For Quick Alerts
ALLOW NOTIFICATIONS  
For Daily Alerts

ವಿಧುರನ ನೀತಿಗಳು: ನಿಮ್ಮನ್ನು ಸಂತೋಷವಾಗಿಡುವ 6 ಸಂಗತಿಗಳು

|

ಮಹಾಭಾರತದಲ್ಲಿ ಕೃಷ್ಣ ಪರಮಾತ್ಮನು ಮೆಚ್ಚಿರುವಂತಹ ವ್ಯಕ್ತಿಯೆಂದರೆ ಅದು ವಿಧುರ. ಪಾಂಡವರ ಹಾಗೂ ಕೌರವರ ಮಾವನಾಗಿದ್ದ ವಿಧುರ ನೈತಿಕ ಹಾಗೂ ನ್ಯಾಯಯುತ ಮಾರ್ಗದಲ್ಲಿ ನಡೆದವನು. ಈತನ ನೀತಿಯಿಂದ ಎಲ್ಲರು ಪ್ರೇರಣೆ ಪಡೆಯುತ್ತಿದ್ದರು ಮತ್ತು ಎಲ್ಲರಿಗೂ ಇದರಿಂದ ಸ್ಪೂರ್ತಿಯು ಸಿಗುತ್ತಲಿತ್ತು. ಆತ ಹೇಳಿದಂತಹ ಕೆಲವೊಂದು ನೀತಿ ತತ್ವಗಳು ಇಂದಿಗೂ ಜೀವನದಲ್ಲಿ ಪ್ರಸ್ತುತ. ವಿಧುರ ಮಹಾಭಾರತದಲ್ಲಿ ಪಾಂಡವರಿಗೆ ಹಾಗೂ ಕೌರವರಿಗೆ ನ್ಯಾಯ ಹಾಗೂ ನೈತಿಕವಾಗಿ ಇರುವುದು ಹೇಗೆಂದು ಹೇಳುತ್ತಾನೆ.

ಪಾಂಡವರು ಇದನ್ನು ಪಾಲಿಸಿದರೆ, ಕೌರವರು ಇದನ್ನು ನಿರ್ಲಕ್ಷ್ಯ ಮಾಡಿ ಕೊನೆಗೆ ಅವನತಿ ಕಾಣುತ್ತಾರೆ. ವಿಧುರ ನೀತಿಗಳು ತುಂಬಾ ಮೌಲ್ಯಯುತವಾಗಿರುವಂತದ್ದಾಗಿದೆ ಎಂದು ಹೇಳಲಾಗುತ್ತದೆ. ವಿಧುರನು ಜೀವನದಲ್ಲಿನ ಸಂತೋಷದ ಬಗ್ಗೆ ಹೇಳಿದ್ದಾನೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಂತೋಷವು ಮುಖ್ಯವಾಗಿರುವುದು. ಈ ಸಂತೋಷವನ್ನು ಪಡೆಯಲು ಹಲವಾರು ದಾರಿಗಳಿವೆ. ಆದರೆ ನ್ಯಾಯ ಹಾಗೂ ನೀತಿಯಿಂದ ಪಡೆದಂತಹ ಸಂತೋಷ ಮಾತ್ರ ಕೊನೆ ತನಕ ಉಳಿಯುವುದು. ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಎಂದು ವಿಧುರ ಹೇಳಿದ್ದಾನೆ. ಇದನ್ನು ನೀವು ತಿಳಿಯಿರಿ. ಕೆಳಗೆ ಕೊಟ್ಟಿರುವ ಶ್ಲೋಕವು ಎಲ್ಲವನ್ನು ವಿವರಿಸುವುದು... ಆರೊಗ್ಯಂ ಆನಿಣಿಮ್ ವಿಪ್ರವಾಸವು ಸರ್ಧಮನುಷ್ಯ ಸಹಾ ಸ್ಮಾಪ್ರಯೋಗ ಸ್ವಪ್ರತ್ಯಯ ವಿರಿತಿರ್ಭಿತ್ವಾಸಾ ಶಾದ್ ಜೀವನ್ಲೋಕಸ್ಯ ಸುಖನಿ ರಾಜನ್''

 ಆರೋಗ್ಯ

ಆರೋಗ್ಯ

ಎಲ್ಲಾ ರೀತಿಯ ರೋಗಗಳಿಂದ ಮುಕ್ತವಾಗಿರುವಂತಹ ವ್ಯಕ್ತಿಯು ವಿಶ್ವದಲ್ಲಿ ಎಲ್ಲಾ ರೀತಿಯ ಚಿಂತೆಗಳಿಂದ ಮುಕ್ತನಾಗಿರುವನು. ಆರೋಗ್ಯವು ಕೆಟ್ಟರೆ ಅದರಿಂದ ಹಲವಾರು ಚಿಂತೆಗಳು ಉಂಟಾಗುವುದು. ಇದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದರೆ ಅದು ವ್ಯಕ್ತಿಯ ಸಂಪಾದನೆಯ ಸಾಮರ್ಥ್ಯ ಮತ್ತು ಸಂತೋಷದ ಮೇಲೆ ಕೂಡ ಪರಿಣಾಮ ಬೀರುವುದು.

ಸಾಲ

ಸಾಲ

ತನ್ನ ಸಂಪಾದನೆಗಿಂತ ಹೆಚ್ಚಿನ ಹಣವನ್ನು ಯಾವ ವ್ಯಕ್ತಿಯು ಖರ್ಚು ಮಾಡಬಾರದು. ವಿಶ್ವದಲ್ಲಿ ಐಷಾರಾಮಿ ಜೀವನ ನಡೆಸಬೇಕೆಂಬ ಆಕಾಂಕ್ಷೆಯಲ್ಲಿ ಸಿಲುಕಿಕೊಂಡಿರುವಂತಹ ವ್ಯಕ್ತಿಯು ತನ್ನ ಸ್ನೇಹಿತರಿಂದ ಸಾಲ ಪಡೆದುಕೊಳ್ಳಲು ಯಾವತ್ತೂ ಹಿಂಜರಿಯಲ್ಲ. ಸಾಲದಿಂದಾಗಿ ಆತ ಸಂಕೋಲೆಯಲ್ಲಿ ಸಿಲುಕಿಕೊಳ್ಳುವನು. ಸಾಲ ಮರುಪಾವತಿ ಮಾಡಬೇಕೆಂಬ ಚಿಂತೆಯು ಆತನಲ್ಲಿ ಯಾವತ್ತೂ ಕಾಡುತ್ತಲೇ ಇರುವುದು. ಇದರಿಂದಾಗಿ ಸಾಲಮುಕ್ತವಾಗಿದ್ದರೆ ಸಂತೋಷದ ಜೀವನ ಸಾಗಿಸಬಹುದು.

ತನ್ನದೇ ರಾಷ್ಟ್ರ

ತನ್ನದೇ ರಾಷ್ಟ್ರ

ಹೆಚ್ಚಿನ ಜನರು ತಮ್ಮ ಕುಟುಂಬ ಹಾಗೂ ಮನೆಯವರನ್ನು ಬಿಟ್ಟು ದೂರದ ದೇಶಗಳಿಗೆ ಪ್ರಯಾಣ ಬೆಳೆಸಿ, ಅಲ್ಲಿ ಹಣ ಸಂಪಾದನೆ ಮಾಡುತ್ತಾರೆ. ಈ ವೇಳೆ ಆತ ಪ್ರತಿಯೊಬ್ಬರೊಂದಿಗೆ ಮತ್ತು ಪ್ರತಿಯೊಂದು ವಿಚಾರದಲ್ಲೂ ಹೊಸ ದೇಶದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ತನ್ನದೇ ದೇಶದಲ್ಲಿ ವಾಸಿಸುವುದು ವಿಶ್ವದಲ್ಲಿ ಸಿಗುವಂತಹ ಅತೀ ದೊಡ್ಡ ಸಂತೋಷ.

Most Read: ವಿಧುರನ ಪ್ರಕಾರ ಈ 5 ಸಂಗತಿಗಳನ್ನು ಹೊಂದಿರುವವರು ಸದಾ ಸಂತೋಷವಾಗಿ ಇರುತ್ತಾರಂತೆ

ಸಂಘ

ಸಂಘ

ಸುಶಿಕ್ಷಿತ ವ್ಯಕ್ತಿಗಳ ಸಂಘದಲ್ಲಿ ಇರುವಂತಹ ವ್ಯಕ್ತಿಗಳು ಯಾವಾಗಲೂ ಜೀವನದಲ್ಲಿ ಹೊಸತನ್ನು ಹಾಗೂ ಉತ್ತಮವಾಗಿರುವುದನ್ನು ಕಲಿಯುವರು. ತಮ್ಮ ಸುತ್ತಲು ಇರುವಂತಹ ಜನರಿಗಂದ ಒಳ್ಳೆಯದನ್ನು, ಹೊಸತನ್ನು ಮತ್ತು ಮೌಲ್ಯಯುತವಾಗಿರುವುದನ್ನು ಕಲಿಯುವಂತಹ ವ್ಯಕ್ತಿಗಳು ಯಾವಾಗಲೂ ಜೀವನದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸುವಂತಹ ಸಾಮರ್ಥ್ಯ ಹೊಂದಿರುವರು. ಕೆಟ್ಟವರ ಸಂಘದಿಂದ ಯಾವಾಗಲೂ ದೂರವಿರಬೇಕು. ಒಳ್ಳೆಯವರ ಸಂಘದಲ್ಲಿ ಇರುವಂತಹ ವ್ಯಕ್ತಿಯು ಯಾವಾಗಲೂ ಸಂತೋಷ ಮತ್ತು ಅದೃಷ್ಟದಿಂದ ಇರುವನು.

ಸ್ವಾವಲಂಬನೆ

ಸ್ವಾವಲಂಬನೆ

ನೀವಾಗಿಯೇ ಸಂಪಾದನೆ ಮಾಡಿದಾಗ ನಿಜವಾದ ಸಂತೋಷವು ಸಿಗುವುದು. ಬೇರೆಯವರಿಗಾಗಿ ನೀವು ಸಂಪಾದನೆ ಮಾಡಿ ಅದರಿಂದ ಅವರ ಆಕಾಂಕ್ಷೆಗಳನ್ನು ಈಡೇರಿಸಿದ ವೇಳೆ ಕೂಡ ನಿಮಗೆ ಹೆಚ್ಚಿನ ಸಂತೋಷ ಸಿಗುವುದು. ನಮ್ಮ ಸಂತೋಷಕ್ಕಾಗಿ ಬೇರೆಯವರನ್ನು ಅವಲಂಬಿಸಿರುವುದು ಮತ್ತು ನಮ್ಮನ್ನು ಅವಲಂಬಿಸಿರುವವರ ಆಕಾಂಕ್ಷೆಗಳನ್ನು ಈಡೇರಿಸದೆ ಇರುವುದು ಕೂಡ ನಮ್ಮ ಹೃದಯದಲ್ಲಿ ನೋವುಂಟು ಮಾಡುವುದು ಮತ್ತು ಇದರಿಂದ ಆತ್ಮಗೌರವವು ಕುಂದುವುದು.

ಭೀತಿಯಿಲ್ಲದಿರುವುದು

ಭೀತಿಯಿಲ್ಲದಿರುವುದು

ಸಂತೋಷಕ್ಕೆ ಮತ್ತೊಂದು ಕಾರಣವೆಂದರೆ ಅದು ಭೀತಿಯಿಲ್ಲದೆ ಇರುವುದು. ಆದರೆ ನಿರ್ಭೀತಿಯು ಅಷ್ಟು ಸುಲಭವಾಗಿ ಬರುವುದಿಲ್ಲ. ಇದಕ್ಕಾಗಿ ಎರಡು ಅಂಶಗಳು ಅತೀ ಅಗತ್ಯವಾಗಿರುವುದು. ನಮ್ಮೆಲ್ಲಾ ಪೂರ್ವಾಪೇಕ್ಷಿತ ಕ್ರಮಗಳು ಸರಿಯಾದ ಮತ್ತು ನ್ಯಾಯಯುತವಾಗಿರಬೇಕು. ಇನ್ನೊಂದು ನಿಯಮವೆಂದರೆ ನಮ್ಮಿಂದ ಬಲಿಷ್ಠವಾಗಿರುವವರ ಜತೆಗೆ ಯಾವತ್ತೂ ಶತ್ರುತ್ವ ಹೊಂದಿರಬಾರದು. ಈ ಆರು ಅಂಶಗಳು ನಿಮ್ಮನ್ನು ತುಂಬಾ ಸಂತೋಷ ಹಾಗೂ ಅದೃಷ್ಟದಿಂದ ಇಡುವುದು. ಈ ಆರು ಅಂಶಗಳನ್ನು ನೀವು ಪಾಲಿಸುತ್ತಾ ಹೋಗಿ.

English summary

Vidur Niti:Things That Make You Happy

Vidura, the uncle of the Kauravas and the Pandavas in the Mahabharata, has been a source of inspiration for us through his quotes. A philosopher and a righteous man, Vidura was the one who had narrated the entire Mahabharata to Dhritarashtra. He was the only one who spoke for Draupadi while she was being humiliated by Duryodhana.
X
Desktop Bottom Promotion