲ.

English summary

How Numerology Can Reveal The Secret Of Your Love Life; Read Here!

Here, in this article, we are about to share some of the interesting information on the connection between numerology and a person's love life. In some cases, there are certain names and date of births,which on totaling the sum give two-digit numbers. In such cases, the double digits should be added to get a single number and this is the thumb rule of numerology to get the accurate results. Check out on how numerology and one's sex or love life is linked.
Story first published: Wednesday, April 19, 2017, 23:32 [IST]
Subscribe Newsletter