For Quick Alerts
ALLOW NOTIFICATIONS  
For Daily Alerts

ಸಂಕಷ್ಟ ಚತುರ್ಥಿ ವ್ರತದ ಮಹತ್ವ ಹಾಗೂ ಅದರ ಆಚರಣೆಯ ವಿಧಿ ವಿಧಾನಗಳು

|

ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಕಾರ್ಯಕ್ರಮಗಳು ನಡೆಯುವುದಿದ್ದರೂ ಮೊದಲ ಪೂಜೆ ಸಲ್ಲಬೇಕಾಗಿರುವುದು ಗಣಪತಿ ದೇವರಿಗೆ. ಇದರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಬಳಿಕ ಬರುವಂತಹ ಮೊದಲ ಹಬ್ಬವೇ ಆನೆಯ ತಲೆ ಹೊಂದಿರುವಂತಹ ಗಜಾನನದ್ದು. ಪ್ರತೀ ತಿಂಗಳಲ್ಲಿ ಒಂದು ದಿನ ಗಣಪತಿಯನ್ನು ಸಂಕಷ್ಟ ಚತುರ್ಥಿ ಅಥವಾ ಸಂಕಟ ಚೌತಿಯ ದಿನ ಪೂಜಿಸಲಾಗುತ್ತದೆ. ಈ ದಿನವು ತುಂಬಾ ಪವಿತ್ರವಾಗಿದೆ. ಅದರಲ್ಲೂ ಇದು ಮಂಗಳವಾರ ಮತ್ತು ಶುಕ್ರವಾರದಂದು ಬಂದರೆ ತುಂಬಾ ಪವಿತ್ರವಾಗಿರುವುದು.

ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳ ನಾಲ್ಕನೇ ದಿನವನ್ನು ಚತುರ್ಥಿ ಎಂದು ಕರೆಯಲಾಗುತ್ತದೆ. ಇದನ್ನು ಭಾರತದೆಲ್ಲೆಡೆಯಲ್ಲಿ ಸಂಕಷ್ಟಿ ಚತುರ್ಥಿ ಎಂದು ಆಚರಿಸಲಾಗುವುದು. ಈ ದಿನವು ಕೃಷ್ಣ ಪಕ್ಷ ಅಥವಾ ಚಂದ್ರನ ಕ್ಷೀಣಿಸುವ ಹಂತ ಮತ್ತು ಇದಕ್ಕೆ ಸಂಬಂಧವಿದೆ. ಭಾರತದ ಪ್ರತಿಯೊಂದು ರಾಜ್ಯದಲ್ಲಿ ಇದು ತುಂಬಾ ವಿಭಿನ್ನವಾಗಿ ಆಚರಿಸಲಾಗುತ್ತದೆ.

ಅದರಲ್ಲೂ ಮಹಾರಾಷ್ಟ್ರದಲ್ಲಿ ಇದನ್ನು ಭಿನ್ನ ಹೆಸರುಗಳಿಂದ ಕರೆಯಲಾಗುವುದು. ತಮಿಳುನಾಡಿನದಲ್ಲಿ ಸಂಕಷ್ಟ ಹರ ಚತುರ್ಥಿ ಎಂದು ಕರೆಯಲಾಗುವುದು. ಮಂಗಳವಾರದಂದು ಇದು ಬಂದರೆ ಅಂಗಾರಿಕ ಚತುರ್ಥಿ ಎನ್ನಲಾಗುತ್ತದೆ. ಸಂಸ್ಕೃತದಲ್ಲಿ ಸಂಕಷ್ಟಿ'ಎಂದರೆ ಎಲ್ಲಾ ಸಮಸ್ಯೆಗಳು ಅಥವಾ ಕಠಿಣ ಸಮಯದಿಂದ ಮುಕ್ತಿ ಪಡೆಯುವುದು. ಈ ದಿನದಂದು ಗಣೇಶನನ್ನು ಪೂಜಿಸಿದರೆ ಆಗ ನಿಮಗೆ ಜೀವನದಲ್ಲೂ ಸುಖ ಹಾಗೂ ಸಮೃದ್ಧಿ ಸಿಗುವುದು. ತಮ್ಮ ಸಮಸ್ಯೆಗಳಿಂದ ಮುಕ್ತಿ ನೀಡಲು ಈ ದಿನದಂದು ಜನರು ಉಪವಾಸ ವ್ರತ ಮಾಡುವರು....

ಸಂಕಷ್ಟ ಚತುರ್ಥಿಯ ಕೆಲವು ವಿಧಿವಿಧಾನಗಳು

ಸಂಕಷ್ಟ ಚತುರ್ಥಿಯ ಕೆಲವು ವಿಧಿವಿಧಾನಗಳು

*ಭಕ್ತರು ಅಂಶಿಕ ಅಥವಾ ದಿನವಿಡಿ ಉಪವಾಸ ಮಾಡಬಹುದು. ಇವರು ದಿನವಿಡಿ ಕೇವಲ ಹಣ್ಣುಗಳು, ತರಕಾರಿ ಮತ್ತು ಗೆಡ್ಡೆಗಳನ್ನು ತಿನ್ನಬಹುದು. ನೆಲಗಡಲೆ, ಬಟಾಟೆ ಮತ್ತು ಸಾಬುದಾನ ಕಿಚಡಿಯನ್ನು ಉಪವಾಸ ವ್ರತದ ದಿನದಂದು ತಯಾರಿಸಿ ತಿನ್ನಲಾಗುವುದು. ಪೂಜೆ ಮಾಡಿದ ಬಳಿಕ ಉಪವಾಸ ಬಿಡಲಾಗುತ್ತದೆ.

*ವಿಶೇಷವಾಗಿರುವ ಸಿಹಿತಿಂಡಿಗಳು ಅಥವಾ ನೈವೇದ್ಯ, ಮೋದಕವನ್ನು ಗಣಪತಿ ದೇವರಿಗೆ ಅರ್ಪಿಸಲಾಗುವುದು. ಕಥೆ ಮತ್ತು ಆರತಿ ಬಳಿಕ ಈ ಸಿಹಿತಿಂಡಿಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು.

*ಗಜಾನನ ಜತೆಗೆ ಈ ದಿನದಂದು ಚಂದ್ರನನ್ನು ಕೂಡ ಪೂಜಿಸಲಾಗುವುದು. ನೀರು, ಶ್ರೀಗಂಧ, ಅಕ್ಕಿ ಮತ್ತು ಹೂಗಳನ್ನು ಚಂದ್ರನ ದಿಕ್ಕಿನಲ್ಲಿ ಅರ್ಪಿಸಬೇಕು.

*ಗಣಪತಿ ದೇವರಿಗೆ ಸಂಬಂಧಪಟ್ಟಿರುವಂತಹ ವೇದಮಂತ್ರಗಳನ್ನು ಪಠಿಸಬಹುದು. ಭಕ್ತರು ಗಣೇಶ ಅಷ್ಟೋತ್ತರ, ಸಂಕಷ್ಟಹಾರ ಸ್ತೋತ್ರ ಮತ್ತು ವಕ್ರತುಂಡ ಮಹಾಕಾಯವನ್ನು ಸಂಕಷ್ಟಿ ಚತುರ್ಥಿ ವೇಳೆ ಪಠಿಸಬೇಕು.

*21 ಗರಿಕೆ ಹುಲ್ಲನ್ನು ಗಣೇಶನ ಹೆಸರು ಹೇಳುತ್ತಾ ಅರ್ಪಿಸಬೇಕು.

*ಇದರ ಬಳಿಕ ಗಣೇಶ ದೇವರಿಗೆ ಆರತಿ ಬೆಳಗಿ.

ಸಂಕಷ್ಟ ಚತುರ್ಥಿಯ ಕೆಲವು ವಿಧಿವಿಧಾನಗಳು

ಸಂಕಷ್ಟ ಚತುರ್ಥಿಯ ಕೆಲವು ವಿಧಿವಿಧಾನಗಳು

*ನೈವೇದ್ಯ ತಯಾರಿಸಿದ್ದರೆ ಇದನ್ನು ಬಳಿಕ ನೀವು ಅರ್ಪಿಸಬಹುದು. ನೀವು ಒಮ್ಮೆ ಚಂದ್ರದೇವರ ದರ್ಶನ ಮಾಡಿದ ಬಳಿಕ ಚಂದ್ರದೇವರಿಗೂ ಇದನ್ನು ಅರ್ಪಿಸಬಹುದು.

*ಬಡ ವ್ಯಕ್ತಿ ಅಥವಾ ಬ್ರಾಹ್ಮಣರಿಗೆ ಅನ್ನದಾನ ಮಾಡಿದ ಬಳಿಕ ಉಪವಾಸ ಬಿಡಿ

*ಅಂಗಾರಿಕ ಚತುರ್ಥಿ ವ್ರತ ಕಥೆ ಓದಿ.

*ಪೂಜೆಗೆ ಬಂದವರು, ಕುಟುಂಬಿಕರು ಮತ್ತು ಸ್ನೇಹಿತರಿಗೆ ಪ್ರಸಾದ ವಿತರಿಸಿ.

ದೇವಸ್ಥಾನದಲ್ಲಿ 'ಅಂಗಾರಕಿ' ಸಂಕಷ್ಟಿ ವ್ರತ

ದೇವಸ್ಥಾನದಲ್ಲಿ 'ಅಂಗಾರಕಿ' ಸಂಕಷ್ಟಿ ವ್ರತ

ಕೆಲವು ಜನರು ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿ ಉಪವಾಸ ಕೈಗೊಳ್ಳುವರು. ಇಂತಹ ಸಂದರ್ಭದಲ್ಲಿ ನೀವು ಅರ್ಚಕರಿಂದ ವಿಶೇಷ ಪೂಜೆಗಳು, ಹೋಮ ಮತ್ತು ಅಭಿಷೇಕ ಮಾಡಲು ಹೇಳಬಹುದು. ಅಥರ್ವ ಶೀರ್ಷಾ ಮತ್ತು ಗಣೇಶ ಅಷ್ಟೋತ್ತರರ ಹೇಳುವುದು ತುಂಬಾ ಶುಭವಾಗಿರುವದುಉ. ದೇವಾಲಯದಲ್ಲಿ ಕುಳಿತುಕೊಂಡು ನೀವು ಇದನ್ನು ಮಾಡಬಹುದು. ಇದು ಗಣೇಶ ದೇವರಿಗೆ ತುಂಬಾ ಇಷ್ಟವಾದ ಮಂತ್ರಗಳು ಮತ್ತು ಇದರಿಂದ ದೇವರು ಬೇಗನೆ ಆಶೀರ್ವದಿಸುವರು.

ಸಂಕಷ್ಟಿಯನ್ನು ಮಾಡುವ ಉದ್ದೇಶವೇನು

ಸಂಕಷ್ಟಿಯನ್ನು ಮಾಡುವ ಉದ್ದೇಶವೇನು

ಈ ದಿನ ಬಹಳ ವಿಶೇಷವಾಗಿದ್ದು ವರ್ಷದಲ್ಲಿ ಎರಡು ಬಾರಿ ಮಾತ್ರ ಅಂಗಾರಕ ಸಂಕಷ್ಟಿ ಬರುತ್ತದೆ. 2018 ನೇ ವರ್ಷದಲ್ಲಿ ಅಂಗಾರಕಿ ಸಂಕಷ್ಟಿಯು ಮೂರು ಬಾರಿ ಬರುತ್ತದೆ. ಆದ್ದರಿಂದ ಈ ವರ್ಷ ಬಹಳ ಶ್ರೇಷ್ಠವಾಗಿದೆ. ಅಂಗಾರಕಿ ಸಂಕುಷ್ಟಿ ವ್ರತವು ಇತರ ಎಲ್ಲಾ ಸಂಕಷ್ಟಿ ಚತುರ್ಥಿಗಿಂತಲೂ ಬಹಳ ಶ್ರೇಷ್ಠವಾದುದಾಗಿದೆ. ವರ್ಷದಲ್ಲಿ ಬರುವ ಇತರ ಸಂಕಷ್ಟಿ ಚತುರ್ಥಿಯನ್ನು ಮಾಡುವ ಅದೇ ಪೂಜಾ ಫಲವನ್ನು ಒಂದು ಅಂಗಾರಕ ಸಂಕಷ್ಟಿಯಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

ಸಂಕಷ್ಟಿ ವ್ರತದ ಆಚರಣೆ ಹೇಗೆ

ಸಂಕಷ್ಟಿ ವ್ರತದ ಆಚರಣೆ ಹೇಗೆ

ಎಲ್ಲಾ ಸಂಕಷ್ಟಿ ವ್ರತದಂತೆ ಗಣೇಶನನ್ನು ಭಕ್ತರು ಪೂಜಿಸಿ ದಿನಪೂರ್ತಿ ವ್ರತ ವನ್ನು ಕೈಗೊಳ್ಳುತ್ತಾರೆ. ಚಂದ್ರನು ಅಸ್ತಮಿಸಿದ ನಂತರ ಸ್ನಾನ ಮಾಡಿ ವ್ರತ ವನ್ನು ಮುರಿಯುತ್ತಾರೆ. ವಿಕಟ ಸಂಕಷ್ಟಿಯಂದು ಸಂಜೆ ಸ್ನಾನವನ್ನು ವ್ರತ ಧಾರಿಗಳು ಕೈಗೊಳ್ಳುತ್ತಾರೆ. ನದಿ ಇಲ್ಲವೇ ಕೆರೆಯ ನೀರಿನಿಂದ ಸ್ನಾನವನ್ನು ಮಾಡಬೇಕಾಗುತ್ತದೆ. ಮನೆಯಲ್ಲಿಯೇ ಸ್ನಾನ ಮಾಡುತ್ತೀರಿ ಎಂದಾದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಮಾಡಿ ನಂತರ ಸ್ನಾನ ಮಾಡಬೇಕಾಗುತ್ತದೆ.

ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆ

ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆ

ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆಯಾಗಿದೆ. ಈ ಪೂಜೆಯನ್ನು ಕುಟುಂಬದ ಸುಖ, ಸಮೃದ್ಧಿಗಾಗಿ ಮಾಡಲಾಗುತ್ತದೆ. ಸಂಕಷ್ಟಿ ಚತುದರ್ಶಿಯಮದು ಸೂರ್ಯಾಸ್ತದ ಬಳಿಕ ಪೂಜೆ ಮಾಡಲಾಗುವುದು. ಶುದ್ಧೀಕರಿಸಿದ ಬಳಿಕ ಗಣೀಶನ ಮೂರ್ತಿಯನ್ನು ಇಟ್ಟು, ಅದಕ್ಕೆ ಹೂಗಳು ಮತ್ತು ಕದಿಕೆ ಹುಲ್ಲನ್ನು ಇಟ್ಟು ಪೂಜಿಸಲಾಗುತ್ತದೆ. ಈ ವೇಳೆ ಗಣೇಶನಿಗೆ ಮೋದಕ ಮತ್ತು ಲಾಡು ಕೂಡ ಅರ್ಪಿಸಲಾಗುವುದು. ಸೂರ್ಯಾಸ್ತದ ಬಳಿಕ ವ್ರತಕಥೆ ಅಥವಾ ಆ ತಿಂಗಳಿನ ಕಥೆಯ ಮೂಲಕ ಪೂಜೆ ಆರಂಭವಾಗುವುದು. ಕುಟುಂಬವು ಸುಖಸಮೃದ್ಧಿಯಿಂದ ಇರಲಿ ಎಂದು ದಂಪತಿಯು ಈ ಪೂಜೆ ಮಾಡುವರು.

English summary

What is Sankashti Chaturthi? Why and how is it celebrated?

If there is one god in the Hindu pantheon who is a marker of auspicious beginnings, it is Lord Ganesha. The elephant-headed god is worshipped at the beginning of seasons and rituals for this reason. And there is one day in every month of the year when this worship is said to be at its peak. Known as Sankashti Chaturthi or Sakat Chauth, this day is even more auspicious
X
Desktop Bottom Promotion