For Quick Alerts
ALLOW NOTIFICATIONS  
For Daily Alerts

ಯುಧಿಷ್ಠಿರನು ತನ್ನ ನಾಯಿಗಾಗಿ ಸ್ವರ್ಗವನ್ನು ಏಕೆ ನಿರಾಕರಿಸಿದನು?

|

ಮಹಾಭಾರತವು ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಲಕ್ಷಕ್ಕೂ ಹೆಚ್ಚು ಶ್ಲೋಕವನ್ನು ಹೊಂದಿರುವ ಈ ಕಾವ್ಯದಲ್ಲಿ ಅನೇಕ ಕಥೆಗಳು ಹಾಗೂ ಉಪ ಕಥೆಗಳಿರುವುದನ್ನು ಕಾಣಬಹುದು. ತನ್ನ ಜೀವನದಲ್ಲಿ ಧರ್ಮ ಹಾಗೂ ಅಧರ್ಮದ ಸಂಗತಿಯನ್ನು ಹೇಗೆ ವಿಂಗಡಿಸಬೇಕು? ಬದುಕಿನ ಪಥವನ್ನು ಹೇಗೆ ರೂಪಿಸಿಕೊಳ್ಳಬೇಕು? ಯಾವ ರೀತಿಯ ಭಾವನೆಗಳು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವುದು ಎನ್ನುವುದನ್ನು ಈ ಮಹಾ ಕಾವ್ಯ ತಿಳಿಸಿಕೊಡುತ್ತದೆ.

ಮಹಾಭಾರತದಲ್ಲಿ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ ಹಾಗೂ ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶದ ಸದಸ್ಯರ ನಡುವೆ ಹೋರಾಟವನ್ನು ಮಾಡಿರುವುದನ್ನು ಒಳಗೊಂಡಿದೆ. ಅವರ ನಡುವೆ ನಡೆದ ಹೋರಾಟಕ್ಕೆ ಕುರುಕ್ಷೇತ್ರ ಎಂದು ಕರೆಯಲಾಗುತ್ತದೆ. ಹದಿನೆಂಟು ದಿನಗಳ ಕಾಲ ನಡೆಯುವ ಕುರುಕ್ಷೇತ್ರ ಯುದ್ಧವು ಧರ್ಮ ಹಾಗೂ ಅಧರ್ಮದ ನಡುವೆ ನಡೆಯುವ ಹೋರಾಟದ ಸಮಯ ಎಂದು ಸಹ ಹೇಳಲಾಗುತ್ತದೆ. ಯುದ್ಧದ ಕೊನೆಯಲ್ಲಿ ಧರ್ಮಕ್ಕೆ ಜಯ ಸಿಗುವುದು. ಪಾಂಡವರು ಹಾಗೂ ಕೌರವರು ಎನ್ನುವ ದಾಯಾದಿಗಳ ನಡುವೆ ನಡೆಯುವ ಯುದ್ಧದಲ್ಲಿ ಯಾರು ಅಧರ್ಮಕ್ಕೆ ಸಹಾಯ ಮಾಡುವರೋ ಅವರ ನಾಶವಾಗುವುದನ್ನು ತೋರಿಸಿಕೊಟ್ಟಿದ್ದಾರೆ.

Yudhisthira

ಶ್ರೀ ಕೃಷ್ಣನ ಸಾರಥ್ಯದಲ್ಲಿ ನಡೆಯುವ ಪಾಂಡವ ಪುತ್ರರು ಸದಾ ಧರ್ಮದ ಮಾರ್ಗದಲ್ಲಿ ನಡೆಯುತ್ತಿದ್ದರು. ಅವರು ಮಾಡಿದ ಪುಣ್ಯ ಹಾಗೂ ಧರ್ಮದ ನಡೆಯು ಅವರ ಜೀವನದಲ್ಲಿ ಬಂದ ಕಷ್ಟಗಳನ್ನು ಎದುರಿಸಲು ಹಾಗೂ ಜಯವನ್ನು ಪಡೆಯಲು ಅನುವುಮಾಡಿತು. ನಂತರ ಅವರ ಜೀವನದ ಅಂತ್ಯದಲ್ಲಿ ಅಥವಾ ಸಾವಿನ ನಂತರ ಸ್ವರ್ಗಕ್ಕೆ ಹೋದರು ಎನ್ನಲಾಗುವುದು. ತಮ್ಮ ಸಾವಿನ ನಂತರ ಸ್ವರ್ಗಕ್ಕೆ ಹೋಗುವಾಗ ಯದ್ಧಿಷ್ಠಿರ ಹಾಗೂ ಅವನು ಸಾಕಿದ ನಾಯಿಯ ನಡುವೆ ಒಂದು ಸಣ್ಣ ಕಥೆಯು ನಡೆಯಿತು. ಆ ಕಥೆಯು ನಾವು ನಮ್ಮ ಸತ್ಯ ಹಾಗೂ ಧರ್ಮದ ಬಗ್ಗೆ ಯಾವ ರೀತಿಯ ಮನೋಭಾವ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ.

ಯುಧಿಷ್ಠಿರನು ಸ್ವರ್ಗವನ್ನು ನಿರಾಕರಿಸಲು ಇಲ್ಲಿದೆ ಕಾರಣ

ಯುಧಿಷ್ಠಿರನು ಸ್ವರ್ಗವನ್ನು ನಿರಾಕರಿಸಲು ಇಲ್ಲಿದೆ ಕಾರಣ

ಮಹಾಭಾರತ ಯುದ್ಧದದಲ್ಲಿ ಜಯ ಗಳಿಸಿದ ನಂತರ ತಮ್ಮ ರಾಜ್ಯವನ್ನು ತ್ಯಜಿಸಿ ಸ್ವರ್ಗಕ್ಕೆ ಹೋಗಲು ನಿರ್ಧರಿಸಿದರು. ಹಾಗೆಯೇ ಪರ್ವತಗಳನ್ನು ಏರುತ್ತಾ ಮುಂದೆ ಸಾಗಿದರು. ಆಗ ಹಿರಿಯ ಅಣ್ಣನಾದ ಯುಧಿಷ್ಠಿರನು ಸ್ವರ್ಗಕ್ಕೆ ದಾರಿಯನ್ನು ಮಾಡುತ್ತಾ ಹೋದನು. ಅವನ ಹಿಂದೆಯೇ ಭೀಮಾ, ಅರ್ಜುನ, ನಕುಲ, ಸಹದೇವ ಮತ್ತು ದ್ರೌಪದಿ ಅವರ ಹಿಂದೆಯೇ ನಡೆದರು. ಅವರ ಪ್ರಯಾಣದಲ್ಲಿ ನಾಯಿಯೂ ಸಹ ಹಿಂಬಾಲಿಸಿತು.

ದ್ರೌಪದಿಯು ಏಕೆ ಮೊದಲು ಸತ್ತಳು?

ದ್ರೌಪದಿಯು ಏಕೆ ಮೊದಲು ಸತ್ತಳು?

ದಾರಿಯಲ್ಲಿ ಮುಂದೆ ಸಾಗುತ್ತಿದ್ದಂತೆ ದ್ರೌಪದಿಯು ಮೊದಲು ಬಿದ್ದಳು. ಆಗ ಭೀಮ ಕೇಳಿದನು... ದ್ರೌಪದಿಯು ಏಕೆ ಮೊದಲು ಸತ್ತಳು? ಅವಳು ಸಹ ಸದ್ಗುಣಿ ಮತ್ತು ಒಳ್ಳೆಯ ಹೃದಯವನ್ನು ಹೊಂದಿಲ್ಲವೇ? ಎಂದು. ಆಗ ಯಧಿಷ್ಠಿರ ಹೇಳಿದನು. ಅವಳ ತಪ್ಪು ಎಂದರೆ ಅರ್ಜುನನೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿರುವುದು. ಅದೇ ಅವಳಿಗೆ ವಿಫಲವಾದ ಸಂಗತಿಯಾಯಿತು ಎಂದು ವಿವರಿಸಿದನು.

ಸಹದೇವನ ಬೌದ್ಧಿಕ ದುರಹಂಕಾರವು ಅವನನ್ನು ಸೋಲಿಸಿತು

ಸಹದೇವನ ಬೌದ್ಧಿಕ ದುರಹಂಕಾರವು ಅವನನ್ನು ಸೋಲಿಸಿತು

ಸ್ವಲ್ಪ ಮುಂದೆ ಸಾಗಿದಂತೆ ಸಹದೇವನು ಕುಸಿದು ಬಿದ್ದನು. ಅವನ ಸಾವನ್ನು ಕಂಡು ಭೀಮ ಬಹಳ ದುಃಖಿತನಾದನು. ಅಳುತ್ತಲೇ ಯುಧಿಷ್ಠಿರನನ್ನು ಕೇಳಿದನು ಸಹದೇವನ ಸಾವಿಗೆ ಯಾವ ಕಾರಣವಿತ್ತು ಎಂದು... ಅವನಿಗೆ ತನ್ನ ಬೌದ್ಧಿಕ ಬುದ್ಧಿವಂತಿಕೆ ಇದೆ ಎನ್ನುವುದೇ ಅವನ ವೈಫಲ್ಯತೆಗೆ ಕಾರಣವಾಯಿತು ಎಂದು ಯುಧಿಷ್ಠಿರ ಹೇಳಿದನು.

ನಕುಲನ ಆಳವಾದ ದೃಷ್ಟಿಯೇ ಅವನ ವಿಫಲತೆಗೆ ಕಾರಣವಾಯಿತು

ನಕುಲನ ಆಳವಾದ ದೃಷ್ಟಿಯೇ ಅವನ ವಿಫಲತೆಗೆ ಕಾರಣವಾಯಿತು

ಸ್ವರ್ಗದ ದಾರಿಯಲ್ಲಿ ಮುಂದೆ ಸಾಗಿದಂತೆ ನಕುಲನು ಕುಸಿದನು. ತನ್ನವರನ್ನು ಕಳೆದುಕೊಳ್ಳುತ್ತಿರುವುದನ್ನು ನೋಡುತ್ತ ಭೀಮನಿಗೆ ದುಃಖವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ದುಃಖದಿಂದ ಕೂಗುತ್ತಾ ನಕುಲನ ವಿಫಲತೆ ಏನೆಂದು ಅವನ ಸಾವು ಸಂಭವಿಸಿತು? ಎಂದು ಕೇಳಿದನು. ಅವನ ಉತ್ತಮ ದೃಷ್ಟಿಗೆ ಅವನೇ ಮೆಚ್ಚಿಕೊಂಡಿರುವುದು ಅಥವಾ ಒಲಿದುಕೊಂಡಿರುವುದು ಅವನ ವಿಫಲತೆಯಾಯಿತು ಎಂದು ಯುಧಿಷ್ಠಿರ ಹೇಳಿದನು.

ಅರ್ಜುನನ ಅತಿಯಾದ ಆತ್ಮವಿಶ್ವಾಸವು ಅವನಿಗೆ ವಿಫಲತೆಯನ್ನು ತಂದಿತು

ಅರ್ಜುನನ ಅತಿಯಾದ ಆತ್ಮವಿಶ್ವಾಸವು ಅವನಿಗೆ ವಿಫಲತೆಯನ್ನು ತಂದಿತು

ಸ್ವಲ್ಪ ಸಮಯದಲ್ಲಿಯೇ ಅರ್ಜುನನು ಕುಸಿದು ಬಿದ್ದನು. ಆಗ ಅತೀವ ದುಃಖದಿಂದ ಅರ್ಜುನನ ಸಾವಿಗೆ ಯಾವ ವಿಫಲತೆ ಕಾರಣವಾಯಿತು ಎಂದು ಕೇಳುತ್ತಾ ಭೀಮನು ದುಃಖದಿಂದ ಜೋರಾಗಿ ಕೂಗಾಡಿದನು. ಅವನಲ್ಲಿ ಉತ್ತಮ ಆತ್ಮವಿಶ್ವಾಸವು ಇತ್ತು. ಅದು ಅವನಿಗೆ ಜಯ ಹಾಗೂ ಸನ್ಮಾರ್ಗಗಳಿಗೆ ನಡೆಯಲು ಅನುವು ಮಾಡಿಕೊಟ್ಟಿತು. ಆತ್ಮವಿಶ್ವಾಸ ಇದೆ ಎನ್ನುವ ಅವನ ಅತಿಯಾದ ಭಾವನೆಯೇ ಅವನ ವಿಫಲತೆಗೆ ಕಾರಣವಾಯಿತು ಎಂದು ಯುಧಿಷ್ಠಿರನು ಹೇಳುತ್ತಾ ಮುಂದೆ ಸಾಗಿದನು.

ಭೀಮನು ದುಃಖದಿಂದ ಕುಸಿದು ಬಿದ್ದನು

ಭೀಮನು ದುಃಖದಿಂದ ಕುಸಿದು ಬಿದ್ದನು

ತನ್ನ ಸಹೋದರ ಹಾಗೂ ಪತ್ನಿಯನ್ನು ಕಳೆದುಕೊಂಡ ದುಃಖವನ್ನು ಭೀಮನಿಗೆ ಸಹಿಸಲು ಸಾಧ್ಯವಾಗದೆ ಹೋಯಿತು. ದುಃಖದಿಂದಲೇ ಭೀಮನು ಸಹ ಕುಸಿದು ಬಿದ್ದನು. ಭೀಮನ ಸಾವನ್ನು ಕಂಡ ಯಧಿಷ್ಠಿರನು ಬೇಸರದಿಂದ, ಭೀಮನು ತನ್ನ ಶಕ್ತಿಯ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಿದ್ದನು. ಅವನ ಅತಿಯಾದ ನಂಬಿಕೆ ಹಾಗೂ ಅವನ ಶಕ್ತಿಯ ಬಗ್ಗೆ ಇರುವ ನಂಬಿಕೆಯೇ ಅವನ ವಿಫಲತೆಗೆ ಕಾರಣವಾಯಿತು ಎಂದುಕೊಂಡು ಮುಂದೆ ಸಾಗಿದನು.

ಸ್ವರ್ಗದ ದಾರಿಯಲ್ಲಿ ಅಂತಿಮವಾಗಿ ಉಳಿದವರು

ಸ್ವರ್ಗದ ದಾರಿಯಲ್ಲಿ ಅಂತಿಮವಾಗಿ ಉಳಿದವರು

ಸ್ವರ್ಗಕ್ಕೆ ಹೋಗುವ ದಾರಿಯಲ್ಲಿ ಅಂತಿಮವಾಗಿ ಯುಧಿಷ್ಠಿರ ಮತ್ತು ನಾಯಿಯು ಉಳಿದುಕೊಂಡರು. ಇವರಿಬ್ಬರೂ ಪ್ರಯಾಣವನ್ನು ಮುಂದುವರಿಸಿದರು. ಪರ್ವತದ ತುದಿಯಲ್ಲಿ ಇಂದ್ರನು ತನ್ನ ರಥದಿಂದ ಇಳಿದು ಯುಧಿಷ್ಠಿರನ ಅಸಾಧಾರಣ ಗುಣವನ್ನು ಹೊಗಳಿದನು. ಅವನನ್ನು ಆಕಾಶದ ರಥದತ್ತ ಹೆಜ್ಜೆ ಹಾಕಿ ಸ್ವರ್ಗಕ್ಕೆ ಏರಲು ಆಹ್ವಾನಿಸಿದನು.

ಯುಧಿಷ್ಠಿರನ ಒಂದು ಷರತ್ತು

ಯುಧಿಷ್ಠಿರನ ಒಂದು ಷರತ್ತು

ಯುಧಿಷ್ಠಿರನು ಸ್ವರ್ಗಕ್ಕೆ ಹೋಗುವಾಗ ನಾಯಿಯು ಅವನ ಜೊತೆಯಲ್ಲಿ ನಡೆಯಿತು, ಆಗ ಇಂದ್ರನು ಅದನ್ನು ಪ್ರಶ್ನಿಸಿದನು. ಇಂದ್ರನ ಮುಂದೆ ಒಂದು ಷರತ್ತನ್ನು ಮುಂದಿಟ್ಟನು. ನಾಯಿಯು ನನ್ನೊಂದಿಗೆ ಬರಬೇಕು ಎಂದು ಹೇಳಿದನು.

ಸ್ವರ್ಗದಲ್ಲಿ ಪ್ರಾಣಿಗಳಿಗೆ ಪ್ರವೇಶವಿಲ್ಲ

ಸ್ವರ್ಗದಲ್ಲಿ ಪ್ರಾಣಿಗಳಿಗೆ ಪ್ರವೇಶವಿಲ್ಲ

ಯುಧಿಷ್ಠಿರನ ಮನವಿಗೆ ಇಂದ್ರನು ಸಾಮಾನ್ಯವಾಗಿಯೇ ತಿರಸ್ಕರಿಸಿದನು. ಅದು ಸಾಧ್ಯವಿಲ್ಲ ಎಂದು ಹೇಳಿದನು. ಸ್ವರ್ಗವು ಎಲ್ಲರಿಗೂ ದೊರೆಯುವುದಿಲ್ಲ. ನಾಯಿಯು ತಳ್ಳಗೆ ಮತ್ತು ವಯಸ್ಸಾಗಿದೆ. ಅದಕ್ಕೆ ಯಾವುದೇ ಮೌಲ್ಯ ಇಲ್ಲ ಎಂದು ಹೇಳಿದನು.

ಅತಿಯಾದ ಪ್ರೀತಿಯು ಸ್ವರ್ಗವನ್ನು ಸಹ ಸೋಲಿಸುತ್ತದೆ

ಅತಿಯಾದ ಪ್ರೀತಿಯು ಸ್ವರ್ಗವನ್ನು ಸಹ ಸೋಲಿಸುತ್ತದೆ

ಆಗ ಯುಧಿಷ್ಠಿರನು ನಾನು ಸ್ವರ್ಗಕ್ಕೆ ಬರಲು ಇಚ್ಛಿಸುವುದಿಲ್ಲ. ಈ ನಾಯಿಯು ಭೂಮಿಯ ಮೇಲೆ ನನಗೆ ನಿಷ್ಠಾವಂತ ಒಡನಾಡಿಯಾಗಿತ್ತು. ನಾನು ಈಗ ಅದನ್ನು ಬಿಟ್ಟು ಬರಲು ಸಾಧ್ಯವಿಲ್ಲ, ಅದು ನನಗೆ ಸಾಕಷ್ಟು ಸಮಯದಲ್ಲಿ ಸಹಾಯ ಮಾಡಿದೆ, ಜೊತೆಗೆ ಬೇಷರತ್ತಾಗಿ ಪ್ರೀತಿಯನ್ನು ಸಹ ನೀಡಿದೆ ಎಂದು ಹೇಳಿದನು. ನನ್ನ ಒಡನಾಡಿಯ ಪ್ರೀತಿಯನ್ನು ಕಳೆದುಕೊಂಡರೆ ಸ್ವರ್ಗದ ಸಂತೋಷಕ್ಕೆ ಏನೂ ಅರ್ಥವಿಲ್ಲ ಎಂದು ಹೇಳಿದನು.

ಸ್ಥಿರವಾದ ದೃಷ್ಟಿ

ಸ್ಥಿರವಾದ ದೃಷ್ಟಿ

ತನ್ನ ಒಡ ಹುಟ್ಟಿದವರ ಸಾವಿನ ಹಿನ್ನೆಲೆಯಲ್ಲಿ ಯುಧಿಷ್ಠಿರನು ಅತ್ಯಂತ ನಿಶ್ಚಲವಾಗಿದ್ದ. ತನ್ನ ನಾಯಿಯನ್ನು ಕಳೆದುಕೊಳ್ಳುವ ಆಲೋಚನೆಯು ಅವನಿಗೆ ಅತ್ಯಂತ ಭಾವುಕತೆಗೆ ಒಳಗಾಗುವಂತೆ ಮಾಡಿತು. ನಾಯಿಯು ಪರಿತ್ಯಾಗ ಮಾಡಲು ಏನೂ ಮಾಡಿಲ್ಲ. ನನ್ನ ಹೆಂಡತಿ ಮತ್ತು ಸಹೋದರರು ಹೊಂದಿರುವಂತಹ ಯಾವುದೇ ದೌರ್ಬಲ್ಯವನ್ನು ಸಹ ಹೊಂದಿಲ್ಲ. ಇದಕ್ಕೆ ಸ್ವರ್ಗಕ್ಕೆ ಹೋಗಲು ಅರ್ಹತೆ ಇಲ್ಲವೆಂದಾದರೆ, ನಾನೂ ಹೋಗುವುದಿಲ್ಲ ಎಂದು ಹೇಳಿದನು. ಅಂತೆಯೇ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಹಿಂತಿರುಗಿ ನಡೆದನು.

ನೈತಿಕ ಪರೀಕ್ಷೆ

ನೈತಿಕ ಪರೀಕ್ಷೆ

ಇಂದ್ರನು ಯುಧಿಷ್ಠಿರನಿಗೆ ನಿಲ್ಲು ಎಂದು ತಡೆದನು. ನಿಮ್ಮಂತಹ ಗುಣಗಳು ಯಾರಿಗೂ ಇಲ್ಲ. ನೀವು ಜೀವನದ ನೈತಿಕ ಪರೀಕ್ಷೆಯನ್ನು ಗೆದ್ದಿದ್ದೀರಿ. ನಾಯಿಯು ಧರ್ಮ-ನೀತಿಯ ಪ್ರತಿನಿಧಿ. ಅದರಲ್ಲಿ ಇರುವ ಉತ್ತಮ ಗುಣಗಳು ನಿಮ್ಮನ್ನು ಪ್ರತಿನಿಧಿಸುತ್ತದೆ ಎಂದನು.

ಧರ್ಮದ ದೇವರಾಗಿ ರೂಪುಗೊಂಡ ನಾಯಿ

ಧರ್ಮದ ದೇವರಾಗಿ ರೂಪುಗೊಂಡ ನಾಯಿ

ವಾಸ್ತವವಾಗಿ ನಾಯಿ ಧರ್ಮದ ದೇವರಾಗಿ ರೂಪುಗೊಂಡಿತು. ಯುಧಿಷ್ಠಿರನಲ್ಲಿ ಒಂದೇ ರೀತಿಯ ಧರ್ಮ ನೀತಿಯ ಗುಣಗಳಿವೆ. ಎಲ್ಲಾ ಸಂದರ್ಭದಲ್ಲೂ ಯುಧಿಷ್ಠಿರನು ಸ್ವಾರ್ಥಕ್ಕೆ ಒಳಗಾಗದೇ ನಿಸ್ವಾರ್ಥ ಭಾವನೆಯನ್ನು ತೋರಿದನು. ಸದಾಚಾರದ ಪ್ರಜ್ಞೆಯು ನಿಮ್ಮನ್ನು ಸ್ವರ್ಗಕ್ಕೆ ಬರುವ ಅನುಮತಿಯನ್ನು ನೀಡುತ್ತದೆ ಎಂದು ಅವನನ್ನು ಅಶೀರ್ವದಿಸಿದನು. ಹೀಗೆ ಯುಧಿಷ್ಠಿರನು ಇಂದ್ರನ ರಥವನ್ನು ಹತ್ತಿ ಸ್ವರ್ಗವನ್ನು ಏರಿದನು.

English summary

Why Yudhisthira Refused Heaven for His Dog?

In life, one is often torn between two polar opposites - one road is the one much travelled upon, while the other is the one less travelled. Usually, the less trodden one is the hallmark of the individualist, who chooses it, not knowing what's around the bend. Sometimes, there's even no one to tell him what lies ahead. Here's a story from the Mahabharata that beautifully illustrates this fact...
X
Desktop Bottom Promotion