ಮುಕ್ಕಣ್ಣ ಶಿವನ ಮೂರನೆಯ ಕಣ್ಣಿನ ರೋಚಕ ಕಹಾನಿ...

By: Jaya Subramanya
Subscribe to Boldsky

ಮೂರು ಕಣ್ಣಿನ ಮುಕ್ಕಣ್ಣ ಎಂಬುದಾಗಿ ಶಿವ ಪರಮಾತ್ಮನನ್ನು ಭಕ್ತರು ಸಂಬೋಧಿಸುತ್ತಾರೆ. ತನ್ನ ಮೂರನೆಯ ಕಣ್ಣನ್ನು ಶಿವ ತೆರೆದಲ್ಲಿ ಇಡಿಯ ವಿಶ್ವವೇ ಭಸ್ಮವಾಗುತ್ತದೆ ಎಂಬ ಮಾತೂ ಇಲ್ಲದಿಲ್ಲ. ಶಿವನ ಮೂರನೆಯ ಕಣ್ಣನ್ನು ಪ್ರಳಯಾಗ್ನಿ ಎಂದೂ ಕರೆಯುತ್ತಾರೆ. ಅಚ್ಚರಿಯ ಲೋಕ: ಕನಸಿನಲ್ಲಿ ತ್ರಿಶೂಲ, ಶಿವಲಿಂಗ ಕಂಡುಬಂದರೆ...

ಶಿವನ ಮೂರನೆಯ ಕಣ್ಣೂ ಕೂಡ ತನ್ನದೇ ಪ್ರತ್ಯೇಕತೆಯನ್ನು ಪಡೆದುಕೊಂಡಿದ್ದು ಈ ಕಣ್ಣು ಶಿವನಲ್ಲಿ ರೂಪಿತವಾದುದು ಹೇಗೆ ಎಂಬುದಕ್ಕೆ ಆಸಕ್ತಿಕರವಾದ ಕಥೆಯೊಂದಿದೆ.   ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

ಜಗದೊಡೆಯನಾದ ಶಿವನನ್ನು ವಿಶ್ವದ ಕಣ್ಣು, ಬೆಳಕು ಎಂದು ಕರೆಯುತ್ತಾರೆ. ವಿಶ್ವದ ಚರಾಚರಾ ವಸ್ತುಗಳ ಜೀವ ಕೂಡ ಪರಶಿವನಲ್ಲಿದೆ ಎಂಬ ಮಾತಿದೆ. ಶಿವನ ಹಣೆಯಲ್ಲಿ ಈ ಮೂರನೆಯ ಕಣ್ಣು ಇದ್ದು ಈ ಮೂರನಯೆ ಕಣ್ಣಿಗೆ ಸ್ವಾರಸ್ಯಕರವಾದ ಸಂಗತಿಯೊಂದಿದೆ, ಮುಂದೆ ಓದಿ....  

ಶಿವನ ಕಣ್ಣುಗಳನ್ನು ಪಾರ್ವತಿ ದೇವಿ ಮುಚ್ಚಿದಾಗ....

ಶಿವನ ಕಣ್ಣುಗಳನ್ನು ಪಾರ್ವತಿ ದೇವಿ ಮುಚ್ಚಿದಾಗ....

ಒಮ್ಮೆ ಶಿವನು ಧ್ಯಾನದಲ್ಲಿ ಕುಳಿತಿದ್ದಾಗ ಅವರ ಪತ್ನಿ ಪಾರ್ವತಿ ದೇವಿಯು ಸುಮ್ಮನೆ ಆಟಕ್ಕಾಗಿ ತನ್ನೆರಡು ಕೈಗಳಿಂದ ಶಿವನ ಕಣ್ಣುಗಳನ್ನು ಮುಚ್ಚುತ್ತಾರೆ. ಆ ಕೂಡಲೇ ಸಂಪೂರ್ಣ ವಿಶ್ವ ಕತ್ತಲೆಯಿಂದ ತುಂಬಿ ಹೋಯಿತು. ದೇವಾಧಿದೇವತೆಗಳೂ ಕೂಡ ಅಧೈರ್ಯಗೊಳ್ಳುತ್ತಾರೆ. ಎಲ್ಲಾ ಕಡೆ ಕೋಲಾಹಲ ಉಂಟಾಗುತ್ತದೆ.

ವಿಶ್ವಕ್ಕೆ ಬೆಳಕು.....

ವಿಶ್ವಕ್ಕೆ ಬೆಳಕು.....

ಈ ಸಂದರ್ಭದಲ್ಲಿ ಶಿವನು ತಮ್ಮ ಶಕ್ತಿಯಿಂದ ಮೂರನೆಯ ಕಣ್ಣನ್ನು ತಮ್ಮ ಹಣೆಯಲ್ಲಿ ಸೃಷ್ಟಿಸಿಕೊಳ್ಳುತ್ತಾರೆ. ಈ ಕಣ್ಣಿನಲ್ಲಿ ಬೆಂಕಿಯುಂಟಾಗಿ ವಿಶ್ವಕ್ಕೆ ಬೆಳಕು ಉಂಟಾಗುತ್ತದೆ.

ಅಂಧಕ ಎಂಬ ಮಗುವಿನ ಜನನ....

ಅಂಧಕ ಎಂಬ ಮಗುವಿನ ಜನನ....

ಈ ಮೂರನೆಯ ಕಣ್ಣಿನಿಂದ ಉಂಟಾದ ಬೆಂಕಿಯು ಪಾರ್ವತಿಯ ಕೈಗಳನ್ನು ಸುಡುತ್ತದೆ, ಏಕೆಂದರೆ ಆಕೆ ಶಿವನ ಬಲ ಮತ್ತು ಎಡಗಣ್ಣನ್ನು ಮುಚ್ಚಿರುತ್ತಾರೆ. ಈ ಸಮಯದಲ್ಲಿ ಶಿವ ಮತ್ತು ಪಾರ್ವತಿಯ ಶಕ್ತಿಯು ಸಮ್ಮಿಲನಗೊಂಡು ಅಂಧಕ ಎಂಬ ಮಗು ಜನನಗೊಳ್ಳುತ್ತದೆ

ಅಂಧಕ ಎಂಬ ಮಗುವಿನ ಜನನ....

ಅಂಧಕ ಎಂಬ ಮಗುವಿನ ಜನನ....

ಅಂಧಕನನ್ನು ಶಿವನ ಅಸುರ ಭಕ್ತನೊಬ್ಬ ಪೋಷಿಸುತ್ತಾನೆ. ತನ್ನ ಮೂಲ ಹುಟ್ಟನ್ನು ಅರಿತುಕೊಳ್ಳದೆಯೇ ಅಂಧಕನು ಬೆಳೆಯುತ್ತಾನೆ. ತನ್ನ ಯುವ ವಯಸ್ಸಿನಲ್ಲಿ ಕಠಿಣವಾದ ತಪಸ್ಸನ್ನು ಆಚರಿಸಿ ಅಂಧಕನು ತನ್ನ ತಂದೆಯಲ್ಲದೆ ಮತ್ತಾರೂ ತನ್ನನ್ನು ವಧಿಸಬಾರದು ಎಂಬ ವರವನ್ನು ಪಡೆದುಕೊಳ್ಳುತ್ತಾನೆ. ತನ್ನ ವರದ ಬಲದಿಂದ ಅಂಧಕನು ಮೂರು ಲೋಕಗಳ ಮೇಲೆ ವಿಜಯವನ್ನು ಗಳಿಸುತ್ತಾನೆ.

ಪಾರ್ವತಿ ದೇವಿಯ ಮೇಲೆಯೇ ಮೋಹಿತನಾಗುತ್ತಾನೆ!

ಪಾರ್ವತಿ ದೇವಿಯ ಮೇಲೆಯೇ ಮೋಹಿತನಾಗುತ್ತಾನೆ!

ಒಮ್ಮೆ ಪಾರ್ವತಿ ದೇವಿಯನ್ನು ಕಂಡ ಅಂಧಕನು ಆಕೆಯಲ್ಲಿ ಮೋಹಿತನಾಗುತ್ತಾನೆ ಮತ್ತು ಆಕೆಯನ್ನು ತನ್ನ ಪತ್ನಿಯನ್ನಾಗಿಸಿಕೊಳ್ಳಬೇಕೆಂದು ಅವರನ್ನು ಹಿಂಬಾಲಿಸುತ್ತಾನೆ. ಈ ಸಮಯದಲ್ಲಿ ಪಾರ್ವತಿಯು ಶಿವನಲ್ಲಿ ತನ್ನನ್ನು ರಕ್ಷಿಸಿಕೊಳ್ಳುವಂತೆ ಬೇಡಿಕೊಳ್ಳುತ್ತಾರೆ.

ಕ್ಷಮೆಯಾಚಿಸಿದ ಅಂಧಕ....

ಕ್ಷಮೆಯಾಚಿಸಿದ ಅಂಧಕ....

ಪಾರ್ವತಿಯನ್ನು ರಕ್ಷಿಸುವುದಕ್ಕಾಗಿ ಶಿವನು ಅಂಧಕನನ್ನು ವಧಿಸುತ್ತಾರೆ. ಹೀಗೆ ಅಂಧಕನು ತಾನು ಬೇಡಿದ ವರದಿಂದಲೇ ತನ್ನ ಅಂತ್ಯವನ್ನು ಕಂಡುಕೊಳ್ಳುತ್ತಾನೆ. ತನ್ನ ಹುಟ್ಟಿನ ಸತ್ಯವನ್ನು ಅರಿತ ಅಂಧಕನು ತನ್ನ ಕುಕೃತ್ಯಗಳಿಗಾಗಿ ಶಿವನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ.

ಬ್ರಹ್ಮ, ವಿಷ್ಣು, ಮಹೇಶ್ವರರು

ಬ್ರಹ್ಮ, ವಿಷ್ಣು, ಮಹೇಶ್ವರರು

ತ್ರಿಮೂರ್ತಿ ಎಂಬ ಬಿರುದನ್ನು ಪಡೆದುಕೊಂಡಿರುವ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ತಮ್ಮ ವಿಶ್ವ ಕಲ್ಯಾಣ ಅಂಶಗಳಿಂದ ಈ ಬಿರುದಿಗೆ ಭಾಜನರಾಗಿದ್ದಾರೆ. ಸೃಷ್ಟಿಕರ್ತ ಬ್ರಹ್ಮನಾದರೆ, ಸಂರಕ್ಷಣೆಯ ಹೊಣೆಗಾರಿಕೆಯನ್ನು ವಿಷ್ಣು ಮಾಡುತ್ತಾರೆ. ಅಂತೆಯೇ ಶಿವನು ವಿನಾಶಕ್ಕೆ ಜವಬ್ದಾರರಾಗಿದ್ದಾರೆ. ಹೀಗೆ ಶಿವನ ಮೂರನೆಯ ಕಣ್ಣು ವಿನಾಶದ ಸಂಕೇತವಾಗಿದೆ.

 
English summary

Significance Of Shiva's Third Eye

Shiva's third eye is also sometimes known as the eye of wisdom. The right and left eye represent His activities in the physical world while the third eye symbolises His spiritual wisdom and power. Through His third eye, Lord Shiva is able to see beyond the apparent and destroy all evil.
Please Wait while comments are loading...
Subscribe Newsletter