For Quick Alerts
ALLOW NOTIFICATIONS  
For Daily Alerts

ನಿಗೂಢ ಜಗತ್ತು: ಆತ್ಮಹತ್ಯೆ ಮಾಡಿಕೊಂಡವರ ಆತ್ಮದ ಕಥೆ!

By Manu
|

ಸಾವು....ಈ ಎರಡಕ್ಷರದ ನಂಟನ್ನು ಬಿಡಿಸಲು ಇದುವರೆಗೆ ಯಾರಿಂದಲೂ ಸಾಧ್ಯವಾಗಲಿಲ್ಲ. ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರೆ ಸಾವು ಎನ್ನುವುದು ನಾವು ನಿರ್ಧರಿಸುವುದಲ್ಲ, ಎಲ್ಲವೂ ವಿಧಿಲೀಲೆ. ಸಾವು ಕುಳಿತಲ್ಲೇ ಬರಬಹುದು, ನಡೆದುಕೊಂಡು ಹೋಗುವಾಗ ಬರಬಹುದು ಅಥವಾ ಮಲಗಿದಲ್ಲೇ ಇಹಲೋಕ ತ್ಯಜಿಸಲು ಬಹುದು. ಇದೆಲ್ಲವೂ ಸಹಜ ಸಾವುಗಳು. ಕೆಲವರು ಸಾವನ್ನು ತಾವೇ ತಂದುಕೊಳ್ಳುತ್ತಾರೆ. ಅದೇ ಆತ್ಮಹತ್ಯೆ ಮೂಲಕ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

ಈ ಆತ್ಮಹತ್ಯೆ ಮಾಡಿದವರ ಆತ್ಮಗಳು ಎಲ್ಲಿಗೆ ಹೋಗುತ್ತದೆ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಕೆಲವು ಆತ್ಮಗಳು ಸ್ವರ್ಗದೆಡೆ ಹೆಜ್ಜೆ ಇಟ್ಟರೆ ಮತ್ತೆ ಕೆಲವು ನರಕವಾಸಿಗಳೆ. ಇದೆಲ್ಲವೂ ನೆನಪಾಗಿರುವುದು ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಹಿಂದಿ ಕಿರುತೆರೆ ನಟಿ ಪ್ರತ್ಯುಶಾ ಬ್ಯಾನರ್ಜಿಯಿಂದಾಗಿ..! ಆಕೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಹಲವರಿಗೆ ಆಘಾತವಾಗಿದೆ. ಇಂತಹ ಆತ್ಮಹತ್ಯೆಗಳು ದಿನಕ್ಕೆ ಹಲವಾರು ನಡೆಯುತ್ತಲೇ ಇರುತ್ತದೆ. ಆತ್ಮಹತ್ಯೆ ಮಾಡಿಕೊಂಡವರ ದೇಹವನ್ನು ಅವರವರ ಧರ್ಮಕ್ಕೆ ಅನುಗಣವಾಗಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ ಆತ್ಮದ ಕಥೆಯೇನು? ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ವಿವರವಾದ ಮಾಹಿತಿಯನ್ನು ನೀಡಲಿದೆ, ಮುಂದೆ ಓದಿ.. ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?

ಆತ್ಮಹತ್ಯೆಗೆ ಕಾರಣ

ಆತ್ಮಹತ್ಯೆಗೆ ಕಾರಣ

ಆತ್ಮಹತ್ಯೆ ಮಾಡಿಕೊಳ್ಳುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆ ಮೂಡುವುದು ಸಹಜ, ಆದರೆ ಜೀವನದಲ್ಲಿ ತುಂಬಾ ನೊಂದ, ಖಿನ್ನತೆಗೆ ಒಳಗಾದ, ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಸ್ಥಿರತೆಯನ್ನು ಹೊಂದಿಲ್ಲದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಇಂತವರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಯವರು ಅತಿಯಾದ ನೋವನ್ನು ಅನುಭವಿಸುವುದನ್ನು ನಾವು ನೋಡಿದ್ದೇವೆ.

ಧರ್ಮಗಳ ಪ್ರಕಾರ

ಧರ್ಮಗಳ ಪ್ರಕಾರ

ಹೆಚ್ಚಿನ ಧರ್ಮಗಳ ಪ್ರಕಾರ ಆತ್ಮಹತ್ಯೆ ಎನ್ನುವುದು ಪಾಪ. ಆತ್ಮಹತ್ಯೆ ಮಾಡಿಕೊಂಡವರ ಆತ್ಮವು ಭೂಮಿಯ ಮೇಲೆಯೇ ಅಲೆದಾಡುತ್ತಾ ಇರುತ್ತದೆಯಾ ಅಥವಾ ಮುಕ್ತಿಯ ಬೆಳಕನ್ನು ಅದು ಪಡೆಯುತ್ತದೆಯಾ? ಎನ್ನುವುದು ಪ್ರಶ್ನೆಯಾಗಿಯೇ ಇದೆ. ಆದರೆ ಸಾವಿನ ಬಳಿಕ ಪ್ರತಿಯೊಂದು ಆತ್ಮಕ್ಕೂ ಶಾಂತಿ ಸಿಗುತ್ತದೆ ಎನ್ನುವುದು ನಂಬಿಕೆಯಾಗಿದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ಮಾಡುವ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಾವಿನ ಬಳಿಕ ಏನಾಗುತ್ತದೆ?

ಸಾವಿನ ಬಳಿಕ ಏನಾಗುತ್ತದೆ?

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಸಂಪೂರ್ಣವಾಗಿ ಜಾಗೃತ ಮತ್ತು ಒಂದು ಅತೀಂದ್ರಿಯ ವಾತಾವರಣದ ಮಧ್ಯೆ ಸಿಕ್ಕಿ ಬೀಳುತ್ತಾನೆ. ಈ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಭೂಮಿಯ ಮೇಲೆ ಏನೆಲ್ಲಾ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗುವುದು.

ಸಾವಿನ ಬಳಿಕ ಏನಾಗುತ್ತದೆ?

ಸಾವಿನ ಬಳಿಕ ಏನಾಗುತ್ತದೆ?

ದೇಹವನ್ನು ಆತ್ಮವು ಬಿಟ್ಟು ತೆರಳಿದಾಗ ಅದು ಸಂಪೂರ್ಣವಾಗಿ ಸಾವಿನ ಪ್ರಕ್ರಿಯೆಗೆ ಒಳಗಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಸುಲಭವಾಗಿ ಬೆಳಕನ್ನು ಕಾಣಲು ಸಾಧ್ಯವಾಗುವುದಿಲ್ಲ.

ಆತ್ಮಹತ್ಯೆ ಮಾಡಿಕೊಂಡವರು ಒದ್ದಾಡುತ್ತಾರೆಯಾ?

ಆತ್ಮಹತ್ಯೆ ಮಾಡಿಕೊಂಡವರು ಒದ್ದಾಡುತ್ತಾರೆಯಾ?

ಕೆಲವೊಂದು ಮೂಲಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಭೂಮಿಗಿಂತ ಹೆಚ್ಚು ನೋವು ಸಿಗುವಂತಹ ಪ್ರದೇಶದಲ್ಲಿ ಸಿಕ್ಕಿ ಬೀಳುತ್ತಾರಂತೆ!

ಬೆಳಕು ಕಾಣುತ್ತದೆಯಾ?

ಬೆಳಕು ಕಾಣುತ್ತದೆಯಾ?

ಆತ್ಮಹತ್ಯೆ ಮಾಡಿಕೊಂಡವರಿಗೆ ಬೆಳಕು ಕಾಣಲು ಸಿಗುವುದಿಲ್ಲವೆಂದು ಹೇಳಲಾಗುತ್ತದೆ. ಬೆಳಕನ್ನು ಕಾಣುವ ಮೊದಲು ಅವರು ಸರಿಯಾದ ಸಾವನ್ನು ಪಡೆಯಬೇಕು. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನ ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರನ್ನು ಕಾಡಲು ಆರಂಭಿಸುತ್ತಾರೆ.

ಬೆಳಕು ಕಾಣುತ್ತದೆಯಾ?

ಬೆಳಕು ಕಾಣುತ್ತದೆಯಾ?

ಯಾವುದೇ ಕಾರಣವಿಲ್ಲದೆ ವಿದ್ಯುತ್ ಕಣ್ಣಮುಚ್ಚಾಲೆಯಾಡುವುದು, ಫೋಟೋಗಳು ಮತ್ತು ಚಿತ್ರಗಳು ಕೆಳಗೆ ಬೀಳುವುದು, ಗಡಿಯಾರ ನಿಲ್ಲುವುದು ಇತ್ಯಾದಿ ಆತ್ಮಹತ್ಯೆ ಮಾಡಿಕೊಂಡ ಕೆಲವು ವ್ಯಕ್ತಿಗಳು ತಮ್ಮ ಉಪಸ್ಥಿತಿಯನ್ನು ತೋರಿಸುವ ವಿಧಾನವಾಗಿದೆ.

ಅಷ್ಟಕ್ಕೂ ಸಾವಿನ ಬಳಿಕ ಏನಾಗುವುದು?

ಅಷ್ಟಕ್ಕೂ ಸಾವಿನ ಬಳಿಕ ಏನಾಗುವುದು?

ಕೆಲವೊಂದು ನಂಬಿಕೆಗಳ ಪ್ರಕಾರ ತಮ್ಮ ಪ್ರೀತಿಪಾತ್ರರಿಗೆ ತೊಂದರೆಯನ್ನು ಕೊಡುವ ವ್ಯಕ್ತಿಗಳು ಶಾಶ್ವತವಾಗಿ ತಮ್ಮ ಆತ್ಮವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಅವರ ಸ್ವಾಭಾವಿಕ ಜೀವನವು ಒಂದು ಅಂತ್ಯವನ್ನು ಕಾಣುವುದು.

Read more about: ನಗರ ಜೀವನ urban life
English summary

What Happens To The Soul After Suicide?

Pratyusha Banerjee's suicide took the world by storm. It left us wondering that after a person commits suicide, where does the soul wander off too? Does it go straight to heaven, or purgatory or hell. While we know what happens to the physical being, it is the soul which gets us confused as to where it heads to. Today, Boldsky shares with you some eerie information to this question often asked about suicide victims.
X
Desktop Bottom Promotion