For Quick Alerts
ALLOW NOTIFICATIONS  
For Daily Alerts

ಭಕ್ತರ ಪ್ರೀತಿಯ ದೇವ- ಶ್ರೀ ಕೃಷ್ಣನ ಬಗ್ಗೆ ಒಂದಿಷ್ಟು ರೋಚಕ ಸಂಗತಿಗಳು

|

ಶ್ರೀ ಕೃಷ್ಣನನ್ನು ಬೆಣ್ಣೆ ಕಳ್ಳ, ಗೋಪಿಕರೊಡೆಯ, ರಾಧೆಯ ಪ್ರೀತಿಯ ರಮಣ, ಗೋವರ್ಧನ, ಮೊದಲಾದ ಹೆಸರುಗಳಿಂದ ಮುದ್ದಾಗಿ ಕರೆಯುತ್ತಾರೆ. ಮಹಾವಿಷ್ಣುವಿನ ಎಂಟನೇ ಅವತಾರವಾಗಿರುವ ಶ್ರೀಕೃಷ್ಣ ತನ್ನ ಭಕ್ತರಿಗೆ ಅಚ್ಚುಮೆಚ್ಚಿನ ದೇವರಾಗಿದ್ದಾರೆ. ತನ್ನ ಭಕ್ತರಿಗೆ ಪ್ರೀತಿಪಾತ್ರರಾಗಿ, ಭಕ್ತರ ಇಷ್ಟಾರ್ಥಗಳನ್ನು ನಡೆಸಿಕೊಡುವುದರಿಂದಲೇ ಶ್ರೀಕೃಷ್ಣನನ್ನು ಭಕ್ತರು ಮರೆಯುವುದಿಲ್ಲ. ಭಕ್ತರು ಕೃಷ್ಣನ ಬರುವಿಕೆಗಾಗಿ ಹೇಗೆ ಕಾಯುತ್ತಾರೆ ಎಂದರೆ ತಾಯಿಯ ನಿರೀಕ್ಷೆಯಲ್ಲಿರುವ ಮಗುವಿನಂತೆ.

ಅವತಾರ ಪುರುಷ ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ

ಒಂದು ರೀತಿಯಲ್ಲಿ ಹೇಳಬೇಕೆಂದರೆ ಕೃಷ್ಣನು ಇತರ ದೇವ ದೇವತೆಗಳಿಂದ ಭಿನ್ನವಾಗಿದ್ದಾರೆ. ಕೃಷ್ಣನು ತನ್ನ ಭಕ್ತರ ಮೆಚ್ಚುಗೆಯನ್ನು ಹೇಗೆ ಪಡೆದುಕೊಂಡಿದ್ದರು ಎಂಬುದನ್ನು ಕುರಿತು ಹೆಚ್ಚಿನ ಕಥೆಗಳು, ವ್ಯಾಖ್ಯಾನಗಳು ಪುರಾಣದಲ್ಲಿದೆ. ಸದಾ ಭಕ್ತವತ್ಸಲನಾಗಿರುವ ಶ್ರೀಕೃಷ್ಣನು ಇಂದಿಗೂ ಭಕ್ತರ ಕರೆಗೆ ಓಗೊಡುತ್ತಾರೆ. ಅವರ ವ್ಯಕ್ತಿತ್ವ ಕೂಡ ಜನಸಾಮಾನ್ಯರಿಗೆ ದಾರಿ ದೀಪವಾಗಿದ್ದು ಕೃಷ್ಣ ಭಗವಾನರ ಕುರಿತು ಮತ್ತುಷ್ಟು ರೋಚಕ ಅಂಶಗಳನ್ನು ತಿಳಿದುಕೊಳ್ಳೋಣ...

ಭಕ್ತಿಗೆ ಇನ್ನೊಂದು ಹೆಸರೇ ಶ್ರೀಕೃಷ್ಣ

ಭಕ್ತಿಗೆ ಇನ್ನೊಂದು ಹೆಸರೇ ಶ್ರೀಕೃಷ್ಣ

ಹಿಂದಿನ ಇತಿಹಾಸವನ್ನು ಆಳವಾಗಿ ನೋಡಿದಾಗ ಭಕ್ತಿಗೆ ಇರುವ ಇನ್ನೊಂದು ಹೆಸರೇ ಶ್ರೀಕೃಷ್ಣನದ್ದಾಗಿದೆ. ಗೋಪಿಕೆಯರು, ತಾಯಂದಿರುವ, ಸಖಿಯರು ಕೃಷ್ಣನನ್ನು ಇಷ್ಟಪಡುತ್ತಿದ್ದರು. ಆರಾಧಿಸುತ್ತಿದ್ದರು. ಅವರು ಕೃಷ್ಣನ ಆರಾಧನೆಯನ್ನು ಭಕ್ತಿಯ ಇನ್ನೊಂದು ರೂಪವಾಗಿ ಕಾಣುತ್ತಿದ್ದರು. ಸುಧಾಮನ ಅಚ್ಚುಮೆಚ್ಚಿನ ಗೆಳೆಯನಾಗಿ ಕೂಡ ಗೆಳೆತನದ ಹೊಸ ಅಧ್ಯಾಯವನ್ನೇ ಕೃಷ್ಣ ನಮ್ಮ ಮುಂದೆ ಇಟ್ಟಿದ್ದಾರೆ. ನಮ್ಮ ಪ್ರೀತಿಯಲ್ಲಿ ಕಾಮಕ್ಕಿಂತ ಆರಾಧನೆ ಬಹುಮುಖ್ಯವಾದುದು, ನಂಬಿಕೆ ಆಳವಾಗಿರಬೇಕು ಎಂಬುದನ್ನು ಜಗತ್ತಿಗೆ ಸಾರಿದವರು. ಮೀರಾ ಕೃಷ್ಣನ ಭಕ್ತಿಗಾಗಿ ತನ್ನ ಸಂಸಾರವನ್ನೇ ತ್ಯಜಿಸುತ್ತಾರೆ. ಕೇರಳದ ಕುರೂರು ಅಮ್ಮ ತನ್ನ ಸ್ವಂತ ಮಗನಂತೆಯೇ ಕೃಷ್ಣನನ್ನು ಹೊಡೆದು ಬೈಯ್ದು ತನ್ನ ಭಕ್ತಿಯನ್ನು ಅರುಹುತ್ತಾರೆ. ಭಕ್ತಿಯ ಇನ್ನೊಂದು ಮುಖವನ್ನೇ ಕೃಷ್ಣನು ನಮಗೆ ತಿಳಿಸಿಕೊಡುತ್ತಾರೆ. ಕೃಷ್ಣ ಎಂದು ಮನದುಂಬಿ ಕರೆದರೆ ನಿಮ್ಮ ಮುಂದೆಯೇ ಬಂದು ಪ್ರತ್ಯಕ್ಷನಾಗುವ ಸರಳ ದೇವರೇ ಕೃಷ್ಣ.

ಕೃಷ್ಣನ ಅವತಾರದ ವಿಶೇಷತೆ ಏನು

ಕೃಷ್ಣನ ಅವತಾರದ ವಿಶೇಷತೆ ಏನು

ಅವತಾರ ಎಂಬುದು ಸಂಸ್ಕೃತ ಪದವಾಗಿದೆ. ಅವ ಎಂದರೆ ಆಗಮನ ತಾರ ಎಂದರೆ ನಕ್ಷತ್ರವಾಗಿದೆ. ತನ್ನ ಮಾವ ಕಂಸನ ಖಾರಾಗೃಹದಲ್ಲಿಯೇ ಕೃಷ್ಣನ ಜನನವಾಯಿತು. ದುಷ್ಟರನ್ನು ಮಟ್ಟ ಹಾಕುವುದಕ್ಕಾಗಿಯೇ ಕೃಷ್ಣನು ಅವತಾರವೆತ್ತಿದ್ದಾರೆ. ಕಂಸನು ತನ್ನ ಸ್ವಂತ ಸಹೋದರಿ ಮತ್ತು ಬಾವನನ್ನೇ ಸೆರೆಮನೆಯಲ್ಲಿ ಬಂಧಿಯಾಗಿಸಿದ್ದನು. ಸ್ವತಃ ಇವರುಗಳು ಕೃಷ್ಣನ ಮಾತಾ ಪಿತರಾಗಿದ್ದರು. ಕೃಷ್ಣನ ಜನನದಿಂದ ಕಂಸನ ಮರಣ ಎಂಬುದಾಗಿ ಶಾಸನ ಇರುವುದರಿಂದ ಕಂಸನು ಸಹೋದರಿಯ ಎಲ್ಲಾ ಮಕ್ಕಳನ್ನು ಕೊಲ್ಲುತ್ತಿದ್ದನು. ಅದಾಗ್ಯೂ ಕೃಷ್ಣ ಜನ್ಮತಾಳುತ್ತಾನೆ ಮತ್ತು ಅವನನ್ನು ಕೊಲ್ಲಲು ಕಂಸನು ರಚಿಸಿದ ಎಲ್ಲಾ ದುಷ್ಟತನವನ್ನು ಗೆದ್ದು ಕೊನೆಗೆ ಕಂಸನನ್ನು ಕೊಲ್ಲುತ್ತಾರೆ.

ಕೃಷ್ಣನ ಆರು ಸಹೋದರರ ಮರಣ

ಕೃಷ್ಣನ ಆರು ಸಹೋದರರ ಮರಣ

ಕೃಷ್ಣ ಹುಟ್ಟುವ ಮುನ್ನ ಅವರ ಆರು ಸಹೋದರರನ್ನು ಕಂಸನು ವಧಿಸುತ್ತಾನೆ. ಇದು ಕೂಡ ಕೆಲವೊಂದು ರಹಸ್ಯಗಳನ್ನು ನಮಗೆ ತಿಳಿಸಿಕೊಡುತ್ತದೆ. ಒಮ್ಮೆ ದೇವಕಿಯು ತನ್ನ ಕಂದ ಕೃಷ್ಣನಲ್ಲಿ ಮೃತರಾದ ಆರು ಮಕ್ಕಳನ್ನು ಬದುಕಿಸುವಂತೆ ಕೇಳುತ್ತಾಳೆ. ಅವರೇ ಸಮ್ರ, ಉದ್ಗಿತಾ, ಪರಿಸ್ವಂಗ, ಪತಂಗ, ಸುದ್ರಭರ್ತ, ಗರ್ನಿ. ಅವರು ಮಾನವರ ಒಂದೊಂದು ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತದೆ. ಸಮ್ರ ಸ್ಮರಣೆ, ಉದ್ಗಿತ ಭಾಷೆ, ಪರಿಸ್ವಂಗ ಆಲಿಸುವಿಕೆಗೆ ಪ್ರತಿನಿಧಿಗಳಾಗಿದ್ದಾರೆ. ಇವರ ಮರಣದ ನಂತರ ಕೃಷ್ಣನ ಜನನವಾಯಿತು. ಅಂದರೆ ಉಳಿದ ಗುಣಗಳ ಮೇಲೆ ಅವರು ಸಾಧನೆಯನ್ನು ನಡೆಸಿ ಅವರು ಜನಿಸಿದರು ಎಂದಾಗಿದೆ.

ಕೃಷ್ಣನ ನೀಲಿ ಬಣ್ಣ ಮತ್ತು ಹಳದಿ ಬಟ್ಟೆಗಳು

ಕೃಷ್ಣನ ನೀಲಿ ಬಣ್ಣ ಮತ್ತು ಹಳದಿ ಬಟ್ಟೆಗಳು

ಕೃಷ್ಣನ ಮೈಯ ಬಣ್ಣ ನೀಲಿಯಾಗಿದೆ. ಅದಕ್ಕಾಗಿಯೇ ಅವರನ್ನು ನೀಲ ಮೇಘ ಶ್ಯಾಮ ಎಂದು ಕರೆಯಲಾಗಿದೆ. ಇದು ವಿಶ್ವದ ಬಣ್ಣವಾಗಿದೆ. ಇನ್ನು ಹಳದಿ ಬಣ್ಣ ಭೂಮಿಯನ್ನು ಸಂಕೇತಿಸುತ್ತದೆ. ಈ ಹಳದಿ ಮತ್ತು ನೀಲಿ ಬಣ್ಣದಿಂದ ನಾವು ತಿಳಿದುಕೊಳ್ಳುವುದೇನೆಂದರೆ ಭಗವಂತನು ಸರ್ವವ್ಯಾಪಿಯಾಗಿದ್ದು ಎಲ್ಲೆಡೆಯೂ ಅವರ ಮಾಯೆ ಇದೆ ಶಕ್ತಿ ಇದೆ ಎಂದಾಗಿದೆ.

ವಸ್ತ್ರ ಹರಣ

ವಸ್ತ್ರ ಹರಣ

ಗೋಪಿಕೆಯರು ಸ್ನಾನ ಮಾಡುತ್ತಿದ್ದಾಗ ಕೃಷ್ಣನು ಅವರ ಬಟ್ಟೆಯನ್ನು ಮರೆಮಾಡಿ ಇಡುತ್ತಾರೆ ಅಂದರೆ ಭಗವಂತನು ತನ್ನ ಭಕ್ತರಿಂದ ಅಹಂಕಾರವನ್ನು ಕಸಿದುಕೊಳ್ಳುತ್ತಾರೆ ಮತ್ತು ದಯೆಯಿಂದ ಅವರನ್ನು ಸತ್ಕರಿಸುತ್ತಾರೆ ಎಂದಾಗಿದೆ. ಅವರೆಲ್ಲರೂ ಕೃಷ್ಣನಿಗೆ ಭಕ್ತಿಯಿಂದ ಎರಗಿದಾಗ ಕೃಷ್ಣನು ವಸ್ತ್ರವನ್ನು ಹಿಂತಿರುಗಿಸುತ್ತಾರೆ.

ಗೋಪಿಕೆಯರೊಂದಿಗೆ ಪ್ರಣಯ

ಗೋಪಿಕೆಯರೊಂದಿಗೆ ಪ್ರಣಯ

ಕೃಷ್ಣ ಮತ್ತು ಗೋಪಿಕೆಯರ ನಡುವಿನ ಪ್ರೇಮ ಬಾಂಧವ್ಯ ಕಲುಷಿತರಹಿತವಾಗಿತ್ತು. ಅ ಪ್ರೇಮದಲ್ಲಿ ಕಳಂಕವಿರಲಿಲ್ಲ. ಗೋಪಿಕೆಯರು ವಿವಾಹಿತರಾಗಿದ್ದರೂ ತಮ್ಮ ಗೃಹಿಣಿ ಜೀವನವನ್ನು ನಡೆಸುತ್ತಿದ್ದರೂ ಕೃಷ್ಣನನ್ನು ಆರಾಧಿಸುತ್ತಿದ್ದರು. ಅವರನ್ನು ಪೂಜಿಸುತ್ತಿದ್ದರು ಸಖನಂತೆ ಗೌರವಿಸುತ್ತಿದ್ದರು. ಆಧ್ಯಾತ್ಮಿಕ ನೆಲೆಯಲ್ಲಿ ಅವರು ಕೃಷ್ಣನನ್ನು ಆರಾಧಿಸುತ್ತಿದ್ದರು.

ರಾಧಾ ಕೃಷ್ಣರ ಪ್ರೇಮ

ರಾಧಾ ಕೃಷ್ಣರ ಪ್ರೇಮ

ರಾಧಾ ಆತ್ಮನ್ ಪ್ರತಿನಿಧಿಸುತ್ತಿದ್ದರೆ ಪರಮಾತ್ಮನು ಪರಮಾತ್ಮನ್ ಎಂಬುದಾಗಿ ಪ್ರತಿನಿಧಿಯಾಗಿದ್ದರು. ಪರಮಾತ್ಮನಿಗಾಗಿ ಆತ್ಮನ ಭಾವನೆಗಳನ್ನು ರಾಧಾ ಕೃಷ್ಣರು ಪ್ರಸ್ತುತಪಡಿಸುತ್ತಾರೆ. ಅವರು ಬೇರ್ಪಟ್ಟಿದ್ದರೂ ಒಬ್ಬರು ಇನ್ನೊಬ್ಬರನ್ನು ಕುರಿತು ಆಲೋಚಿಸುತ್ತಿದ್ದರು. ಆತ್ಮನ್ ತನ್ನ ಲೌಕಿಕ ಬಾಂಧವ್ಯವನ್ನು ಕಳಚಿ ಪರಮಾತ್ಮನೊಂದಿಗೆ ವಿಲೀನಗೊಳ್ಳುವುದಕ್ಕಾಗಿ ಕಾಯುತ್ತಿರುತ್ತಾಳೆ. ಅದಕ್ಕಾಗಿಯೇ ರಾಧೆ ಇಲ್ಲದೆ ಕೃಷ್ಣನು ಪರಿಪೂರ್ಣನಲ್ಲ. ಅಂತೆಯೇ ಆತ್ಮನ್ ಮತ್ತು ಪರಮಾತ್ಮನ್ ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ.

ಮಹಾಭಾರತದಲ್ಲಿ ಕೃಷ್ಣ ಭಾಗವಹಿಸಿರಲಿಲ್ಲ

ಮಹಾಭಾರತದಲ್ಲಿ ಕೃಷ್ಣ ಭಾಗವಹಿಸಿರಲಿಲ್ಲ

ಮಹಾಭಾರತ ಯುದ್ಧದಲ್ಲಿ ಕೃಷ್ಣನು ಭಾಗವಹಿಸಿರಲಿಲ್ಲ. ಬದಲಾಗಿ ಅರ್ಜುನನ ರಥದ ಸಾರಥಿಯಾಗಿ ಸತ್ಯದ ಜೊತೆ ನಿಂತಿದ್ದರು. ಆದರೆ ಯುದ್ಧದ ಎಲ್ಲೆಡೆಯೂ ಕೃಷ್ಣನೇ ಕಂಡುಬರುತ್ತಿದ್ದರು. ಎಲ್ಲವೂ ಕೃಷ್ಣಮಯವಾಗಿತ್ತು ಎಂದಾಗಿದೆ. ಹಿಂದೆಯೇ ನಿಂತು ಅವರು ಎಲ್ಲವನ್ನೂ ಮಾಡಿಸುತ್ತಿದ್ದರು. ನಮ್ಮ ಜೀವನದಲ್ಲಿ ಕೂಡ ಅಂತೆಯೇ ನಮ್ಮ ಸಾರಥಿಯಾಗಿ ನಿಂತು ನಮ್ಮನ್ನು ಕೃಷ್ಣನು ಮುನ್ನಡೆಸುತ್ತಾರೆ. ಅದಕ್ಕಾಗಿಯೇ ಅವರು ಭಕ್ತವತ್ಸಲ ಎಂಬ ಬಿರುದನ್ನು ಪಡೆದುಕೊಂಡಿರುವುದು.

English summary

Spiritual Symbolism Of Lord Krishna’s Tales

Lord Sri Krishna is different from the other gods and goddess of the Hindu pantheon. The other deities are bound to their aura and personalities. But Lord Sri Krishna is multifaceted and his personality knows no bounds. Each aspect of his story teaches us something new. If we look closer at his story and personality, there are a lot of spiritual lessons that can be learnt. Today, we bring you some of the hidden signs and secrets of Lord Sri Krishna's tales.
Story first published: Tuesday, March 6, 2018, 23:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more