For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮೀ ವ್ರತ 2022: ವರಲಕ್ಷ್ಮಿಗೆ ಕಳಶದ ಆಯ್ಕೆ ಹೇಗಿರಬೇಕು? ಕಳಶದಲ್ಲಿ ಇಡಬೇಕಾದ ವಸ್ತುಗಳು ಯಾವುವು?

|

ಈ ವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೇ ಎಲ್ಲಾ ಸಿದ್ಧತೆಗಳು ಈಗಾಗಲೇ ಆರಂಭವಾಗಿರುತ್ತದೆ. 2022ನೇ ಸಾಲಿನಲ್ಲಿ ಆಗಸ್ಟ್‌ 5ರಂದು ವರಮಹಾಲಕ್ಷ್ಮಿ ಎಲ್ಲರ ಮನೆಗೂ ಬಂದು ನೆಲೆಸಲಿದ್ದಾಳೆ. ಲಕ್ಷ್ಮಿ ಬಹಳ ಕಟ್ಟುನಿಟ್ಟು, ಶುದ್ಧತೆಯನ್ನು ಬಯಸುವ ಶ್ರೇಷ್ಠ ದೇವಿ. ಈಕೆಯ ಪೂಜೆಯಲ್ಲಿ ಕೊಂಚ ಭಂಗ ಬಂದರೂ ಲಕ್ಷ್ಮೀ ಸಹಿಸುವುದಿಲ್ಲ.

ಅದರಲ್ಲೂ ಲಕ್ಷ್ಮೀಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಲು ಕಳಶ ಬಹಳ ಮುಖವಾದದ್ದು. ಇದರಲ್ಲಿ ಲಕ್ಷ್ಮಿಗೆ ಪ್ರಿಯವಾದ ಎಲ್ಲ ವಸ್ತುಗಳನ್ನು ಇಡಲಾಗುತ್ತದೆ. ಕಳಶದಲ್ಲಿ ಇಡಲೇಬೇಕಾದ ಸಾಮಗ್ರಿಗಳಲ್ಲಿ ಒಂದು ವಸ್ತು ಇಲ್ಲವಾದರೂ ಪೂಜೆ ಅಪೂರ್ಣವೆನಿಸುತ್ತದೆ.

ನಾವಿಂದು ಈ ಲೇಖನದಲ್ಲಿ ಕಳಶದಲ್ಲಿ ಇಡಲೇಬೇಕಾದ ವಸ್ತುಗಳು ಯಾವುವು, ಲಕ್ಷ್ಮಿಯ ಕಳಶದ ಆಯ್ಕೆ ಹೇಗಿರಬೇಕು, ಯಾವೆಲ್ಲಾ ಹೂವುಗಳು ಲಕ್ಷ್ಮಿಗೆ ಶ್ರೇಷ್ಠ, ಎಂಥಾ ತಾಳಿಯನ್ನು ಲಕ್ಷ್ಮಿಗೆ ತೊಡಿಸಬೇಕು ವಿವರವಾಗಿ ತಿಳಿಸಿಕೊಡಲಿದ್ದೇವೆ:

ಕಳಶದ ಆಯ್ಕೆ ಹೇಗಿರಬೇಕು

ಕಳಶದ ಆಯ್ಕೆ ಹೇಗಿರಬೇಕು

* ಯಾವುದೇ ಕಾರಣಕ್ಕೂ ಸ್ಟೀಲ್‌ ಕಳಸದಲ್ಲಿ ಲಕ್ಷ್ಮೀ ಇಡುವಂತಿಲ್ಲ.

* ಆದಷ್ಟು ತಾಮ್ರ, ಹಿತ್ತಾಳೆ ಅಥವಾ ಕಂಚಿನ ಕಳಶವಾದರೆ ಉತ್ತಮ. ಸಾಧ್ಯವಾದರೆ ಚಿನ್ನ ಅಥವಾ ಬೆಳ್ಳಿಯ ಕಳಶವನ್ನು ಸಹ ಇಡಬಹುದು.

* ದೇವರಿಗೆಂದು ಬಳಸಿದ ಕಳಶವನ್ನು ಇತರೆ ಬೇರೆ ಕೆಲಸಗಳಿಗೆ ಬಳಸುವಂತಿಲ್ಲ.

ಕಳಸದ ಒಳಗೆ ಹಾಕಬೇಕಾದ ಸಾಮಗ್ರಿಗಳು

ಕಳಸದ ಒಳಗೆ ಹಾಕಬೇಕಾದ ಸಾಮಗ್ರಿಗಳು

ಕಳಶದ ಒಳಗೆ ತುಂಬಿಸಲು ಅಕ್ಕಿ

ವೀಳ್ಯದೆಲೆ 5 ಅಥವಾ ಮಾವಿನ ಎಲೆ 5

ಅಡಿಕೆ 5

ಒಣಖರ್ಜೂರ 5

ಒಣ ದ್ರಾಕ್ಷಿ 5

ನಾಣ್ಯಗಳು 5

ಅರಿಶಿನ ಮತ್ತು ಕುಂಕುಮ

ಸಣ್ಣ ಕಪ್ಪುಬಳೆ ( ಲಕ್ಷ್ಮೀ ಸಾಮಾಗ್ರಿಯಲ್ಲಿ ಇರುತ್ತದೆ)

ಲವಂಗ 8

ಗೋಮತಿ ಚಕ್ರ 8

ಕಲ್ಲುಸಕ್ಕರೆ 8

ಬಾದಾಮಿ 8

ಗೋಡಂಬಿ 8

ಚಿನ್ನದ ವಸ್ತು

ಬೆಳ್ಳಿಯ ವಸ್ತು

ಕಮಲದ ಬೀಜಗಳು 8

ಬಟ್ಟಲ ಹಾಡಿಕೆಗಳು 8

ಧಾನ್ಯ 5 ವಿಧ

ಒಂದು ನಿಂಬೆಹಣ್ಣು

ಮಾವಿನ ಎಲೆ

ತೆಂಗಿನಕಾಯಿ

ಮೇಲಿನ ವಸ್ತುಗಳಲ್ಲಿ ಕನಿಷ್ಠ 8 ಕಳಶದ ಸಾಮಾಗ್ರಿಗಳನ್ನು ಬಳಸಲೇಬೇಕು, ಬೆಳ್ಳಿ ವಸ್ತು ಕಡ್ಡಾಯವಾಗಿ ಕಳಶಕ್ಕೆ ಹಾಕಬೇಕು.

ನಕಲಿ ತಾಳಿ ಬೇಡ

ನಕಲಿ ತಾಳಿ ಬೇಡ

ಐಶ್ವರ್ಯ ಸ್ವರೂಪಿ ವರಮಹಾಲಕ್ಷ್ಮಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕಾದರೆ ಅಪ್ಪಿತಪ್ಪಿಯೂ ನಕಲಿ ತಾಳಿಯನ್ನು ಬಳಸಬೇಡಿ, ಇದು ದರಿದ್ರ, ಅಶುಭದ ಸಂಕೇತ. ಕಡ್ಡಾಯವಾಗಿ ಚಿನ್ನದ ತಾಳಿಯಿಂದಲೇ ಲಕ್ಷ್ಮಿಯನ್ನು ಅಲಂಕರಿಸಬೇಕು.

ಅರಿಶಿನದ ಕೊಂಬು, ಗೆಜ್ಜೆ ವಸ್ತ್ರ ತಪ್ಪಿಸಬೇಡಿ

ಅರಿಶಿನದ ಕೊಂಬು, ಗೆಜ್ಜೆ ವಸ್ತ್ರ ತಪ್ಪಿಸಬೇಡಿ

ಲಕ್ಷ್ಮಿ ಕಳಶಕ್ಕೆ ಬಾಯಿಯ ಬಳಿ ಒಂಬತ್ತು ಸುತ್ತು ಅರಿಶಿನ ದಾರವನ್ನು ತಯಾರಿಸಿಕೊಂಡು ಅದಕ್ಕೆ ಅರಿಶಿನದ ಕೊಂಬನ್ನು ಕಟ್ಟಿ ಅದಕ್ಕೆ ನೀವು ಅರಿಶಿನ-ಕುಂಕುಮವನ್ನು ಹಚ್ಚಿ ತಾಳಿಯನ್ನು ಅದಕ್ಕೆ ಹಾಕಬೇಕಾಗುತ್ತದೆ. ನೀವು ಯಾವುದೇ ಕಾರಣಕ್ಕೂ ಗೆಜ್ಜೆ ವಸ್ತ್ರವನ್ನು ಮರೆಯುವಂತಿಲ್ಲ.

ಪರಿಮಳ ಭರಿತ ಹೂವುಗಳು, ಕಮಲ

ಪರಿಮಳ ಭರಿತ ಹೂವುಗಳು, ಕಮಲ

ವರಲಕ್ಷ್ಮಿಗೆ ಪರಿಮಳ ಸೂಸುವಂತಹ ಹೂವುಗಳಂದರೆ ಇಷ್ಟ. ಅದರಲ್ಲೂ ಮಲ್ಲಿಗೆ ಅಲ್ಲದೇ ಕಮಲವಾಸಿ ಲಕ್ಷ್ಮಿಗೆ ಕಮಲದ ಹೂವನ್ನು ಮಾತ್ರ ತಪ್ಪಿಸುವಂತೆಯೇ ಇಲ್ಲ. ಕಮಲ ಲಕ್ಷ್ಮೀದೇವಿಗೆ ತುಂಬ ಪ್ರಿಯವಾದದ್ದು, ಲಕ್ಷ್ಮಿ ಪೂಜೆಯಲ್ಲಿ ಕಮಲವಿದ್ದರೆ ಲಕ್ಷ್ಮಿದೇವಿ ಶ್ರೇಷ್ಠ ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಇನ್ನು ತುಳಸಿಯನ್ನು ಬಳಸದೇ ಲಕ್ಷ್ಮೀದೇವಿಯ ಪೂಜೆಯು ಪೂರ್ಣಗೊಳ್ಳುವುದಿಲ್ಲ, ತುಳಸಿಯು ತುಂಬಾ ಶ್ರೇಷ್ಠವಾದದ್ದು. ಲಕ್ಷ್ಮಿಗೆ ಹೂಗಳಲ್ಲಿ ಕೆಂಪು ದಾಸವಾಳ ಸಹ ತುಂಬಾನೇ ಇಷ್ಟ.

English summary

Varalakshmi Vratha 2022: How To Select Kalasam And What Should Be Kept Inside Kalasam?

Here we are discussing about Varalakshmi Vratham: How To Select Kasam And What Should Be Kept Inside Kalasam?. Read more.
X
Desktop Bottom Promotion