Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನವರಾತ್ರಿ ವಿಶೇಷ: ದೇವಿಯ ಕೂಷ್ಮಾಂಡಾ ಅವತಾರದ ಹಿನ್ನೆಲೆ....
ನವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಹೆಚ್ಚು ಸಂಭ್ರಮದಿಂದ ಪ್ರಸ್ತುತ ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಈ ಹಬ್ಬವು ತನ್ನದೇ ಧಾರ್ಮಿಕ ನೆಲೆಗಟ್ಟಿನಿಂದ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಒಂಬತ್ತು ದಿನಗಳ ದೇವಿಯ ಆರಾಧನೆಯನ್ನು ನವರಾತ್ರಿ ಹೊಂದಿದ್ದು ನಿರ್ದಿಷ್ಟವಾಗಿ ಹತ್ತನೇ ದಿನ ವಿಸರ್ಜನೆಯನ್ನು ಇರಿಸಿಕೊಂಡಿರುತ್ತಾರೆ.
ನವರಾತ್ರಿಯ ಹಿನ್ನೆಲೆಯನ್ನು ನಾವು ಅರಿತುಕೊಂಡಲ್ಲಿ ಅಲ್ಲಿ ನಮಗೆ ದುರ್ಗಾ ಮಾತೆಯ ಮಹತ್ವತೆಯ ಅರಿವಾಗುತ್ತದೆ. ಅಸುರ ಮಹಿಷಾಸುರನನ್ನು ಕೊಲ್ಲಲು ದೇವಿಯು ಒಂಬತ್ತು ರೂಪಗಳನ್ನು ಧರಿಸುತ್ತಾರೆ. ನವರಾತ್ರಿ ಹಬ್ಬದಂದು ಒಂಬತ್ತು ಅಲಂಕಾರಗಳಲ್ಲಿ ದೇವಿಯನ್ನು ಪೂಜಿಸುವುದರ ಜೊತೆಗೆ 'ನವ ಪತ್ರಿಕಾ' (ಒಂಬತ್ತು ಎಲೆಗಳು ಅಥವಾ ಗಿಡಮೂಲಿಕೆಗಳು) ಮತ್ತು 'ನವಗ್ರಹ' ವನ್ನೂ ಜನರು ಪೂಜಿಸುತ್ತಾರೆ. ದುರ್ಗಾ ಪೂಜೆಯ ಇತಿಹಾಸ, ಹಾಗೂ ಆಚರಣೆಗಳ ಮಹತ್ವ ...

ಇಂದಿನ ಲೇಖನದಲ್ಲಿ ದೇವಿಯ ನಾಲ್ಕನೇ ದಿನದ ರೂಪವಾದ ಕೂಷ್ಮಾಂಡಾದ ಪ್ರಾಮುಖ್ಯತೆಯನ್ನು ನಾವು ಅರಿತುಕೊಳ್ಳಲಿರುವೆವು. ದೇವಿಯ ಈ ಅವತಾರ ತನ್ನದೇ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದ್ದು ಅದು ಏನು ಎಂಬುದನ್ನು ಅರಿತುಕೊಳ್ಳೋಣ.... ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'
ಕೂಷ್ಮಾಂಡ ಅವತಾರದಲ್ಲಿ ದೇವಿ
ಕೂಷ್ಮಾಂಡ ಅವತಾರದಲ್ಲಿ ದೇವಿಯು ಎಂಟು ಕೈಗಳನ್ನು ಹೊಂದಿದ್ದು, ಬಿಲ್ಲು, ಮಕರಂದ, ಬಾಣ, ಕಮಲ, ರಾಜದಂಡ, ಡಿಸ್ಕಸ್, ಚಕ್ರ ಮತ್ತು ಎಂಟನೆಯ ಕೈಯಲ್ಲಿ ಭಕ್ತರಿಗೆ ವರವನ್ನು ನೀಡುತ್ತಿದ್ದಾರೆ. ಎಂಟು ಕೈಗಳನ್ನು ದೇವಿಯು ಹೊಂದಿರುವುದರಿಂದ ಆಕೆಗೆ ಅಷ್ಟವುಜ ಎಂಬ ಹೆಸರೂ ಇದೆ. ದೇವಿಯ ಮೈಬಣ್ಣ ವಿಕಿರಣವಾಗಿದ್ದು ದೇಹದ ಬಣ್ಣ ಚಿನ್ನದ್ದಾಗಿದೆ. ಸಿಂಹದ ಮೇಲೆ ದೇವಿಯು ಸವಾರಿ ಮಾಡುತ್ತಿದ್ದಾರೆ. ಆಕೆ ಹತ್ತು ಕೈಗಳನ್ನು ಹೊಂದಿದ್ದಾರೆ ಎಂಬುದಾಗಿ ಕೂಡ ಬಣ್ಣಿಸಲಾಗಿದೆ. ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ
ವಿಶ್ವದ ಸೃಷ್ಟಿಕರ್ತೆಗೆ ಪೂಜೆ
ಅನಾದಿ ಕಾಲದ ನಂಬಿಕೆಯಂತೆ, ವಿಶ್ವವೇ ಇಲ್ಲದಿರುವಾಗ ಸುತ್ತಲೂ ಗಾಢ ಅಂಧಕಾರ ಕವಿದಿತ್ತು. ದೇವಿ ಕೂಷ್ಮಾಂಡಾ ಆ ಸಮಯದಲ್ಲಿ ನಕ್ಕಿದ್ದರಿಂದ ಎಲ್ಲೆಡೆ ಬೆಳಕು ಕಂಡುಬಂದಿತು. ಈ ಬಗೆಯಲ್ಲಿ ದೇವಿಯು ಭೂಮಿಯನ್ನು ಸೃಷ್ಟಿಸಿದ್ದಾರೆ ಮತ್ತು ಅಲ್ಲಿ ಜೀವಿಗಳನ್ನು ಕೂಡ ರೂಪಿಸಿದ್ದಾರೆ. ನವರಾತ್ರಿಯ ನಾಲ್ಕನೇ ದಿನ ಈ ಸೃಷ್ಟಿಯ ರಚನಾಕಾರರನ್ನು ಪೂಜಿಸುವುದು ವಾಡಿಕೆಯಾಗಿದೆ.
ಸೌರ ವ್ಯವಸ್ಥೆಯ ನಿಯಂತ್ರಕರು
ಸೂರ್ಯನ ಒಳಭಾಗದಲ್ಲಿ ದೇವಿ ಕೂಷ್ಮಾಂಡಾ ವಾಸಿಸುತ್ತಾರೆ ಮತ್ತು ಅಲ್ಲಿಂದ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಜನಪ್ರಿಯ ವೇದಾಂತದ ಪ್ರಕಾರ ಸೂರ್ಯ ಮತ್ತು ಸಂಪೂರ್ಣ ಸೌರ ವ್ಯವಸ್ಥೆಯನ್ನು ಆಕೆ ನಿಯಂತ್ರಿಸುತ್ತಿದ್ದಾರೆ ಎಂದಾಗಿದೆ. ದೇವಿ ಕೂಷ್ಮಾಂಡೆಯನ್ನು ನೀವು ಪೂಜಿಸುತ್ತೀರಿ ಎಂದಾದಲ್ಲಿ ವಿಶ್ವದ ಶ್ರೇಷ್ಟ ಶಕ್ತಿಯನ್ನೇ ನೀವು ಆರಾಧಿಸುತ್ತಿದ್ದೀರಿ ಎಂಬುದು ನಿಮಗೆ ತಿಳಿದಿರಬೇಕು.
ಕೂಷ್ಮಾಂಡ ಪದದ ಅರ್ಥ
ಇಲ್ಲಿ ಕು ಎಂಬುದು ಸಣ್ಣದು ಎಂಬ ಅರ್ಥವನ್ನು ನೀಡುತ್ತಿದ್ದರೆ, ಊಷ್ಮಾ ಎಂಬುದು ಉಷ್ಣತೆಯನ್ನು ಪ್ರತಿನಿಧಿಸಿದರೆ, ಅಂಡ ಎಂಬುದು ಮೊಟ್ಟೆಯನ್ನು ಸೂಚಿಸುತ್ತದೆ. ವಿಶ್ವವನ್ನು ಸೃಷ್ಟಿಸಿದವರು ಆಕೆಯೇ ಆಗಿರುವುದರಿಂದ ಆಕೆಯ ಹೆಸರೇ ಆಕೆಯ ಪಾತ್ರವನ್ನು ಪ್ರತಿನಿಧಿಸುತ್ತಿದೆ.
ಆಕೆಯ ಆಶೀರ್ವಾದದ ಮಹತ್ವ
ಜನಪ್ರಿಯ ನಂಬಿಕೆಯ ಪ್ರಕಾರ ದೇವಿಯು ಜೀವ ಮತ್ತು ನಿರ್ಜೀವ ವಸ್ತುಗಳೆರಡರಲ್ಲೂ ಕಂಡುಬರುತ್ತಾರೆ ಎಂದಾಗಿದೆ. ಶಕ್ತಿಯ ಮೂಲವೇ ಆಕೆಯಾಗಿರುವುದರಿಂದ ಆಕೆಯ ಭಕ್ತರುಗಳು ಬುದ್ಧಿಪೂರ್ವಕವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಜೀವನದಲ್ಲಿ ಸರಿಯಾದ ದಾರಿ ತೋರಲು ಆಕೆ ಇರುವುದರಿಂದ ದುಃಖಗಳನ್ನು ನೋವನ್ನು ಮರೆತು ಸಂತಸವನ್ನು ಆ ದೇವಿ ಜೀವನದಲ್ಲಿ ತುಂಬುವಂತೆ ಮಾಡುತ್ತಾರೆ. ಪೂರ್ಣ ಭಕ್ತಿಯಿಂದ ಆಕೆಯನ್ನು ಆರಾಧಿಸುವವರಿಗೆ ವಿಶ್ವದಲ್ಲಿ ಸಂತೋಷವಾಗಿರಲು ಸಹಾಯಕವಾಗಿರುವ ಎಲ್ಲಾವನ್ನೂ ಆಕೆ ನೀಡುತ್ತಾರೆ.
ನವರಾತ್ರಿಯ ಮಹತ್ವವನ್ನು ನೀವಿಲ್ಲಿ ತಿಳಿದುಕೊಂಡಿದ್ದೀರಿ ತಾನೇ? ಹೆಚ್ಚಿನ ಮನೆಗಳಲ್ಲಿ ದೇವಿ ಕೂಷ್ಮಾಂಡೆಯನ್ನು ಲಕ್ಷ್ಮೀ ದೇವಿಯಂತೆ ಪೂಜಿಸುತ್ತಾರೆ ಮಾನವರ ಕಷ್ಟಗಳನ್ನು ನಿವಾರಿಸಿ ಅಲ್ಲಿ ದೇವಿಯ ಆಶೀರ್ವಾದ ನೆಲೆ ನಿಲ್ಲುತ್ತದೆ ಎಂಬ ನಂಬಿಕೆ ಇದೆ. ನಾಲ್ಕನೇ ದಿನ ಹೆಣ್ಣಿನ ಶಕ್ತಿ ಪ್ರತೀಕವಾಗಿದೆ. ವಿಶ್ವಕ್ಕೆ ಉಸಿರನ್ನು ತುಂಬಲು ವಿಷ್ಣುವು ಕೂಷ್ಮಾಂಡಾ ದೇವಿಯ ಸಹಾಯವನ್ನು ಕೋರಿದ್ದರು ಎಂಬ ನಂಬಿಕೆ ಕೂಡ ಇದೆ.



Click it and Unblock the Notifications


