'ಗಣಪನಿಗೇಕೆ ಪ್ರಥಮ ಪೂಜೆ' ಇಲ್ಲಿದೆ ಅತಿಮುಖ್ಯ ರಹಸ್ಯ

By Manu
Subscribe to Boldsky

ಹಿಂದೂ ಧರ್ಮದಲ್ಲಿ ಗಣಪನಿಗೆ ವಿಶೇಷ ಸ್ಥಾನವಿದೆ. ಪ್ರಥಮ ಪೂಜೆಯ ಅಧಿದೇವತೆ ಎಂದೆನಿಸಿರುವ ವಿಘ್ನ ವಿನಾಶಕ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆಗೆ ಅರ್ಹನಾಗಿರುತ್ತಾರೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ತೊಂದರೆಗಳು ಉಂಟಾಗದಂತೆ ಕಾಪಾಡು ಎಂಬ ಕಾರಣಕ್ಕಾಗಿಯೇ ಗಣನಾಯಕನಿಗೆ ಮೊದಲು ಪೂಜೆಯನ್ನು ನೆರವೇರಿಸಲಾಗುತ್ತದೆ.

ಜ್ವಾನ ಮತ್ತು ಬುದ್ಧಿವಂತಿಕೆಯ ದೇವತೆ ಎಂಬ ಹೆಸರೂ ಈ ದೇವರಿಗಿದೆ. ಗಣೇಶನ ಆನೆಯ ತಲೆ ಬುದ್ಧಿವಂತಿಕೆಯ ಸೂಚನೆಯಾಗಿದ್ದರೆ ಉದ್ದ ಕಿವಿಗಳು ಅವರ ಮಹತ್ವವನ್ನು ಸಾರುತ್ತವೆ ಎಂಬುದು ವೇದಗಳಿಂದ ತಿಳಿದು ಬಂದಿರುವ ಸುದ್ದಿಯಾಗಿದೆ. ಶಕ್ತಿಶಾಲಿ ಗಣನಾಯಕ ಹಾಗೂ ಪುಕ್ಕಲ ಇಲಿಯ ಕಥೆಯಿದು!   

ganesha

ಹಾಗಿದ್ದರೆ ಗಣಪನಿಗೆ ಪ್ರಥಮ ಪೂಜೆ ಏಕೆ ಮಾಡಲಾಗುತ್ತದೆ ಎಂಬುದು ನಮ್ಮಲ್ಲಿ ಹಲವರಿಗೆ ಗೊಂದಲವನ್ನುಂಟು ಮಾಡುತ್ತಿದ್ದರೂ ಇದಕ್ಕೆ ಕಾರಣ ಇದ್ದೇ ಇರುತ್ತದೆ. ಇಂದಿನ ಲೇಖನದಲ್ಲಿ ಈ ರೀತಿಯ ಕ್ರಮ ಏಕಿದೆ ಎಂಬುದನ್ನು ನಾವು ಅರಿತುಕೊಳ್ಳಲಿದ್ದೇವೆ.

ಗ್ರಂಥಗಳು ಏನು ಹೇಳುತ್ತವೆ?

ಗಣಪತಿ ಉಪನಿಷತ್‌ನ ಪ್ರಕಾರ, ಜ್ಞಾನ ಮತ್ತು ಸೃಷ್ಟಿಯ ರಚನೆಯ ಆರಂಭದಲ್ಲಿ ಮೊದಲು ಕಾಣಿಸಿ ಕೊಂಡಿರುವುದೇ ಗಣೇಶ ದೇವರಾಗಿದ್ದಾರೆ. ಆದ್ದರಿಂದಲೇ ಯಾವುದೇ ಕಾರ್ಯದ ಆರಂಭದಲ್ಲಿ ಪ್ರಥಮ ಪೂಜೆಯನ್ನು ಗಣಪನಿಗೆ ಮಾಡಲಾಗುತ್ತದೆ. ಈ ಗ್ರಂಥಗಳ ಪ್ರಕಾರ, ಗಣೇಶ ದೇವರು ಶಾಶ್ವತ ಮತ್ತು ಸೃಷ್ಟಿಯ ರಚನಾ ಪ್ರಕ್ರಿಯೆಯ ಆರಂಭದಲ್ಲಿ ಮೊದಲು ಕಾಣಿಸಿಕೊಂಡಿದ್ದರು ಎಂಬ ಮಾತಿದೆ. ಚತುರ್ಥಿ ವಿಶೇಷ: ಗಣೇಶ ವಿಗ್ರಹ ಸ್ಥಾಪನೆ, ಪೂಜಾ ವಿಧಾನ ಹೇಗೆ?    

ganesha
 

ಪುರಾಣ ಸಾಹಿತ್ಯ

ಒಮ್ಮೆ ಪಾರ್ವತಿ ದೇವಿಯು ಅಂತಃಪುರದ ಮುಂಭಾಗದಲ್ಲಿ ಕಾವಲು ಕಾಯಲು ಆದೇಶಿಸುತ್ತಾಳೆ ಮತ್ತು ಯಾರನ್ನೂ ಒಳಕ್ಕೆ ಬಿಡಬಾರದು ಎಂಬುದಾಗಿ ನಿರ್ದೇಶಿಸುತ್ತಾಳೆ. ಅಂತೆಯೇ ಗಣಪ ಕಾವಲುಗಾರನಾಗಿ ಅಂತಃಪುರವನ್ನು ಕಾಯುತ್ತಾರೆ.

ಈ ಸಮಯದಲ್ಲಿ ಶಿವ ದೇವರು ಒಳಕ್ಕೆ ಹೋಗುವಾಗ ಗಣೇಶ ಶಿವನನ್ನೇ ತಡೆಯುತ್ತಾನೆ. ಇದರಿಂದ ಕ್ರೋಧಗೊಂಡ ಶಿವ ಗಣೇಶನ ತಲೆಯನ್ನು ತುಂಡರಿಸುತ್ತಾನೆ. ಪಾರ್ವತಿ ದೇವಿಯು ಓಡುತ್ತಾ ಬಂದಾಗ ಗಣೇಶನ ಕೆಳಕ್ಕುರುಳಿದ ತಲೆಯನ್ನು ನೋಡುತ್ತಾಳೆ. ದುಃಖ ಮತ್ತು ಕ್ರೋಧದಿಂದ ಪಾರ್ವತಿಯು ತನ್ನ ಮಗನನ್ನು ಪುನಃ ಬದುಕಿಸದೇ ಇದ್ದಲ್ಲಿ ಇಡೀ ವಿಶ್ವವನ್ನೇ ನಾಶ ಮಾಡುವುದಾಗಿ ಆಕೆ ಶಂಕರನಿಗೆ ಹೇಳುತ್ತಾಳೆ.

ganesha
 

ಆಗ ಶಿವ ದೇವರು ಗಣಪನ ತುಂಡರಿಸಿದ ತಲೆಯನ್ನು ಆನೆಯ ತಲೆಯೊಂದಿಗೆ ಬದಲಾಯಿಸುತ್ತಾರೆ ಮತ್ತು ಮರಳಿ ಜೀವದಾನ ಮಾಡುತ್ತಾರೆ. ತನ್ನ ಮಗನ ಸ್ಥಿತಿಯನ್ನು ನೋಡಿದ ಪಾರ್ವತಿ ದುಃಖದಿಂದ ಕಳೆಗುಂದುತ್ತಾಳೆ.

ಶಿವನು ಗಣಪನಿಗೆ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ನೀಡಿ ಮೊದಲ ಪೂಜೆಯ ವರವನ್ನು ಗಣಪತಿಗೆ ಕರುಣಿಸುತ್ತಾರೆ. ಇದರ ನಂತರ ಪ್ರಥಮ ಪೂಜೆಯನ್ನು ಗಣಪನಿಗೆ ಮೊದಲು ಮಾಡಲಾಗುತ್ತದೆ. ಹೀಗೆ ಗಣಪನಿಗೆ ಪ್ರಥಮ ಪೂಜೆಯ ವರವನ್ನು ಕರುಣಿಸಲಾಗುತ್ತದೆ.

ಇನ್ನೊಂದು ಕಥೆಯ ಪ್ರಕಾರ ಗಣೇಶನಿಗೆ ಏಕೆ ಪ್ರಥಮ ಪೂಜೆಯನ್ನು ನೀಡಲಾಗುತ್ತದೆ ಎಂಬುದಕ್ಕೆ ಕಾರಣವನ್ನು ತಿಳಿಸಲಾಗಿದೆ. ಒಮ್ಮೆ ಗಣಪನ ಹಿರಿಯಣ್ಣ ಕಾರ್ತೀಕೇಯ ಎಲ್ಲಾ ದೇವತೆಗಳಿಗಿಂತಲೂ ತಾನೇ ಶ್ರೇಷ್ಠ ಎಂಬುದಾಗಿ ಘೋಷಿಸಿಕೊಳ್ಳುತ್ತಾರೆ.

ganesha
  

ಹಾಗಿದ್ದಾಗ ಪರಶಿವನು ಒಂದು ಪಂದ್ಯವನ್ನು ಕಾರ್ತೀಕೇಯ ಮತ್ತು ಗಣಪನ ಮುಂದೆ ಇಡುತ್ತಾರೆ ಅದರ ಪ್ರಕಾರ ಸಂಪೂರ್ಣ ವಿಶ್ವವನ್ನು ಯಾರು ಬೇಗ ಸುತ್ತಿ ಬರುತ್ತಾರೋ ಅವರೇ ಶ್ರೇಷ್ಠರು ಎಂಬುದಾಗಿ ಶಿವನು ಹೇಳುತ್ತಾರೆ. ಗಣೇಶ ಚತುರ್ಥಿ ವಿಶೇಷ; ಬಗೆ ಬಗೆಯ ತಿನಿಸುಗಳು 

ಆಗ ಕಾರ್ತೀಕೇಯನು ತನ್ನ ನವಿಲನ್ನೇರಿ ಪ್ರಪಂಚವನ್ನು ಸುತ್ತುವುದಕ್ಕೆ ಹೊರಡುತ್ತಾರೆ. ಆದರೆ ಗಣೇಶನು ತನ್ನ ತಂದೆ ತಾಯಿ ಶಿವ ಮತ್ತು ಪಾರ್ವತಿಗೆ ಮೂರು ಸುತ್ತನ್ನು ಹಾಕುತ್ತಾರೆ. ವಿಶ್ವವನ್ನು ಕಾಯುವ ತನ್ನ ತಂದೆ ತಾಯಿಗೆ ಪ್ರದಕ್ಷಿಣೆ ಹಾಕಿ ಗಣೇಶನು ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ.

ಯೋಗ ತಾತ್ಪರ್ಯ

ಯೋ ತಾತ್ಪರ್ಯದಲ್ಲಿ ನಾವು ಏನೇ ಕೆಲಸ ಮಾಡಿದರೂ ಅದನ್ನು ಎರಡು ವಿಭಾಗದಲ್ಲಿ ಕಾಣಲಾಗುತ್ತದೆ: ವಸ್ತು ಅಥವಾ ಆಧ್ಯಾತ್ಮಿಕ. ನಮ್ಮ ದೇಹದ ಮೂಲಾಧಾರ ಚಕ್ರವನ್ನು ಗಣಪತಿ ನಡೆಸುತ್ತಿದ್ದಾರೆ ಎಂಬ ಮಾತಿದೆ. 'ಮೂಲಾಧಾರವು' ವಸ್ತು ಮತ್ತು ಆಧ್ಯಾತ್ಮಿಕ ಜಗತ್ತಿನ ಅಂತರ್ಮುಖವಾಗಿದೆ.

ಈ ಎರಡೂ ಜಗತ್ತುಗಳನ್ನು ಗಣಪನು ನಿಯಂತ್ರಿಸುತ್ತಿದ್ದಾರೆ. ಈ ಜಗತ್ತಿನ ವಸ್ತು ಸಂತಸಗಳನ್ನು ನಮಗೆ ನೀಡಿದವರು ಅವರೇ ಆಗಿದ್ದು ಜನನ ಮತ್ತು ಮರಣದ ಅಂತ್ಯವಿಲ್ಲದ ಚಕ್ರದಿಂದ ನಮ್ಮನ್ನು ಬಿಡುಗಡೆ ಮಾಡುವವರು ಅವರೇ ಆಗಿದ್ದಾರೆ.

ganesha
 

ಯೋಗದ ಅನುಷ್ಟಾನಗಳ ಪ್ರಕಾರ, ಗಣೇಶನ ಅಧಿನಿಯಮಕ್ಕೆ ಒಳಪಟ್ಟಿರುವ 'ಮೂಲಾಧಾರ' ಚಕ್ರದಿಂದ ನಮ್ಮ ವಸ್ತು ಜೀವನ ಅಂತೆಯೇ ಆಧ್ಯಾತ್ಮಿಕ ಪ್ರಯಾಣ ಆರಂಭವಾಗುತ್ತದೆ. ಆದ್ದರಿಂದ ನಮ್ಮ ಜೀವನ ಯಾವುದೇ ತೊಂದರೆಗಳಿಲ್ಲದೆ ಸಾಗಬೇಕು ಎಂದಾದಲ್ಲಿ, ಗಣೇಶನ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಬೇಕು.

ನಮ್ಮ ಜೀವನದ ಸಕಲ ತೊಂದರೆಗಳನ್ನು ನಿವಾರಿಸುವವರು ಗಣಪನೇ ಆಗಿದ್ದು, ನಮ್ಮ ಯಾವುದೇ ಕೆಲಸದ ಆರಂಭದಲ್ಲಿ ಗಣಪನನ್ನು ಪೂಜಿಸಿದರೆ ತೊಂದರೆಗಳು ನಿವಾರಣೆಗೊಂಡು ಶುಭಫಲ ನಮ್ಮದಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Why lord ganesha is worshipped first before all other deities

    In India, Lord Ganesha is worshiped before the commencement of almost every task. He is worshiped first in almost all rituals of Hinduism. In fact, Lord Ganesha is almost synonymous with the beginning of any work. Ever wondered why is it that we worship Ganesha first? Let's find out.
    Story first published: Sunday, September 4, 2016, 23:14 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more