For Quick Alerts
ALLOW NOTIFICATIONS  
For Daily Alerts

ಲಕ್ಷ್ಮೀಯ ಆರಾಧನೆಯಿಂದ ಕಷ್ಟಗಳೆಲ್ಲಾ ದೂರವಾಗಿ ಅದೃಷ್ಟ ಒಲಿಯುವುದು

By Divya
|

ಸಂಪತ್ತಿನ ದೇವತೆ ಮಹಾಲಕ್ಷ್ಮಿಯ ಆರಾಧನೆ ಗೈದರೆ ಮನೆಯಲ್ಲಿ ಐಶ್ವರ್ಯ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ವ್ರತ ಕೈಗೊಂಡರೆ ಲಕ್ಷ್ಮಿ ಸದಾ ನಮ್ಮ ಕೈ ಹಿಡಿದು ನಡೆಸುತ್ತಾಳೆ ಎನ್ನುವ ಪ್ರತೀತಿ ಇದೆ. ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಮಹಿಳೆಯರೇ ದೇವತೆಯನ್ನು ಶೃಂಗರಿಸಿ, ಪೂಜೆ ಮಾಡುತ್ತಾರೆ.

ವರಮಹಾಲಕ್ಷ್ಮಿ ಹಬ್ಬದಂದು ನಡೆಸುವ 'ಯಮುನಾ ಪೂಜೆಯ' ಮಹತ್ವ

ಮನೆಯ ಸಿರಿ-ಸಂಪತ್ತನ್ನು ಹೆಚ್ಚಿಸುವುದಲ್ಲದೆ ಸುಮಂಗಲಿ ಯೋಗವನ್ನು ದೇವಿ ಭಕ್ತರಿಗೆ ಕರುಣಿಸುತ್ತಾಳೆ. ವರಮಹಾಲಕ್ಷ್ಮಿ ಎಂದರೆ 'ವರಮ್' ಎಂದರೆ ಮಹಾ ಮತ್ತು "ಲಕ್ಷ್ಮಿ' ಎಂಬ ಪದಗಳ ಸಂಯೋಜನೆ. ಇದನ್ನು ಶ್ರೇಷ್ಠ ತಾಯಿ ಲಕ್ಷ್ಮಿ ಎಂಬ ಅರ್ಥವನ್ನು ನೀಡುತ್ತದೆ. ಈ ಒಂದು ಪವಿತ್ರ ವ್ರತವನ್ನು ನೀವು ಮಾಡಬೇಕು ಎಂಬ ಭಾವನೆ ಇದ್ದರೆ ನೋಡಿ... ಈ ಕೆಳಗೆ ಪೂಜಾ ಸಾಮಾಗ್ರಿ ಹಾಗೂ ಮಾಡುವ ವಿಧಾನಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಲಾಗಿದೆ....

ಲಕ್ಷ್ಮಿ ದೇವಿಯ ಮುಖ

ಲಕ್ಷ್ಮಿ ದೇವಿಯ ಮುಖ

ಈ ಮಂಗಳಕರ ವ್ರತ ಆಚರಣೆಗೆ ಲಕ್ಷ್ಮಿ ದೇವಿಯ ಬೆಳ್ಳಿ ಮುಖ ಪ್ರಮುಖವಾದದ್ದು. ಇದನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಪಡೆಯಬಹುದು. ಇದಕ್ಕೆ ಅಮ್ಮನ್ ಮೊಘಮ್ ಎಂತಲೂ ಕರೆಯುತ್ತಾರೆ. ಹಿತ್ತಾಳೆಯ ಮುಖವಾದರೂ ಶ್ರೇಷ್ಠವೇ. ಪೂಜೆಯ ದಿನ ದೇವಿಯ ಮುಖಕ್ಕೆ ಅರಿಶಿನ, ಕುಂಕುಮ ಮತ್ತು ಶ್ರೀಗಂಧದ ಲೇಪದಿಂದ ಶೃಂಗರಿಸಬೇಕು.

ಕಲಶ

ಕಲಶ

ಪೂಜೆಗೆ ಬಳಸುವ ಪವಿತ್ರ ಹಾಗೂ ಅಗತ್ಯ ವಸ್ತು ತೆಂಗಿನಕಾಯಿ. ಮಂಗಳಕರ ವಸ್ತುವಾದ ಇದನ್ನು ಕಲಶವಿಡಲು ಬಳಸುತ್ತಾರೆ. ಇದರ ಅಲಂಕಾರಗೊಳಿಸಿಯೇ ದೇವಿಯನ್ನು ಪೂಜಿಸಲಾಗುವುದು. ತಾಮ್ರ, ಹಿತ್ತಾಳೆ, ಅಥವಾ ಬೆಳ್ಳಿಯ ತಂಬಿಗೆ/ಪುಟ್ಟ ಮಡಿಕೆಯಲ್ಲಿ ತೆಂಗಿನ ಕಾಯನ್ನು ಕೂರಿಸಿ ದೇವಿಯನ್ನು ಆಹ್ವಾನಿಸಬಹು. ಕಲಶದಲ್ಲಿ ಅಕ್ಕಿ, ನೀರು, ಅರಿಶಿನ ಪುಡಿ, ನಾಣ್ಯ, ಅಡಿಕೆ ಮತ್ತು ಬಿಲ್ವ ಪತ್ರೆಯನ್ನು ಹಾಕಲಾಗುವುದು.

ಅರಿಶಿನ

ಅರಿಶಿನ

ಅರಿಶಿನ ಔಷಧೀಯವಾಗಿ ಹಾಗೂ ಪವಿತ್ರ ಕೆಲಸಗಳಿಗೆ ಮಹತ್ತರವಾದ ವಸ್ತು. ಆಧ್ಯಾತ್ಮಿಕ ಮೌಲ್ಯಗಳಲ್ಲಿ ಅರಿಶಿನ ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. ದೇವಿ ಪೂಜೆಯಲ್ಲಿ ಇದನ್ನು ಕಲಶ ಅಥವಾ ತಾಯಿಯ ಮುಖಕ್ಕೆ ಶೃಂಗಾರ ಮಾಡಲು ಬಳಸಲಾಗುವುದು.

ಕುಂಕುಮ

ಕುಂಕುಮ

ಕುಂಕುಮ ಅಥವಾ ಸಿಂಧೂರ ವರಮಹಾಲಕ್ಷ್ಮಿ ಪೂಜೆಗೆ ಬೇಕಾದ ಇನ್ನೊಂದು ಪ್ರಮುಖ ವಸ್ತು. ವಿವಾಹಿತ ಮಹಿಳೆಯರಿಂದ ಪೂಜಿಸಲಾಗುವ ಈ ವ್ರತದಲ್ಲಿ ಕುಂಕುಮಾರ್ಚನೆ ಮಾಡಿ, ದೇವಿಗೆ ಕುಂಕುಮ ಅಲಂಕಾರ ಮಾಡುವುದು ಬಹಳ ಶ್ರೇಷ್ಠವಾದದ್ದು. ದೇವಿಗೆ ಕುಂಕುಮ ಬಹಳ ಪ್ರಿಯವಾದ್ದರಿಂದ ಕುಂಕುಮದಲ್ಲಿ ಶೃಂಗಾರ ಮಾಡಬೇಕು.

ತೆಂಗಿನಕಾಯಿ

ತೆಂಗಿನಕಾಯಿ

ಪೂಜೆಯ ಸಂದರ್ಭದಲ್ಲಿ ತೆಂಗಿನಕಾಯಿ ಬಹಳ ಪವಿತ್ರವಾದ ಸ್ಥಾನವನ್ನು ಪಡೆದುಕೊಂಡಿದೆ. ಕಲಶ ಕೂರಿಸಲು, ಮಹಿಳೆಯರಿಗೆ ತಾಂಬೂಲ ನೀಡಲು, ನೈವೇದ್ಯಕ್ಕೆ ಸಿಹಿ ತಯಾರಿಸಲು ಬಳಸಲಾಗುವುದು.

ಹಳದಿ ದಾರ

ಹಳದಿ ದಾರ

ಪೂಜೆಗೆ ಬೇಕಾದ ಪವಿತ್ರ ವಸ್ತುಗಳಲ್ಲಿ ಇದೂ ಒಂದು. ಹೂಗಳ ಜೋಡಣೆಗೆ, ಕಂಕಣ ಕಟ್ಟಿಕೊಳ್ಳಲು ಈ ದಾರವನ್ನು ಬಳಸುತ್ತಾರೆ. ಇದನ್ನು ಲಕ್ಷ್ಮಿ ದೇವಿಯ ಪಾದದ ಮೇಲೂ ಹಾಕಲಾಗುತ್ತದೆ. ಅರಿಶಿನದಲ್ಲಿ ಅದ್ದಿ ಹಳದಿ ಬಣ್ಣದ ದಾರವನ್ನಾಗಿ ಮಾಡಲಾಗುವುದು. ನಂತರ ಇದಕ್ಕೆ 9 ಗಂಟುಗಳನ್ನು ಹಾಕಿ ಪವಿತ್ರಗೊಳಿಸಲಾಗುತ್ತದೆ. ಈ ದಾರದಲ್ಲಿ ದೇವಿಗೆ ಪ್ರಿಯವಾದ ಕಲಮ ಮತ್ತು ಗನೇರ ಹೂವನ್ನು ಜೋಡಿಸಿ ದೇವಿಗೆ ಶೃಂಗಾರ ಮಾಡಲಾಗುವುದು.

ಮಾವಿನ ಎಲೆ

ಮಾವಿನ ಎಲೆ

ಪೂಜೆಯ ಜಾಗ ಹಾಗೂ ಮನೆಯನ್ನು ಅಲಂಕರಿಸಲು ಮಾವಿನ ಎಲೆ ಬಹಳ ಶ್ರೇಷ್ಠವಾದದ್ದು. ಲಕ್ಷ್ಮಿಯನ್ನು ಸ್ವಾಗತಿಸಲು ಮಾವಿನ ಎಲೆಯ ತೋರಣವನ್ನು ಕಟ್ಟಲಾಗುವುದು. ಅಲ್ಲದೆ ಕಲಶ ಕೂರಿಸಲು ಇದನ್ನು ಬಳಸುತ್ತಾರೆ. ಸಮೃದ್ಧಿಯನ್ನು ಹೆಚ್ಚಿಸುವ ಶುದ್ಧವಾದ ವಸ್ತು ಎಂದು ಪರಿಗಣಿಸಲಾಗುವುದು.

ವೀಳ್ಯದೆಲೆ

ವೀಳ್ಯದೆಲೆ

ಪೂಜೆಗೆ ಬಳಸುವ ಪವಿತ್ರ ವಸ್ತುಗಳಲ್ಲಿ ವೀಳ್ಯದೆಲೆಯೂ ಒಂದು. ಇದು ದೇವಿಯ ಅಲಂಕಾರಕ್ಕೆ, ಪೂಜೆಗೆ ಉಪಯೋಗಿಸುತ್ತಾರೆ. ಅಲ್ಲದೆ ಸುಮಂಗಳೆಯರಿಗೆ ಬಾಗಿನ ನೀಡಲು ವೀಳ್ಯದೆಲೆಯನ್ನು ಬಳಸಲಾಗುವುದು.

English summary

Things That Are Considered Sacred For Varamahalakshmi Pooja

The name Varamahalakshmi is a combination of the words 'Varam, 'Maha' and 'Lakshmi'. It can be translated as the great mother Lakshmi who grants boons. As the name suggests, Goddess Lakshmi showers boons on the devotees who observe the Varamahalakshmi pooja wholeheartedly. In this article, we shall discuss the many things that are considered to be sacred on the day of Varamahalakshmi festival. Read on to know more.
Story first published: Tuesday, August 1, 2017, 20:08 [IST]
X
Desktop Bottom Promotion