For Quick Alerts
ALLOW NOTIFICATIONS  
For Daily Alerts

ದುರ್ಗಾ ದೇವಿಯ ಆರಾಧನೆಯನ್ನು ಹೀಗೆ ಮಾಡಿದರೆ ನೀವು ಅಂದುಕೊಂಡಿದ್ದು ದೇವಿ ನೆರವೇರಿಸುವಳು

|

ಅತ್ಯಂತ ಶಕ್ತಿ ಶಾಲಿಯಾದ ದೇವತೆ ಎಂದರೆ ದುರ್ಗಾ ದೇವಿ. ದುಷ್ಟರ ನಿಗ್ರಹ ಹಾಗೂ ಶಿಷ್ಟರ ರಕ್ಷಣೆಗಾಗಿ ಸದಾ ಸಿದ್ಧಳಾಗಿರುವ ಮಾತೆ ಎಂದು ಕರೆಯಲಾಗುವುದು. ಪುರಾಣದ ಕಥೆ ಹಾಗೂ ನಂಬಿಕೆಯ ಪ್ರಕಾರ ದೇವಲೋಕದಲ್ಲಿ ಬರುವ ಅನೇಕ ಸಮಸ್ಯೆಗಳು ಹಾಗೂ ರಕ್ಷಣೆಯ ವಿಚಾರದಲ್ಲಿ ದೇವಿಯ ಮೊರೆ ಹೋಗುತ್ತಿದ್ದರು ಎಂದು ಹೇಳಲಾಗುವುದು. ದೇವಿಯು ಮುನಿದರೆ ಮಾರಿಯ ಅವತಾರವನ್ನು ತೋರುವಳು. ಅದೇ ಅವಳನ್ನು ಸಂತಸ ಪಡಿಸಿದರೆ ತನ್ನ ಮಗುವನ್ನು ಪೋಷಿಸಿದಂತೆ ರಕ್ಷಣೆ ನೀಡುವಳು ಎನ್ನುವ ನಂಬಿಕೆ ಇದೆ.

ಸೃಷ್ಟಿಯ ವೈಭವಗಳು ಹಾಗೂ ಅಗತ್ಯತೆಗಳು ಎಲ್ಲವೂ ದೇವಿಯ ಕೃಪೆಯಿಂದ ಸೃಷ್ಟಿಯಾಗಿದೆ. ತಾಯಿಯ ಆರಾಧನೆ ಹಾಗೂ ಭಕ್ತಿಯನ್ನು ಹೊಂದಿದ್ದರೆ ಜೀವನದಲ್ಲಿ ಬಯಸಿದ ಸಂಗತಿಗಳು ಹಾಗೂ ಮನಸ್ಸಿನ ಬಯಕೆಗಳೆಲ್ಲವೂ ಬಹಳ ಸುಲಭವಾಗಿ ದೊರೆಯುವುದು ಎಂದು ಹೇಳಲಾಗುವುದು. ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ದೇವಿಯ ದೃಷ್ಟಿಯಿರುತ್ತದೆ. ಕೆಟ್ಟ ಕೆಲಸವನ್ನು ಮಾಡಿದರೆ ಶಿಕ್ಷೆ ಹಾಗೂ ಉತ್ತಮ ಕೆಲಸಕ್ಕೆ ಪುಣ್ಯವನ್ನು ನೀಡುವಳು. ಜೀವನದಲ್ಲಿ ಸನ್ನಡತೆಯಲ್ಲಿ ಸಾಗುವುದು ಹೇಗೆ ಎನ್ನುವುದನ್ನು ಕಲಿಸಿಕೊಡುವಳು ಎಂದು ಹೇಳಲಾಗುವುದು.

ಅಷ್ಟ ದೇವಿಯರ ಅವತಾರ

ಅಷ್ಟ ದೇವಿಯರ ಅವತಾರ

ಅಷ್ಟ ದೇವಿಯರ ಅವತಾರದಲ್ಲಿ ಮನುಜ ಕುಲಕ್ಕೆ ಶ್ರೀರಕ್ಷೆಯಾಗಿ ನಿಲ್ಲುವ ತಾಯಿ ದುರ್ಗಾ ದೇವಿ. ದೇವಿಯ ಆರಾಧನೆಯಲ್ಲಿ ಕೆಲವು ಕ್ರಮವನ್ನು ಅನುಸರಿಸಬೇಕು. ದೇವಸ್ಥಾನಗಳಲ್ಲಿ ಸೂಕ್ತ ರೀತಿಯ ಪೂಜಾ ಆರಾಧನೆಗಳು ನಡೆಯುತ್ತವೆ. ಆದರೆ ಮನೆಯಲ್ಲಿ ದೇವಿಯ ಆರಾಧನೆ ಕೈಗೊಳ್ಳುವಾಗ ದೇವಿಗೆ ಅಗತ್ಯವಾದ ರೀತಿಯಲ್ಲಿ ಪೂಜೆಯನ್ನು ಸಲ್ಲಿಸುವಲ್ಲಿ ನಾವು ಎಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ದೇವಿಯ ಆರಾಧನೆ ಮಾಡುವ ಮುನ್ನ ಕೆಲವು ಸೂಕ್ತ ಕ್ರಮಗಳ ಕುರಿತು ಅರಿತುಕೊಳ್ಳಬೇಕು.

ದೇವಿಯ ಪ್ರತಿ ರೂಪ

ದೇವಿಯ ಪ್ರತಿ ರೂಪ

ದುರ್ಗಾ ದೇವಿ ನಮ್ಮ ಸುತ್ತಲಿನಲ್ಲಿ ಸದಾ ಇರುತ್ತಾಳೆ. ಅದರಲ್ಲೂ ಆಕೆಗೆ ಇಷ್ಟವಾಗುವ ಕಮಲದ ಹೂವು, ಸುಗಂಧ ಪುಷ್ಪ, ಸಿಂಧೂರ ಸೇರಿದಂತೆ ಇನ್ನಿತರ ಪವಿತ್ರ ವಸ್ತುಗಳಲ್ಲಿ ದೇವಿಯ ಪ್ರತಿ ರೂಪ ಇರುವುದು. ಹಾಗಾಗಿ ತಾಯಿಯ ಆರಾಧನೆ ಮಾಡುವಾಗ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮನೆಗೆ ದೇವಿಯ ಆಗಮನ ಆಗುವುದು. ಜೊತೆಗೆ ಮನೆ ಮಂದಿಗೆ ಒಳಿತನ್ನು ಆಶೀರ್ವದಿಸುವಳು. ನಮ್ಮ ಅಗತ್ಯತೆಗಳನ್ನು ತಾಯಿ ಸಂತೋಷದಿಂದ ನೆರವೇರಿಸಿಕೊಡುವಳು ಎನ್ನುವ ಧಾರ್ಮಿಕ ನಂಬಿಕೆಯಿದೆ.

ಯಾವೆಲ್ಲಾ ಎಚ್ಚರಿಕೆ ಹಾಗೂ ಕ್ರಮವನ್ನು ಕೈಗೊಳ್ಳಬೇಕು

ಯಾವೆಲ್ಲಾ ಎಚ್ಚರಿಕೆ ಹಾಗೂ ಕ್ರಮವನ್ನು ಕೈಗೊಳ್ಳಬೇಕು

ಈ ಹಿನ್ನೆಲೆಯಲ್ಲಿಯೇ ದೇವಿಯ ಆರಾಧನೆಯನ್ನು ಮನೆಯಲ್ಲಿ ಕೈಗೊಳ್ಳುವಾಗ ಯಾವೆಲ್ಲಾ ಎಚ್ಚರಿಕೆ ಹಾಗೂ ಕ್ರಮವನ್ನು ಕೈಗೊಳ್ಳಬೇಕು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದಿನ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದೆ. ನಿಮಗೂ ದೇವಿಯ ಆರಾಧನೆಯ ಕುರಿತು ಸೂಕ್ತ ಮಾಹಿತಿಯನ್ನು ಪಡೆಯಬೇಕು ಎನ್ನುವ ಹಂಬಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ದುರ್ಗಾ ಪೂಜೆಯ ತಯಾರಿ

ದುರ್ಗಾ ಪೂಜೆಯ ತಯಾರಿ

ಸ್ನಾನ ಮಾಡಿದ ನಂತರ ಮನೆಯನ್ನು ಸ್ವಚ್ಛಗೊಳಿಸಿ. ಪೂಜಾ ಕೊಠಡಿಯಲ್ಲಿ ದುರ್ಗಾ ದೇವಿಯ ಭಾವಚಿತ್ರ ಅಥವಾ ಮೂರ್ತಿಯನ್ನು ಇಡಿ. ದೇವಿಯ ಚಿತ್ರ ಅಥವಾ ಮೂರ್ತಿಯ ಮುಂದೆ ಪೂಜಾ ಸಾಮಾಗ್ರಿಯನ್ನು ಸಿದ್ಧಗೊಳಿಸಿ. ಒಂದು ತುಪ್ಪದ ದೀಪ ಮತ್ತು ಧೂಪದ್ರವ್ಯದ ತುಂಡನ್ನು ಬೆಳಗಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಿ.

Most Read: ರುದ್ರಾಕ್ಷಿ ಧಾರಣೆಯಿಂದ ಮಾಡಬಯಸುವ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರುವವು

ಕಲಶ ಪೂಜೆ

ಕಲಶ ಪೂಜೆ

ಒಂದು ತಾಮ್ರದ ತಂಬಿಗೆ ಮತ್ತು ಚಮಚ ತೆಗೆದುಕೊಳ್ಳಿ. ತಂಬಿಗೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು. ಒಂದಿಷ್ಟು ಹೂವು ಮತ್ತು ಈ ಕೆಳಗಿನ ಮಂತ್ರಗಳನ್ನು ಪಠಿಸುವುದರ ಮೂಲಕ ಪೂಜೆಯನ್ನು ಆರಂಭಿಸಬೇಕು.

ಮಂತ್ರ

ಮಂತ್ರ

"ಕಲಸಾಸ್ಯ ಮುಖೇ ವಿಷ್ಣು ಕಾಂತೆರುಧ್ರ ಸಮಶ್ರಿತಃ

ಮುಲಾ ತತ್ರಾ ಸ್ತಿತೋ ಬ್ರಹ್ಮ ಮಧ್ಯೇ ಮಾತೃ ಗುಣ ಸಮಶ್ರಿತಃ

ಕುಕ್ಷೌತು ಸಾಗರ ಸರ್ವೇ ಸಪ್ತ ದ್ವೀಪ ವಸುಂದರಹ

ಋಗ್ವೇದೋತ ಯಜುರ್ವೇದ ಸಾಮವೇದೋಭಿ ಅಥರ್ವಣಃ

ಅಗ್ನಿಶ್ಚಃ ಸಾಹಿತಾಸ್ ಸರ್ವೇ ಕಾಲಾಶಂಭು ಸಮಶ್ರಿತಃ

ಗಂಗೇಶ್ಚ ಯಮುನಾ ಚೈವ ಗೋಧಾವರಿ ಸರಸ್ವತಿ

ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಂ ಕುರು"

ಸ್ವಯಂ ಶುದ್ಧತೆಗೆ ದುರ್ಗಾ ಪೂಜೆ

ಸ್ವಯಂ ಶುದ್ಧತೆಗೆ ದುರ್ಗಾ ಪೂಜೆ

ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಲು ಈ ಮುಂದಿನ ಮಂತ್ರವನ್ನು ಪಠಿಸಬೇಕು. ಮಂತ್ರವನ್ನು ಪಠಿಸುವ ಮುನ್ನ ಪವಿತ್ರವಾದ ನೀರನ್ನು ನಿಮ್ಮ ದೇಹದ ಮೇಲೆ ಸಿಂಪಡಿಸಿಕೊಳ್ಳಬೇಕು.

" ಓಂ ಅಪವಿತ್ರಃ ಪವಿತ್ರೋ ವಾ ಸರ್ವವಸ್ತುಂ ಗತೌಪಿ ವ,

ಯಃ ಸ್ಮøತ್ ಪುಂಡರಿಕ ಅಕ್ಷಂ ಸ ವಹಿ ಅಭ್ಯಂತರ ಸುಚಿಹಿಃ"

ದೇವರ ಮನೆಯ ಶುದ್ಧಿಗಾಗಿ ಮಂತ್ರ

ದೇವರ ಮನೆಯ ಶುದ್ಧಿಗಾಗಿ ಮಂತ್ರ

ಪುರ ದ್ವಾರೆ ದ್ವಾರಸ್ರಿಯೈ ನಮಃ ಮಾತ್ರೆ ನಮಃ(ಪೂರ್ವ ದಿಕ್ಕಿಗೆ ಸ್ವಲ್ಪ ನೀರನ್ನು ಸಿಂಪಡಿಸಿ)

ದಕ್ಷಿಣ ದ್ವಾರೆ ದ್ವಾರಸ್ರಿಯೈ ನಮಃ ಮಾತ್ರೆ ನಮಃ (ದಕ್ಷಿಣ ದಿಕ್ಕಿಗೆ ಸ್ವಲ್ಪ ನೀರನ್ನು ಸಿಂಪಡಿಸಿ)

ಪಶ್ಚಿಮ ದ್ವಾರೆ ದ್ವಾರಸ್ರಿಯೈ ನಮಃ ಮಾತ್ರೆ ನಮಃ (ಪಶ್ಚಿಮ ದಿಕ್ಕಿಗೆ ಸ್ವಲ್ಪ ನೀರನ್ನು ಸಿಂಪಡಿಸಿ)

ಉತ್ತರ ದ್ವಾರೆ ದ್ವಾರಸ್ರಿಯೈ ನಮಃ ಮಾತ್ರೆ ನಮಃ (ಉತ್ತರ ದಿಕ್ಕಿಗೆ ಸ್ವಲ್ಪ ನೀರನ್ನು ಸಿಂಪಡಿಸಿ)

Most Read: ಶನಿ ಮಂತ್ರ: 108 ಸಲ ಈ ಮಂತ್ರ ಜಪಿಸಿದರೆ, ಕಷ್ಟ-ಕಾರ್ಪಣ್ಯ ದೂರವಾಗುತ್ತೆ

ದುರ್ಗಾ ದೇವಿಯನ್ನು ಆಹ್ವಾನಿಸುವ ಬಗೆ

ದುರ್ಗಾ ದೇವಿಯನ್ನು ಆಹ್ವಾನಿಸುವ ಬಗೆ

ಪೂಜೆಯನ್ನು ಒಪ್ಪಿಸಲು ಮೊದಲು ದೇವಿಯನ್ನು ಆಹ್ವಾನಿಸಬೇಕು. ಅಂತಹ ಸಂದರ್ಭದಲ್ಲಿ ದೇವಿಯನ್ನು ಆಹ್ವಾನಿಸುವ ಮಂತ್ರವನ್ನು ಪಠಿಸಬೇಕು.

"ಆಗಚ್ಚಾ ತ್ವಂ ಮಹಾದೇವಿ! ಸ್ಥಾನೇ ಚಾತ್ರ ಸ್ಥಿರ ಭಾವಃ

ಯವತ ಪೂಜಾಮ್ ಕ್ರಿಶ್ಯಾಮಿ ತ್ವತಾ ತ್ವಾಮ್ ಸಿಂಧೂ ಭವಃ"

"ಶ್ರೀ ಜಗದಾಂಬೆ ದುರ್ಗಾ ದೇವೈ ನಮಃ

ದುರ್ಗಾದೇವಿಮ್ ಆವಾಯಾಮಿ

ಆವಾಹನರ್ಥಯೇ ಪುಷ್ಪಾಂನಜಲಿ ಸಮರ್ಪಯಾಮಿ"

ದುರ್ಗಾ ದೇವಿಯ ಶ್ಲೋಕ ಮತ್ತು ಸ್ತೋತ್ರವನ್ನು ಪಠಿಸಿ:

"ಸರ್ವ ಮಂಗಳ ಮಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ

ಶರಣ್ಯ ತ್ರಯಂಬಕೆ ದೇವಿ ಗೌರಿ ನಾರಾಯಣಿ ನಮೋಸ್ತುತೆ."

ದುರ್ಗಾ ದೇವಿಗೆ ಅಭಿಷೇಕದ ಮಂತ್ರ

ದುರ್ಗಾ ದೇವಿಗೆ ಅಭಿಷೇಕದ ಮಂತ್ರ

"ಶ್ರೀ ದುರ್ಗಾ ದೇವೈ ನಮಃ; ಆಸನಮ್ ಸಮರ್ಪಯಾಮಿ (ದುರ್ಗಾ ದೇವಿಯನ್ನು ಕೂರಿಸುವ ಸ್ಥಾನದಲ್ಲಿ ಒಂದು ಹೂವನ್ನು ಇಡಿ)

ಶ್ರೀ ದುರ್ಗಾ ದೇವೈ ನಮಃ; ಪಾದ್ಯಮ್ ಸಮರ್ಪಯಾಮಿ (ದೇವಿಯ ಪಾದಕ್ಕೆ ಸ್ವಲ್ಪ ನೀರನ್ನು ಹಾಕಿ)

ಶ್ರೀ ದುರ್ಗಾ ದೇವೈ ನಮಃ; ಅಘ್ರ್ಯಮ್ ಸಮರ್ಪಯಾಮಿ (ದೇವಿಯ ಕೈಮೇಲೆ ಸ್ವಲ್ಪ ನೀರನ್ನು ಹಾಕಿ)

ಶ್ರೀ ದುರ್ಗಾ ದೇವೈ ನಮಃ; ಆಚಮ್ಯ ಸಮರ್ಪಯಾಮಿ (ಸ್ವಲ್ಪ ನೀರಿನಿಂದ ದೇವಿಯ ಮೂರ್ತಿಗೆ ಸ್ನಾನವನ್ನು ಮಾಡಿಸಿ)

ಶ್ರೀ ದುರ್ಗಾ ದೇವೈ ನಮಃ; ದಹಿ ಸ್ನಾನಮ್ ಸಮರ್ಪಯಾಮಿ ( ಸ್ವಲ್ಪ ಮೊರಿನ ಅಭಿಷೇಕ ಮಾಡುವುದರ ಮೂಲಕ ಮೊಸರಿನ ಸ್ನಾನ ಮಾಡಿಸಿ)

ಶ್ರೀ ದುರ್ಗಾ ದೇವೈ ನಮಃ; ಗ್ರಿತ್ ಸ್ನಾನಮ್ ಸಮರ್ಪಯಾಮಿ ( ತುಪ್ಪದ ಅಭಿಷೇಕ ಮಾಡುವುದರ ಮೂಲಕ ಸ್ನಾನ ಮಾಡಿಸಿ)

ದುರ್ಗಾ ದೇವಿಗೆ ಅಭಿಷೇಕದ ಮಂತ್ರದ ಮುಂದಿನ ಭಾಗ

ದುರ್ಗಾ ದೇವಿಗೆ ಅಭಿಷೇಕದ ಮಂತ್ರದ ಮುಂದಿನ ಭಾಗ

ಶ್ರೀ ದುರ್ಗಾ ದೇವೈ ನಮಃ; ಮಧು ಸ್ನಾನಮ್ ಸಮರ್ಪಯಾಮಿ (ಜೇನು ತುಪ್ಪದ ಅಭಿಷೇಕ ಮಾಡಿ)

ಶ್ರೀ ದುರ್ಗಾ ದೇವೈ ನಮಃ; ಪಂಚಾಮೃತ ಸ್ನಾನಮ್ ಸಮರ್ಪಪಾಮಿ ( ಅಂಚಾಮೃತ ಅಭಿಷೇಕ ಮಾಡಿ)

ಶ್ರೀ ದುರ್ಗಾ ದೇವೈ ನಮಃ; ಗಂಧೋದಕ ಸ್ನಾನಮ್ ಸಮರ್ಪಯಾಮಿ (ಶ್ರೀ ಗಂಧದ ಅಭಿಷೇಕ/ ಶ್ರೀಗಂಧದ ನೀರಿನ ಅಭಿಷೇಕ ಮಾಡಿ)

ಶ್ರೀ ದುರ್ಗಾ ದೇವೈ ನಮಃ; ಶುದ್ಧೋದಕ ಸ್ನಾನಮ್ ಸಮರ್ಪಯಾಮಿ (ದೇವಿಯನ್ನು ಸ್ವಚ್ಛಗೊಳಿಸಲು ಶುದ್ಧ ನೀರಿನ ಅಭಿಷೇಕ ಮಾಡಿ)

ದೇವಿಗೆ ಅರ್ಪಿಸುವುದರ ಮಂತ್ರ

ದೇವಿಗೆ ಅರ್ಪಿಸುವುದರ ಮಂತ್ರ

ಶ್ರೀ ದುರ್ಗಾ ದೇವೈ ನಮಃ; ಗಂಧಮ್ ಸಮರ್ಪಯಾಮಿ( ಗಂಧವನ್ನು ದೇವಿಗೆ ಹಚ್ಚಿ)

ಶ್ರೀ ದುರ್ಗಾ ದೇವೈ ನಮಃ; ಹರಿದ್ರಾ ಚೂರ್ಣಮ್ ಸಮರ್ಪಯಾಮಿ (ಅರಿಶಿನವನ್ನು ಹಚ್ಚಿ)

ಶ್ರೀ ದುರ್ಗಾ ದೇವೈ ನಮಃ; ಸಿಂಧೂರಮ್ ಸಮರ್ಪಯಾಮಿ (ದೇವಿಗೆ ಸಿಂಧೂರವನ್ನು ಹಚ್ಚಿ)

ಶ್ರೀ ದುರ್ಗಾ ದೇವೈ ನಮಃ; ವಸ್ತ್ರಮ್ ಸಮರ್ಪಯಾಮಿ (ದೇವಿಗೆ ಉಡುಗೆಯನ್ನು ತೊಡಿಸಿ)

ಶ್ರೀ ದುರ್ಗಾ ದೇವೈ ನಮಃ; ಆಭರಣಮ್ ಸಮರ್ಪಯಾಮಿ (ಆಭರಣದಿಂದ ಅಲಂಕಾರ ಗೊಳಿಸಿ)

ಶ್ರೀ ದುರ್ಗಾ ದೇವೈ ನಮಃ; ಪುಷ್ಪಮಾಲಿಕಾಮ್ ಸಮರ್ಪಯಾಮಿ (ಹೂವನ್ನು ದೇವಿಗೆ ಅರ್ಪಿಸುವುದರ ಮೂಲಕ ಅಲಂಕಾರ ಮಾಡಿ)

ದೇವಿಗೆ ಅರ್ಪಿಸುವುದರ ಮುಂದಿನ ಮಂತ್ರ

ದೇವಿಗೆ ಅರ್ಪಿಸುವುದರ ಮುಂದಿನ ಮಂತ್ರ

ಶ್ರೀ ದುರ್ಗಾ ದೇವೈ ನಮಃ; ಪುಷ್ಪಣಿಮ್ ಪೂಜಾಯಾಮಿ (ದುರ್ಗಾ ದೇವಿಯ ಮಂತ್ರ ಹೇಳುತ್ತಾ ಹೂವನ್ನು ಅರ್ಪಿಸಬೇಕು)

ಶ್ರೀ ದುರ್ಗಾ ದೇವೈ ನಮಃ; ನೈವೇದ್ಯಮ್ ಸಮರ್ಪಯಾಮಿ (ವಿಶೇಷವಾಗಿ ತಯಾರಿಸಿರುವ ಭಕ್ಷ್ಯ, ಹಣ್ಣು ಹಾಗೂ ಇನ್ನಿತರ ವಸ್ತುಗಳನ್ನು ದೇವರಿಗೆ ನೈವೇದ್ಯ ಮಾಡಿ)

ಶ್ರೀ ದುರ್ಗಾ ದೇವೈ ನಮಃ; ತಾಂಬೂಲಮ್ ಸಮರ್ಪಯಾಮಿ (ವೀಳ್ಯದೆಲೆ ಮತ್ತು ಅಡಿಕೆಯನ್ನು ಇಟ್ಟು ದೇವಿಗೆ ನೀಡಿ)

ಶ್ರೀ ದುರ್ಗಾ ದೇವೈ ನಮಃ; ಧೂಪಮ್ ಅಘ್ರ್ಯಾಮಿ ( ದೂಪ ದ್ರವ್ಯಗಳ ಹೊಗೆಯನ್ನು ನೀಡಿ)

ಶ್ರೀ ದುರ್ಗಾ ದೇವೈ ನಮಃ; ಕರ್ಪೂರ ನಿರಂಜನಮ್ ಧರಿಶ್ಯಾಮಿ (ಕರ್ಪೂರದ ಆರತಿ ಮಾಡಿ)

Most Read: ಪ್ರತಿ ಬುಧವಾರ ಶ್ರೀ ಕೃಷ್ಣನ ಮಂತ್ರ ಪಠಿಸಿ, ಎಲ್ಲವೂ ಒಳ್ಳೆಯದಾಗುವುದು!

ನಮಸ್ಕಾರ ಮಾಡಿ

ನಮಸ್ಕಾರ ಮಾಡಿ

ಶ್ರೀ ದುರ್ಗಾ ದೇವೈ ನಮಃ; ಪ್ರದಕ್ಷಿಣಂ ಸಮರ್ಪಯಾಮಿ (ದೇವಿಯ ಪೀಠದ ಸುತ್ತಲು ಸುತ್ತು ಹಾಕುವುದರ ಮೂಲಕ ನಮಸ್ಕರಿಸಿ.)

ಯಾ ದೇವಿ ಸರ್ವ ಭೂತೇಸು ಮಾತೃ ರೂಪೇನ ಸನ್‍ಸ್ತಿತ

ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಶ್ರೀ ಜಗದಾಂಬೆ ದುರ್ಗಾದೇವಿ ನಮಃ ನಮಸ್ಕರಾಮ್ ಸಮರ್ಪಯಾಮಿ.

ಪೂಜೆಯ ಸಂದರ್ಭದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪುಗಳಿದ್ದರೆ ಕ್ಷಮಿಸು ಎಂದು ಕೇಳಿಕೊಳ್ಳಿ

ಪೂಜೆಯ ಸಂದರ್ಭದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪುಗಳಿದ್ದರೆ ಕ್ಷಮಿಸು ಎಂದು ಕೇಳಿಕೊಳ್ಳಿ

"ಆಹ್ವಾನಮ್ ನಾ ಜಾನಮಿ ನಾ ಜಾನಮಿ ನಾ ತವ ಅರ್ಚನಮ್

ಪೂಜಾಮ್ ಚ ನಾ ಜಾನಮಿ ಕ್ಷಮತ್ತಮ್ ಪರಮೇಶ್ವರಿ

ಮತ್ರಾಹಿನಮ್ ಕ್ರಿಯಾಹಿನಮ್ ಭಕ್ತಿಹಿನಮ್ ಸುರೇಶ್ವರಿ

ಯತ್ಪೂಜಿತಮ್ ಮಾಯಾ ದೇವಿ ಪರಿಪೂರ್ಣಮ್ ತದಾಸ್ತು ಮಿ."

ಅರ್ಥ: ಪೂಜೆಯ ಅಂತ್ಯದಲ್ಲಿ ನಮಸ್ಕಾರ ಮಾಡಿ. ದುರ್ಗಾ ದೇವಿಯ ಪಾದಕ್ಕೆ ಹೂವನ್ನು ಹಾಕಿ ನಮಸ್ಕರಿಸಿ. ನಂತರ ದೇವಿಯ ಪೂಜೆಗೆ ಮಾಡಿದ್ದ ಪ್ರಸಾದವನ್ನು ಸ್ವೀಕರಿಸಿ. ಜೊತೆಗೆ ಇತರರಿಗೂ ನೀಡಿ.

English summary

worship goddess Durga in this way to fulfill your wish

Ma Durga is the most compassionate form of Maha Shakti or the feminine energy. Ma Durga manifested in order to annihilate the demons and protect the virtuous. Durga puja is a very famous worship performed by the Hindus since long in history in the households and temples. Ma Durga is described as “Durga Durgati Nashini” meaning Durga is the one who annihilates misfortunes. Durga puja helps remove the obstacles to progress, destroys fears and enemies and promotes success and prosperity. Here is a step by step procedure to perform Durga puja at home.
X
Desktop Bottom Promotion