For Quick Alerts
ALLOW NOTIFICATIONS  
For Daily Alerts

ಪರಮಾಶ್ಚರ್ಯ: ಪಾಂಡವರು ನಿಜಕ್ಕೂ ದ್ರೌಪದಿಯನ್ನು ಪ್ರೀತಿಸುತ್ತಿದ್ದರೇ?

|

ಒಂದು ಹೆಣ್ಣಿಗೆ ಹಲವಾರು ಪತಿಯರು ಇರುವುದು ಅಷ್ಟೊಂದು ಸಮಂಜಸವಾದ ಆಲೋಚನೆಯಲ್ಲ. ಇದರಲ್ಲಿ ಅಸುರಕ್ಷತೆಯ ಭೀತಿ ಇದ್ದೇ ಇರುತ್ತದೆ. ಆದರೆ ನಮ್ಮ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ದ್ರೌಪದಿಯು ಐದು ಜನ ಪತಿಯರೊಂದಿಗೆ ಸಂಸಾರ ನಡೆಸುತ್ತಿದ್ದಳು.

ಮಹಾಭಾರತದಲ್ಲಿ ದ್ರೌಪದಿದಿಯ ಕುರಿತಾದ ಪ್ರತಿಯೊಂದು ಅಂಶವು ಕುತೂಹಲಕಾರಿಯಾಗಿರುತ್ತದೆ. ಆಕೆಯ ಅದ್ಭುತವಾದ ಸೌಂದರ್ಯ, ಹಿರಿಮೆ, ಪ್ರೀತಿಯೆಡೆಗೆ ಆಕೆಯ ಅರ್ಪಣಾ ಮನೋಭಾವ, ಆಕೆಯು ಅನುಭವಿಸಿದ ಅವಮಾನಗಳು ಮತ್ತು ಶ್ರೇಷ್ಠ ಪ್ರತಿಜ್ಞೆ ಹೀಗೆ ಎಲ್ಲವು ನಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ. ಪಾಂಡವರನ್ನು ಸರ್ವನಾಶ ಮಾಡುವುದೇ ದ್ರೌಪದಿಯ ಉದ್ದೇಶವಾಗಿತ್ತೇ?

ಆದರೆ ಬಹುತೇಕ ಮಂದಿಗೆ ಗೊತ್ತಿಲ್ಲದೆ ಇರುವ ಕೆಲವು ಸಂಗತಿಗಳು ಇವರ ದಾಂಪತ್ಯದಲ್ಲಿ ಇವೆ. ಅವುಗಳೇನೆಂದರೆ, ಪಾಂಡವರಲ್ಲಿ ಒಬ್ಬನು ಮಾತ್ರ ದ್ರೌಪದಿಯ ಅಂತಃಪುರದಲ್ಲಿ ಒಂದು ವರ್ಷದ ಕಾಲ ತಂಗಬಹುದಿತ್ತು. ಆ ವರ್ಷ ಮುಗಿದ ಮೇಲೆ ಆತ ಮತ್ತೆ ನಾಲ್ಕು ವರ್ಷಗಳ ಕಾಲ ತನ್ನ ಸರದಿಗಾಗಿ ಕಾಯಬೇಕಿತ್ತು. ಬನ್ನಿ ಪಾಂಡವರ ಜೊತೆಗೆ ದ್ರೌಪದಿಯ ಸಂಬಂಧದ ಕುರಿತು ತಿಳಿದುಕೊಳ್ಳೋಣ...

ದ್ರೌಪದಿ ಮತ್ತು ಅರ್ಜುನ

ದ್ರೌಪದಿ ಮತ್ತು ಅರ್ಜುನ

ಪಾಂಡವರಲ್ಲಿಯೇ ದ್ರೌಪದಿಗೆ ಅರ್ಜುನ ಎಂದರೆ ತುಂಬಾ ಇಷ್ಟ. ಆಕೆ ಆತ್ಮ ಸಾಕ್ಷಿಯಾಗಿ ಪ್ರೀತಿಸಿದ್ದು, ಅರ್ಜುನನ್ನು, ಸ್ವಯಂವರದಲ್ಲಿ ದ್ರೌಪದಿಯನ್ನು ಜಯಿಸಿದ್ದು ಅರ್ಜುನ ಆದ್ದರಿಂದ ದ್ರೌಪದಿಗೆ ಅರ್ಜುನ ಎಂದರೆ ಒಲವು. ಅರ್ಜುನನಿಗೆ ದ್ರೌಪದಿಯನ್ನು ತನ್ನ ಸೋದರರ ಜೊತೆಗೆ ಹಂಚಿಕೊಳ್ಳಲು ಇಷ್ಟವಿರಲಿಲ್ಲ. ಅದೂ ಅಲ್ಲದೆ ದ್ರೌಪದಿ ಮೇಲೆ ಅರ್ಜುನನಿಗೆ ಅಷ್ಟು ಮಮಕಾರವೂ ಇರಲಿಲ್ಲ. ಆತನ ಪ್ರೀತಿ ಇದ್ದಿದ್ದು ಕೃಷ್ಣನ ತಂಗಿಯಾದ ಸುಭದ್ರಳ ಮೇಲೆ. ಜೊತೆಗೆ ಅರ್ಜುನ ದ್ರೌಪದಿ ಮತ್ತು ಚಿತ್ರಾಂಗದೆಯರ ಮಕ್ಕಳಿಗಿಂತ ಅಭಿಮನ್ಯು (ಸುಭದ್ರಾಳ ಮಗ) ವಿನ ಮೇಲೆ ಪ್ರೀತಿಯನ್ನು ಹೊಂದಿದ್ದನು.

ಅರ್ಜುನ-ಸುಭದ್ರಾ

ಅರ್ಜುನ-ಸುಭದ್ರಾ

ಪಾಂಡವ ಸಹೋದರರು ಬೇರೆ ಬೇರೆ ಹೆಣ್ಣುಗಳನ್ನು ಮದುವೆಯಾದಾಗ ದ್ರೌಪದಿ ಪ್ರತಿಕ್ರಿಯಿಸಲಿಲ್ಲ. ಆದರೆ ಅರ್ಜುನ ಸುಭದ್ರಾಳನ್ನು ಮದುವೆಯಾದಾಗ ಆಕೆ ನೊಂದುಕೊಂಡಳು. ಆಕೆಯನ್ನು ಸಂತೈಸಲು ಸುಭದ್ರಾ ದಾಸಿಯ ಉಡುಗೆಯನ್ನು ಧರಿಸಿ, ದ್ರೌಪದಿಯ ಸೇವೆಯಲ್ಲಿ ಮತ್ತು ಆಕೆಯ ನಂತರ ಸ್ಥಾನಮಾನವನ್ನು ಪಡೆಯುತ್ತೇನೆ ಎಂದು ಸೂಚಿಸುವ ಮೂಲಕ ಸಮಾಧಾನಪಡಿಸಿದಳು.

ದ್ರೌಪದಿ ಮತ್ತು ಧರ್ಮರಾಯ

ದ್ರೌಪದಿ ಮತ್ತು ಧರ್ಮರಾಯ

ದ್ರೌಪದಿಯ ಜೀವನ ಕಸಾಯಿಖಾನೆಯಂತಾಗಿತ್ತು. ಆಕೆ ಬಹುಶಃ ಆ ಕಾಲದಲ್ಲಿ ಅತಿ ಹೆಚ್ಚು ಶಾಪಕ್ಕೆ ಗುರಿಯಾಗಿದ್ದ ಹೆಂಗಸು. ಇದಕ್ಕೆ ಪ್ರಮುಖ ಕಾರಣ ಮಹಾಭಾರತ ಯುದ್ಧ. ದ್ರೌಪದಿಯನ್ನು ಮದುವೆಯಾದ ನಂತರ ಧರ್ಮರಾಯನು ತನ್ನ ಸೋದರರನ್ನು ಕರೆದು ಸುಂದ ಮತ್ತು ಉಪಸುಂದ ಎಂಬ ರಾಕ್ಷಸರ ಕಥೆಯನ್ನು ಹೇಳಿದನು. ಈ ಶಕ್ತಿಶಾಲಿ ರಾಕ್ಷಸರು ಒಂದು ಹೆಣ್ಣಿಗಾಗಿ ಪರಸ್ಪರ ಬಡಿದಾಡಿಕೊಂಡು ಸತ್ತರು ಎಂಬ ಕಥೆ ಅದಾಗಿತ್ತು. ಇದನ್ನು ಹೇಳಿ ದ್ರೌಪದಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿ ನಾವು ಜಾಗರೂಕತೆಯಿಂದ ವ್ಯವಹರಿಸಬೇಕೆಂದು ಸಹ ಹೇಳಿದನು.

ಧರ್ಮರಾಯ ನಿಯಮ

ಧರ್ಮರಾಯ ನಿಯಮ

ನಂತರ ಧರ್ಮರಾಯನೇ ಒಂದು ನಿಯಮವನ್ನು ಜಾರಿಗೆ ತಂದ. ಅದರ ಪ್ರಕಾರ ನಿರ್ದಿಷ್ಟ ಅವಧಿಯವರೆಗೆ ದ್ರೌಪದಿ, ಒಬ್ಬ ಸೋದರನ ಜೊತೆ ವಾಸಿಸಬೇಕು. ಆ ಕಾಲದಲ್ಲಿ ಉಳಿದವರು ಆಕೆಯನ್ನು ಸ್ಪರ್ಶಿಸಬಾರದು. ದ್ರೌಪದಿ ಒಂದು ವರ್ಷ ಒಬ್ಬರ ಜೊತೆ ಇರಬೇಕು ಎಂಬ ನಿಯಮದ ಪ್ರಕಾರ ಧರ್ಮರಾಯ ಆಕೆಯ ಜೊತೆ ಮೊದಲು ವಾಸಿಸಿದನು. ಏಕೆಂದರೆ ಅವನು ವಯಸ್ಸಿನಲ್ಲಿ ಹಿರಿಯನಾದ್ದರಿಂದ, ಮುಂದೆ ಸರದಿಯ ಪ್ರಕಾರ ಉಳಿದವರು ದ್ರೌಪದಿಯ ಜೊತೆ ಇರಬಹುದಾಗಿತ್ತು.

ನಿಯಮದ ಷರತ್ತು

ನಿಯಮದ ಷರತ್ತು

ಧರ್ಮರಾಯ ಈ ನಿಯಮವನ್ನು ಅಲ್ಲಿಗೆ ನಿಲ್ಲಿಸಲಿಲ್ಲ. ಯಾರು ಈ ನಿಯಮವನ್ನು ಮುರಿಯುವರೋ, ಅವರು 12 ವರ್ಷ ವನವಾಸಕ್ಕೆ ಹೋಗಬೇಕಾಗಿತ್ತು. ಜೊತೆಗೆ ದ್ರೌಪದಿಯ ಜೊತೆಯಲ್ಲಿ ಏಕಾಂತದಲ್ಲಿರುವಾಗ ಯಾವ ಸಹೋದರನು ಭಂಗ ತರುತ್ತಾನೋ, ಅವನಿಗು ಸಹ ಈ ಶಿಕ್ಷೆಯಾಗುತ್ತಿತ್ತು.

ಶಿಕ್ಷೆಗೆ ಗುರಿಯಾದ ಅರ್ಜುನ

ಶಿಕ್ಷೆಗೆ ಗುರಿಯಾದ ಅರ್ಜುನ

ಈ ಶಿಕ್ಷೆಗೆ ಗುರಿಯಾಗಿದ್ದು ಅರ್ಜುನ!. ಹೌದು ಅರ್ಜುನ ತನ್ನ ಗಾಂಡೀವವನ್ನು ದ್ರೌಪದಿಯ ಅಂತಃಪುರದಲ್ಲಿ ಇಟ್ಟು ಮರೆತುಬಿಟ್ಟಿದ್ದನು. ಒಮ್ಮೆ ಒಬ್ಬ ಬಡ ಬ್ರಾಹ್ಮಣನ ಸಹಾಯಕ್ಕಾಗಿ ಗಾಂಡೀವದ ಅವಶ್ಯಕತೆ ಬಿತ್ತು. ಆಗ ಅವನು ಆ ಬ್ರಾಹ್ಮಣನ ಗೋವುಗಳನ್ನು ರಕ್ಷಿಸಲು ಗಾಂಡೀವವನ್ನು ತರಲು ದ್ರೌಪದಿಯ ಅಂತಃಪುರ ಪ್ರವೇಶಿಸಿ, ನಿಯಮವನ್ನು ಮುರಿದನು. ಮುಂದೆ ಆತ 12 ವರ್ಷದ ವನವಾಸ ಮಾಡಿದನು, ಅಲ್ಲಿ ಆತ ಇಂದ್ರನನ್ನು ಭೇಟಿಯಾದನು, ನಂತರ ಊರ್ವಶಿಯಿಂದ ಶಾಪಗ್ರಸ್ಥನಾದನು. ಹಲವಾರು ಕಲೆಗಳನ್ನು , ಹಲವರಿಂದ ಕಲಿತನು ( ಶಿವ, ಇಂದ್ರ ಇತ್ಯಾದಿ) ಜೊತೆಗೆ ಸುಭದ್ರ, ಚಿತ್ರಾಂಗದೆ ಮುಂತಾದವರನ್ನು ಸಹ ಮದುವೆಯಾದನು!.

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ಪಾಂಡವರ ಪೈಕಿ ಭೀಮ ಮಾತ್ರ ದ್ರೌಪದಿಯನ್ನು ಮನಸಾರೆ ಇಷ್ಟಪಟ್ಟನು. ಈತನು ಆಕೆಯ ಇಚ್ಛೆಗಳನ್ನು ಪೂರೈಸಲು ಸದಾ ಶ್ರಮಿಸಿದನು. ಆಕೆಗೆ ನೋವುಂಟಾದರೆ ಈತ ಸಹಿಸುತ್ತಿರಲಿಲ್ಲ.

ಭೀಮನು ಕುಬೇರನ ಉದ್ಯಾನದಿಂದ ಈಕೆಗಾಗಿ ಹೂಗಳನ್ನು ತಂದನು. ಮತ್ಸ್ಯ ರಾಜ್ಯದ ರಾಣಿ ಸುದೇಷ್ಣೆಯ ಬಳಿ ಈಕೆ ದಾಸಿಯಾಗಿ ಕೆಲಸ ಮಾಡುವಾಗ ಈತ ಕಣ್ಣೀರು ಸುರಿಸಿದ್ದನು. ದ್ರೌಪದಿಯ ಅವಮಾನಕ್ಕೆ ಪ್ರತೀಕಾರವಾಗಿ ಈತ ಕೌರವರನ್ನು ಸಂಹರಿಸಿದನು. ಮತ್ಸ್ಯ ರಾಜ್ಯದಲ್ಲಿ ಕೀಚಕ ತನಗೆ ಕಾಟ ಕೊಟ್ಟಾಗ ದ್ರೌಪದಿ ಸಹಾಯಕ್ಕಾಗಿ ಹೋಗಿದ್ದು, ಭೀಮನ ಬಳಿಗೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ದ್ರೌಪದಿ ಮತ್ತು ಭೀಮ

ದ್ರೌಪದಿ ಮತ್ತು ಭೀಮ

ಭೀಮನ ಹೊರತುಪಡಿಸಿ, ಇತರೆ ಪಾಂಡವರು ದ್ರೌಪದಿಯ ನಂಬಿಕೆಗೆ ಪಾತ್ರರಾಗಿರಲಿಲ್ಲ. ಆಕೆಯನ್ನು ಎಲ್ಲರೂ ಕೋಪಕ್ಕೆ, ಅಸಹನೆಗೆ ಮತ್ತು ಅನುಕೂಲಕ್ಕಾಗಿ ಬಳಸಿಕೊಂಡಿದ್ದರು. ಆದರೆ ಭೀಮನ ನೈಜ ಸ್ವರೂಪವನ್ನು ದ್ರೌಪದಿ ನಮಗೆ ತೋರಿಸಿಕೊಟ್ಟಿದ್ದಾಳೆ. ಇತರರ ಪಾಲಿಗೆ ಆತ ಭಯಂಕರ ಆದರೆ ದ್ರೌಪದಿಯ ಪಾಲಿಗೆ ಆತ ಯಾವತ್ತಿಗೂ ಮೃದು ಮಧುರ.

ದ್ರೌಪದಿ ಮತ್ತು ನಕುಲ ಸಹದೇವರು

ದ್ರೌಪದಿ ಮತ್ತು ನಕುಲ ಸಹದೇವರು

ನಕುಲ ಮತ್ತು ಸಹದೇವರು ಎಂದಿಗೂ ಧರ್ಮರಾಯನ ಅನುಚರರಾಗಿದ್ದರು. ಅವರು ಎಂದೆಂದಿಗೂ ಆತನನ್ನೆ ಅನುಸರಿಸಿದರು.ಮುಂದೆ ಅವರು ಮದ್ರದೇಶವನ್ನು ಆಳಲು ಹೋದರು (ತಾಯಿ ಮಾದ್ರಿಯ ಸ್ವಂತ ನಾಡು). ಅಲ್ಲಿ ಅವರು ಐಷಾರಾಮಿ ಜೀವನವನ್ನು ನಡೆಸಿದರು. ಆದರೆ ಅವರು ಅಲ್ಲಿಯೂ ಸಹ ತಮ್ಮ ಹಿರಿಯಣ್ಣನಿಗೆ ಅಂಟಿಕೊಂಡಿದ್ದರು.

English summary

What was the relationship between Draupadi and Pandavas

The idea of one woman having many husbands makes many men feel inadequate and insecure. But the heroine of Hindu mythology Draupadi, is one of the most popular and controversial woman who lived this life.
X
Desktop Bottom Promotion