Just In
Don't Miss
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕರ ಸಂಕ್ರಾಂತಿ 2019-ಸೂರ್ಯದೇವನನ್ನು ಒಲಿಸಿಕೊಳ್ಳಲು ಕೆಲವು ಅಮೂಲ್ಯ ಸಲಹೆಗಳು
ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ ಹದಿನಾಲ್ಕರಂದು ಆಚರಿಸಲಾಗುತ್ತದೆ. ಆದರೆ ಈ ವರ್ಷ ಈ ಹಬ್ಬ ಜನವರಿ ಹದಿನೈದರಂದು ಆಚರಿಸಲಾಗುವುದು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುವಾಗ ಈ ಹಬ್ಬ ಆಗಮಿಸುತ್ತದೆ. ಈ ವರ್ಷ ಜನವರಿ ಹದಿನಾಲ್ಕರ ಸಂಜೆ ಏಳು ಗಂಟೆ ಐವತ್ತು ನಿಮಿಷಕ್ಕೆ ಸರಿಯಾಗಿ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಈ ಸಂದರ್ಭ ಅಂದಿನ ದಿನದ ಅವಧಿ ಕಳೆದ ಬರುವ ಕಾರಣ ಹಾಗೂ ಹಿಂದೂ ಧರ್ಮದಲ್ಲಿ ಸೂರ್ಯನ ಚಲನೆಯನ್ನು ಆಧರಿಸಿದ ವೇಳಾಪಟ್ಟಿಯನ್ನು ಅನುಸರಿಸುವ ಕಾರಣ ಸೂರ್ಯಾಸ್ತದ ಬಳಿಕ ಎದುರಾಗುವ ಸಂದರ್ಭಗಳನ್ನು ಮರುದಿನ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಈ ವರ್ಷ ಜನವರಿ ಹದಿನೈದರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಸೂರ್ಯನನ್ನು ಆರಾಧಿಸುವ ಮೂಲಕ ಸೂರ್ಯದೇವನ ಕೃಪೆಯನ್ನು ಪಡೆಯಬಹುದು ಎಂಬ ನಂಬಿಕೆ ಈ ದಿನವನ್ನು ಪವಿತ್ರವನ್ನಾಗಿಸಿದೆ.
ಸೂರ್ಯದೇವನಿಗೆ ಕಾಣಿಕೆ ಎಂದರೆ ತುಂಬಾ ಇಷ್ಟ. ಈ ದಿನ ಬಡವರಿಗೆ ಚಳಿಯಿಂದ ರಕ್ಷಣೆ ಪಡೆಯಲು ಉಣ್ಣೆಯ ಬಟ್ಟೆಗಳು ಹಾಗೂ ಇತರ ವಸ್ತುಗಳನ್ನು ನೀಡುವ ಮೂಲಕ ಸೂರ್ಯದೇವನ ಕೃಪಗೆ ಒಳಗಾಗಬಹುದು. ಇದರ ಹೊರತಾಗಿ, ಈ ದಿನ ಸೂರ್ಯದೇವನ ಕೃಪೆಗೆ ಒಳಗಾಗಲು ಅನುಸರಿಸಬಹುದಾದ ಇತರ ಸಲಹೆಗಳನ್ನು ನೀಡಲಾಗಿದೆ. ಬನ್ನಿ, ಇವು ಯಾವುವು ಎಂದು ನೋಡೋಣ....

ಜಲತರ್ಪಣ
ಸೂರ್ಯದೇವನನ್ನು ಒಲಿಸಿಕೊಳ್ಳಲು ಯಾವುದೇ ದಿನದಲ್ಲಿ ಜಲವನ್ನು ಅರ್ಪಿಸಬಹುದಾದರೂ ಮಕರ ಸಂಕ್ರಾಂತಿಯಂದು ಜಲ ಅರ್ಪಿಸುವುದು ಒಂದು ಅತ್ಯುತ್ತಮ ವಿಧಾನವಾಗಿದೆ. ಈ ದಿನ ಸೂರ್ಯದೇವನಿಗೆ ಜಲವನ್ನು ಅರ್ಪಿಸುವ ಮೂಲಕ ಸೂರ್ಯದೇವನ ಆಶೀರ್ವಾದ ಪಡೆದು ಯಶಸ್ಸು ಪಡೆಯಬಹುದು.

ಸೂರ್ಯ ಯಂತ್ರ
ಸೂರ್ಯ ಯಂತ್ರವನ್ನು ಧರಿಸಿಕೊಳ್ಳಲು ಮಕ್ರ ಸಂಗ್ರಾಂತಿ ಅತ್ಯುತ್ತಮ ದಿನವಾಗಿದೆ. ಇದೊಂದು ತಾಮ್ರದ ಪದಕವಾಗಿದೆ ಹಾಗೂ ಇದರ ಮೇಲೆ ಸೂರ್ಯದೇವನ ಮುಖದ ಚಿತ್ರವಿರುತ್ತದೆ. ಈ ಪದಕವನ್ನು ಕೆಂಪು ದಾರದ ಮೂಲಕ ಕುತ್ತಿಗೆಯಲ್ಲಿ ಧರಿಸಿ ಕೊಂಡರೆ ಈ ದಿನ ಸೂರ್ಯದೇವನ ಸ್ಥಾನ ಗ್ರಹಗಳ ನಡುವೆ ಅತ್ಯಂತ ಸೂಕ್ತ ಸ್ಥಳದಲ್ಲಿದ್ದು ಗರಿಷ್ಟ ಪ್ರಯೋಜನ ದೊರಕಲಿದೆ. ಅಲ್ಲದೇ ಯಾರ ಪಂಚಾಂಗದಲ್ಲಿ ಸೂರ್ಯನ ಸ್ಥಾನ ಸೂಕ್ತ ಸ್ಥಾನದಲ್ಲಿರದ ವ್ಯಕ್ತಿಗಳಿಗೆ ಈ ಪದಕ ಅತಿ ಹೆಚ್ಚಿನ ಪ್ರಯೋಜನ ಒದಗಿಸಲಿದೆ. ಅಲ್ಲದೇ ಸಾಲಭಾರ ಮತ್ತು ಕಣ್ಣು ಹಾಗೂ ತ್ವಚೆಯ ತೊಂದರೆ ಇರುವ ವ್ಯಕ್ತಿಗಳಿಗೂ ಶೀಘ್ರವೇ ಪರಿಹಾರ ದೊರಕಲಿದೆ.
Most Read: ಮಕರ ಸಂಕ್ರಾಂತಿಯಂದು ತಪ್ಪದೇ ಈ ಮಂತ್ರಗಳನ್ನು ಪಠಿಸಿ - ಎಲ್ಲವೂ ಒಳ್ಳೆಯದಾಗುತ್ತದೆ

ಕೇಸರಿ ತಿಲಕ
ಮಕರ ಸಂಕ್ರಾಂತಿಯಂದು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಬೇಕು. ಬಳಿಕ ಸೂರ್ಯದೇವನನ್ನು ಪೂಜಿಸಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಕೊಂಚ ಕೇಸರಿ ಮತ್ತು ಗುಲಾಬಿನೀರನ್ನು ಬೆರೆಸಿ ಈ ಮಿಶ್ರಣವನ್ನು ಹಣೆಗೆ ಧರಿಸಿ ಕೊಳ್ಳಬೇಕು. ಈ ತಿಲಕವನ್ನು ಸಂರಕ್ಷಿಸಿಕೊಂಡು ಮುಂದಿನ ದಿನಗಳಲ್ಲಿ ನಿತ್ಯವೂ ಧರಿಸಿದರೆ ಇನ್ನೂ ಉತ್ತಮ. ಈ ಮೂಲಕ ಉತ್ತಮ ಉದ್ಯೋಗ ಹಾಗೂ ಬಡ್ತಿ ಶೀಘ್ರವೇ ಒಲಿಯುತ್ತದೆ. ವಿಶೇಷವಾಗಿ ಉದ್ಯೋಗದ ಸಂದರ್ಶನಕ್ಕೆ ಹೋಗುವವರು ಈ ತಿಲಕ ಧರಿಸಿದರೆ ಹೆಚ್ಚು ಪ್ರಯೋಜನವಾಗಲಿದೆ.

ಆದಿತ್ಯ ಹೃದಯ ಸ್ತೋತ್ರ
ಮಕರ ಸಂಕ್ರಾಂತಿಯ ದಿನದಂದು ಪ್ರಾರಂಭಿಸಿ ಮುಂದಿನ ನೂರಾ ಒಂದು ದಿನಗಳವರೆಗೆ ಸತತವಾಗಿ ಪ್ರತಿದಿನವೂ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಉತ್ತಮ ಅಭ್ಯಾಸವಾಗಿದೆ. ಈ ಮೂಲಕ ಸಾಮಾಜಿಕ ಪ್ರತಿಷ್ಥೆ ಹಾಗೂ ಗೌರವ ಪ್ರಾಪ್ತವಾಗುತ್ತದೆ. ಜೊತೆಗೇ ಸೂರ್ಯದೇವನ ಅನುಗ್ರಹವೂ ದೊರಕಿ ಹೆಚ್ಚಿನ ಸಮೃದ್ದಿಯೂ ದೊರಕುತ್ತದೆ.