Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ವಿಧುರನ ಪ್ರಕಾರ ಈ 5 ಸಂಗತಿಗಳನ್ನು ಹೊಂದಿರುವವರು ಸದಾ ಸಂತೋಷವಾಗಿ ಇರುತ್ತಾರಂತೆ
ಮಹಾಭಾರತವನ್ನು ತುಂಬಾ ಸೂಕ್ಷ್ಮವಾಗಿ ಓದುತ್ತಾ ಹೋದರೆ ಅದರಲ್ಲಿ ನಿಮಗೆ ಸಾವಿರಾರು ಅಡ್ಡ ಕಥೆಗಳು ಹಾಗೂ ಉಪಕಥೆಗಳು ಸಿಗುತ್ತಾ ಹೋಗುತ್ತದೆ. ಒಬ್ಬೊಬ್ಬ ವ್ಯಕ್ತಿಯು ಮಹಾಭಾರತದಲ್ಲಿ ಹೇಗೆ ಒಬ್ಬ ಪಾತ್ರಧಾರಿಯಾಗುತ್ತಾನೆ ಎಂದು ಈ ಎಲ್ಲಾ ಕಥೆಗಳು ನಮಗೆ ತಿಳಿಸಿಕೊಡುತ್ತದೆ. ಅರ್ಜುನ, ಕರ್ಣ, ಭೀಷ್ಮ, ದ್ರೋಣಾಚಾರ್ಯ, ದುರ್ಯೋಧನನಂತೆ ಮಹಾಭಾರತದಲ್ಲಿ ವಿಧುರ ಕೂಡ ಪ್ರಮುಖವಾದ ಪಾತ್ರ. ಈತ ಕೌರವ ಹಾಗೂ ಪಾಂಡವರ ಮಾವ. ವಿಧುರನ ನ್ಯಾಯನೀತಿಯಿಂದಾಗಿ ಕೃಷ್ಣ ದೇವರು ಕೂಡ ಆತನನ್ನು ಪ್ರೀತಿಸುತ್ತಿದ್ದರು.

ವಿಧುರನು ತನ್ನದೇ ಆಗಿರುವ ವಿಧುರ ನೀತಿ ಎನ್ನುವ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಆತ ನ್ಯಾಯ ಯಾವುದು ಅನ್ಯಾಯ ಯಾವುದು? ಹೇಗೆ ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ಸಾಗಬೇಕು ಎಂದು ಎಲ್ಲವನ್ನೂ ಹೇಳಿರುವರು. ಈ ಪುಸ್ತಕವು ಜೀವನದ ನೀತಿ ಮೌಲ್ಯಗಳನ್ನು ಹೇಳಿಕೊಡುವುದು ಮತ್ತು ಜೀವನದಲ್ಲಿ ಸದ್ಗುಣಗಳ ಮಹತ್ವವನ್ನು ಸಾರುವುದು. ಈ ಪುಸ್ತಕದಿಂದಲೇ ಆಯ್ದುಕೊಂಡಿರುವ, ಮನುಷ್ಯನು ಸಂತೋಷವಾಗಿರಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ಹೇಳಲಾಗಿದೆ. ನೀವು ಸಂತೋಷವಾಗಿರಬೇಕಾದರೆ ವಿಧುರನ ಐದು ನೀತಿಗಳನ್ನು ಪಾಲಿಸಿಕೊಂಡು ಹೋಗಬೇಕು. ಅದು ಯಾವುದು ಎಂದು ನೀವು ಮುಂದೆ ಓದುತ್ತಾ ಸಾಗಿ...

ಆದಾಯಕ್ಕೆ ವಿವಿಧ ಮೂಲಗಳು
ನಾವು ಇರುವಂತಹ ಭೂಮಿಯಲ್ಲಿ ಆರ್ಥಿಕತೆಯು ತುಂಬಾ ವೇಗವಾಗಿ ಸಾಗುವುದು ಮತ್ತು ಸ್ಪರ್ಧೆಯು ತೀವ್ರ ಗತಿಯಲ್ಲಿರುವುದು. ಇಂತಹ ಸಮಯದಲ್ಲಿ ಆದಾಯಕ್ಕಾಗಿ ವಿವಿಧ ಮೂಲಗಳನ್ನು ಕಂಡುಹಿಡಿದರೆ ಅದರಿಂದ ಜೀವನ ಸುಗಮವಾಗುವುದು. ಕೇವಲ ಒಂದು ಮೂಲದಿಂದ ನೀವು ಆದಾಯವನ್ನು ಪಡೆಯುತ್ತಲಿದ್ದರೆ ಆಗ ಇಂದಿನ ದಿನಗಳಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟವಾಗುವುದು.

ಒಳ್ಳೆಯ ಆರೋಗ್ಯ
ದೈಹಿಕ ಸಮಸ್ಯೆಗಳು ಮತ್ತು ಕೆಲವೊಂದು ಅನಾರೋಗ್ಯಗಳು ಮನುಷ್ಯನನ್ನು ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲನನ್ನಾಗಿ ಮಾಡುವುದು. ಇದು ದೀರ್ಘಾವಧಿಗೆ ತುಂಬಾ ಹಾನಿ ಉಂಟು ಮಾಡುವುದು. ಒಳ್ಳೆಯ ಆರೋಗ್ಯ, ಒಳ್ಳೆಯ ಮನಸ್ಥಿತಿ ಮತ್ತು ಕೆಲಸ ಮಾಡಲು ಪ್ರೇರಣೆ, ಈ ಎಲ್ಲಾ ಅಂಶಗಳು ಒಂದಕ್ಕೊಂದು ಬೆಸೆದುಕೊಂಡಿದೆ. ಒಳ್ಳೆಯ ಆರೋಗ್ಯ ಹೊಂದಿರುವ ವ್ಯಕ್ತಿಯು ತುಂಬಾ ಬಲಿಷ್ಠ ಹಾಗೂ ಸಂತೋಷವಾಗಿರುವನು.

ಮೆಲುದನಿಯಲ್ಲಿ ಮಾತನಾಡುವ ಜನರು
ತುಂಬಾ ಸಿಹಿ ಹಾಗೂ ಸೌಮ್ಯವಾಗಿ ಮಾತನಾಡುವಂತಹ ವ್ಯಕ್ತಿಗಳು ಬೇರೆಯವರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುವರು. ಇನ್ನೊಂದು ಕಡೆಯಲ್ಲಿ ಯಾವಾಗಲೂ ಬೇರೆಯವರ ಕಾಲೆಳೆಯುವುದು ಮತ್ತು ಟೀಕಿಸುವವರು ಯಾವತ್ತಿಗೂ ಶಾಂತಿಯಿಂದ ಇರಲ್ಲ. ನಾವು ಹೇಗೆ ಜನರನ್ನು ಉಪಚರಿಸುತ್ತೇವೆಯೋ ಅದೇ ರೀತಿಯಾಗಿ ಜನರು ಕೂಡ ನಮ್ಮನ್ನು ಉಪಚರಿಸುವರು. ಬೇರೆಯವರ ಕಡೆ ನಮ್ಮ ನಡವಳಿಕೆಯು ಹೇಗಿರುತ್ತದೆಯಾ ಅದೇ ರೀತಿ ಅವರ ನಡವಳಿಕೆಯು ಇರುವುದು.

ಜ್ಞಾನ
ಜ್ಞಾನವುಳ್ಳ ವ್ಯಕ್ತಿಯು ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಲ್ಲ. ದೈಹಿಕ ಅಥವಾ ಆರ್ಥಿಕ ಸಂಪತ್ತಿಗಿಂತ ಜ್ಞಾನವು ತುಂಬಾ ಶ್ರೇಷ್ಠವಾಗಿರುವುದು. ಹಣ ಹಾಗೂ ದೈಹಿಕ ಶಕ್ತಿಯು ವಿಫಲವಾಗುವಂತಹ ಜಾಗದಲ್ಲಿ ಜ್ಞಾನ ಹಾಗೂ ಬುದ್ಧಿವಂತಿಕೆಯು ಕೆಲಸ ಮಾಡುವುದು.

ವಿಧೇಯ ಮಕ್ಕಳು
ಕುಟುಂಬವನ್ನು ಹೊಂದಿರುವ ವ್ಯಕ್ತಿಗೆ ತನ್ನ ಮಕ್ಕಳ ನೆಮ್ಮದಿಯು ತುಂಬಾ ಮುಖ್ಯವಾಗಿರುವುದು. ಮಕ್ಕಳು ತುಂಬಾ ವಿಧೇಯರಾಗಿದ್ದರೆ ಆಗ ಪೋಷಕರು ತುಂಬಾ ಸಂತೋಷ ಹಾಗೂ ಆರಾಮವಾಗಿರುವರು. ಇಂತಹ ಮಕ್ಕಳು ಮುಂದೆ ಜೀವನದಲ್ಲಿ ಯಶಸ್ಸನ್ನು ಪಡೆಯುವರು ಮತ್ತು ವಯಸ್ಸಾದಾಗ ತಮ್ಮ ತಂದೆತಾಯಿಯ ಬಗ್ಗೆ ಸರಿಯಾಗಿ ಕಾಳಜಿ ವಹಿಸುವರು. ತುಂಬಾ ವಿಧೇಯ ಮಕ್ಕಳು ಇರುವಂತಹ ವ್ಯಕ್ತಿಗಳು ತುಂಬಾ ಅದೃಷ್ಟ, ಸಂತೋಷ ಹಾಗೂ ಅಧಿಕಾರ ಹೊಂದಿರುವವರು ಎಂದು ಹೇಳಲಾಗುತ್ತದೆ.



Click it and Unblock the Notifications
