For Quick Alerts
ALLOW NOTIFICATIONS  
For Daily Alerts

ಶನಿಯ ಸಂಕಷ್ಟದಿಂದ ಪಾರಾಗಲು ಹನುಮಂತನನ್ನು ಪೂಜಿಸಿ

By Jaya Subramanya
|

ನವಗ್ರಹಗಳಲ್ಲಿ ಶನಿಗೆ ಹೆಚ್ಚಿನ ಶಕ್ತಿಯಿದೆ ಆದ್ದರಿಂದಲೇ ಮಾನವರು ಶನಿಯಿಂದಾಗಿ ಹೆಚ್ಚಿನ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಸಾಡೆ ಸಾತಿ ಅಥವಾ ಶನಿ ಮಹಾದಶಾದ ಸಂದರ್ಭದಲ್ಲಿ ಶನಿಯು ಮನುಷ್ಯರಿಗೆ ಸಂಕಷ್ಟಗಳನ್ನು ಒಡ್ಡುತ್ತಾರೆ. ಶನಿಯು ಯಾವಾಗಲೂ ಮಾನವರಿಗೆ ನೀಡುವ ಕಷ್ಟಗಳು ಕೆಟ್ಟದ್ದು ಎಂಬುದು ಸುಳ್ಳಾಗಿದೆ. ಅವರ ಜನ್ಮರಾಶಿಯಲ್ಲಿ ಶನಿಯು ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಆಧರಿಸಿ ಶನಿಯು ಉಪಟಳವು ಒಳ್ಳೆಯದೋ ಕೆಟ್ಟದ್ದೋ ಎಂಬುದನ್ನು ನಿರ್ಧರಿಸಲಾಗುತ್ತದೆ.

ಮನುಷ್ಯನ ಕೆಟ್ಟ ಸ್ಥಿತಿಯು ಅವರನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲೂ ಬಹುದು ಮತ್ತು ಎಲ್ಲರೂ ಕೊಂಡಾಡುವ ಸ್ಥಿತಿಗೂ ಆತ ಬರಲೂಬಹುದು. ಶನಿಯ ತೊಂದರೆಗಳನ್ನು ವರದಾನವಾಗಿ ಪರಿವರ್ತಿಸಿಕೊಳ್ಳಬೇಕು ಎಂದಾದಲ್ಲಿ ನೀವು ಮಾಡಬೇಕಾಗಿರುವುದು ಹನುಮನ ಪೂಜೆಯಾಗಿದೆ. ಸಂಕಟ ಮೋಚನವೆಂಬ ಹೆಸರನ್ನು ಹನುಮಂತ ಹೊಂದಿದ್ದು, ಯಾವುದೇ ಸಮಸ್ಯೆಗಳನ್ನು ವರದಾನವಾಗಿ ಪರಿವರ್ತಿಸುವ ಶಕ್ತಿ ಆಂಜನೇಯನಿಗಿದೆ. ಹನುಮಂತನ ಭಕ್ತರನ್ನು ಶನಿಯು ಸ್ಪರ್ಶಿಸುವುದಿಲ್ಲ ಎಂಬುದಕ್ಕೆ ಹಲವಾರು ಕಥೆಗಳಿವೆ.

ಶನಿ ಮತ್ತು ಹನುಮರಿಗೆ ಇರುವ ಒಂದು ಒಪ್ಪಂದ ಯಾರಿಗೂ ತಿಳಿದಿಲ್ಲ. ಶನಿಯು ಸೂರ್ಯ ಭಗವಾನರ ಪುತ್ರನಾಗಿದ್ದಾರೆ, ತಂದೆ ಮಗ ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡುವುದಿಲ್ಲ ಮತ್ತು ನಂತರ ಇದು ವಾಗ್ವಾದದಲ್ಲೇ ಸಮಾಪ್ತಿಗೊಳ್ಳುತ್ತದೆ. ಇನ್ನು ಹನುಮಂತನು ಸೂರ್ಯ ಭಗವಾನರ ಶಿಷ್ಯರಾಗಿದ್ದಾನೆ. ಒಮ್ಮೆ ಹನುಮಂತನು ಮಗುವಾಗಿದ್ದಾಗ ಸೂರ್ಯನನ್ನು ಹಣ್ಣು ಎಂದು ತಿನ್ನಲು ಹೋಗಿದ್ದಾರಂತೆ. ಭಯಗೊಂಡ ಸೂರ್ಯನು ಇಂದ್ರನ ಬಳಿಗೆ ಹೋಗುತ್ತಾರೆ. ಆಗ ಇಂದ್ರನು ತನ್ನ ವಜ್ರಾಯುಧದಿಂದ ಮಗುವಿನ ಮೇಲೆ ದಾಳಿ ಮಾಡುತ್ತಾರೆ. ಇಂದ್ರನು ಹೊಡೆದ ಪೆಟ್ಟು ಮಗುವಿನ ಮುಖಕ್ಕೆ ತಗಲುತ್ತದೆ. ಆದ್ದರಿಂದಲೇ ಕೋತಿಯ ಮುಖ ಪ್ರಾಪ್ತಗೊಂಡು ಹನುಮಂತ ಎಂಬುದಾಗಿ ಕರೆಯಲಾಗುತ್ತದೆ. ಹನುಮನ್ ಮಹಾನ್ ಶಕ್ತಶಾಲಿಯಾಗಿದ್ದರೂ ದಯಾಮಯಿಯಾಗಿದ್ದಾರೆ.

ಸೂರ್ಯನಿಗೆ ತನ್ನನ್ನು ಶಿಷ್ಯನಾಗಿ ಸ್ವೀಕರಿಸು ಎಂಬುದಾಗಿ ಹನುಮಂತನು ಬೇಡಿಕೊಳ್ಳುತ್ತಾರೆ. ಹೀಗೆ ಸೂರ್ಯನು ಹನುಮನನ್ನು ಶಿಷ್ಯನಾಗಿ ಸ್ವೀಕರಿಸುತ್ತಾರೆ. ಸೂರ್ಯನು ಪ್ರಯಾಣಿಸುತ್ತಲೇ ಇರಬೇಕಾಗಿರುವುದರಿಂದ ಅವರು ತುಂಬಾ ವ್ಯಸ್ಥರಾಗಿರುತ್ತಾರೆ ಎಂದು ತಿಳಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಸೂರ್ಯನೊಂದಿಗೆ ಹನುಮಂತನೂ ಕೂಡ ಪ್ರಯಾಣ ಮಾಡಲು ಆರಂಭಿಸುತ್ತಾರೆ. ಸೂರ್ಯನನ್ನು ಹಿಂಬಾಲಿಸಿಕೊಂಡೇ ಹನುಮಂತನು ಪ್ರತಿಯೊಂದನ್ನೂ ಅರಿತುಕೊಳ್ಳುತ್ತಾರೆ. ಸಂಪೂರ್ಣವಾಗಿ ವಿಭಿನ್ನವಾದ ಪಾತ್ರ ಮತ್ತು ತುಲನಾತ್ಮಕವಾಗಿ ಒರಟಾದ ಬಾಂಧವ್ಯದ ನಡುವೆಯೂ ಶನಿಯು ಹನುಮಂತರಿಗೆ ತನ್ನ ಹಾನಿಕಾರಕ ಪರಿಣಾಮಗಳಿಂದ ಭಕ್ತರನ್ನು ರಕ್ಷಿಸುವ ವರವನ್ನು ನೀಡುತ್ತಾರೆ. ಹನುಮಂತನು ಶನಿಯಿಂದ ಈ ವರವನ್ನು ಹೇಗೆ ಪಡೆದುಕೊಂಡರು ಎಂಬುದನ್ನು ಮುಂದೆ ತಿಳಿಯೋಣ....

ಶನಿಯ ಸಂಕಷ್ಟದಿಂದ ಪಾರಾಗಲು ಹನುಮನನ್ನು ಪೂಜಿಸಿ

ಶನಿಯ ಸಂಕಷ್ಟದಿಂದ ಪಾರಾಗಲು ಹನುಮನನ್ನು ಪೂಜಿಸಿ

ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಹನುಮಂತನು ಸೂರ್ಯನಲ್ಲಿ ಗುರುದಕ್ಷಿಣೆಯನ್ನು ಕೇಳಲು ಪ್ರಾರ್ಥಿಸಿಕೊಳ್ಳುತ್ತಾರೆ. ಸೂರ್ಯನು ಬೇಡವೆಂದು ಹೇಳಿದರೂ ಕೂಡ ಹನುಮನು ಒತ್ತಾಯಪಡಿಸುತ್ತಾರೆ. ಸೂರ್ಯನು ತನ್ನ ಮಗ ಶನಿಯ ಗರ್ವವನ್ನು ಭಂಗ ಮಾಡು ಎಂದು ಹನುಮನಿಗೆ ಹೇಳುತ್ತಾರೆ.

ಶನಿಯ ಸಂಕಷ್ಟದಿಂದ ಪಾರಾಗಲು ಹನುಮನನ್ನು ಪೂಜಿಸಿ

ಶನಿಯ ಸಂಕಷ್ಟದಿಂದ ಪಾರಾಗಲು ಹನುಮನನ್ನು ಪೂಜಿಸಿ

ಶನಿಲೋಕಕ್ಕೆ ಸೂರ್ಯನು ಪ್ರವೇಶಿಸುತ್ತಾರೆ. ಹನುಮನ ಮಾತುಗಳನ್ನು ಕೇಳಿ ಕ್ರೋಧಗೊಂಡ ಶನಿಯು ಹನಮನ ಭುಜಗಳ ಮೇಲೆ ನಿಲ್ಲುತ್ತಾರೆ. ಮತ್ತು ಅವರನ್ನು ಸ್ವಾಧೀನಪಡಿಸಲು ಪ್ರಾರಂಭಿಸುತ್ತಾರೆ. ಆದರೆ ಶನಿಯ ಯಾವುದೇ ಪ್ರಯತ್ನವೂ ಹನುಮನ ಮೇಲೆ ಯಶಸ್ವಿಯಾಗುವುದಿಲ್ಲ. ಭಗವಾನರು ತಮ್ಮ ಗಾತ್ರವನ್ನು ಹೆಚ್ಚಿಸಲು ಆರಂಭಿಸುತ್ತಾರೆ. ಅಂತೆಯೇ ಶನಿಯನ್ನೂ ಮೀರಿದ ಎತ್ತರದಲ್ಲಿ ಹನುಮಂತ ನಿಲ್ಲುತ್ತಾರೆ. ತನ್ನನ್ನು ಯಾರಿಗೂ ಸೋಲಿಸಲು ಸಾಧ್ಯವಿಲ್ಲ ಎಂಬ ಶನಿಯ ಅಹಂಕಾರವನ್ನು ಆಂಜನೇಯ ಮುರಿಯುತ್ತಾರೆ. ಹನುಮಂತನ ಕ್ಷಮೆಯನ್ನು ಕೇಳಿದ ಶನಿಯು ತನ್ನ ಸಂಕಷ್ಟಗಳಿಂದ ಭಕ್ತರನ್ನು ಪೊರೆಯುವ ವರವನ್ನು ನೀಡುತ್ತಾರೆ.

ಶನಿಯನ್ನು ಕಾಪಾಡಿದ ಹನುಮಂತ

ಶನಿಯನ್ನು ಕಾಪಾಡಿದ ಹನುಮಂತ

ರಾವಣನ ಮಗ ಮೇಘನಾದ ಜನಿಸಿದ ಸಂದರ್ಭದಲ್ಲಿ ತನ್ನ ಜನ್ಮರಾಶಿಯಲ್ಲಿ ಯಾವುದೇ ಗ್ರಹಗಳು ಇರಬಾರದು ಮತ್ತು ಅವುಗಳ ಪರಿಣಾಮ ತನ್ನ ಮೇಲೆ ಉಂಟಾಗಬಾರದು ಎಂದು ಬಯಸುತ್ತಾನೆ. ಇದಕ್ಕಾಗಿ ಆತ ಎಲ್ಲಾ ಗ್ರಹಗಳನ್ನು ಅಪಹರಿಸಿ ಕೈದಿಗಳನ್ನಾಗಿ ಮಾಡಿಕೊಳ್ಳುತ್ತಾನೆ. ಕಿಟಿಕಿಗಳೇ ಇಲ್ಲದ ಕೊಠಡಿಯಲ್ಲಿ ಶನಿಯನ್ನು ಕೂಡಿಹಾಕುತ್ತಾನೆ. ಬೇರೆಯವರ ಮುಖವನ್ನು ಶನಿಯು ನೋಡಬಾರದು ಎಂಬುದಾಗಿತ್ತು.

ಶನಿಯನ್ನು ಕಾಪಾಡಿದ ಹನುಮಂತ

ಶನಿಯನ್ನು ಕಾಪಾಡಿದ ಹನುಮಂತ

ಹಲವು ವರ್ಷಗಳ ಬಳಿಕ ಹನುಮಂತನು ಲಂಕೆಗೆ ಸೀತಾಮಾತೆಯನ್ನು ಕಾಣುವ ಸಲುವಾಗಿ ಪ್ರವೇಶಿಸುತ್ತಾರೆ. ಚಿನ್ನದ ನಗರವನ್ನು ಹನುಮಂತನು ಉರಿಸಿದಾಗ ಶನಿ ದೇವ ಮತ್ತು ಇತರ ಗ್ರಹಗಳು ತಪ್ಪಿಸಿಕೊಳ್ಳುತ್ತಾರೆ. ಶನಿ ದೇವರು ಹನುಮಂತನ ಈ ಕಾರ್ಯದಿಂದ ಪ್ರಸನ್ನಗೊಂಡರೂ ಈಗ ಹನುಮಂತನ ಮುಖವನ್ನು ಶನಿಯು ಕಾಣುವುದರಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹನುಂತನು ಎದುರಿಸಬಹುದು ಎಂದು ಹೇಳುತ್ತಾರೆ.

ಶನಿಯನ್ನು ಕಾಪಾಡಿದ ಹನುಮಂತ

ಶನಿಯನ್ನು ಕಾಪಾಡಿದ ಹನುಮಂತ

ಈ ಸಂಕಷ್ಟಗಳು ಯಾವುವು ಎಂದು ಶನಿಯಲ್ಲಿ ಕೇಳಿದಾಗ ಹನುಮನು ತನ್ನ ಪತ್ನಿ ಮತ್ತು ಪುತ್ರರಿಂದ ವಿಮುಖನಾಗುತ್ತಾನೆ ಎಂದು ಹೇಳುತ್ತಾರೆ. ಆದರೆ ಶನಿಯ ಈ ಸಂಕಷ್ಟ ಅವರ ಮೇಲೆ ಪ್ರಭಾವ ಬೀರುವುದಿಲ್ಲ. ಏಕೆಂದರೆ ಹನುಮಂತನು ಪತ್ನಿ ಪುತ್ರರನ್ನು ಹೊಂದಿರುವುದಿಲ್ಲ, ಅವರು ಬ್ರಹ್ಮಚಾರಿಯಾಗಿರುತ್ತಾರೆ. ಶನಿಯು ತಕ್ಷಣವೇ ಹನುಮನ ತಲೆ ಏರಿ ಕುಳಿತುಕೊಳ್ಳುತ್ತಾರೆ. ಆದರೆ ಹನುಮನು ತಮ್ಮ ತಲೆಯನ್ನು ಲಂಕಾದ ಕಂಬಗಳನ್ನು ಹೊಡೆದುರುಳಿಸಲು ಬಳಸುತ್ತಾರೆ. ಇದರಿಂದ ಸ್ವತಃ ಶನಿಯೇ ಗಾಯಗಳಿಗೆ ಒಳಗಾಗುತ್ತಾರೆ. ಹನುಮಂತನ ತಲೆಯಿಂದ ಕೆಳಗಿಳಿದ ಶನಿಯು ಅವರಿಗೆ ವರ ನೀಡಿ ಅನುಗ್ರಹಿಸುತ್ತಾರೆ.

ಶನಿಯನ್ನು ಕಾಪಾಡಿದ ಹನುಮಂತ

ಶನಿಯನ್ನು ಕಾಪಾಡಿದ ಹನುಮಂತ

ಈ ಎರಡೂ ಘಟನೆಗಳಲ್ಲಿ ಶನಿಯು ಸಾಕಷ್ಟು ಪೆಟ್ಟುಗಳನ್ನು ತಿನ್ನುತ್ತಾರೆ. ಆದ್ದರಿಂದಲೇ ಶನಿಯಿಂದ ತೊಂದರೆಗೊಳಗಾದವರು ಅವರಿಗೆ ಶನಿಗೆ ಎಳ್ಳೆಣ್ಣೆ ಮತ್ತು ಎಳ್ಳನ್ನು ನೀಡಬೇಕು ಎಂದಾಗಿದೆ. ಇದು ಶನಿಯ ನೋವನ್ನು ಪರಿಹರಿಸುತ್ತದೆ ಮತ್ತು ಇದರಿಂದ ಸಂಪ್ರೀತಗೊಂಡು ಭಗವಂತನು ಅವರ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದಾಗಿದೆ.

English summary

why worshipping Lord hanuman prevents the effects shani

Shani is a powerful planet among the Nava Grahas. There comes a time in almost every man's life where he has to face the effects of Shani. Sade Sati and Shani Maha Dasha are among the few times when the malefic effects of the planet Shani troubles a man. Lord Hanuman is called Sankat Mochan because he relieves his devotes from all kinds of 'sankat', which is translated to troubles or problems. There are many stories that explain why Shani does not trouble the devotees of Lord Hanuman.
X
Desktop Bottom Promotion