For Quick Alerts
ALLOW NOTIFICATIONS  
For Daily Alerts

'ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು

|

ಓಂ ಅಥವಾ ಓಮ್ ಎನ್ನುವುದು ಪ್ರತಿ ಮಂತ್ರ ಅಥವಾ ಸ್ತೋತ್ರಪಾಠದ ಮೊದಲು ಉಚ್ಚರಿಸುವ ಮೊದಲ ಅಕ್ಷರವಾಗಿದೆ. ಈ ಮಂಗಳಕರ ಧ್ವನಿಯನ್ನು ಪಠಿಸದೆ ಧ್ಯಾನವಿಲ್ಲ. ಓಂ ಎಂದು ಹೇಳದೆ ದೇವರ ಪಠಣ ಪೂರ್ತಿಯಾಗುವುದಿಲ್ಲ. ಆದರೆ ಈ ಶಬ್ದದ ನಿಜವಾದ ಅರ್ಥವೇನು? ಅದು ಯಾಕೆ ಅಷ್ಟು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ?

ಓಂ ಅನ್ನು ಯಾವಾಗಲೂ ಎಲ್ಲದರ ಮೂಲ ಎಂದು ವಿವರಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳು ಹೇಳುವ ಪ್ರಕಾರ ಓಂ ಎಂಬುದು ಅಂತಿಮ ಮತ್ತು ಸರ್ವೋಚ್ಚ ಶಕ್ತಿ ಮಾತ್ರವಲ್ಲ; ಪರಾತ್ಬ್ರಹ್ಮನ್ ಅಥವಾ ಪ್ರಣವ. ಇದು 'ಪ್ರಾಣ' ಅಥವಾ 'ಪ್ರಾಣವನ್ನು ನಿಯಂತ್ರಿಸುವ ಧ್ವನಿ ' ಅಥವಾ ನಮ್ಮ ಆತ್ಮಗಳಲ್ಲಿನ ಜೀವ. ಇದು ಭೂತ, ಪ್ರಸ್ತುತ ಮತ್ತು ಭವಿಷ್ಯ. ಓಂ ಸರ್ವಶ್ರೇಷ್ಠ, ಸರ್ವಶಕ್ತ ಮತ್ತು ಇದು ನಮ್ಮ ಸುತ್ತಲೂ ಇರುವ ಶಬ್ದವಾಗಿದೆ....

*' ಓಂ ' ನ ಕಥೆ

*' ಓಂ ' ನ ಕಥೆ

ಓಂ ನ ಮೂಲವು ಬ್ರಹ್ಮಾಂಡದ ಆರಂಭದ ಕಥೆಯಾಗಿದೆ. ಬಹಳ ಆರಂಭದಲ್ಲಿ, ಸಮಯಕ್ಕೆ ಮುಂಚೆಯೇ, ಕತ್ತಲೆ ಮಾತ್ರ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗುತ್ತದೆ. ನಂತರ ಓಂ ಎಂದು ಕರೆಯಲ್ಪಡುವ ಒಂದು ಶಬ್ದವು ಕೇಳಿಬಂತು. ಈ ಓಂ ನಿಂದ ದೇವತೆಗಳು ಹುಟ್ಟಿಕೊಂಡರು ಮತ್ತು ಸೃಷ್ಟಿ ಪ್ರಾರಂಭವಾಯಿತು.

ಓಂ ಮಾನವನ ಪ್ರತೀ ಭಾಷೆಯ ಎಲ್ಲಾ ಶಬ್ದಗಳನ್ನು ಹೊಂದಿದೆ.

ಓಂ ಮಾನವನ ಪ್ರತೀ ಭಾಷೆಯ ಎಲ್ಲಾ ಶಬ್ದಗಳನ್ನು ಹೊಂದಿದೆ.

ಮಾನವ ಎಲ್ಲಾ ಭಾಷೆಗಳಲ್ಲಿ ಗಂಟಲು ಅಥವಾ ತುಟಿಗಳಿಂದ ಹೊರಡಿಸುವ ಶಬ್ದಗಳನ್ನು ಹೊಂದಿರುತ್ತವೆ. ಓಮ್ ಅಥವಾ ಓಂ ಈ ಎಲ್ಲಾ ಶಬ್ದಗಳನ್ನು ಹೊಂದಿದೆ. 'ಎ' ಗಂಟಲಿನಿಂದ ಉಂಟಾಗುವ ಧ್ವನಿ, 'ಎಂ' ತುಟಿಗಳಿಂದ ಹೊರಡಿಸುವ ಧ್ವನಿ ಮತ್ತು 'ಆ' ಶಬ್ದವು ನಾಲಿಗೆಯನ್ನು ಉರುಳಿಸುವುದರ ಮೂಲಕ ಉಂಟಾಗುತ್ತದೆ.

ಓಂ ಸಮಯವನ್ನು ಪ್ರತಿನಿಧಿಸುತ್ತದೆ

ಓಂ ಸಮಯವನ್ನು ಪ್ರತಿನಿಧಿಸುತ್ತದೆ

ಓಂ ನಲ್ಲಿ 'ಎ' ಎಂಬ ಪದವು ಮನಸ್ಸಿನ ಎಚ್ಚರ ಸ್ಥಿತಿಯನ್ನು ಸೂಚಿಸುತ್ತದೆ. 'ಯು' ಕನಸಿನ ಸ್ಥಿತಿಯನ್ನು ಮತ್ತು ಮನಸ್ಸು ಆಳವಾದ ನಿದ್ರೆಯಲ್ಲಿರುವುದನ್ನು ಸೂಚಿಸುವುದು 'ಎಂ'. ಪ್ರತಿ ಬಾರಿಯೂ, ಓಂ ಅನ್ನು, ಕೊನೆಯಲ್ಲಿ ವಿರಾಮದೊಂದಿಗೆ ಉಚ್ಚರಿಸಲಾಗುತ್ತದೆ. ಇದನ್ನು 'ತುರಿಯಾ' ಅಥವಾ ಅನಂತ ಪ್ರಜ್ಞೆಯ ಸ್ಥಿತಿ ಎಂದು ಕರೆಯಲಾಗುತ್ತದೆ.

ಓಂ ಅಕ್ಷರದ ಸಂಕೇತ

ಓಂ ಅಕ್ಷರದ ಸಂಕೇತ

ಸಂಸ್ಕೃತದಲ್ಲಿ ಬರೆಯಲ್ಪಟ್ಟ ಓಂ ಪದವು ಸಾಂಕೇತಿಕವಾಗಿದೆ. ಪದವು 3 ವಕ್ರಾಕೃತಿಗಳು, ಒಂದು ಚುಕ್ಕೆ ಮತ್ತು ಚಂದ್ರಾಕಾರವನ್ನು ಒಳಗೊಂಡಿದೆ.ಕೆಳಗಿನ ವಕ್ರರೇಖೆಯು ಎಚ್ಚರ ಸ್ಥಿತಿ, ಮಧ್ಯದ ರೇಖೆಯು ಕನಸಿನ ಸ್ಥಿತಿ ಮತ್ತು ಮೇಲಿನ ವಕ್ರರೇಖೆ ತೀವ್ರವಾದ ನಿದ್ರೆಯನ್ನು ಸೂಚಿಸುತ್ತದೆ. ಚುಕ್ಕೆಯು, 'ತುರಿಯಾ' ಅಥವಾ ಪ್ರಜ್ಞೆಯ ಸ್ಥಿತಿ. ಚಂದ್ರಾಕಾರವು ಇತರ ಮೂರು ಸ್ಥಿತಿಯಿಂದ ಪ್ರಜ್ಞೆಯನ್ನು ಪ್ರತ್ಯೇಕಿಸುತ್ತದೆ ಮತ್ತು ಇದು ಮಾಯೆಯ ಮುಸುಕಿನಿಂದ ಕೂಡಿರುತ್ತದೆ,

ಗಣೇಶ ಮತ್ತು ಓಂ

ಗಣೇಶ ಮತ್ತು ಓಂ

ಗಣೇಶನ ರೂಪವು ಓಂ ಅಕ್ಷರವನ್ನು ಹೋಲುತ್ತದೆ. ದೊಡ್ಡ ತಲೆ ಮತ್ತು ಹೊಟ್ಟೆಯು ಮೇಲಿನ ಮತ್ತು ಕೆಳಗಿನ ವಕ್ರಾಕೃತಿಗಳು ಹಾಗೂ ಸೊಂಡಿಲು, ಮಧ್ಯದ ವಕ್ರರೇಖೆಯನ್ನು ಹೋಲುತ್ತದೆ.

ಓಮ್, ಬಿಲ್ಲು ಮತ್ತು ಬಾಣದಂತೆ

ಓಮ್, ಬಿಲ್ಲು ಮತ್ತು ಬಾಣದಂತೆ

ಮುಂಡಕ ಉಪನಿಷತ್ ನಲ್ಲಿ, ಓಂ ಅನ್ನು ಬಿಲ್ಲು ಮತ್ತು ಬಾಣಕ್ಕೆ ಹೋಲಿಸಲಾಗುತ್ತದೆ. ಓಂ ಅನ್ನು ಪಠಿಸುವವನು ಬಿಲ್ಲು, ಓಂ, ಬಾಣ ಮತ್ತು ಪರಬ್ರಹ್ಮ ಗುರಿಯಾಗಿದೆ. ಯಾರು ಬ್ರಾಹ್ಮಣ ಗುರಿಯನ್ನು ತಲುಪಲು ಬಯಸಿದ್ದಾರೋ ಅವರು ಓಂ ನ ಪಠಣವನ್ನು ಅಭ್ಯಾಸ ಮಾಡಬೇಕು.

ಓಂ ಅವಿನಾಶಿಯಾಗಿದೆ

ಓಂ ಅವಿನಾಶಿಯಾಗಿದೆ

ಓಂ ಅವಿನಾಶವಾದುದು ಎಂದು ಮಾಂಡುಕ್ಯ ಉಪನಿಷತ್ ಹೇಳುತ್ತದೆ. ಓಂ ಭೂತ, ಪ್ರಸ್ತುತ ಮತ್ತು ಭವಿಷ್ಯ. ಓಂ ನಿಂದ ಬಂದದ್ದೆಲ್ಲವೂ ಒಂದು ದಿನ ಓಂ ಗೆ ಹಿಂತಿರುಗುವುದು.

ಓಂ ಮೂಲಭೂತ ಶಕ್ತಿ

ಓಂ ಮೂಲಭೂತ ಶಕ್ತಿ

ಕಥಾ ಉಪನಿಷತ್ ನಲ್ಲಿ ಓಂ ಎಲ್ಲದರ ಹಿಂದಿನ ಮೂಲಭೂತ ಶಕ್ತಿ ಎಂದು ಹೇಳಲಾಗುತ್ತದೆ. ಎಲ್ಲಾ ಸೃಷ್ಟಿಗೆ ಕಾರಣವಾದ ಬಲ ಎಂದು ಕರೆಯಲಾಗುತ್ತದೆ. ಎಲ್ಲಾ ವೇದಗಳು ಓಂ ನಿಂದ ಬಂದವು.

ಓಂ ಆತ್ಮವನ್ನು ಗುಣಪಡಿಸುತ್ತದೆ

ಓಂ ಆತ್ಮವನ್ನು ಗುಣಪಡಿಸುತ್ತದೆ

ನೀವು ಧ್ಯಾನಮಾಡುವಾಗ, ಓಂ ಮೊದಲು ಮನಸ್ಸನ್ನು ಶುದ್ಧೀಕರಿಸುತ್ತದೆ. ನಂತರ, ದೈನಂದಿನ ಜೀವನದ ಎಲ್ಲಾ ಒತ್ತಡದಿಂದ ಮನಸ್ಸನ್ನು ದೂರವಿರಿಸುತ್ತದೆ. ಕೊನೆಯಲ್ಲಿ, ಓಂ ಮನಸ್ಸನ್ನು ಶಾಂತತೆಗೆ ಕೊಂಡೊಯ್ದು ಆತ್ಮವನ್ನು ಗುಣಪಡಿಸುತ್ತದೆ.

ಓಂ ಎಂಬುದು ಸರ್ವೋಚ್ಚ ಪ್ರಜ್ಞೆ

ಓಂ ಎಂಬುದು ಸರ್ವೋಚ್ಚ ಪ್ರಜ್ಞೆ

ಶ್ರೀಮದ್ ಭಗವತ್ ಗೀತಾದಲ್ಲಿ, ಕೃಷ್ಣ ಪರಮಾತ್ಮನು ಅರ್ಜುನನಿಗೆ ಓಂ ಎನ್ನುವುದು ಸರ್ವೋತ್ತಮ ಪ್ರಜ್ಞೆ ಎಂದು ಹೇಳುತ್ತಾನೆ. ಓಂ ಅನ್ನು ನೆನಪಿಸಿಕೊಳ್ಳುವ ಮತ್ತು ಧ್ಯಾನಿಸುವವರು ಮೋಕ್ಷವನ್ನು ತಲುಪುವ ಅಂತಿಮ ಗುರಿಯನ್ನು ತಲುಪುತ್ತಾರೆಂದು ಅವನು ಹೇಳುತ್ತಾನೆ.

ಓಂ ದೇವರ ಶಬ್ಧವಾಗಿದೆ

ಓಂ ದೇವರ ಶಬ್ಧವಾಗಿದೆ

ಓಂ ಅನ್ನುವುದು ದೇವರು ತನ್ನ ಧ್ವನಿಯಲ್ಲಿ ನಿಮ್ಮೊಂದಿಗೆ ಮಾತಾಡುತ್ತಿದ್ದಾನೆಂದು ಹೇಳಲಾಗುತ್ತದೆ. ಒಬ್ಬನು ತನ್ನ ಮಹತ್ವ ಅಥವಾ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಧ್ಯಾನ ಮಾಡಬೇಕು. ಹಾಗೆ ಮಾಡುವುದರಿಂದ ನಿಮ್ಮ ಮನಸ್ಸಿನಿಂದ ಎಲ್ಲಾ ತೊಂದರೆಯನ್ನೂ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಮಾರ್ಗದಲ್ಲಿನ ಅಡೆತಡೆಗಳನ್ನು ತೆರವುಗೊಳಿಸುತ್ತದೆ.

ಓಂ 'ಅಖಂಡವಾಗಿದೆ

ಓಂ 'ಅಖಂಡವಾಗಿದೆ

ಓಂ 'ಅಖಂಡ' ಅಥವಾ ಅಜೇಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಎಲ್ಲಾ ಪುರುಷರು ವಿವಿಧ ರೀತಿಯಲ್ಲಿ ಹುಡುಕುವುದು ಈ ಸರ್ವೋತ್ತಮ ಶಕ್ತಿಯನ್ನಾಗಿದೆ. ಓಂ ಮತ್ತು ಸರ್ವೋಚ್ಚ ಶಕ್ತಿಯನ್ನು ತಿಳಿದಿರುವವನು ತಾನು ಬಯಸುವ ಎಲ್ಲವನ್ನೂ ಪಡೆಯುತ್ತಾನೆ.

 ಓಂ, ಅತಿದೊಡ್ಡ ಆಶೀರ್ವಾದ

ಓಂ, ಅತಿದೊಡ್ಡ ಆಶೀರ್ವಾದ

'ಏಕಾಕ್ಷರ್' ಅಥವಾ ಒಂದು ಉಚ್ಚಾರದ ಓಂ ನಿಮಗೆ ಅಗತ್ಯವಿರುವ ಏಕೈಕ ಆಶೀರ್ವಾದ. ಗುರುಗಳು ತಮ್ಮ ಶಿಷ್ಯರಿಗೆ ಓಂ ನನ್ನು ತಮ್ಮ ಕಿವಿಗಳಲ್ಲಿ ಪಿಸುಗುಟ್ಟುವ ಮೂಲಕ ಆಶೀರ್ವದಿಸುತ್ತಾರೆ ಎಂದು ಹೇಳಲಾಗುತ್ತದೆ.

ಓಂ ಯಾವುದೇ ಮಂತ್ರಕ್ಕಿಂತ ಹೆಚ್ಚಿನದು

ಓಂ ಯಾವುದೇ ಮಂತ್ರಕ್ಕಿಂತ ಹೆಚ್ಚಿನದು

ವೇದಾಂತ ಅಥವಾ ಇನ್ನಿತರ ಧಾರ್ಮಿಕ ಸೂಕ್ಷ್ಮತೆಗಳ ಅರಿವಿಲ್ಲದೆ, ಮನುಷ್ಯನೊಬ್ಬನು ಮಂತ್ರವನ್ನು ಪರಿಪೂರ್ಣತೆಯಿಂದ ಹೇಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಅವರು ಕೇವಲ ಪ್ರಣವ್ ಮಂತ್ರವನ್ನು ಪಠಿಸಬಹುದು. ಉಚ್ಚಾರಾಂಶವು ಇಡೀ ವಿಶ್ವವನ್ನು ಒಳಗೊಂಡಿರುತ್ತದೆ,

ಜೀವಂತ ಮತ್ತು ಜೀವಂತವಲ್ಲದ, ಪ್ರತಿ ದೇವರಿಗೆ ಮತ್ತು ದೇವತೆಯರಿಗೆ ತಿಳಿದಿರುವ ಓಂ ಅನ್ನು ಪಠಿಸುವುದಕ್ಕಿಂತ ಹೆಚ್ಚಿನ ಮಂತ್ರಗಳಿಲ್ಲ.

 ಓಂ ರೂಪವಿರುವ ಹಾಗೂ ರೂಪವಿಲ್ಲದ ಅಂಶವಾಗಿದೆ

ಓಂ ರೂಪವಿರುವ ಹಾಗೂ ರೂಪವಿಲ್ಲದ ಅಂಶವಾಗಿದೆ

ಮನುಷ್ಯನು ದೇವರ ಆರಾಧನೆಯನ್ನು'ಸಗುಣ ರೂಪದಲ್ಲಿ' (ರೂಪವನ್ನು ಹೊಂದಿರು) ಪೂಜಿಸುತ್ತಾನೆ. ಯಾಕೆಂದರೆ' ಅವನಿಗೆ ನಿರ್ಗುಣ ರೂಪ'ವನ್ನು (ರೂಪವಿಲ್ಲದೆ) ಗ್ರಹಿಸಲು ಸಾಧ್ಯವಿಲ್ಲ. ಓಂ ನಿರ್ಗುಣ ಮತ್ತು ಸಗುಣ ರೂಪಗಳ ಅಭಿವ್ಯಕ್ತಿಯಾಗಿದೆ. ಓಂ ಶಬ್ಧವು ಸರ್ವೋಚ್ಚ ಶಕ್ತಿಯ ನಿರ್ಗುಣ ರೂಪವನ್ನು ಪ್ರತಿನಿಧಿಸುತ್ತದೆ. ಮತ್ತು ಬರೆದ ರೂಪದಲ್ಲಿನ ಓಂ ಸಗುಣವನ್ನು ಸೂಚಿಸುತ್ತದೆ.

English summary

things-you-dint-know-about-om

Om is auspicious sound. No God’s name is complete without saying Om before it. But, what does this syllable really mean? Why is it considered so holy? Om is often described at the root of everything. The religious scriptures say that Om is nothing but the ultimate and supreme Power; the Paratbramhan. It is ‘Pranava’ or the sound that governs the ‘Prana’ or life in our souls. It is the present, the past and the future. Om is a sound that is omnipresent, omnipotent and it is all around us. In this article we shall learn some facts about the Pranava Mantra or Om. Read on to know more.
X
Desktop Bottom Promotion