For Quick Alerts
ALLOW NOTIFICATIONS  
For Daily Alerts

ಹಣ ಅಥವಾ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಲಕ್ಷ್ಮೀ ಮತ್ತು ಹನುಮಂತನ ಆರಾಧನೆ ಮಾಡಿ

|

ನಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬರಲಿ ದೇವರ ಸಹಾಯ ನಮ್ಮೊಂದಗಿದ್ದರೆ ಆ ಕಷ್ಟಗಳಿಂದ ನಾವು ಸುಲಭವಾಗಿ ಹೊರಬರುತ್ತೇವೆ ಮತ್ತು ಬೇಕಾದ್ದನ್ನು ನಾವು ಸಾಧಿಸುತ್ತೇವೆ. ಅನಾದಿ ಕಾಲದಿಂದಲೂ ಮಾನವನಿಗೆ ದೇವರು ಅಭಯ ಹಸ್ತವನ್ನು ನೀಡುತ್ತಾ ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವತೆಗಳಿದ್ದರೂ ನೀವು ನಂಬುವ ಆ ಭಗವಂತ ನಿಮ್ಮ ಕಷ್ಟಗಳಿಂದ ಪಾರು ಮಾಡಿ ಕಾಪಾಡುತ್ತಾರೆ ಮತ್ತು ನಿಮ್ಮ ಬಯಕೆಯ ಜೀವನವನ್ನು ನಿಮಗೆ ದಯಪಾಲಿಸುತ್ತಾರೆ.

ಭಗವಂತ ದಯಾಮಯನಾಗಿದ್ದು ತನ್ನ ಭಕ್ತರನ್ನು ತನ್ನ ಮಕ್ಕಳಂತೆಯೇ ಸಲಹುತ್ತಾರೆ ಮತ್ತು ಅವರಿಗೆ ಕಷ್ಟಗಳಿಂದ ಹೊರಬರುವ ದಾರಿಯನ್ನು ತೋರಿಸುತ್ತಾರೆ. ಪ್ರತಿಯೊಂದಕ್ಕೂ ದೇವರನ್ನು ದೂರದೆಯೇ ದೇವರು ನಮಗೆ ಒದಗಿಸಿರುವ ದಾರಿಯನ್ನು ಕಂಡುಕೊಂಡು ನಾವು ಮುನ್ನುಗ್ಗಬೇಕು ಇದರಿಂದ ನಾವು ಅಂದುಕೊಂಡಿದ್ದನ್ನು ನಮ್ಮ ಜೀವನದಲ್ಲಿ ನಾವು ಸಾಧಿಸಬಹುದಾಗಿದೆ.

ಸಂಪತ್ತಿಗೆ ಅಧಿ ದೇವತೆಯಾಗಿರುವ ಲಕ್ಷ್ಮೀ ಮತ್ತು ಸ್ಥೈರ್ಯಕ್ಕೆ ಪ್ರಖ್ಯಾತರಾಗಿರುವ ಹನುಮಂತ ಇಬ್ಬರೂ ದೇವರುಗಳು ಭಕ್ತರ ಅಳಲಿಗೆ ದನಿಯಾಗುವವರು. ಇವರುಗಳನ್ನು ಪೂಜಿಸಿ ಇವರಿಗೆ ಸಂಬಂಧಿಸಿದಂತಹ ಮಂತ್ರಗಳನ್ನು ನಾವು ಪಠಿಸುವುದರಿಂದ ನಮ್ಮ ಬೇಗೆಗಳು ದುಃಖಗಳು ನಿವಾರಣೆಯಾಗಲಿದೆ.

ಇಂದಿನ ಲೇಖನದಲ್ಲಿ, ಸಂಕಷ್ಟ ನಿವಾರಿಸಿಕೊಳ್ಳಲು ಲಕ್ಷ್ಮೀ ಮತ್ತು ಹನುಮಂತನ ಧ್ಯಾನವನ್ನು ಹೇಗೆ ಮಾಡಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಲಕ್ಷ್ಮೀ ಮತ್ತು ಹನುಮಂತನ ನಾಮಸ್ಮರಣೆಯನ್ನು ಮಾಡುವುದರಿಂದ ನಮ್ಮ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಲಿವೆ. ಹಣ ಇಲ್ಲವೇ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ಲಕ್ಷ್ಮೀ ಮತ್ತು ಹನುಮಂತನ ಪೂಜೆಯನ್ನು ಹೇಗೆ ಮಾಡಬಹುದು ಎಂಬುದನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದೇವೆ., ಮುಂದೆ ಓದಿ...

ಲಕ್ಷ್ಮೀ ಮತ್ತು ಹನುಮಂತನ ಆರಾಧನೆ ಮಾಡಿ

ಲಕ್ಷ್ಮೀ ಮತ್ತು ಹನುಮಂತನ ಆರಾಧನೆ ಮಾಡಿ

ಲಕ್ಷ್ಮೀ ಮತ್ತು ಹನುಮಂತನ ಆರಾಧನೆಯನ್ನು ಮಾಡಿದರೆ ನಿಮ್ಮ ಯಾವುದೇ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ. ಅದರಲ್ಲೂ ಪ್ರತೀ ದಿನ ರಾತ್ರಿ ಮಲಗುವ ಮುನ್ನ ಭಗವಾನ್ ಹನುಮಾನ್ ಮಂತ್ರವನ್ನು ಪಠಿಸಿ. ಮಂತ್ರ - ಮನೋಜವಂ ಮಾರುತತುಲ್ಯವೆಗಂ ಜಿತೇಂದ್ರಿಯಂ ಬುದ್ಧಿಮಾತಂ ವರಿಸ್ತಂ, ವಾತಾತಮಜಂ ವಾನರಾಯುಕ್ತಮುಖ್ಯಂ ಶ್ರೀರಾಮ ದೂತಂ ಸರನಾಮ ಪ್ರಪಾದಯೆ. ಪುರುಷರು ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ. ಸ್ನಾನ ಮಾಡಿದ ಬಳಿಕ ಅಥವಾ ರಾತ್ರಿ ವೇಳೆ ಈ ಮಂತ್ರವನ್ನು ಪಠಿಸಬಹುದು. ಮಧ್ಯರಾತ್ರಿ ವೇಳೆ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು.

Most Read: ಯಾವ್ಯಾವ ರಾಶಿಯವರಿಗೆ ಈ ' ದೀಪಾವಳಿ' ಶುಭ ತರಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಮನೆಯಲ್ಲಿರುವ ಋಣಾತ್ಮಕ ಸಂಗತಿಗಳು ಇದ್ದರೆ

ಮನೆಯಲ್ಲಿರುವ ಋಣಾತ್ಮಕ ಸಂಗತಿಗಳು ಇದ್ದರೆ

ಮನೆಯಲ್ಲಿರುವ ಋಣಾತ್ಮಕ ಅಂಶಗಳಿಂದ ವ್ಯಕ್ತಿಯು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಎರಡು ಸರಳ ಪರಿಹಾರಗಳನ್ನು ಅನುಸರಿಸಬಹುದಾಗಿದೆ. ಹನುಂತನ ಆರಾಧನೆ ಮತ್ತು ಲಕ್ಷ್ಮೀ ಪೂಜೆಯನ್ನು ನೆರವೇರಿಸಬಹುದಾಗಿದೆ. ಇನ್ನು ಲಕ್ಷ್ಮೀ ದೇವಿಯು ಶುಭ ಮತ್ತು ಸಂತಸದ ಭವಿಷ್ಯಕ್ಕೆ ಕಾರಣೀಭೂತರಾಗಿದ್ದಾರೆ. ನಿಮ್ಮ ಪೂಜಾ ಮನೆಯಲ್ಲಿ ಲಕ್ಷ್ಮೀ ದೇವಿಯ ಮೂರ್ತಿಯನ್ನು ಇರಿಸಿಕೊಳ್ಳಿ. ತುಪ್ಪದ ದೀಪವನ್ನು ಬೆಳಗ್ಗೆ ಮತ್ತು ಸಂಜೆಗೆ ದೇವಿಗೆ ಹಚ್ಚಿ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ ತುಳಸಿ ಕಟ್ಟೆಗೂ ದೀಪವನ್ನು ಹಚ್ಚಿ.

 ಲಕ್ಷ್ಮೀ ಮಂತ್ರ ಪಠಿಸಿ

ಲಕ್ಷ್ಮೀ ಮಂತ್ರ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹದಿಂದ ವ್ಯಕ್ತಿಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಲಕ್ಷ್ಮೀ ಕೃಪಾಕಟಾಕ್ಷಕ್ಕೆ ಒಳಗಾಗಲು ಹಲವಾರು ದಾರಿಗಳಿವೆ. ಪ್ರತಿದಿನ ಲಕ್ಷ್ಮೀ ದೇವಿಗೆ ತಾವರೆ ಅಥವಾ ಕಮಲ ಎಂದರೆ ಹೆಚ್ಚು ಪ್ರೀತಿ. ತಾವರೆಯ ಮೇಲೆ ಆಕೆ ವಿರಾಜಮಾನರಾಗಿದ್ದಾರೆ. ಕಮಲದ ಹೂವು ಸಂಪತ್ತಿನ ಪ್ರತೀಕವಾಗಿದೆ. ಪೂಜಾ ಕೊಠಡಿಯಲ್ಲಿ ಈ ಹೂವನ್ನು ಇರಿಸಿಕೊಂಡು ಲಕ್ಷ್ಮೀ ಮಂತ್ರವನ್ನು ಪಠಿಸಿ. ಇದರಿಂದ ದೇವಿಯ ಮನಸ್ಸು ಪ್ರಸನ್ನಗೊಳ್ಳುತ್ತದೆ ಮತ್ತು ಆಕೆಯಲ್ಲಿ ನಿಮ್ಮ ಕುರಿತಾಗಿ ದಯೆ ಕರುಣೆ ಉಂಟಾಗುತ್ತದೆ.

ಲಕ್ಷ್ಮೀ ಮಂತ್ರ

ಲಕ್ಷ್ಮೀ ಮಂತ್ರ

*ಪದ್ಮ ಪ್ರಿಯೆ ಪದ್ಮಿನಿ ಪದ್ಮ ಹಸ್ತೆ ಪದ್ಮಾಲಯೆ ಪದ್ಮ ದಲ್ಯದಾಕ್ಷಿ

*ವಿಶ್ವ ಪ್ರಿಯೆ ವಿಷ್ಣು ಮನೋನುಕುಲೆ ತ್ವತ್‌ಪಾದ ಪದ್ಮಮಮ್ ಮಯೀ ಸನ್ನಿದಾಸ್ತವಾ

*ಸರಸಿಜ ನಿಲಯೆ ಸರೋಜ ಹಸ್ತೆ ದವಳ ದಮಮ್‌ಶುಕ ಗಂಧ ಮಲ್ಯ ಶೋಭೆ

*ಭಗವತಿ ಹರಿ ವಲ್ಲಭೆ ಮನೋಗ್ನೆ ತ್ರಿಭುವನ ಭುತಿಕರಿ ಪ್ರಸೀದಾ ಮಧ್ಯಮ್

Most Read: ಲಕ್ಷ್ಮೀ ದೇವಿ ಚಂಚಲೆ ಅಂತ ಎಲ್ಲರಿಗೂ ಗೊತ್ತು! ಆದರೆ ಇವಳ ಜನನದ ಕಥೆ ಗೊತ್ತೇ?

ಇದೆಲ್ಲಾ ಸಂಗತಿಗಳು ನೆನಪಿರಲಿ

ಇದೆಲ್ಲಾ ಸಂಗತಿಗಳು ನೆನಪಿರಲಿ

ಕರುಣೆ, ಪ್ರೀತಿ ಮತ್ತು ಒಳ್ಳೆಯತನವು ದೇವಿಯನ್ನು ಮನೆಗೆ ಆಹ್ವಾನಿಸುವಲ್ಲಿ ಮುಖ್ಯವಾದುದು. ಮನೆಯನ್ನು ಸ್ವಚ್ಛವಾಗಿರಿಸಿ ಕೊಳ್ಳುವುದು ಮುಖ್ಯವಾಗಿದೆ. ಮನೆ ಕೊಳಗಾಗಿದ್ದರೆ ಅಲ್ಲಿ ದೇವರು ಇರುವುದಿಲ್ಲ.ಮನೆಯಲ್ಲಿ ಶಾಂತಿ, ನೆಮ್ಮದಿಗಳು ತುಂಬಿರಲಿ. ಜಗಳ, ಕೋಪವಿರುವ ಮನೆಯಲ್ಲಿ ಆಕೆ ನೆಲೆಸುವುದಿಲ್ಲ. ನಿಮ್ಮ ಮನೆಯಲ್ಲಿರುವ ಮಹಿಳೆಯನ್ನು ಅಸಂತೋಷಗೊಳಿಸಬೇಡಿ. ನಿಮ್ಮ ಮನೆಯಲ್ಲಿರುವ ಮಹಿಳೆ ಸಂತುಷ್ಟರಾಗಿರದಿದ್ದರೆ, ಲಕ್ಷ್ಮೀ ಮಾತೆ ಕೂಡ ಸಂತಸವಾಗಿರುವುದಿಲ್ಲ.

'ಓಂ ಮಹಾಲಕ್ಷ್ಮೀಯೇ ನಮಃ'

'ಓಂ ಮಹಾಲಕ್ಷ್ಮೀಯೇ ನಮಃ'

ಇನ್ನು ಶ್ರೀಮಂತರಾಗಲು ಈ ಮಂತ್ರವನ್ನು ಪಠಿಸಿದರೆ ಸಾಕು 'ಓಂ ಮಹಾಲಕ್ಷ್ಮೀಯೇ ನಮಃ' ಎಂದು 11 ಬಾರಿ ಪಠಿಸಿ. ಇದರಿಂದ ನಿಮ್ಮ ಉದ್ಯೋಗದಲ್ಲಿ ಉನ್ನತಿಯಾಗುತ್ತದೆ ಮತ್ತು ಉದ್ಯೋಗ ದೊರೆಯುತ್ತದೆ.

ಮಂಗಳವಾರ ಹನುಮಂತನಿಗೆ ಪೂಜೆ ಸಲ್ಲಿಸಿ

ಮಂಗಳವಾರ ಹನುಮಂತನಿಗೆ ಪೂಜೆ ಸಲ್ಲಿಸಿ

ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಮಂಗಳ ದುರ್ಬಲನಾಗಿದ್ದರೆ ಆ ವ್ಯಕ್ತಿ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಈ ದಿನ ಹನುಮನನ್ನು ನೆನೆಯುವುದರಿಂದ ಅವರನ್ನು ಪೂಜಿಸುವುದರಿಂದ ಕಷ್ಟಗಳು ಪರಿಹಾರವಾಗಲಿದೆ. ಮನೆಯ ಸದಸ್ಯರು ಪ್ರಾತಃ ಕಾಲದಲ್ಲಿಯೇ ಎದ್ದು ಗಂಗಾ ಜಲದಲ್ಲಿ ಸ್ನಾನವನ್ನು ಮಾಡಬೇಕು. ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ವ್ರತವನ್ನು ಮಾಡಬೇಕು. ಪವಿತ್ರ ಜಲದಿಂದ ಪೂಜಾ ಸ್ಥಳವನ್ನು ಶುದ್ಧೀಕರಿಸಬೇಕು ಮತ್ತು ಎಂಟು ದಳದ ತಾವರೆಯನ್ನು ಅಲ್ತರ್‌ನ ಮುಂದಿರಿಸಿ ಕೆಂಪು ಬಣ್ಣದ ಅಕ್ಕಿಯನ್ನು ಜೊತೆಗಿರಿಸಬೇಕು. (ಕುಂಕುಮ ಮಿಶ್ರಿತ ಅಕ್ಕಿ) ಎಂಟು ದಳದ ತಾವರೆಯಲ್ಲಿ ಹನುಮನ ಮೂರ್ತಿ ಇಲ್ಲವೇ ಫೋಟೋವನ್ನು ಇರಿಸಿ ಮತ್ತು ಕುಟುಂಬದ ಒಳಿತಿಗಾಗಿ ಭಗವಂತನನ್ನು ಪ್ರಾರ್ಥಿಸಿ. ಕೆಂಪು ಹೂಗಳು, ಕೆಂಪು ಬಟ್ಟೆ ಮತ್ತು ಸಿಹಿತಿಂಡಿಗಳನ್ನು ಹನುಮನಿಗೆ ಅರ್ಪಿಸಿ.

 ಶಿವನ ದೇವಸ್ಥಾನದಲ್ಲಿ ದೀಪ ಹಚ್ಚಿ

ಶಿವನ ದೇವಸ್ಥಾನದಲ್ಲಿ ದೀಪ ಹಚ್ಚಿ

ಸಾಧ್ಯವಾದಲ್ಲಿ, ಪ್ರತಿ ಸೋಮವಾರ ಶಿವನ ದೇವಸ್ಥಾನದಲ್ಲಿ ದೀಪ ಹಚ್ಚಿ ಮತ್ತು ಇದನ್ನು ಶಿವಲಿಂಗದ ಬಳಿ ಇರಿಸಿ. ಇದರಿಂದ ಕುಟುಂಬ ಸಮಸ್ಯೆಗಳು ನಿವಾರಣೆಯಾಗುತ್ತವೆ.

English summary

Worshiping to Hanuman and Lakshmi can change your life

These 2 remedies of Lord Hanuman and Goddess Lakshmi can change your life!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more