ಶನಿ ಜಯಂತಿ ವಿಶೇಷ: ಶನಿಗೆ ಶರಣು ಹೇಳಿ ಕಷ್ಟಕಾರ್ಪಣ್ಯ ಕಳೆದುಕೊಳ್ಳಿ

By: Jaya subramanya
Subscribe to Boldsky

ಮಾನವ ಜೀವನದಲ್ಲಿ ಕಷ್ಟಗಳು ಬಂದಾಗ ಇದು ಶನಿಯ ಪ್ರಭಾವ ಅಂತೆಯೇ ನಮ್ಮ ರಾಶಿಯಲ್ಲಿ ಶನಿ ಹಾಜರಾಗಿದ್ದಾರೆ ಮೊದಲಾಗಿ ಹೇಳುವುದನ್ನು ನೀವು ಕೇಳಿರುತ್ತೀರಿ. ಶನಿ ದೋಷ ಬಂದರೆ ಅದನ್ನು ನೀಗಿಸಿಕೊಳ್ಳುವುದು ತುಂಬಾ ಕಷ್ಟ ಎಂಬ ಮಾತೂ ಇದೆ. ಮಹಾನು ಭಾವರನ್ನು ಕೂಡ ಶನಿ ಕಾಡಿದ್ದಿದೆ. ಧರ್ಮರಾಯ, ಸತ್ಯ ಹರಿಶ್ಚಂದ್ರ, ಕೃಷ್ಣ ಪರಮಾತ್ಮ ಹೀಗೆ ವೇದಗಳ ಕಾಲದಿಂದ ಈಗಿನವರೆಗೂ ಶನಿಯ ಪ್ರಭಾವಕ್ಕೆ ಒಳಗಾದವರೇ ಅಸಂಖ್ಯ ಸಂಖ್ಯೆಯಲ್ಲಿದ್ದಾರೆ.

ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಅವರ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಶನಿ ಜಯಂತಿಯನ್ನು ಭಾರತದ ಹಲವೆಡೆಗಳಲ್ಲಿ 25 ನೇ ಮೇ 2017 ರಂದು ದೇಶದ ಇತರೆಡೆಗಳಲ್ಲಿ ವೈಶಾಖ ಮಾಸದ ಅಮವಾಸ್ಯೆ ತಿಥಿಯಂದು ಶನಿ ಜಯಂತಿಯನ್ನು ಆಚರಿಸುವವರಿದ್ದು, ತಾವು ಅನುಸರಿಸುವ ಬೇರೆ ಬೇರೆ ಕ್ಯಾಲೆಂಡರ್‌ಗಳನ್ನು ಆಧರಿಸಿ ಈ ಜಯಂತಿಯನ್ನು ಅವರು ಆಚರಿಸುತ್ತಾರೆ.

ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಅಮವಾಸ್ಯೆ ತಿಥಿಯ ಆರಂಭ = 5.7 ಪ್ರಾತಃ ಕಾಲ 25/ಮೇ/2017

ಅಮವಾಸ್ಯೆ ತಿಥಿ ಮುಕ್ತಾಯ = 0:14 ಮಧ್ಯಾಹ್ನ 26/ಮೇ/2017

ಶನಿಯ ಹುಟ್ಟುಹಬ್ಬವಾಗಿ ಈ ಜಯಂತಿಯನ್ನು ಕಾಣಲಾಗುತ್ತದೆ. ಶನಿ ಗ್ರಹದ ಅಧಿಪತಿಯಾಗಿರುವ ಶನಿ ದೇವನು ನವಗ್ರಹಗಳಲ್ಲಿ ಒಬ್ಬರಾಗಿದ್ದಾರೆ. ನಮ್ಮ ಜೀವನದ ದಿಕ್ಕುಗಳು ಮತ್ತು ಭವಿಷ್ಯವನ್ನು ಶನಿಯು ಲೆಕ್ಕಾಚಾರ ಹಾಕುತ್ತಾರೆ ಎಂಬುದಾಗಿಯೇ ಕಾಣಲಾಗಿದೆ. ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಈ ಸಮಯ ಜೀವನದಲ್ಲಿ ಹೆಚ್ಚು ಕಷ್ಟಕರವಾಗಿರುತ್ತದೆ. ಅದಾಗ್ಯೂ ಶನಿಯನ್ನು ಪೂಜಿಸುವುದರೊಂದಿಗೆ ಈ ದೋಷದ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಶನಿಯ ಕೃಪಾ ಕಟಾಕ್ಷಕ್ಕೆ ಒಳಗಾಗಬಹುದಾಗಿದೆ. ಶನಿ ಜಯಂತಿಯನ್ನು ನೀವು ಮಾಡಬೇಕಾಗಿರುವ ಕೆಲವೊಂದು ಅಂಶಗಳನ್ನು ಇಂದಿಲ್ಲಿ ತಿಳಿಸುತ್ತಿದ್ದು ಇದರಿಂದ ಶನಿ ದೇವರು ತೃಪ್ತಿಹೊಂದುವುದು ಖಂಡಿತ.

ಎಳ್ಳೆಣ್ಣೆ

ಎಳ್ಳೆಣ್ಣೆ

ಶನಿದೇವರ ಅಹಂಕಾರವನ್ನು ಅಡಗಿಸಿದ ಹನುಮಂತನು ಶನಿಯ ದೇಹದಲ್ಲಿ ಗಾಯಗಳನ್ನು ಉಂಟುಮಾಡಿ ಅವರಿಗೆ ಅಸಹನೀಯವಾದ ನೋವು ಉಂಟಾಗುತ್ತಿರುತ್ತದೆ. ಹನುಮನು ಮೈಕೈ ನೋವನ್ನು ನಿವಾರಿಸಿಕೊಳ್ಳಲು ಹನುಮನು ಶನಿಗೆ ಎಣ್ಣೆಯನ್ನು ನೀಡುತ್ತಾರೆ. ತದನಂತರ ಈ ಎಣ್ಣೆಯನ್ನು ಶನಿಗೆ ನೀಡುವವರನ್ನು ತಾನು ಕಾಡುವುದಿಲ್ಲ ಎಂಬುದಾಗಿ ಶನಿ ಆಶ್ವಾಸನೆಯನ್ನು ನೀಡುತ್ತಾರೆ. ಈ ಎಣ್ಣೆ ಎಳ್ಳೆಣ್ಣೆಯಾಗಿದೆ. ಶನಿ ಜಯಂತಿಯನ್ನು ಈ ಎಣ್ಣೆಯನ್ನು ನೀವು ನೀಡುವುದರಿಂದ ಭಗವಂತನ ಕೃಪಾಕಟಾಕ್ಷಕ್ಕೆ ನೀವು ಒಳಗಾಗುತ್ತೀರಿ.

ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ಕಪ್ಪು ವಸ್ತುಗಳನ್ನು ದಾನ ಮಾಡುವುದು

ಕಪ್ಪು ವಸ್ತುಗಳನ್ನು ದಾನ ಮಾಡುವುದು

ಶನಿ ಜಯಂತಿಯನ್ನು ಕಪ್ಪು ವಸ್ತುಗಳನ್ನು ಕೂಡ ದಾನ ಮಾಡಿ ದೇವರ ಅನುಗ್ರಹಕ್ಕೆ ನಿಮಗೆ ಪಾತ್ರರಾಗಬಹುದು. ಕಪ್ಪು ಧಾನ್ಯಗಳು, ಕಪ್ಪು ಬೇಳೆ, ಎಳ್ಳೆಣ್ಣೆ, ಕಪ್ಪು ಬಣ್ಣದ ದನ, ಕಪ್ಪು ವಸ್ತ್ರಗಳು, ಮೊದಲಾದವನ್ನು ನಿಮಗೆ ದಾನ ಮಾಡಬಹುದಾಗಿದೆ. ಇಂತಹ ವಸ್ತುಗಳನ್ನು ದಾನ ಮಾಡುವುದು ಕೆಟ್ಟ ಪ್ರಭಾವವನ್ನು ದೂರಮಾಡುತ್ತದೆ.

ಕಪ್ಪು ನಾಯಿಗೆ ಆಹಾರ ತಿನ್ನಿಸುವುದು

ಕಪ್ಪು ನಾಯಿಗೆ ಆಹಾರ ತಿನ್ನಿಸುವುದು

ಕಪ್ಪು ಬಣ್ಣ ಮತ್ತು ನಾಯಿಯನ್ನು ಶನಿಯ ಸಂಕೇತವಾಗಿದೆ. ಕಪ್ಪು ನಾಯಿಗೆ ಆಹಾರವನ್ನು ತಿನ್ನಿಸುವುದು ಶನಿಯ ಉಪಟಳದಿಂದ ನಿಮ್ಮನ್ನು ಕಾಪಾಡುತ್ತದೆ. ಗೋಧಿ ಹಿಟ್ಟಿನಿಂದ ಚಪಾತಿಯನ್ನು ತಯಾರಿಸಿ ಅದನ್ನು ಎಳ್ಳೆಣ್ಣೆಯಿಂದ ಬೇಯಿಸಿಕೊಳ್ಳಿ. ನಂತರ ಅದನ್ನು ಕಪ್ಪು ನಾಯಿಗೆ ನೀಡಿ. ಫಲಿತಾಂಶವನ್ನು ನೀವೇ ಅರಿತುಕೊಳ್ಳುತ್ತೀರಿ.

ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡುವುದು

ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡುವುದು

ಶನಿ ದೇವರ ದೇವಸ್ಥಾನ ಅಥವಾ ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡಿ. ಪಂಚಾಮೃತ, ಎಣ್ಣೆ, ಗಂಗಾ ಜಲ ಮೊದಲಾದವನ್ನು ದೇವರಿಗೆ ಅರ್ಪಿಸಿ. ಇದು ಶನಿಯನ್ನು ಸಂತೋಷಪಡಿಸುತ್ತದೆ ಮತ್ತು ಅವರ ಪ್ರಭಾವದಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ.

'ನವಗ್ರಹ'ಗಳನ್ನು ಪೂಜಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ನವರತ್ನ ಹಾರ

ನವರತ್ನ ಹಾರ

ಶನಿಯ ದೋಷದಿಂದ ನೀವು ಹೈರಾಣಾಗಿದ್ದೀರಿ ಎಂದಾದಲ್ಲಿ ಒಂಭತ್ತು ರತ್ನಗಳಿಂದ ಮಾಡಿರುವ ಹಾರವನ್ನು ಧರಿಸಿ. ಶನಿಯ ಪೂಜೆಯನ್ನು ಮಾಡುವಾಗ ಈ ಹಾರವನ್ನು ಅವರಿಗೆ ಅರ್ಪಿಸಲಾಗುತ್ತದೆ.

ಹನುಮಂತನ ಧ್ಯಾನ

ಹನುಮಂತನ ಧ್ಯಾನ

ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಈ ದಿನ ಪೂಜೆಯನ್ನು ಮಾಡಿಸಿ. ಹನುಮಂತನ ಭಕ್ತರನ್ನು ಶನಿ ದೇವರು ಸೋಕುವುದೇ ಇಲ್ಲ.

ಶನಿ ದೋಷವಿದ್ದಲ್ಲಿ, ಹನುಮಂತನನ್ನು ನೆನೆಯಿರಿ, ಸಂಕಷ್ಟ ಪರಿಹಾರವಾಗುವುದು

English summary

Things To Do On Shani Jayanti

Shani Jayanti is celebrated as the birth anniversary of Lord Shani, who is the patron god of the planet Saturn. Read to know what are the things to be done on this day. The Amavasya tithi of the Amavasya day is celebrated as Shani Jayanti in many parts of India. According to the Gregorian calendar, Shani Jayani falls on the 25th of May in the year 2017. In the other parts of the county, Shani Jayanti is celebrated on the Amavasya tithi of Vaishakha month. This discrepancy is due to the different calendars they follow.
Subscribe Newsletter