For Quick Alerts
ALLOW NOTIFICATIONS  
For Daily Alerts

ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'

By Manu
|
Navaratri 2018 : ನವರಾತ್ರಿ ವಿಶೇಷ | ನವ ದುರ್ಗೆಯರಿಗೆ ನವ ನೈವೇದ್ಯಗಳು | Oneindia Kannada

ನವರಾತ್ರಿಯ ವೇಳೆ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯನ್ನು ದೇಶದ ವಿವಿಧೆಡೆಗಳಲ್ಲಿ ತುಂಬಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಸಡಗರವೇ ವಿಶೇಷ. ಗುಜರಾತ್‌ನಲ್ಲಿ ನವರಾತ್ರಿ ಸಮಯದಲ್ಲಿ ಗರ್ಭಾ ನೃತ್ಯವನ್ನು ಮಾಡಲಾಗುತ್ತದೆ. ದೇವಿಯನ್ನು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಪೂಜಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು ಎಂದರ್ಥ. ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ

ದೇವಿಯು ದುಷ್ಟರನ್ನು ಸಂಹಾರ ಮಾಡಲು ಒಂಬತ್ತು ಅವತಾರಗಳನ್ನು ತಾಳುತ್ತಾಳೆ. ಇದನ್ನೇ ನವರಾತ್ರಿಯಾಗಿ ಪೂಜಿಸಲಾಗುತ್ತದೆ. ರಾಮನು ಲಂಕೆಗೆ ಯುದ್ಧಕ್ಕೆ ಹೋಗುವ ಮೊದಲು ದೇವಿಯನ್ನು ಒಂಬತ್ತು ದಿನಗಳ ಕಾಲ ಪೂಜಿಸಿದ ಎನ್ನುವ ಕಥೆಯೂ ಇದೆ. ನವರಾತ್ರಿಯಂದು ಶ್ರದ್ಧಾಭಕ್ತಿಯಿಂದ ದೇವಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎನ್ನಲಾಗಿದೆ. ನವರಾತ್ರಿಯಂದು ದೇವಿಗೆ ಒಂಬತ್ತು ರೀತಿಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಇದು ಯಾವುದೆಂದು ನಾವಿಲ್ಲಿ ತಿಳಿದುಕೊಳ್ಳುವ...

ಪ್ರಥಮ ದಿನ

ಪ್ರಥಮ ದಿನ

ಮೊದಲ ದಿನವು ದೇವಿಯ ಮೊದಲನೇಯ ಅವತಾರಕ್ಕೆ ಮೀಸಲಿಡಲಾಗಿದೆ. ದೇವಿಯನ್ನು ಮೊದಲ ದಿನದಂದು ಶೈಲ ಪುತ್ರಿಯೆಂದು ಕರೆಯಲಾಗುತ್ತದೆ. ಈ ದಿನ ದೇವಿಯನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಆಕೆಯನ್ನು ಬಾಲಕಿ ಹಾಗೂ ಪರ್ವತರಾಜನ ಪುತ್ರಿಯಾಗಿ ಪೂಜಿಸಲಾಗುತ್ತದೆ. ಈ ದಿನ ಭಕ್ತರು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಬೆಣ್ಣೆಯನ್ನು ದೇವಿಗೆ ಭೋಗವಾಗಿ ಅರ್ಪಿಸುತ್ತಾರೆ.

ದ್ವಿತೀಯ ದಿನ

ದ್ವಿತೀಯ ದಿನ

ಎರಡನೇ ದಿನದಂದು ದೇವಿಯನ್ನು ಬ್ರಹ್ಮಚಾರಿಣಿಯಾಗಿ ಆರಾಧಿಸಲಾಗುತ್ತದೆ. ದ್ವಿತೀಯ ಅಥವಾ ಎರಡನೇ ದಿನದಂದು ಭಕ್ತರು ಹಸಿರು ಬಟ್ಟೆಯನ್ನು ಧರಿಸುತ್ತಾರೆ. ದ್ವಿತೀಯ ದಿನದಂದು ದೇವಿಗೆ ಸಕ್ಕರೆಯನ್ನು ಭೋಗವಾಗಿ ಅರ್ಪಿಸುತ್ತಾರೆ.

ತೃತೀಯ ದಿನ

ತೃತೀಯ ದಿನ

ಮೂರನೇ ದಿನ ಯಾನೆ ತೃತೀಯ ದಿನ ದೇವಿಯನ್ನು ಚಂದ್ರಘಾತವೆಂದು ಪೂಜಿಸಲಾಗುತ್ತದೆ. ಈ ರೂಪದ ದೇವಿಯನ್ನು ಪೂಜಿಸುವುದರಿಂದ ನಿಮ್ಮ ನೋವುಗಳೆಲ್ಲವೂ ನಿವಾರಣೆಯಾಗಿ ಆಕಾಂಕ್ಷೆಗಳೆಲ್ಲವೂ ಈಡೇರುತ್ತದೆ ಎಂದು ನಂಬಲಾಗಿದೆ. ಈ ದಿನ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಹಾಲು ಅಥವಾ ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ.

ನಾಲ್ಕನೇ ದಿನ

ನಾಲ್ಕನೇ ದಿನ

ಈ ದಿನ ಯಾನೆ ಚತುರ್ಥ ದಿನ ದೇವಿ ಕುಶಮಂದ ಅವತಾರದಲ್ಲಿರುತ್ತಾಳೆ. ಈ ಅವತಾರದ ದೇವಿಯನ್ನು ಆರಾಧಿಸುವುದರಿಂದ ಮತ್ತು ನಾಲ್ಕನೇ ದಿನದಂದು ಭಕ್ತರು ಉಪವಾಸವಿದ್ದು ದೇವಿಯ ಆರಾಧನೆ ಮಾಡಿದರೆ ಅವರ ನೋವು ಹಾಗೂ ರೋಗಗಳೆಲ್ಲವೂ ಶಮನವಾಗಲಿದೆ ಎನ್ನಲಾಗುತ್ತದೆ. ಈ ದಿನ ಭಕ್ತರು ಕಿತ್ತಳೆ ಬಣ್ಣದ ಬಟ್ಟೆ ಧರಿಸುತ್ತಾರೆ. ಈ ದಿನ ಕುಶಮಂದ

ದೇವಿಗೆ ಮಲ್ಪುವನ್ನು ಅರ್ಪಿಸುತ್ತಾರೆ.

ಐದನೇ ದಿನ

ಐದನೇ ದಿನ

ಪಂಚಮ ಅಥವಾ ಐದನೇ ದಿನದಲ್ಲಿ ದೇವಿ ಸ್ಕಂದಮಾತಾಗೆ ಅರ್ಪಿಸಲಾಗಿದೆ. ಸ್ಕಂದಮಾತಾ ದೇವಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂದು ನಂಬಲಾಗಿದೆ. ಐದನೇ ದಿನದಂದು ಭಕ್ತರು ಬಿಳಿ ಬಟ್ಟೆಯನ್ನು ಧರಿಸಿ ಪೂಜೆ ಮಾಡುತ್ತಾರೆ ಮತ್ತು ಬಾಳೆಹಣ್ಣನ್ನು ದೇವಿಗೆ ಅರ್ಪಿಸುತ್ತಾರೆ.

ಆರನೇ ದಿನ

ಆರನೇ ದಿನ

ಷಷ್ಠಿಯಂದು ದೇವಿಯ ಕಾತ್ಯಾಯಿನಿ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನ ಭಕ್ತರು ಕೆಂಪು ಬಟ್ಟೆಯನ್ನು ಧರಿಸುತ್ತಾರೆ ಮತ್ತು ದೇವಿಗೆ ಜೇನನ್ನು ಭೋಗದ ರೂಪದಲ್ಲಿ ಅರ್ಪಿಸಲಾಗುತ್ತದೆ.

ಏಳನೇ ದಿನ

ಏಳನೇ ದಿನ

ಕಾಳರಾತ್ರಿಯ ಅವತಾರವನ್ನು ಸಪ್ತಮಿಯಂದು ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿಯು ದುಷ್ಟಶಕ್ತಿಗಳಿಂದ ಭಕ್ತರನ್ನು ರಕ್ಷಿಸಿ ಸುಖವನ್ನು ನೀಡುತ್ತಾಳೆ. ಈ ದಿನ ಭಕ್ತರು ನೀಲಿ ಬಟ್ಟೆಯನ್ನು ಧರಿಸಿ ದೇವಿಗೆ ಬೆಲ್ಲವನ್ನು ಅರ್ಪಿಸುತ್ತಾರೆ. ಕೆಲವು ಕಡೆಗಳಲ್ಲಿ ಈ ದಿನ ಬ್ರಾಹ್ಮಣರಿಗೆ ದಾನವನ್ನು ನೀಡಲಾಗುತ್ತದೆ.

ಎಂಟನೇ ದಿನ

ಎಂಟನೇ ದಿನ

ಅಷ್ಟಮಿಯಂದು ಮಹಾಗೌರಿಯನ್ನು ಪೂಜಿಸುವ ದಿನವಾಗಿದೆ. ಅಷ್ಟಮಿಯಂದು ಮಹಾಗೌರಿಯನ್ನು ಭಕ್ತರು ಪೂಜಿಸಿದರೆ ಅವರ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಈ ದಿನ ದೇವಿಗೆ ನವಿಲಿನ ಗರಿಯ ಹಸಿರು ಬಣ್ಣದ ಸೀರೆಯನ್ನು ಉಡಿಸಲಾಗುತ್ತದೆ. ಈ ದಿನ ನವಿಲು ಗರಿಯ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವ ಭಕ್ತಾದಿಗಳು ತೆಂಗಿನ ಕಾಯಿಯನ್ನು ಸಮರ್ಪಿಸುತ್ತಾರೆ.

ಒಂಬತ್ತನೇ ದಿನ

ಒಂಬತ್ತನೇ ದಿನ

ನವಮಿ ಯಾನೆ ನವರಾತ್ರಿಯನ್ನು ದೇವಿಯ ಸಿದ್ಧಿದಾತ್ರಿ ಅವತಾರವನ್ನು ಪೂಜಿಸಲಾಗುತ್ತದೆ. ಈ ಅವತಾರದ ದೇವಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎಂದು ನಂಬಲಾಗಿದೆ. ಈ ದಿನ ಭಕ್ತರು ನೇರಳೆ ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ. ದೇವಿಗೆ ಎಳ್ಳನ್ನು ಅರ್ಪಿಸಲಾಗುತ್ತದೆ.

English summary

Navratri: 9 Days & 9 Food Offerings On Each Day To The Goddess

Navratri literally translates into Nine Nights. Each day of Navratri is dedicated to a form of goddess Durga and is worshipped by her devotees. These nine days have a special significance for a devotee, which are as listed below.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more