For Quick Alerts
ALLOW NOTIFICATIONS  
For Daily Alerts

  ದೇವಸ್ಥಾನದ ಘಂಟಾನಾದ, ಇದು ಶಾಂತಿ ಮತ್ತು ಒಗ್ಗಟ್ಟಿನ ಸಂಕೇತ...

  By Deepu
  |

  ಹಿಂದೂ ಧರ್ಮವೇ ಹಾಗೆ. ಅದು ತುಂಬಾ ವೈವಿಧ್ಯಮಯವಾಗಿರುವುದು. ಸಾವಿರಾರು ವರ್ಷಗಳಿಂದಲೂ ಹಿಂದೂ ಧರ್ಮವೆನ್ನುವುದು ಇದೆ. ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರು, ಹಲವಾರು ನಂಬಿಕೆ ಹಾಗೂ ಸಂಪ್ರದಾಯಗಳು. ಪ್ರತಿಯೊಂದಕ್ಕೂ ತನ್ನದೇ ಆಗಿರುವ ಅರ್ಥವಿರುವುದು. ಆದರೆ ಎಲ್ಲವೂ ಅಂತಿಮವಾಗಿ ದೇವರ ಆಶೀರ್ವಾದ ಪಡೆಯುವುದು. ಹಿಂದೂ ಧರ್ಮವು ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತದೆ. ಕೈಗೊಂದು ಕೆಂಪು ದಾರ ಮತ್ತು ಹಣೆಗೆ ಕುಂಕುಮವನ್ನಿಟ್ಟುಕೊಂಡರೆ ಆಗ ಆತನ ಹೃದಯದಲ್ಲಿ ದೈವಿಕ ಭಾವನೆ ಮೂಡುವುದು.

  ದೇವಸ್ಥಾನದೊಳಗೆ ಹೋದರೆ ಅಲ್ಲಿ ಜಾಗಂಟೆ, ಶಂಖ, ಚೆಂಡೆ, ಘಂಟೆ, ಮಂತ್ರೋಚ್ಛರ ಹೀಗೆ ಹಲವಾರು ಬಗೆಯ ಶಬ್ಧ ನಮ್ಮ ಕಿವಿಗೆ ಬೀಳುವುದು. ಇದರ ಉದ್ದೇಶ ಧನಾತ್ಮಕ ಅಂಶವನ್ನು ಬರಹೇಳುವುದು. ದೇವಸ್ಥಾನದೊಳಗೆ ಹೋದರೆ ನಿಮಗೆ ಸ್ವರ್ಗಕ್ಕೆ ಹೋದಂತಹ ಭಾವನೆಯಾಗುವುದು. ಪ್ರತಿಯೊಂದು ವಸ್ತುವಿನಲ್ಲೂ ನಾನಿರುತ್ತೇನೆ ಎಂದು ಕೃಷ್ಣ ಹೇಳಿರುವುದು ನಿಜವೆಂದನಿಸುವುದು.

  Temple Bells

  ಹಿಂದೂ ಧರ್ಮದಲ್ಲಿ ಆಚರಿಸುವಂತಹ ಪ್ರತಿಯೊಂದು ಸಂಪ್ರದಾಯ ಮತ್ತು ಬಳಸುವ ವಸ್ತುಗಳಿಗೆ ವೈಜ್ಞಾನಿಕ ಕಾರಣಗಳು ಇವೆ. ಉದಾಹರಣೆಗೆ, ಹಣೆಗೆ ತಿಲಕನ್ನಿಡುವುದರಿಂದ ಶ್ರೀಗಂಧವು ಮನಸ್ಸಿಗೆ ಶಾಂತಿ ನೀಡುವುದು. ಶಂಖನಾದವು ಧನಾತ್ಮಕ ಶಕ್ತಿ ಉಂಟು ಮಾಡುವುದು ಮತ್ತು ಶಾಂತಿಯ ವಾತಾವರಣ ನಿರ್ಮಿಸುವುದು. ಅದೇ ರೀತಿ ದೇವಸ್ಥಾನದಲ್ಲಿ ಘಂಟೆ ಯಾಕೆ ನೇತಾಡಿಸುತ್ತಾರೆ ಎನ್ನುವ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಯುವ....

  ಘಂಟೆಗಳು ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲದೆ ಮನೆಗಳಲ್ಲೂ ಕಂಡುಬರುವುದು. ಜಾಗಂಟೆಯ ಶಬ್ಧವಿಲ್ಲದೆ ಯಾವುದೇ ಪೂಜೆ ಅಥವಾ ಪುನಸ್ಕಾರವು ಪೂರ್ತಿಯಾಗಲ್ಲವೆಂದು ಪರಿಗಣಿಸಲಾಗಿದೆ. ಆರತಿ ಅಥವಾ ಪೂಜೆಯ ವೇಳೆ ಘಂಟೆ ಬಾರಿಸಬೇಕಾಗುತ್ತದೆ. ದೇವಸ್ಥಾನದ ಒಳಗೆ ಹೋಗುವಾಗ ಭಕ್ತರು ತುಂಬಾ ಶಕ್ತಿ, ಹುಮ್ಮಸ್ಸಿನಿಂದ ಹಾಡುತ್ತಾ ಹೋಗುವರು. ಹೊರಗಡೆ ಹೋಗುವಾಗ ತುಂಬಾ ಶಾಂತಿಯಿಂದ ಹೋಗುವರು. ಘಂಟೆ ಬಾರಿಸುವುದರಿಂದ ಒಂದು ಹುಮ್ಮಸ್ಸಿನಿಂದ ಒಳಗೆ ಪ್ರವೇಶಿಸಿದಂತೆ ಆಗುವುದು. ಕೇವಲ ಇಷ್ಟು ಮಾತ್ರವಲ್ಲದೆ ಇದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ.

  Temple Bells

  ಘಂಟೆ ಬಾರಿಸಿ ದೇವಸ್ಥಾನಕ್ಕೆ ಪ್ರವೇಶಿಸುವ ಮೂಲಕ ತಾನು ಆಗಮಿಸಿದ್ದೇನೆ ಎಂದು ಭಕ್ತನು ದೇವರಿಗೆ ತಿಳಿಸುತ್ತಾನೆ. ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಲು ಮತ್ತು ದೇವರ ಧ್ಯಾನದಲ್ಲಿ ತೊಡಗಿಸಲು ಹೀಗೆ ಮಾಡಲಾಗುತ್ತದೆ. ದೇವಸ್ಥಾನದ ಹೊರಗಡೆ ನೇತಾಡಿಸಲಾಗಿರುವಂತಹ ದೊಡ್ಡ ಗಾತ್ರದ ಘಂಟೆಯಿಂದ ಬರುವಂತಹ ಶಬ್ದವು ಓಂ' ಉಚ್ಛರಿಸಿದಂತೆ ಇರುವುದು. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಧನಾತ್ಮಕ ಶಕ್ತಿ ಬರುವುದು. ಭೂಮಿಯ ರಚನೆಯಾದಾಗ ಬ್ರಹ್ಮಾಂಡದಲ್ಲಿ ಇಂತಹ ಶಬ್ದ ಬಂದಿತ್ತಂತೆ. ಭೂಮಿಯ ಅಂತ್ಯವಾಗುವ ವೇಳೆ ಕೂಡ ಇದೇ ರೀತಿಯ ಶಬ್ಧ ಬರಲಿದೆ. ಇದರಿಂದಾಗಿ ಈ ಘಂಟೆಯನ್ನು ಕಾಲ'ನ ಸಂಕೇತವೆನ್ನಲಾಗುತ್ತದೆ.

  ಘಂಟೆ ಬಡಿದಾಗ ವಾತಾವರಣದಲ್ಲಿ ಕೆಲವು ಅಲೆಗಳು ನಿರ್ಮಾಣವಾಗುತ್ತದೆ. ಈ ಅಲೆಗಳು ದೂರದ ತನಕ ಪ್ರಯಣಿಸಿ ಹಾನಿಕಾರಕವಾಗಿರುವ ಸೂಕ್ಷ್ಮಾಣು ಮತ್ತು ಕೀಟಾಣುಗಳನ್ನು ನಾಶ ಮಾಡುವುದು. ಇದರಿಂದ ವಾತಾವರಣವು ತುಂಬಾ ಶುದ್ಧ ಹಾಗೂ ಆರೋಗ್ಯಕರವಾಗುವುದು. ವಾಸ್ತುಶಾಸ್ತ್ರ ಪ್ರಕಾರ ಘಂಟೆಯ ಶಬ್ಧವು ವಾತಾವರಣಕ್ಕೆ ತುಂಬಾ ಶುಭಕರ. ಮನೆಯಲ್ಲಿ ಘಂಟೆಯಿದ್ದರೆ ಅದು ದುಷ್ಟಶಕ್ತಿ ಮತ್ತು ನಕಾರಾತ್ಮಕ ಶಕ್ತಿಯಿಂದ ನಮ್ಮನ್ನು ರಕ್ಷಿಸುವುದು. ಇದು ಧನಾತ್ಮಕತೆಯನ್ನು ಉಂಟು ಮಾಡಿ ಸುತ್ತಲೂ ಧನಾತ್ಮಕತೆ ನಿರ್ಮಿಸುವುದು. ಇದರಿಂದ ಮನೆಯಲ್ಲಿ ಕುಟುಂಬ ಸದಸ್ಯರ ಮಧ್ಯೆ ಜಗಳ ಮತ್ತು ವಾಗ್ವಾದ ಕಡಿಮೆ ಮಾಡುವುದು.

  ದೇವಸ್ಥಾನದ ಘಂಟೆಯನ್ನು ಕ್ಯಾಡ್ಮಿಯಮ್, ಸತು, ಕ್ರೋಮಿಯಂ, ನಿಕೆಲ್ ಮತ್ತು ಮೆಗ್ನೀಸಿಯಮ್ ನಿಂದ ಮಾಡಲ್ಪಟ್ಟಿರುತ್ತದೆ. ಇದರ ಶಬ್ಧ ಮೆದುಳಿನ ಬಲ ಹಾಗೂ ಎಡ ಭಾಗಗಳ ಸಮತೋಲನ ಕಾಪಾಡುವುದು. ಒಂದು ಸಲ ಘಂಟೆಯ ಶಬ್ಧ ಮೊಳಗಿದರೆ ಅದು ವಾತಾವರಣದಲ್ಲಿ ಸುಮಾರು ಹತ್ತು ಸೆಕೆಂಡುಗಳ ಕಾಲ ಇರುವುದು. ಈ ಶಬ್ಧವು ದೇಹದ ಏಳು ಶಮನ ಕೇಂದ್ರಗಳನ್ನು ಬಡಿದೆಬ್ಬಿಸುವುದು ಮತ್ತು ಮನಸ್ಸು ಶಾಂತವಾಗಿಸಿ, ಏಕಾಗ್ರತೆ ಹೆಚ್ಚಿಸುವುದು. ಘಂಟೆಯ ಶಬ್ಧ ಮನಸ್ಸು, ದೇಹ ಮತ್ತು ಆತ್ಮಕ್ಕೆ ಶಕ್ತಿ ನೀಡುವುದು. ಇದರ ಸುತ್ತಲು ಇರುವಂತಹ ಜನರಲ್ಲಿ ಇದು ಧನಾತ್ಮಕವಾದ ಶಕ್ತಿ ತುಂಬುವುದು.

  ಸಾಮಾನ್ಯವಾಗಿ ಹೆಚ್ಚಿನವರು ಘಂಟೆ ಬಾರಿಸುವುದು ಧಾರ್ಮಿಕ ವಿಧಾನದ ಒಂದು ಭಾಗವೇ ಎಂದು ತಿಳಿದುಕೊಂಡಿದ್ದಾರೆ. ಆದರೆ ಇದರ ಮಹತ್ವವನ್ನು ಕಂಡುಕೊಂಡ ಬಳಿಕವೇ ಘಂಟೆ ಬಾರಿಸುವುದನ್ನು ಧಾರ್ಮಿಕ ವಿಧಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇದರ ಮಹತ್ವವನ್ನು ಅರಿಯದೇ ಹೆಚ್ಚಿನವರು ಅಂಧಶ್ರದ್ದೆಯಂತೆ ಅನುಸರಿಸಿಕೊಂಡು ಬಂದಿದ್ದಾರೆ.. ಮುಂದೆ ಓದಿ

  Temple Bells

  ಘಂಟಾನಾದ ಶಾಂತಿ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ

  ಘಂಟಾನಾದಕ್ಕೆ ಹಲವಾರು ಅರ್ಥಗಳಿವೆ. ಇದರಲ್ಲಿ ಪ್ರಮುಖವಾದ ಅರ್ಥವೆಂದರೆ ಸುತ್ತಮುತ್ತಲಿನವರೊಂದಿಗೆ ಶಾಂತಿ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಉದಾಹರಣೆಗೆ ಘಂಟೆ ಬಾರಿಸಿದ ಬಳಿಕ ಊರಿನ ಜನರು ಒಂದೆಡೆ ಸೇರುವುದು, ಹಿರಿಯರು ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಶಾಂತಿ ಕಾಪಾಡಿಕೊಳ್ಳುವುದೂ ಆಗಿದೆ. ಶಾಂತಿಯ ಸಂಕೇತವಾಗಿ ಪಾರಿವಾಳ ಹಾರಿಸಿದಂತೆಯೇ ಘಂಟೆಯ ಸದ್ದು ಶಾಂತಿಯ ಸಂಕೇತವೂ ಆಗಿದೆ.

  ಧನಾತ್ಮಕ ಶಕ್ತಿ ಪಸರಿಸಲು....

  ಒಂದು ಸ್ಥಳದ ಬಗ್ಗೆ ಸದಭಿಪ್ರಾಯವಿದ್ದರೆ ಆ ಸ್ಥಳಕ್ಕೆ ಹೆಚ್ಚಿನ ಜನರು ಭೇಟಿ ನೀಡಲು ಬರುತ್ತಾರೆ. ಈ ಪರಿಸದರಲ್ಲಿ ಘಂಟಾನಾದವಿದ್ದರೆ ಹೆಚ್ಚಿನ ಧನಾತ್ಮಕ ಶಕ್ತಿ ಪಸರಿಸುವ ಕಾರಣ ಈ ಪರಿಸರದಲ್ಲಿರುವವರು ತಮ್ಮ ಅಕ್ಕಪಕ್ಕದವರಲ್ಲಿ ಧನಾತ್ಮಕ ಅಂಶಗಳನ್ನೇ ನೋಡುತ್ತಾರೆ. ಪರಿಣಾಮವಾಗಿ ಋಣಾತ್ಮಕ ಶಕ್ತಿ ಕಡಿಮೆಯಾಗುತ್ತಾ ಶಕ್ತಿಗುಂದುತ್ತಾ ಹೋಗುತ್ತದೆ. ಈ ಧನಾತ್ಮಕ ಶಕ್ತಿಯೇ ನೆಮ್ಮದಿಗೆ ಕಾರಣವಾಗಿದೆ. ದೇವಾಲಯಗಳ ಪರಿಸರದಲ್ಲಿ ಜನರು ನೆಮ್ಮದಿ ಪಡೆಯಲು ಘಂಟಾನಾದ ಪ್ರಮುಖ ಪಾತ್ರ ವಹಿಸುತ್ತದೆ.

  ಋಣಾತ್ಮಕ ಯೋಚನೆಗಳನ್ನು ಬದಲಿಸಲು ಸಾಧ್ಯವಾಗುತ್ತದೆ

  ಸಾಮಾನ್ಯವಾಗಿ ಘಂಟೆಗಳನ್ನು ಹೆಚ್ಚು ಹೊತ್ತು ಕಂಪಿಸುವ ಶಕ್ತಿ ಇರುವ ಲೋಹಗಳಾದ ಕ್ಯಾಡ್ಮಿಯಂ, ಸತು, ತಾಮ್ರ, ಸೀಸ, ನಿಕ್ಕೆಲ್, ಮ್ಯಾಂಗನೀಸ್ ಮತ್ತು ಕ್ರೋಮಿಯಂ ಅಥವಾ ಇವುಗಳ ಮಿಶ್ರಲೋಹದಿಂದ ತಯಾರಿಸಲಾಗುತ್ತದೆ. ಅತಿ ಹೆಚ್ಚಿನ ಕಂಪನ ಪಡೆಯಲು ಒಂದು ನಿಖರವಾದ ಅಳತೆಯಲ್ಲಿ ಹಲವು ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. ಪರಿಣಾಮವಾಗಿ ಘಂಟಾನಾದ ಹೆಚ್ಚು ಹೊತ್ತಿನವರೆಗೆ ಹಾಗೂ ಹೆಚ್ಚು ದೂರದವರೆಗೆ ಕೇಳಿಸಲು ಸಾಧ್ಯವಾಗುತ್ತದೆ. ಈ ನಾದ ಮೆದುಳಿನಲ್ಲಿ ಉತ್ಪತ್ತಿ ಮಾಡುವ ತರಂಗಗಳು ಮನಸ್ಸಿನ ಯೋಚನೆಗಳನ್ನು ಧನಾತ್ಮಕ ನಿಟ್ಟಿನಲ್ಲಿ ಮುಂದುವರೆಸಲು ನೆರವಾಗುತ್ತವೆ. ಇದೇ ಶಕ್ತಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಮನಸ್ಸಿನ ದುಗುಡ-ಒತ್ತಡ-ಖಿನ್ನತೆಗಳನ್ನು ನಿವಾರಿಸಲೂ ನೆರವಾಗುತ್ತದೆ.

  Temple Bells

  ಘಂಟಾನಾದ ನವಜೀವನದ ಪ್ರತೀಕವಾಗಿದೆ

  ಪ್ರತಿಬಾರಿ ಮಾನಸಿಕವಾಗಿ ಪರಿವರ್ತನೆ ಹೊಂದಿದಾಗಲೂ ನವಜೀವನ ಪಡೆದಂತೆ. ಕೆಟ್ಟ ಗುಣಗಳನ್ನು ವರ್ಜಿಸಿ ಉತ್ತಮ ನಡವಳಿಕೆ ಹೊಂದಿದ ವ್ಯಕ್ತಿಯ ಹಿಂದೆ ಘಂಟಾನಾದ ಪ್ರಮುಖವಾಗಿ ಕೆಲಸ ಮಾಡಿರುವುದನ್ನು ಕಂಡುಕೊಳ್ಳಲಾಗಿದೆ. ಅಂತೆಯೇ ಜೀವನದ ಪ್ರಮುಖ ಘಟ್ಟಗಳನ್ನು ದಾಟುತ್ತಾ ಮುಂದೆ ನಡೆಯುವಾಗಲೂ ಘಂಟೆಯನ್ನು ಬಾರಿಸಿ ಪರಿಸರವನ್ನು ಪವಿತ್ರವಾಗಿಸುತ್ತದೆ. ಇದೇ ಕಾರಣಕ್ಕೆ ವಿವಾಹ ಮೊದಲಾದ ಸಂದರ್ಭಗಳಲ್ಲಿ ಘಂಟಾನಾದ ಪ್ರಮುಖವಾದ ವಿಧಿಯಾಗಿದೆ. ಹಿಂದಿನ ಕಾಲದಲ್ಲಿ ವಿವಿಧ ಘಂಟೆಗಳನ್ನು ಬಾರಿಸುವ ಮೂಲಕ ಸಂತೋಷ, ದುಃಖ ಮೊದಲಾದ ಭಾವಗಳನ್ನು ಮಾತ್ರವಲ್ಲದೇ ಎಚ್ಚರಿಕೆಯ ಸಂಕೇತಗಳನ್ನೂ ನೀಡಲಾಗುತ್ತಿತ್ತು. ಕಾಲಕ್ರಮೇಣ ಸಂತೋಷದ ಹೊರತಾಗಿ ಇತರ ಭಾವನೆಗಳನ್ನು ಘಂಟಾನಾದದ ಮೂಲಕ ಪ್ರಕಟಿಸುವುದು ನಿಂತೇ ಹೋಗಿದ್ದು ಈಗ ಘಂಟಾನಾದ ಕೇವಲ ಸಂತೋಷವನ್ನು ಮಾತ್ರ ಬಿಂಬಿಸುತ್ತದೆ.

  Temple Bells

  ಆರಾಧನೆಯ ಸಮಯವಾಯಿತೆಂದು ಎಚ್ಚರಿಸುವ ಘಂಟೆ

  ಸಾಮಾನ್ಯವಾಗಿ ಪ್ರತಿ ಧರ್ಮದಲ್ಲಿಯೂ ಪ್ರಾರ್ಥನೆ-ಆರಾಧನೆಗಳಿಗಾಗಿ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಈ ಸಮಯಕ್ಕೆ ಎಲ್ಲರೂ ಒಂದೆಡೆ ಸೇರಬೇಕೆಂದು ಘಂಟೆಯನ್ನು ಬಾರಿಸುವ ಮೂಲಕ ಸೂಚನೆ ನೀಡಲಾಗುತ್ತದೆ. ಸರಿಸುಮಾರಾಗಿ ಇದೇ ಪರಿಯನ್ನು ಶಾಲೆಯ ತರಗತಿಗಳ ವೇಳೆಯನ್ನು ಸೂಚಿಸಲೂ ಬಳಸಲಾಗುತ್ತದೆ. ಘಂಟೆಯ ಸದ್ದು ಎಲ್ಲವೂ ಸರಿಯಾಗಿ ನಡೆಯುತ್ತಿವೆ, ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತಿವೆ ಎಂದು ಸೂಚಿಸುತ್ತಾ ಇರುವ ಮಾಧ್ಯಮವೂ ಆಗಿದೆ.

  English summary

  What Is The Importance Of Bells In Temples?

  In Hinduism, there are a number of gods, a number of beliefs and a number of rituals, all different, with their own different meanings, but a common purpose, the attainment of the Supreme God. Such is the beauty of this religion, kind of unity in diversity. Just like a number of ways to achieve one goal. A red tilak worn on the forehead and a sacred thread tied around the wrist, help add an element of spiritualism in the heart of the wearer. The divinity in the sound of a conch shell, the positive vibes radiated by a bell, that spark of power in those Sanskrit chants, all add even more beauty to the beautiful atmosphere in and around a temple.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more