For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮೀ ವ್ರತ 2020: ವರಮಹಾಲಕ್ಷ್ಮೀ ಅಷ್ಟೋತ್ತರ ಮಂತ್ರ ಹಾಗೂ ಶ್ಲೋಕಗಳು

|

ಮನೆ-ಮನೆಗೆ ವರಮಹಾಲಕ್ಷ್ಮೀ ಕಾಲಿಡಲು ಇನ್ನು ಎರಡನೇ ದಿನ ಬಾಕಿ ಇದೆ. 2020ನೇ ಸಾಲಿನಲ್ಲಿ ಜುಲೈ 31ರಂದು ವರಮಹಾಲಕ್ಷ್ಮೀ ವ್ರತ ಆಚರಿಸಲಾಗುವುದು. ಪ್ರತೀ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ. ಧನ ಕನಕವನ್ನು ನೀಡುವ ಲಕ್ಷ್ಮೀ ಮಾತೆಯು ಮನೆಯಲ್ಲಿ ಸಕಲ ಐಶ್ವರ್ಯವನ್ನು ನೀಡುವಾಕೆಯಾಗಿದ್ದು ಸರಳ ಪೂಜೆಗೆ ಒಲಿದು ಬೇಡಿದ್ದನ್ನು ನೀಡುವ ಅಭಯದಾಕೆಯಾಗಿದ್ದಾಳೆ.

ಅದರಲ್ಲೂ ಶ್ರಾವಣ ಶುಕ್ರವಾರದಂದು ಲಕ್ಷ್ಮೀಗೆ ಪೂಜೆ ಮಾಡಿದರೆ ಬಹಳ ಶ್ರೇಷ್ಠ. ಇದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಯೂರುತ್ತಾಳೆ, ಆರ್ಥಿಕವಾಗಿ ಸಬಲರಾಗುತ್ತಾರೆ, ಅಷ್ಟೈಶ್ವರ್ಯ ನೆಲೆಸುತ್ತದೆ ಎನ್ನಲಾಗುತ್ತದೆ. ಆದರೆ ಲಕ್ಷ್ಮೀ ಚಂಚಲೆ, ನಿಂತಲ್ಲಿ ನಿಲ್ಲಲಾರಳು. ತನ್ನನ್ನು ಶುದ್ಧ ಭಕ್ತಿ, ಮನಸ್ಸಿನಿಂದ ಆರಾಧಿಸುವ ಸ್ಥಳ, ಮನೆ ಮತ್ತು ವ್ಯಕ್ತಿಗಳನ್ನು ಆಕೆ ಹುಡುಕಿಕೊಂಡು ಹೋಗಿ ನೆಲೆಯೂರುತ್ತಾಳೆ ಎಂಬ ಮಾತಿದೆ.

ಅದೃಷ್ಟದ ದೇವತೆಯಾದ ಲಕ್ಷ್ಮಿಗೆ ಕೆಲವೊಂದು ಮಂತ್ರ, ಸ್ತೋತ್ರಗಳ ಮೂಲಕ ಹಾಡಿ ಹೊಗಳಿದರೆ ಆಕೆಯು ಪ್ರಸನ್ನಳಾಗುತ್ತಾಳೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಲಕ್ಷ್ಮೀಯ ಅಷ್ಟೋತ್ತರ ನಾಮಾವಳಿ ಹಾಗೂ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಹೇಳಬಹುದಾದ ಶ್ಲೋಕಗಳನ್ನು ತಿಳಿಸಲಾಗಿದೆ. ಲಕ್ಷ್ಮಿ ಮಂತ್ರವನ್ನು ಸಮಾನಾರ್ಥಕವಾಗಿ ಹಣ ಮಂತ್ರ ಎಂದೂ ಕರೆಯುತ್ತಾರೆ. ಆದರೆ ಲಕ್ಷ್ಮಿ ಮಂತ್ರವು ಆರ್ಥಿಕ ಸಮೃದ್ಧಿಯನ್ನು ಪಡೆಯಲು ಮಾತ್ರವಲ್ಲದೆ, ಮನಸ್ಸನ್ನು ತಿಳುವಳಿಕೆಯಿಂದ ಬೆಳಗಿಸುವ ಪ್ರಾರ್ಥನೆಯಾಗಿದೆ. ಅದೃಷ್ಟ, ಸಮೃದ್ಧಿ ಮತ್ತು ಸೌಂದರ್ಯವನ್ನು ತರುವ ಎಲ್ಲದರ ವ್ಯಕ್ತಿತ್ವವೇ ಲಕ್ಷ್ಮಿ.

ಹಾಗಿದ್ದರೆ ವರಮಹಾಲಕ್ಷ್ಮಿ ಹಬ್ಬದಂದು ಶ್ರದ್ಧಾ ಭಕ್ತಿಯಿಂದ ಅದೃಷ್ಟ, ಸಂಪತ್ತು, ಜ್ಞಾನ ದೇವತೆಯನ್ನು ಒಲಿಸಿಕೊಳ್ಳಲು ಈ ಅಷ್ಟೋತ್ತರ ಮಂತ್ರ, ಶ್ಲೋಕಗಳನ್ನು ಪಠಿಸುವ ಮೂಲಕ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗೋಣ, ಲಕ್ಷ್ಮೀ ನಮ್ಮ ಮನೆಗಳಲ್ಲೇ ನೆಲೆಯೂರುವಂತೆ ಕೋರೊಣ:

1. ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ

1. ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ

ಓಂ ಪ್ರಕೃತ್ಯೈ ನಮಃ

ಓಂ ವಿಕೃತ್ಯೈ ನಮಃ

ಓಂ ವಿದ್ಯಾಯೈ ನಮಃ

ಓಂ ಸರ್ವಭೂತಹಿತಪ್ರದಾಯೈ ನಮಃ

ಓಂ ಶ್ರದ್ಧಾಯೈ ನಮಃ

ಓಂ ವಿಭೂತ್ಯೈ ನಮಃ

ಓಂ ಸುರಭ್ಯೈ ನಮಃ

ಓಂ ಪರಮಾತ್ಮಿಕಾಯೈ ನಮಃ

ಓಂ ವಾಚೇ ನಮಃ

ಓಂ ಪದ್ಮಾಲಯಾಯೈ ನಮಃ

ಓಂ ಪದ್ಮಾಯೈ ನಮಃ

ಓಂ ಶುಚ್ಯೈ ನಮಃ

ಓಂ ಸ್ವಾಹಾಯೈ ನಮಃ

ಓಂ ಸ್ವಧಾಯೈ ನಮಃ

ಓಂ ಸುಧಾಯೈ ನಮಃ

ಓಂ ಧನ್ಯಾಯೈ ನಮಃ

ಓಂ ಹಿರಣ್ಮಯ್ಯೈ ನಮಃ

ಓಂ ಲಕ್ಷ್ಮ್ಯೈ ನಮಃ

ಓಂ ನಿತ್ಯಪುಷ್ಟಾಯೈ ನಮಃ

ಓಂ ವಿಭಾವರ್ಯೈ ನಮಃ

ಓಂ ಅದಿತ್ಯೈ ನಮಃ

ಓಂ ದಿತ್ಯೈ ನಮಃ

ಓಂ ದೀಪ್ತಾಯೈ ನಮಃ

ಓಂ ವಸುಧಾಯೈ ನಮಃ

ಓಂ ವಸುಧಾರಿಣ್ಯೈ ನಮಃ

ಓಂ ಕಮಲಾಯೈ ನಮಃ

ಓಂ ಕಾಂತಾಯೈ ನಮಃ

ಓಂ ಕಾಮಾಕ್ಷ್ಯೈ ನಮಃ

ಓಂ ಕ್ರೋಧಸಂಭವಾಯೈ ನಮಃ

ಓಂ ಅನುಗ್ರಹಪರಾಯೈ ನಮಃ

ಓಂ ಋದ್ಧಯೇ ನಮಃ

ಓಂ ಅನಘಾಯೈ ನಮಃ

ಓಂ ಹರಿವಲ್ಲಭಾಯೈ ನಮಃ

ಓಂ ಅಶೋಕಾಯೈ ನಮಃ

ಓಂ ಅಮೃತಾಯೈ ನಮಃ

ಓಂ ದೀಪ್ತಾಯೈ ನಮಃ

ಓಂ ಲೋಕಶೋಕ ವಿನಾಶಿನ್ಯೈ ನಮಃ

ಓಂ ಧರ್ಮನಿಲಯಾಯೈ ನಮಃ

ಓಂ ಕರುಣಾಯೈ ನಮಃ

ಓಂ ಲೋಕಮಾತ್ರೇ ನಮಃ

ಓಂ ಪದ್ಮಪ್ರಿಯಾಯೈ ನಮಃ

ಓಂ ಪದ್ಮಹಸ್ತಾಯೈ ನಮಃ

ಓಂ ಪದ್ಮಾಕ್ಷ್ಯೈ ನಮಃ

ಓಂ ಪದ್ಮಸುಂದರ್ಯೈ ನಮಃ

ಓಂ ಪದ್ಮೋದ್ಭವಾಯೈ ನಮಃ

ಓಂ ಪದ್ಮಮುಖ್ಯೈ ನಮಃ

ಓಂ ಪದ್ಮನಾಭಪ್ರಿಯಾಯೈ ನಮಃ

ಓಂ ರಮಾಯೈ ನಮಃ

ಓಂ ಪದ್ಮಮಾಲಾಧರಾಯೈ ನಮಃ

ಓಂ ದೇವ್ಯೈ ನಮಃ

ಓಂ ಪದ್ಮಿನ್ಯೈ ನಮಃ

ಓಂ ಪದ್ಮಗಂಥಿನ್ಯೈ ನಮಃ

ಓಂ ಪುಣ್ಯಗಂಧಾಯೈ ನಮಃ

ಓಂ ಸುಪ್ರಸನ್ನಾಯೈ ನಮಃ

ಓಂ ಪ್ರಸಾದಾಭಿಮುಖ್ಯೈ ನಮಃ

ಓಂ ಪ್ರಭಾಯೈ ನಮಃ

ಓಂ ಚಂದ್ರವದನಾಯೈ ನಮಃ

ಓಂ ಚಂದ್ರಾಯೈ ನಮಃ

ಓಂ ಚಂದ್ರಸಹೋದರ್ಯೈ ನಮಃ

ಓಂ ಚತುರ್ಭುಜಾಯೈ ನಮಃ

ಓಂ ಚಂದ್ರರೂಪಾಯೈ ನಮಃ

ಓಂ ಇಂದಿರಾಯೈ ನಮಃ

ಓಂ ಇಂದುಶೀತುಲಾಯೈ ನಮಃ

ಓಂ ಆಹ್ಲೋದಜನನ್ಯೈ ನಮಃ

ಓಂ ಪುಷ್ಟ್ಯೈ ನಮಃ

ಓಂ ಶಿವಾಯೈ ನಮಃ

ಓಂ ಶಿವಕರ್ಯೈ ನಮಃ

ಓಂ ಸತ್ಯೈ ನಮಃ ಓಂ ವಿಮಲಾಯೈ ನಮಃ

ಓಂ ವಿಶ್ವಜನನ್ಯೈ ನಮಃ

ಓಂ ತುಷ್ಟ್ಯೈ ನಮಃ

ಓಂ ದಾರಿದ್ರ್ಯ ನಾಶಿನ್ಯೈ ನಮಃ

ಓಂ ಪ್ರೀತಿಪುಷ್ಕರಿಣ್ಯೈ ನಮಃ

ಓಂ ಶಾಂತಾಯೈ ನಮಃ

ಓಂ ಶುಕ್ಲಮಾಲ್ಯಾಂಬರಾಯೈ ನಮಃ

ಓಂ ಶ್ರಿಯೈ ನಮಃ

ಓಂ ಭಾಸ್ಕರ್ಯೈ ನಮಃ

ಓಂ ಬಿಲ್ವನಿಲಯಾಯೈ ನಮಃ

ಓಂ ವರಾರೋಹಾಯೈ ನಮಃ

ಓಂ ಯಶಸ್ವಿನ್ಯೈ ನಮಃ

ಓಂ ವಸುಂಧರಾಯೈ ನಮಃ

ಓಂ ಉದಾರಾಂಗಾಯೈ ನಮಃ

ಓಂ ಹರಿಣ್ಯೈ ನಮಃ

ಓಂ ಹೇಮಮಾಲಿನ್ಯೈ ನಮಃ

ಓಂ ಧನಧಾನ್ಯ ಕರ್ಯೈ ನಮಃ ಓಂ ಸಿದ್ಧಯೇ ನಮಃ

ಓಂ ಸ್ತ್ರೈಣ ಸೌಮ್ಯಾಯೈ ನಮಃ

ಓಂ ಶುಭಪ್ರದಾಯೈ ನಮಃ

ಓಂ ನೃಪವೇಶ್ಮ ಗತಾನಂದಾಯೈ ನಮಃ

ಓಂ ವರಲಕ್ಷ್ಮೈ ನಮಃ

ಓಂ ವಸುಪ್ರದಾಯೈ ನಮಃ

ಓಂ ಶುಭಾಯೈ ನಮಃ

ಓಂ ಹಿರಣ್ಯಪ್ರಾಕಾರಾಯೈ ನಮಃ

ಓಂ ಸಮುದ್ರ ತನಯಾಯೈ ನಮಃ

ಓಂ ಜಯಾಯೈ ನಮಃ

ಓಂ ಮಂಗಳಾಯೈ ನಮಃ

ಓಂ ದೇವ್ಯೈ ನಮಃ

ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ

ಓಂ ವಿಷ್ಣುಪತ್ನ್ಯೈ ನಮಃ

ಓಂ ಪ್ರಸನ್ನಾಕ್ಷ್ಯೈ ನಮಃ

ಓಂ ನಾರಾಯಣ ಸಮಾಶ್ರಿತಾಯೈ ನಮಃ

ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ

ಓಂ ಸರ್ವೋಪದ್ರವ ವಾರಿಣ್ಯೈ ನಮಃ

ಓಂ ನವದುರ್ಗಾಯೈ ನಮಃ

ಓಂ ಮಹಾಕಾಳ್ಯೈ ನಮಃ

ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ

ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ

ಓಂ ಭುವನೇಶ್ವರ್ಯೈ ನಮಃ

2. ಲಕ್ಷ್ಮಿ ಮಂತ್ರ

2. ಲಕ್ಷ್ಮಿ ಮಂತ್ರ

ಓಂ ಹ್ರಿಂಗ್‌ ಶ್ರಿಂಗ್‌ ಕ್ರೆಂಗ್‌ ಶ್ರಿಂಗ್‌ ಕ್ಲೆಂಗ್‌ ಕ್ಲಿಂಗ್‌

ಶ್ರಿಂಗ್‌ ಮಹಾಲಕ್ಷ್ಮಿ ಮಾಂ ಗ್ರೀಃ ಧನಂ ಪುರ ಪೂರ್ಯ್‌

ಚಿಂತಾಯೈ ಡೋರೆ ಡೋರ್ಯ್‌ ಸ್ವಾಹಃ

3. ಮಹಾಲಕ್ಷ್ಮಿ ಮಂತ್ರ

3. ಮಹಾಲಕ್ಷ್ಮಿ ಮಂತ್ರ

ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ

ಮನುಷ್ಯೋ ಮತ್ಪ್ರಸಾದೇನ್‌ ನ ಸನ್ಶಯ ಓಂ

4. ಮಹಾಲಕ್ಷ್ಮೀ ಅಷ್ಟಕಂ

4. ಮಹಾಲಕ್ಷ್ಮೀ ಅಷ್ಟಕಂ

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |

ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ‖

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |

ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |

ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |

ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |

ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ ‖

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |

ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |

ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |

ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖

ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |

ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ‖

ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ |

ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ‖

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ |

ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ‖

5. ಲಕ್ಷ್ಮಿ ಬೀಜ ಮಂತ್ರ

5. ಲಕ್ಷ್ಮಿ ಬೀಜ ಮಂತ್ರ

ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ

6. ಲಕ್ಷ್ಮಿ ಬೀಜ ಮಂತ್ರ

6. ಲಕ್ಷ್ಮಿ ಬೀಜ ಮಂತ್ರ

ಓಂ ಶ್ರೀಂಗ್‌ ಶ್ರೀಯೇ ನಮಃ

7. ಆದಿಲಕ್ಷ್ಮಿ

7. ಆದಿಲಕ್ಷ್ಮಿ

ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ

ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ

ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್

8. ಧಾನ್ಯಲಕ್ಷ್ಮಿ

8. ಧಾನ್ಯಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ

ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ

ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್

9. ಧೈರ್ಯಲಕ್ಷ್ಮಿ

9. ಧೈರ್ಯಲಕ್ಷ್ಮಿ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ

ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ

ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ

ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್

10. ಗಜಲಕ್ಷ್ಮಿ

10. ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ

ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ

ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್

11. ಸಂತಾನಲಕ್ಷ್ಮಿ

11. ಸಂತಾನಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ

ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ

ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್

 12. ವಿಜಯಲಕ್ಷ್ಮಿ

12. ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ

ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ

ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ

ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್

13. ವಿದ್ಯಾಲಕ್ಷ್ಮಿ

13. ವಿದ್ಯಾಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ

ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ

ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್

14. ಧನಲಕ್ಷ್ಮಿ

14. ಧನಲಕ್ಷ್ಮಿ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ

ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ

ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್

15. ಫಲಶೃತಿ

15. ಫಲಶೃತಿ

ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ

ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ

ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ

ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಂ

English summary

Varamahalakshmi Ashtotharam And Shlokas in Kannada

Here we are discussing about Varamahalakshmi Ashtotharam And Shlokas in Kannada. Lakshmi Mantra is synonymously also called Money Mantra. But Lakshmi Mantra is a prayer not only to gain financial prosperity but also to give us the intelligence to enlighten our minds with understanding. Read more.
Story first published: Wednesday, July 29, 2020, 18:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X