For Quick Alerts
ALLOW NOTIFICATIONS  
For Daily Alerts

ಯೋಗಾಭ್ಯಾಸದ ನಿಜವಾದ ಸಾರವೇನು?'

|

ಯೋಗಾಭ್ಯಾಸ ನಿಮ್ಮ ದಿನನಿತ್ಯದ ಕ್ರಮದ ಒಂದು ಭಾಗವಾಗಿದೆಯೇ? ಅಥವಾ ಆರೋಗ್ಯಕರ ಜೀವನಕ್ರಮಕ್ಕಾಗಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವತ್ತ ಚಿಂತನೆ ನಡೆಸುತ್ತಿದ್ದೀರಾ? ಒಂದು ವೇಳೆ ಇದಕ್ಕೆ ಉತ್ತರ ಹೌದು ಎಂದಾದಲ್ಲಿ ಯೋಗಾಭ್ಯಾಸದ ನಿಜವಾದ ಸಾರವನ್ನು ಮೊದಲು ಅರಿತುಕೊಂಡಿರುವುದು ಅಗತ್ಯವಾಗಿದೆ. ಕೆಲವು ಸೂಕ್ತವಾದ ಯೋಗಾಭ್ಯಾಸಗಳನ್ನು ನಿತ್ಯವೂ ಅನುಸರಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದೆಂಬುದನ್ನು ಈಗಾಗಲೇ ನಮ್ಮಲ್ಲಿ ಹಲವರಿಗೆ ಮನವರಿಕೆಯಾಗಿದೆ.

ಆದರೆ ಯೋಗಾಭ್ಯಾಸದ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಅಗತ್ಯಕ್ಕೂ ಕಡಿಮೆಯೇ ಎನಿಸುವಷ್ಟು ಜ್ಞಾನವಿದೆ ಹಾಗೂ ಹೆಚ್ಚಿನವು ಪ್ರಚಾರಕ್ಕೆ ಬಳಸಿಕೊಂಡ ಮಾಹಿತಿಯ ಮಿತಿಯಲ್ಲಿಯೇ ಇರುತ್ತವೆ. ಈ ಕೊರತೆಯಿದ್ದರೂ ವಿಶ್ವದ ಹಲವು ವ್ಯಕ್ತಿಗಳು ಯೋಗಾಭ್ಯಾಸವನ್ನು ತಮ್ಮ ನಿತ್ಯಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ. ಜೀವನಕ್ರಮ ಉತ್ತಮಗೊಳ್ಳುತ್ತಿರುವ ಕಾರಣ ಹೆಚ್ಚು ಹೆಚ್ಚು ಜನರು ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಪರಿಮಿತ ಜ್ಞಾನಕ್ಕೆ ಮೀಸಲಾಗಿಸುವ ಬದಲು ನಿಜವಾದ ಯೋಗಾಭ್ಯಾಸದ ಸಾರವನ್ನು ಅರಿತುಕೊಂಡೇ ಮುಂದುವರೆಯುವುದು ಇಂದು ಹೆಚ್ಚು ಅಗತ್ಯವಾಗಿದೆ.

ಯೋಗಾಭ್ಯಾಸದ ನಿಜವಾದ ಸಾರ

ಯೋಗಾಭ್ಯಾಸದ ನಿಜವಾದ ಸಾರ

ಯೋಗಾಭ್ಯಾಸದ ನಿಜವಾದ ಸಾರ ಉತ್ತಮ ಆರೋಗ್ಯವನ್ನು ಪಡೆಯಲು ನೆರವಾಗುತ್ತದೆ. ವಾಸ್ತವವಾಗಿ, ಹೆಚ್ಚಿನವರು ತಿಳಿದುಕೊಂಡಂತೆ ಕೇವಲ ಯೋಗಾಸನಗಳನ್ನು ನಿತ್ಯವೂ ಅನುಸರಿಸುವುದು ಮಾತ್ರವೇ ಯೋಗಾಭ್ಯಾಸವಾಗಲಾರದು. ನಿತ್ಯವೂ ಹಲವಾರು ಯೋಗಾಸನಗಳ ಅಭ್ಯಾಸ, ಧ್ಯಾನ ಹಾಗೂ ಮೌನಗಳೂ ಯೋಗಾಭ್ಯಾಸದ ಅಂಗಗಳಾಗಿವೆ. ಇಂದಿನ ದಿನಗಳಲ್ಲಿ ಈ ಎಲ್ಲವನ್ನೂ ಒಳಗೊಂಡ ಯೋಗಾಬ್ಯಾಸವನ್ನೇ ಹೆಚ್ಚಾಗಿ ಅನುಸರಿಸಲಾಗುತ್ತಿದ್ದು ಇದಕ್ಕೆ ರಾಜಯೋಗ ಎಂದು ಕರೆಯುತ್ತಾರೆ. ಆದರೆ ಯೋಗಾಭ್ಯಾಸದ ವ್ಯಾಖ್ಯಾನ ವಿಶಾಲವಾಗಿದ್ದು ನಿಜಾರ್ಥದಲ್ಲಿ ಭಗವತ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸುವಂತೆ "ಯೋಗಃ ಕರ್ಮಸು ಕೌಶಲಂ" ಅಂದರೆ, ಯಾವುದೇ ಕಾರ್ಯದಲ್ಲಿ ಅತ್ಯುತ್ತಮವಾದುದನ್ನು ಸಾಧಿಸುವುದೇ ಯೋಗವಾಗಿದೆ ಹಾಗೂ ಈ ಅರ್ಥವೇ ಜೀವನಕ್ರಮ ಉತ್ತಮಗೊಳ್ಳಲು ಅಗತ್ಯವಾದ ವಿಜ್ಞಾನವಾಗಿದೆ.

Most Read: ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

ಯೋಗ ಎಂಬ ಪದ ’ಯುಜ’ ಎಂಬ ಪದದಿಂದ ಬಂದಿದೆ

ಯೋಗ ಎಂಬ ಪದ ’ಯುಜ’ ಎಂಬ ಪದದಿಂದ ಬಂದಿದೆ

ಯೋಗಾಭ್ಯಾಸದಲ್ಲಿರುವ ಯೋಗ ಎಂಬ ಪದ 'ಯುಜ'ಎಂಬ ಪದದಿಂದ ಬಂದಿದೆ, ಇದರ ಅರ್ಥ 'ಸಂಯೋಜನೆ' ಎಂಬುದಾಗಿದೆ. ಆಳದಿಂದ ತೊಡಗಿ ಅತಿ ಎತ್ತರದವರೆಗಿನ ಆಯಾಮಗಳನ್ನು ಅಳವಡಿಸಿಕೊಳ್ಳುವುದಾಗಿದೆ,. ಯಾವಾಗ ಈ ಆಯಾಮಗಳನ್ನು ತಲುಪಲು ಸಾಧ್ಯವಾಯಿತೋ ಆಗ ಆ ವ್ಯಕ್ತಿ ಯೋಗ ಪಡೆದಿದ್ದಾನೆ ಎಂದು ತಿಳಿದುಕೊಳ್ಳಬಹುದು. ಆದರೆ ಈ ಪರಿಯ ಸಂಯೋಜನೆ ಹೇಗೆ ಸಾಧ್ಯವಾಗುತ್ತದೆ? ನಿಜಕೂ ಇದು ಸಾಧ್ಯವೇ? ಹೌದು, ಹಲವು ಖ್ಯಾತ ಸಂತರು ಮತ್ತು ಋಷಿಗಳು ತಮ್ಮದೇ ಆದ ಆಧ್ಯಾತ್ಮದ ದಾರಿಯಲ್ಲಿ ಸಾಗುತ್ತಾ ಈ ಆಯಾಮವನ್ನು ತಲುಪಿದ್ದಾರೆ. ವಾಸ್ತವದಲ್ಲಿ ಯೋಗಾಭ್ಯಾಸ ಆಧ್ಯಾತ್ಮದ ಅರಿವಿನ ಬಗ್ಗೆ ತೆರೆದಿರುವ ಬಾಗಿಲಾಗಿದೆ. ಹಿಂದೂ ಧರ್ಮದ ಹಲವು ಗ್ರಂಥಗಳಲ್ಲಿ ವಿವರಿಸಿರುವ ಪ್ರಕಾರ ಯೋಗಾಭ್ಯಾಸ ಅತಿ ಪುರಾತನವಾದ ಅಭ್ಯಾಸವಾಗಿದ್ದು ಜೀವನದ ಅತ್ಯುತ್ತಮವಾದುದನ್ನು ಸಾಧಿಸಲು ನೆರವಾಗುತ್ತದೆ. ಬನ್ನಿ, ಯೋಗಾಭ್ಯಾಸದ ಬಗ್ಗೆ ಇನ್ನಷ್ಟು ಆಳವಾದ ಅರಿವನ್ನು ಪಡೆಯೋಣ ಹಾಗೂ ಈ ಪುರಾತನ ವಿಜ್ಞಾನ ನೀಡಲಿರುವ ಸಂಪೂರ್ಣ ಪ್ರಯೋಜನಗಳ ಬಗ್ಗೆ ಅರಿಯೋಣ. ಜೀವನದಲ್ಲಿ ಅತ್ಯುನ್ನತವಾದುದನ್ನು ಸಾಧಿಸಲು ನಾಲ್ಕು ಬಗೆಯ ಯೋಗಾಭ್ಯಾಸಗಳಿವೆ.

Most Read: ತಲೆನೋವನ್ನು ತ್ವರಿತವಾಗಿ ನಿವಾರಣೆ ಮಾಡುವ ಯೋಗ ಭಂಗಿಗಳು

ಕರ್ಮ ಯೋಗ

ಕರ್ಮ ಯೋಗ

ಇದು ನಿಃಸ್ವಾರ್ಥ ಕರ್ಮದ ಪಥವಾಗಿದೆ, ಈ ಪಥದಲ್ಲಿ ಜನಸೇವೆಯ ಮೂಲಕ ದೇವರ ಸೇವೆ ಮಾಡುವುದಾಗಿದ್ದು ಈ ಮೂಲಕ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದಿರುವುದಾಗಿದೆ. ಕರ್ಮಯೋಗಿ ಜನರ ಒಳಿತಿಗಾಗಿ ಹಾಗೂ ಸಮಾಜದ ಸೇವಿಗಾಗಿ ತನ್ನ ಜೀವನವನ್ನು ಮುಡಿಪಾಗಿರಿಸುತ್ತಾನೆ ಹಾಗೂ ಇದರಿಂದ ದೊರಕುವ ಲಾಭ ಅಥವಾ ಪ್ರತಿಫಲಗಳ ಬಗ್ಗೆ ಯಾವುದೇ ಆಸೆಯನ್ನಿರಿಸಿಕೊಂಡಿರುವುದಿಲ್ಲ. ಈ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಆಗಿದ್ದು ಓರ್ವ ಕರ್ಮಯೋಗಿಯಾಗಿ ತಮ್ಮ ಜೀವನವನ್ನು ಸಾರ್ಥಕವಾಗಿ ಕಳೆದರು.

ಭಕ್ತಿ ಯೋಗ

ಭಕ್ತಿ ಯೋಗ

ಪ್ರೀತಿ ಮತ್ತು ಭಕ್ತಿಯ ಮೂಲಕ ಜೀವನದಲ್ಲಿ ಅತ್ಯುತ್ತಮವಾದುದನ್ನು ಸಾಧಿಸುವ ಕ್ರಮವೇ ಭಕ್ತಿ ಯೋಗ. ದೇವರ ಅನುಗ್ರಹವನ್ನು ಪಡೆಯಲು ಇದು ನೇರವಾದ ದಾರಿಯಾಗಿದೆ ಎಂದೂ ಹೇಳಲಾಗುತ್ತದೆ. ಖ್ಯಾತ ಸಂತರಾದ ರಾಮಕೃಷ್ಣ ಪರಮಹಂಸರು ಭಕ್ತಿಯೋಗದ ಮೂಲಕ ಜ್ಞಾನೋದಯವನ್ನು ಪಡೆದರು. ಭಕ್ತಿಯೋಗವನ್ನು ಅನುಸರಿಸುವ ಇನ್ನೋರ್ವರು ಮೀರಾಬಾಯಿ ಹಾಗೂ ದೇವರಲ್ಲಿ ತನ್ನ ಆಳವಾದ ಪ್ರೀತಿ ಮತ್ತು ಶರಣಾಗುವಿಕೆಯ ಮೂಲಕ ಈಕೆಯೂ ದೇವರ ಅನುಗ್ರಹಕ್ಕೆ ಪಾತ್ರರಾದರು.

ಜ್ಞಾನ ಯೋಗ

ಜ್ಞಾನ ಯೋಗ

ಭಕ್ತಿಮಾರ್ಗದ ಮೂಲಕ ಜ್ಞಾನ ಮತ್ತು ವಿವೇಕವನ್ನು ಪಡೆಯಲು ಹಾಗೂ ಅಂತಿಮವಾಗಿ ಸ್ವಯಂ ಸಾಕ್ಷಾತ್ಕಾರ ಪಡೆಯಲು ನೆರವಾಗುವುದೇ ಜ್ಞಾನ ಯೋಗವಾಗಿದೆ. ಮಹಾನ್ ಋಷಿಗಳಾದ ಶ್ರೀ ರಮಣ ಮಹರ್ಶಿಯವರು ಜ್ಞಾನ ಮಾರ್ಗದಲ್ಲಿ ಸಾಗುತ್ತಾ 'ನಾನು ಯಾರು ಎಂಬ' ಪ್ರಶ್ನೆಗೆ ಸೂಕ್ತ ಉತ್ತರ ನೀಡುವ ಸ್ವವಿಮರ್ಶೆಯ ಮೂಲಕ ಹಲವಾರು ಪ್ರವಚನಗಳನ್ನು ನೀಡಿದ್ದಾರೆ.

ರಾಜ ಯೋಗ

ರಾಜ ಯೋಗ

ಸತತ ಯೋಗಾಸನಗಳನ್ನು ಅನುಸರಿಸುವ ಹಾಗೂ ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಅತ್ಯುನ್ನತವಾದುದನ್ನು ಸಾಧಿಸುವ ಮಾರ್ಗವೇ ರಾಜ ಯೋಗ. ಸೂಕ್ತವಾದ ಯೋಗಾಸನಗಳು, ಧ್ಯಾನ ಹಾಗೂ ಮೂನವನ್ನು ಅನುಸರಿಸುವ ಮೂಲಕ ಸ್ವಯಂ ಶಿಸ್ತನ್ನು ಪಡೆಯಬಹುದು. ರಾಜ ಯೋಗವನ್ನು ಅಷ್ಟಾಂಗ ಯೋಗ ಎಂದೂ ಕರೆಯುತ್ತಾರೆ. ಏಕೆಂದರೆ ಋಷಿ ಪತಂಜಲಿಯವರು ವಿವರಿಸಿದ ಪ್ರಕಾರ ಈ ಅಭ್ಯಾಸದಲ್ಲಿ ಯೋಗದಲ್ಲಿರುವ ಎಂಟು ಬಾಹುಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೀವನದಲ್ಲಿ ಅತ್ಯುನ್ನತವಾದುದನ್ನು ಸಾಧಿಸಬೇಕೆಂದಿರುವ ಯಾವುದೇ ವ್ಯಕ್ತಿ ಈ ನಾಲ್ಕರಲ್ಲೊಂದು ವಿಧಗಳನ್ನು ಆಯ್ದುಕೊಳ್ಳಬಹುದು. ಯೋಗಾಭ್ಯಾಸ ಒಂದು ಜೀವನಕ್ರಮವಾಗಿದ್ದು ಯೋಗಾಭ್ಯಾಸ ವಿವರಿಸುವ ಎಲ್ಲಾ ಕಟ್ಟುಪಾಡುಗಳನ್ನು ಜೀವನಪರ್ಯಂತ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಮೂಲಕ ಸದಾ ಆಳವಾದ ಮತ್ತು ಉನ್ನತವಾದ ಆಯಾಮಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಈ ಬಗೆಯ ಸಂಯೋಜನೆಯಿಂದ ವ್ಯಕ್ತಿ ತನ್ನ ಅಂತರಂಗದ ಬಗ್ಗೆ ಆಳವಾದ ಮತ್ತು ವಿಶಾಲವಾದ ದೃಷ್ಟಿಕೋನವನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ ಸುತ್ತ ಇರುವ ಎಲ್ಲರಲ್ಲಿಯೂ ತನ್ನನ್ನು ತಾನು ಕಾಣುವ ಹಾಗೂ ಎಲ್ಲವೂ 'ಒಂದೇ' ಶಕ್ತಿಯ ಭಾಗವಾಗಿರುವುದನ್ನು ಮನಗಾಣಬಹುದು. ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಿದ ಋಷಿಮುನಿಗಳು ದೈವಿಕ ಭಾವಪರವಶತೆಯ ಸ್ಥಿತಿಯನ್ನು ಪಡೆದಿದ್ದಾರೆ. ಇಂದಿನ ದಿನಗಳಲ್ಲಿ ಹಲವಾರು ವ್ಯಕ್ತಿಗಳು ಹಲವಾರು ರಂಗಗಳಲ್ಲಿ ಯಶಸ್ಸನ್ನು ಗಳಿಸಿದ್ದಾರೆ ಆದರೆ ತಮ್ಮ ಜೀವನದ ನಿಜವಾದ ಅರ್ಥವನ್ನೇ ಅರಿಯದವರಾಗಿದ್ದಾರೆ. ಈ ವ್ಯಕ್ತಿಗಳು ಯೋಗವನ್ನು ಅಭ್ಯಾಸ ಮಾಡಿಕೊಳ್ಳುವುದು ಅಗತ್ಯವಾಗಿದೆ. ಯೋಗಾಭ್ಯಾಸದಿಂದ ಕೇವಲ ದೇಹ ಮತ್ತು ಮನಸ್ಸನ್ನು ಸ್ಥಿಮಿತದಲ್ಲಿರಿಸುವುದು ಮಾತ್ರವಲ್ಲ, ಸುತ್ತಮುತ್ತಲಿರುವ ಎಲ್ಲರನ್ನೂ ಮತ್ತು ಎಲ್ಲವನ್ನೂ ಏಕಪ್ರಕಾರವಾಗಿಕಾಣುವ ವಿಶಾಲ ಮನೋಭಾವದ ಪಡೆಯುವ ಮೂಲಕ ಆತ್ಮವನ್ನು ಪುನರುಜ್ಜೀವನಗೊಳಿಸುವುದಾಗಿದೆ. ಯೋಗಾಭ್ಯಾಸ ನಮ್ಮ ಜೀವನದ ಕ್ರಮವಾಗಲಿ ಹಾಗೂ ಈ ಪುರಾತನ ಭಾರತೀಯ ಪರಂಪರೆಯನ್ನು ಜೀವನಕ್ರಮವಾಗಿ ಅಳವಡಿಸಿಕೊಳ್ಳುವ ಮೂಲಕ ಭಾವೈಕ್ಯತೆ ಹಾಗೂ ಸುತ್ತಮುತ್ತಲಿನ ಎಲ್ಲರೂ ಒಂದೇ ಎಂಬ ಭಾವನೆ ಮೂಡುವಂತಾಗಲಿ.

English summary

The True Essence Of Yoga

Is yoga a part of your life? At least are you considering including yoga for a healthy lifestyle? If yes, then it is worth delving deep into what yoga actually means. Many of us have been exposed to yoga as a way to good health through specific postures. Most of the world has this preconceived idea and limited understanding of the subject and yet yoga continues to be an integral part of many people across the world, with the numbers increasing more so than ever. Therefore, it is even more crucial to understand the true essence of yoga.
X
Desktop Bottom Promotion