For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸ ಹಾಗೂ ಸೋಮವಾರದ ಉಪವಾಸ-ನೀವು ತಿಳಿಯಲೇಬೇಕಾದ ಸಂಗತಿಗಳು

|

ಶಿವನನ್ನು ಆರಾಧಿಸಲು ಅಥವಾ ಪ್ರಾರ್ಥನೆ ಮಾಡಲು ಶ್ರಾವಣ ಮಾಸ ಅತ್ಯಂತ ಮಂಗಳಕರವಾದ ತಿಂಗಳು ಎಂದು ಪರಿಗಣಿಸಲಾಗುವುದು. ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದು ಸಾಮಾನ್ಯ ದಿನದಲ್ಲಿ ಆರಾಧಿಸುವುದಕ್ಕಿಂತ ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಹಾಗೂ ಶಿವನಿಗಾಗಿ ಉಪವಾಸವನ್ನು ಕೈಗೊಳ್ಳುವುದನ್ನು ನಾವು ಕಾಣಬಹುದು. ಶಿವನ ವಿಶೇಷ ಆರಾಧನೆಗಾಗಿ ಶ್ರಾವಣ ಸೋಮವಾರ ವ್ರತ ಆಚರಣೆ, ಅಭಿಷೇಕ, ರುದ್ರಾಕ್ಷಿ ಮಣಿಯನ್ನು ಧರಿಸುವುದರ ಮೂಲಕ ಶಿವನನ್ನು ಜಪಿಸಲಾಗುವುದು. ಈ ವರ್ಷ ಶ್ರಾವಣ ತಿಂಗಳು ಜುಲೈ 10ರಿಂದ ಆರಂಭವಾಗುತ್ತಲಿದೆ.

ಈ ತಿಂಗಳಲ್ಲಿ ಪ್ರತೀ ಸೋಮವಾರ ಉಪವಾಸ ಮಾಡಿದರೆ ದೇವರು ಒಲಿಯುವರು ಎನ್ನುವ ನಂಬಿಕೆಯಿದೆ. ಇದರಿಂದಾಗಿ ಪ್ರತೀ ಸೋಮವಾರದಂದು ದೇವರಿಗೆ ಹೂಗಳನ್ನು ಅರ್ಪಿಸಿ, ಪೂಜೆ ಮಾಡಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಸಮುದ್ರ ಮಂಥನವು ನಡೆಯುತ್ತಿದ್ದ ವೇಳೆ ವಿಷವು ಹೊರಬಂದ ತಿಂಗಳು ಶ್ರಾವಣವಾಗಿತ್ತು. ಸಮುದ್ರ ಮಂಥನ ವೇಳೆ ಬಂದ ಎಲ್ಲಾ ವಸ್ತುಗಳಂತೆ ಇದನ್ನು ಕೂಡ ಸ್ವೀಕರಿಸಬೇಕಾಗಿತ್ತು. ಹಾಲಾಹಲ ವಿಷವಾಗಿದ್ದ ಪರಿಣಾಮ ಇದು ಭೂಮಿಯ ಜೀವಿಗಳನ್ನೆಲ್ಲಾ ನಾಶ ಮಾಡುತ್ತಿತ್ತು.

Lord shiva

ಇದರಿಂದಾಗಿ ಈಶ್ವರ ದೇವರು ಮಂಥನದಿಂದ ಹೊರಬಂದ ವಿಷವನ್ನು ಕುಡಿದು ತನ್ನ ಗಂಟಲಿನಲ್ಲಿ ಇಟ್ಟುಕೊಂಡರು. ಇದರಿಂದಾಗಿ ಅವರನ್ನು ನೀಲಕಂಠ ಎಂದು ಕರೆಯಲಾಗುತ್ತದೆ. ಈ ವೇಳೆ ತಮ್ಮ ಪ್ರಾಣ ಕಾಪಾಡಿದ ಶಿವನಿಗೆ ಬೇರೆ ದೇವದೇವತೆಗಳು ನೀರನ್ನು ಅರ್ಪಿಸುವರು. ಇದೇ ರೀತಿಯಾಗಿ ಭಕ್ತರು ಕೂತ ತಮ್ಮ ಇಷ್ಟ ದೇವರಿಗೆ ನೀರಿನಿಂದ ಅಭಿಷೇಕ ಮಾಡುವರು. ಶ್ರಾವಣ ತಿಂಗಳು ಆರಂಭವಾಗುತ್ತಲಿದ್ದಂತೆ ಹಬ್ಬಗಳು ಕೂಡ ಸಾಲು ಸಾಲಾಗಿ ಬರುವುದು. ಇದರಲ್ಲಿ ಮುಖ್ಯವಾಗಿ ರಕ್ಷಾ ಬಂಧನ ಕೂಡ ಒಂದಾಗಿದೆ.

Most Read: ಶಿವ ಮತ್ತು ಶ್ರಾವಣ ತಿಂಗಳು: ನೀವು ತಿಳಿಯಲೇಬೇಕಾಗಿರುವ ಆಸಕ್ತಿಕರ ಸಂಗತಿಗಳು

ಶ್ರಾವಣ ತಿಂಗಳ ಸೋಮವಾರದಂದು ಉಪವಾಸ ಮಾಡಿದರೆ ಆಗ ಅವಿವಾಹಿತ ಯುವತಿಯರಿಗೆ ಒಳ್ಳೆಯ ಪತಿ ಸಿಗುತ್ತಾನೆ ಎನ್ನುವ ನಂಬಿಕೆಯಿದೆ ಮತ್ತು ವಿವಾಹಿತ ಮಹಿಳೆಯರು ತಮ್ಮ ಪತಿಯ ಒಳ್ಳೆಯ ಆರೋಗ್ಯಕ್ಕಾಗಿ ಸೋಮವಾರ ಉಪವಾಸ ಮಾಡುವರು. ಪಾರ್ವತಿ ದೇವಿಯು ಶ್ರಾವಣ ತಿಂಗಳಲ್ಲಿ ಪೂರ್ತಿ ಉಪವಾಸ ಮಾಡಿದ ಬಳಿಕ ಇದರಿಂದ ಪ್ರೇರಿತರಾದ ಶಿವ ದೇವರು ಪಾರ್ವತಿ ದೇವಿಯನ್ನು ಮದುವೆಯಾದರು ಎಂದು ಪುರಾಣಗಳು ಹೇಳುತ್ತೇವೆ.

ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಜನರು ಕನ್ವರ್ ಯಾತ್ರ ಕೈಗೊಳ್ಳುವರು. ಇದರಲ್ಲಿ ಮುಖ್ಯವಾಗಿ ಶಿವನ ದೇವಾಲಯಗಳಿಗೆ ಪ್ರಯಾಣ ಬೆಳೆಸುವರು. ಅದರಲ್ಲೂ ಕೆಲವರು ಪಾದಯಾತ್ರೆ ಮೂಲಕವಾಗಿ ಪ್ರಯಾಣ ಬೆಳೆಸುವರು. ಹೆಚ್ಚಾಗಿ ಜನರು ಉತ್ತರ ಪ್ರದೇಶದಲ್ಲಿ ಇರುವ ಕಾಶಿ ವಿಶ್ವನಾಥ್ ಮತ್ತು ಜಾರ್ಖಂಡ್ ನಲ್ಲಿ ಇರುವ ದೇವೊಘಡ್ ಗೆ ಪ್ರಯಾಣಿಸುವರು. ಶಿವನ ಭಕ್ತರು ಗಂಗೆಯಿಂದ ಪವಿತ್ರ ನೀರನ್ನು ಸಂಗ್ರಹಿಸುವರು ಮತ್ತು ಇದು ಅವರ ಹೆಗಲಿನಲ್ಲಿ ಕನ್ವರ್ ಎಂದು ಕರೆಯಲ್ಪಡುವ ಲಾಠಿಯ ಜತೆಗೆ ಇರುತ್ತದೆ. ಈ ತಿಂಗಳು ರಕ್ಷಾ ಬಂಧನದ ಜತೆಗೆ ಕೊನೆಯಾಗುತ್ತದೆ. ಇದು ಸೋದರ ಹಾಗೂ ಸೋದರಿ ನಡುವಿನ ಭಾಂದವ್ಯದ ಹಬ್ಬವಾಗಿದೆ. ಶ್ರಾವಣ ಸೋಮವಾರದ ಉಪಯೋಗಗಳು

*ಶ್ರಾವಣ ತಿಂಗಳಲ್ಲಿ ಬರುವ ಸೋಮವಾರವನ್ನು ಶ್ರಾವಣ ಸೋಮವಾರ ಎಂದು ಕರೆಯಲಾಗುತ್ತದೆ. ಸೋಮವಾರದಂದು ಉಪವಾಸವನ್ನು ಕೈಗೊಳ್ಳಲಾಗುವುದು. ಮಹಿಳೆಯರು ಪತಿಯ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ಈ ವೃತವನ್ನು ಕೈಗೊಳ್ಳುತ್ತಾರೆ. ಕುಡುಂಬದ ಯೋಗಕ್ಷೇಮ ಮತ್ತು ವೃತ್ತಿಪರ ಪ್ರಗತಿಗಾಗಿ ಪುರುಷರು ಈ ವ್ರತವನ್ನು ಕೈಗೊಳ್ಳುತ್ತಾರೆ. ಮೊದಲ ಶ್ರಾವಣ ಮಾಸದಿಂದ ಉಪವಾಸವನ್ನು ಆಚರಿಸುವುದರ ಮೂಲಕ 16 ದಿನ ಉಪವಾಸವನ್ನು ಕೈಗೊಂಡರೆ ಹುಡುಗಿಯರು ಬಯಸಿದಂತಹ ಹುಡುಗನ ಜೊತೆ ವಿವಾಹವಾಗುವುದು ಎಂದು ಹೇಳಲಾಗುತ್ತದೆ. ಭಗವಾನ್ ಶಿವನು ಆದರ್ಶ ವ್ಯಕ್ತಿ. ಅವನನ್ನು ಹೋಲುವ ಪುರುಷರು ತಮ್ಮ ಪತಿಯಾಗಬೇಕು ಎಂದು ಬಯಸುತ್ತಾರೆ.

*ಮೊದಲ ಶ್ರಾವಣ ಸೋಮವಾರವು ಸೌಭಾಗ್ಯ ಯೋಗ, ದ್ವಿಪುಷ್ಕರ ಯೋಗವನ್ನು ನೀಡುತ್ತದೆ. ಅಂದು ಧನಿಷ್ಠ ನಕ್ಷತ್ರ ಇರುತ್ತದೆ. ಇವೆಲ್ಲವೂ ಒಟ್ಟಾಗಿ ಬಹಳ ಮಂಗಳಕರ ಸಂಗತಿಯನ್ನು ತೋರುತ್ತವೆ ಎಂದು ಹೇಳಲಾಗುವುದು. ಈ ದಿನದಂದು ದಂಪತಿಗಳು ಭಗವಾನ್ ಶಿವ ಮತ್ತು ಪಾರ್ವತಿಯನ್ನು ಪೂಜಿಸಿದರೆ ಅವರು ಸಂತೋಷದ ಜೀವನದ ಆಶೀರ್ವಾದವನ್ನು ಪಡೆದುಕೊಳ್ಳುವರು.

ವಾಸ್ತವವಾಗಿ ಈ ವರ್ಷದಲ್ಲಿ ಎಲ್ಲಾ ಸದ್ಗುಣಗಳು ಭಕ್ತರಿಗೆ ಎರಡು ಪ್ರಯೋಜನಗಳನ್ನು ನೀಡುತ್ತವೆ. ಆದ್ದರಿಂದ ಅಂದು ದಾನ, ಪೂಜೆ, ಪವಿತ್ರ ಸ್ನಾನವನ್ನು ಕೈಗೊಳ್ಳಬೇಕು. ಇನ್ನು ಭಗವಾನ್ ಶಿವನಿಗೆ ಶಿವ ಶ್ರಾವಣ ಮಾಸವು ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಪಾರ್ವತಿ ದೇವಿಯೊಂದಿಗೆ ಶಿವನು ಮತ್ತೆ ಒಂದಾಗಿರುವುದು ಈ ಮಾಸದಂದೇ ಎಂಬ ಪ್ರತೀತಿ ಇದ್ದು ಸ್ತ್ರೀಯರು ತಾವು ಬಯಸಿದವರನ್ನು ಪತಿಯಾಗಿ ಪಡೆದುಕೊಳ್ಳಲು ಈ ಮಾಸದಂದು ಶಿವನನ್ನು ಬೇಡಿಕೊಂಡರೆ ಅವರ ಮನೋಭಿಲಾಷೆ ಈಡೇರುತ್ತದೆ.

Most Read: ಶ್ರಾವಣ ತಿಂಗಳಲ್ಲಿ ಭಗವಾನ್ ಶಿವನ ಪೂಜೆ-ನೀವು ತಿಳಿಯಲೇಬೇಕಾದ ಸಂಗತಿಗಳು

*ಎರಡನೇ ಸೋಮವಾರವು ಸರ್ವಾರ್ಥ ಸಿದ್ಧಿಯೋಗ ಮತ್ತು ವೃದ್ಧಿಯೋಗವನ್ನು ನೀಡುತ್ತದೆ. ಸರ್ವಾರ್ಥ ಸಿದ್ಧಿಯೋಗವು ಯಾವುದೇ ಮಂಗಳಕರ ಘಟನೆಯನ್ನು ಆಯೋಜಿಸಲ್ಪಡುವ ಸಮಯ ಮತ್ತು ಅದು ಫಲಪ್ರದವಾಗುತ್ತದೆ. ಈ ವಾರದಂದು ಪೂಜೆ ವ್ರತ ಕೈಗೊಳ್ಳುವುದರಿಂದ ಅದ್ಭುತ ಯೋಗವು ಲಭಿಸುವುದು. ಅಂದು ಶುಕ್ರ ಅಸ್ತ, ಪಂಚಕ, ಭದ್ರಾ ಮೊದಲಾದ ವಿಚಾರಗಳ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

*ಮೂರನೇ ಸೋಮವಾರ ಆಗಸ್ಟ್ 13ರಂದು ಬರುತ್ತದೆ. ಅಂದು ಪರ್ವ ಫಾಲ್ಗುಣಿ ನಕ್ಷತ್ರವು ಶಿವ ಯೋಗದೊಂದಿಗೆ ಸಂಭವಿಸುತ್ತದೆ. ಇದಲ್ಲದೆ ಶಿವ ಯೋಗ ಮಂಗಳಕರವಾಗಿದೆ. ಮಧ್ಠ್ವರಾನಿ ಪರ್ವ ಇದಕ್ಕೆ ಸೇರುತ್ತದೆ. ಈ ಸಂದರ್ಭವು ಅದೃಷ್ಟವನ್ನು ತರುವವನು. ಇದಲ್ಲದೆ ಇದು ಶಿವಯೋಗವಾಗಿದ್ದಾಗ, ಶಿವನ ಪೂಜೆ ಇತರ ದಿನಗಳಿಗಿಂತ ಹೆಚ್ಚು ಪ್ರಭಾವ ಬೀರುವುದು ಮತ್ತು ಶ್ರೇಷ್ಠವಾದದ್ದು ಎಂದು ಹೇಳಲಾಗುವುದು.

ಶ್ರಾವಣ ಸೋಮವಾರದ ಉಪವಾಸ ಮಾಡುವುದು ಹೇಗೆ?
ಈ ದಿನ ಭಕ್ತರು ಉಪವಾಸ ಮಾಡುವರು ಮತ್ತು ಶಿವನ ಆರಾಧನೆ ಮಾಡುವರು. ಈ ವೇಳೆ ಶಿವನಿಗೆ ಜಲಾಭಿಷೇಕ, ಶ್ರೀಗಂಧದ ಪೇಸ್ಟ್ ಅಥವಾ ಹುಡಿ, ಧಾತುರಾ, ಬಿಲ್ವಪತ್ರೆಯಿಂದ ಪೂಜೆ ಮಾಡುವರು. ಇನ್ನು ಕೆಲವರು ಹತ್ತಿರ ಶಿವ ಮಂದಿರದಲ್ಲಿ ಜತೆಯಾಗಿ ಶಿವನ ಭಜನೆ ಮಾಡುವರು ಮತ್ತು ಆರಾಧಿಸುವರು.

ಮಧು ಶ್ರಾವಣಿ
ಬಿಹಾರದ ಮಿಥಿಲಾಂಚಲದಲ್ಲಿ ವೈವಾಹಿಕ ಭಾಂದವ್ಯದ ಪ್ರಾಮುಖ್ಯತೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿಯಿಂದ 15 ದಿನಗಳ ಕಾಲ ಮಹಿಳೆಯರು ಉಪವಾಸ ಮಾಡುವರು ಮತ್ತು ಅವರು ಈ ಸಮಯದಲ್ಲಿ ಉಪ್ಪು ಸೇವಿಸುವುದಿಲ್ಲ. ಬಿಲ್ವಪತ್ರೆ, ಹೂ ಮತ್ತು ಪ್ರಸಾವನ್ನಿಟ್ಟು ಗೌರಿ ದೇವಿಯ ಪೂಜೆ ಮಾಡುವರು. ಇಲ್ಲಿ ಭಕ್ತರು ತಮಗೆ ಏಳೇಳು ಜನ್ಮಕ್ಕೂ ಇವರೇ ಪತಿಯಾಗಿರಲಿ ಎಂದು ಬೇಡುವರು. ಈ ವೇಳೆ ಮಹಿಳೆಯರು ಹೊಸ ಬಟ್ಟೆ ಧರಿಸುವರು.

ಹರಿಯಾಲಿ ತೀಜ್
ಈ ಹಬ್ಬವನ್ನು ಶುಕ್ಲ ಪಕ್ಷದ ತೃತೀಯದಂದು ಆಚರಣೆ ಮಾಡಲಾಗುತ್ತದೆ. ಈ ವೇಳೆ ಶಿವ ಮತ್ತು ಪಾರ್ವತಿಯ ಮೂರ್ತಿಗಳಿಗೆ ಬಟ್ಟೆ ಧರಿಸಿ ಅವುಗಳಿಗೆ ಪೂಜೆ ಮಾಡುವರು.

Most Read: ಶ್ರಾವಣ ಮಾಸ 2019 : ಯಾವ ಆಹಾರಗಳನ್ನು ಸೇವಿಸಬೇಕು? ಯಾವ ಆಹಾರವನ್ನು ಸೇವಿಸಬಾರದು?

ರಕ್ಷಾಬಂಧನ


ಶ್ರಾವಣ ತಿಂಗಳು ಅಂತ್ಯವಾಗಿದೆ ಎಂದು ಹೇಳಲು, ಸೋದರ ಹಾಗೂ ಸೋದರಿಯ ನಡುವಿನ ಭಾಂದವ್ಯಕ್ಕಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಸೋದರಿಯು ಹೊಸ ಬಟ್ಟೆ ಧರಿಸಿ ತನ್ನ ಸೋದರನ ಕೈಗೆ ರಕ್ಷಾ ಬಂಧನ ಕಟ್ಟುವಳು ಮತ್ತು ಆತನ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸುವಳು. ಈ ವೇಳೆ ಸೋದರ ಏನಾದರೂ ಉಡುಗೊರೆಯನ್ನು ಆಕೆಗೆ ನೀಡುವನು ಮತ್ತು ಜೀವನದುದ್ದಕ್ಕೂ ಆಕೆಯನ್ನು ರಕ್ಷಿಸುವುದಾಗಿ ಭರವಸೆ ನೀಡುವನು.
English summary

You need to know about the month of Shravan and Monday fast

According to Hindu mythology, when the gods and demons were churning the ocean (samudra manthan), poison came out in the month of Shravan. As with all gifts from the ocean, this too had to be accepted, though none wanted to. Lord Shiva consumed the poison – even though he was not a part of the churning – to help out the gods and held it in his throat, which turned it blue. To douse the poison’s effect, the grateful gods offered water, and devotees today too offer water to the Shivlinga with the same belief.
Story first published: Thursday, August 1, 2019, 16:59 [IST]
X
Desktop Bottom Promotion