For Quick Alerts
ALLOW NOTIFICATIONS  
For Daily Alerts

ಮದುವೆಗೆ ಸಮಸ್ಯೆಗಳು ಎದುರಾದರೆ-ಕಾತ್ಯಾಯಿನಿ ದೇವಿಯನ್ನು ಪೂಜಿಸಿ

|

ಅಕ್ಟೋಬರ್ 10 ರಿಂದ ಆರಂಭಗೊಂಡು 18 ರವರೆಗೆ ನವರಾತ್ರಿ ಹಬ್ಬವನ್ನು ಭಕ್ತರು ಆಚರಿಸುತ್ತಿದ್ದು ಈ ಸಮಯದಲ್ಲಿ ವಿಶೇಷವಾಗಿ ದುರ್ಗೆಯ ಆರಾಧನೆಯನ್ನು ಮಾಡಲಾಗುತ್ತದೆ. ದೇವಿಯು ಒಂಭತ್ತು ರೂಪಗಳನ್ನು ತಾಳಿ ತಮ್ಮ ಭಕ್ತರನ್ನು ರಕ್ಷಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ನವರಾತ್ರಿಯ ಸಮಯದಲ್ಲಿ ದೇವಿ ಹೆಚ್ಚು ಪ್ರಸನ್ನರಾಗಿರುತ್ತಾರೆ. ಮತ್ತು ಈ ಪ್ರಸನ್ನತೆಯ ಮೂಲಕ ದೇವಿಯು ಭಕ್ತರ ಕಷ್ಟವನ್ನು ದೂರ ಮಾಡುತ್ತಾರೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಪದ್ಧತಿಯಾಗಿದೆ.

ನವರಾತ್ರಿಯ ಒಂಬತ್ತು ದಿನಗಳು ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಭಕ್ತರ ಜೀವನದಲ್ಲಿರುವ ಸಂಕಷ್ಟಗಳನ್ನು ಆದಿ ಶಕ್ತಿ ನಿವಾರಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಂತೆಯೇ ದೇವಿಯ ಈ ಒಂಭತ್ತು ರೂಪಗಳಲ್ಲಿ ಒಂದು ಶಕ್ತಿಯು ಮದುವೆಗೆ ತಡೆಹಿಡಿಯಲಾಗಿರುವ ಎಲ್ಲಾ ರೀತಿಯ ಸಂಕಷ್ಟಗಳನ್ನು ನಿವಾರಿಸುತ್ತದೆ. ಮಂಗಳಿಕ ದೋಷದಂತಹ ದೋಷವನ್ನು ಶಕ್ತಿಯು ನಿವಾರಿಸುತ್ತಾರೆ. ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ಮದುವೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಕಾತ್ಯಾಯನನ ಪುತ್ರಿಯಾಗಿರುವ ಕಾತ್ಯಾಯಿನಿಯ ರೂಪದಲ್ಲಿ ದುರ್ಗೆಯು ಧರೆಯಲ್ಲಿ ಪ್ರತ್ಯಕ್ಷಗೊಂಡರು ಆದ್ದರಿಂದ ಅವರಿಗೆ ಕಾತ್ಯಾಯಿನಿ ಎಂಬ ಹೆಸರು ಇದೆ. ತನ್ನ ಎಡಗೈಯಲ್ಲಿ ತಾವರೆ ಮತ್ತು ಕೆಳಗಿನ ಎಡಗೈಯಲ್ಲಿ ಕತ್ತಿಯನ್ನು ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹಿಡಿದುಕೊಂಡಿದ್ದಾರೆ. ಹಳದಿ ಬಣ್ಣದ ಸೀರೆಯನ್ನು ಉಟ್ಟು ಸಿಂಹದ ಮೇಲೆ ಅವರು ಕುಳಿತಿದ್ದಾರೆ.

ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ ದೊರೆಯುವ ಪ್ರಯೋಜನಗಳೇನು

ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ ದೊರೆಯುವ ಪ್ರಯೋಜನಗಳೇನು

ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ನೆಲೆಗೊಳಿಸುವುದಕ್ಕಾಗಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಮದುವೆಗೆ ಸಂಬಂಧಿಸಿದಂತೆ ವ್ಯಕ್ತಿಯು ಸಮಸ್ಯೆಗಳನ್ನು ಹೊಂದಿದ್ದರೆ ಕಾತ್ಯಾಯಿನಿ ಮಾತೆಯನ್ನು ಪೂಜಿಸಿ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಮದುವೆ ಕಾರ್ಯದಲ್ಲಿ ವಿಳಂಬ, ಗಂಡ ಹೆಂಡಿರ ನಡುವೆ ಆಗಾಗ್ಗೆ ಜಗಳಗಳುಂಟಾಗುವುದು, ಅಂತೆಯೇ ಸೂಕ್ತ ಪಾಲುದಾರರನ್ನು ಹೊಂದಲು ಸಮಸ್ಯೆ ಇರುವುದು ಇತ್ಯಾದಿ. ನವರಾತ್ರಿ ಸಮಯದಲ್ಲಿ ವೃತವನ್ನು ಆಚರಿಸುವುದರ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಕಾತ್ಯಾಯಿನಿ ಮಾತೆಯನ್ನು ಶಕ್ತಿ ಸ್ಥೈರ್ಯದ ದೇವತೆ ಎಂದೂ ಕೂಡ ಕರೆಯುತ್ತಾರೆ. ಭಯವನ್ನು ಹೋಗಲಾಡಿಸುವಲ್ಲಿ ಕೂಡ ಕಾತ್ಯಾಯಿನಿ ಮಾತೆ ಪೂಜನೀಯವಾಗಿದ್ದಾರೆ.

12 ನೇ ಮನೆಯಲ್ಲಿ ನೆಲೆಗೊಂಡಿರುವ ಕಾತ್ಯಾಯಿನಿ ಮಾತೆ

12 ನೇ ಮನೆಯಲ್ಲಿ ನೆಲೆಗೊಂಡಿರುವ ಕಾತ್ಯಾಯಿನಿ ಮಾತೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ದೇವಿಯು ಜನ್ಮ ಕುಂಡಲಿಯಲ್ಲಿ ಗುರುವಿನೊಂದಿಗೆ ಸಹಯೋಗವನ್ನು ಹೊಂದಿದ್ದಾರೆ. "ಬ್ರಹ್ಮಮಂಡಲದ ಆದಿಶ್ರಷ್ಟಿ ದೇವಿ' ಎಂಬ ಹೆಸರೂ ದೇವಿಗಿದೆ. ಗೋಕುಲದಲ್ಲಿರುವ ಮಹಿಳೆಯರು ಕೃಷ್ಣನ ಪ್ರೀತಿಯನ್ನು ಪಡೆಯುವುದಕ್ಕಾಗಿ ದೇವಿಗೆ ಪೂಜೆಯನ್ನು ಅರ್ಪಿಸುತ್ತಿದ್ದರು. ಭಾಗವತ್ ಪುರಾಣದಲ್ಲಿ ತಿಳಿಸಿರುವಂತೆ ಮಾತೆ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ದೇವಿಗೆ ವ್ರತವನ್ನು ಮಾಡಿ ಪೂಜೆಯನ್ನು ಸಲ್ಲಿಸುವಾಗ ಶ್ರೀಗಂಧ, ಹೂವುಗಳು ಮತ್ತು ಗಂಧದ ಕಡ್ಡಿಯನ್ನು ಅರ್ಪಿಸುತ್ತಿದ್ದರು.

Most Read: ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು

ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ

ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ

ಕಾತ್ಯಾಯಿನಿ ಮಹಾಮಯಾ ಮಹಾಯೋಗಿಯಾಯತಿಶ್ವರಿ

ನಂದ ಗೋಪಾಶೂತನ್ ದೇವಿ ಪತಿಯಾಮ್ ಮಿ ನಮ ಕುರುಟೆ

ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ

ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ

ಓಂ ಹ್ರಿಂಗ್ ಕಾತ್ಯಾಯಿನಿಯೇ ಸ್ವಾಹಾ, ಹ್ರಿಂಗ್ ಶ್ರಿಂಗ್ ಕಾತ್ಯಾಯನಿಯೇ ಸ್ವಾಹಾ

ಶೀಘ್ರ ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ

ಶೀಘ್ರ ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ

ಓಂ ಕಾತ್ಯಾಯಿನಿ ಮಾಹಾಮಾಯೆ, ಮಹಾಯೋಗಿನಿಅದೀಶ್ವರಿ

ನಂದ ಗೋಪಸ್ತುತ ದೇವಿ ಪಾತಿಮ್ ಮೆ ಕುರು ತೆ ನಮಃ

Most Read: ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'

ವಿವಾಹ ವಿಳಂಬವಾಗುತ್ತಿದ್ದರೆ ಮಾ ಕಾತ್ಯಾಯಿನಿ ಮಂತ್ರ

ವಿವಾಹ ವಿಳಂಬವಾಗುತ್ತಿದ್ದರೆ ಮಾ ಕಾತ್ಯಾಯಿನಿ ಮಂತ್ರ

ಹೇ ಗೌರಿ ಶಂಕರ ಅರ್ಧಾಂಗಿ ಯತ ತವಾಮ್ ಶಂಕರ ಪ್ರಿಯ

ತಥ ಮಾ ಕುರು ಕಲ್ಯಾಣಿ ಕಂಟಕಮ್ ಸುದುರ್ಲಭಮ್

 ವಿಘ್ನಗಳಿಲ್ಲದ ವಿವಾಹಕ್ಕಾಗಿ

ವಿಘ್ನಗಳಿಲ್ಲದ ವಿವಾಹಕ್ಕಾಗಿ

ಹೇ ಗೌರಿ ಶಂಕರ ಅರ್ಧಾಂಗಿ ಯತ ತವಾಮ್ ಶಂಕರ ಪ್ರಿಯ

ತಥ ಮಾ ಕುರು ಕಲ್ಯಾಣಿ ಕಂಟಕಮ್ ಸುದುರ್ಲಭಮ್

ವಿವಾಹ ಕಾರ್ಯ ವಿಳಂಬವಾಗುತ್ತಿದ್ದರೆ ಕಾತ್ಯಾಯಿನಿ ಸೂರ್ಯ ಮಂತ್ರ

ವಿವಾಹ ಕಾರ್ಯ ವಿಳಂಬವಾಗುತ್ತಿದ್ದರೆ ಕಾತ್ಯಾಯಿನಿ ಸೂರ್ಯ ಮಂತ್ರ

ಓಂ ದೇವೇಂದ್ರಾನಿ ನಮಸ್ತುಭ್ಯಮ್ ದೇವೇಂದ್ರಪ್ರಿಯ ಭಾಮಿನಿ

ವಿವಾಹಮ್ ಭಾಗ್ಯಮ್ ಆರೋಗ್ಯಮ್ ಶೀಘ್ರ ಲಾಭಮ್ ಚ ದೇಹಿ ಮಿ

ಇಚ್ಛೆ ಪಟ್ಟ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಪಡೆಯಲು

ಇಚ್ಛೆ ಪಟ್ಟ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಪಡೆಯಲು

ಓಂ ದೇವೇಂದ್ರಾನಿ ನಮಸ್ತುಭ್ಯಮ್ ದೇವೇಂದ್ರಪ್ರಿಯ ಭಾಮಿನಿ

ವಿವಾಹಮ್ ಭಾಗ್ಯಮ್ ಆರೋಗ್ಯಮ್ ಶೀಘ್ರ ಲಾಭಮ್ ಚ ದೇಹಿ ಮಿ

ಶುಭಕರವಾದ ವೈವಾಹಿಕ ಜೀವನಕ್ಕಾಗಿ

ಶುಭಕರವಾದ ವೈವಾಹಿಕ ಜೀವನಕ್ಕಾಗಿ

ಓಂ ಶಂಘ್ ಶಂಕರಾಯ ಸಕಲ ಜನ್ಮಾರ್ಜಿತಾ ಪಾಪ ವಿಧ್ವಂಸನಾಯೆ

ಪುರುಷಾರ್ಥ ಚತುಸ್ತೆ ಲಾಭಾಯ ಚ ಪಾತಿಮ್ ಮೆ ದೇಹಿ ಕುರು ಕುರು ಸ್ವಾಹಾ

English summary

Worship Katyayani for Marriage Problems

The nine forms of Goddess Durga are worshipped during the nine days of Navratri. Adi Shakti Durga removes all the problems from the lives of her devotees. Among these nine forms, there is one Goddess who is known to remove all the problems related to marriage in a person's life. It is said that she can remove doshas such as Manglik dosha as well. mShe was the daughter of Sage Katyayan and is therefore known as Goddess Katyayani. Goddess Katyayani is depicted with four hands, wherein she holds a lotus in her upper left hand, a sword in her lower left hand. Similarly, the right hands are in Abhaya and Varada Mudra. Wearing a yellow coloured saree, she sits on a lion.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more