For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬದ ಆಚರಣೆ- ನೀವು ತಿಳಿದಿರದ ಸತ್ಯಾಸತ್ಯತೆಗಳು

By Jaya subramanya
|

ದೀಪಗಳ ಹಬ್ಬ ದೀಪಾವಳಿಯನ್ನು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ಹಬ್ಬವನ್ನು ಇನ್ನಷ್ಟು ಮೆರುಗನ್ನಾಗಿ ಮಾಡಲು ಜನರು ದೀಪಗಳನ್ನು ಮನೆಯ ಸುತ್ತಲೂ ಹಚ್ಚಿ ಪಟಾಕಿಗಳನ್ನು ಸಿಡಿಸಿ ಹಬ್ಬದೂಟವನ್ನೇ ಮಾಡಿ ಆನಂದದಿಂದ ಹಬ್ಬವನ್ನು ಆಚರಿಸುತ್ತಾರೆ. ಆದರೆ ದೀಪಗಳ ಹಬ್ಬ ದೀಪಾವಳಿ ಕೂಡ ತನ್ನದೇ ಪ್ರಾಮುಖ್ಯತೆಯನ್ನು ಹೊಂದಿದ್ದು ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

Diwali

ಹಬ್ಬವನ್ನು ಸುಮ್ಮನೇ ಆಚರಣೆ ಮಾಡುವುದಕ್ಕಿಂತಲೂ ಅದರ ಮಹತ್ವವನ್ನು ಅರಿತುಕೊಂಡು ಆಚರಿಸಿದರೆ ದೀಪಾವಳಿಗಿರುವ ಪ್ರಮುಖಾಂಶಗಳನ್ನು ನಾವು ಅರಿತುಕೊಂಡು ಇನ್ನಷ್ಟು ವಿಭಿನ್ನವಾಗಿ ಆಚರಿಸುವ ಉತ್ಸಾಹ ನಮ್ಮಲ್ಲಿ ಮೂಡುತ್ತದೆ. ಬನ್ನಿ ಹಾಗಿದ್ದರೆ ಆ ಅಂಶಗಳೇನು ಎಂಬುದನ್ನು ಕಂಡುಕೊಳ್ಳೋಣ.

ಮಹತ್ವ

ಜನರ ಆಚರಣೆ ಮತ್ತು ನಂಬಿಕೆಗೆ ಅನುಸಾರವಾಗಿ ದೇಶದ ಬೇರೆ ಬೇರೆ ಕಡೆಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಜನರು ಭಿನ್ನ ಭಿನ್ನವಾಗಿ ದೀಪಾವಳಿಯನ್ನು ಆಚರಿಸುತ್ತಾರೆ.

ರಾಮಾಯಣ ಮತ್ತು ಮಹಾಭಾರತದ ಪ್ರಾಮುಖ್ಯತೆ

ಜನರು ಹಬ್ಬದ ಆಚರಣೆಯನ್ನು ಭಿನ್ನವಾಗಿ ಮಾಡುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಮಹತ್ವಗಳಿಗೆ ಅನುಗುಣವಾಗಿ ಜನರು ದೀಪಾವಳಿಯನ್ನು ಆಚರಿಸುತ್ತಾರೆ. ಕೆಲವರು ರಾಮನ ವನವಾಸದ ಹಿಂತಿರುಗುವಿಕೆಯ ಗುರುತಾಗಿ ದೀಪಾವಳಿಯನ್ನು ಕಂಡರೆ ಇನ್ನು ಕೆಲವರು 12 ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಪೂರೈಸಿರುವ ಗುರುತಾಗಿ ದೀಪಾವಳಿಯನ್ನು ಕಾಣುತ್ತಾರೆ.

ಕಾಳಿ ಮಾತೆಯ ಆರಾಧನೆ

ದೀಪಾವಳಿಯಂದು ಲಕ್ಷ್ಮೀಯ ಆರಾಧನೆ ಪ್ರಮುಖವಾಗಿರುತ್ತದೆ. ಆದರೆ ಭಾರತದ ಪೂರ್ವ ಭಾಗದಲ್ಲಿ ಕಾಳಿ ಮಾತೆಯನ್ನು ಆರಾಧಿಸುತ್ತಾರೆ. ಜೀವನದ ಮಹತ್ವ ಸಾಧನೆಗಳನ್ನು ಸಾಧಿಸುವ ಸಲುವಾಗಿ ಶಕ್ತಿಯನ್ನು ತುಂಬುವ ಮಾತೆ ಎಂದಾಗಿ ಕಾಳಿ ಮಾತೆಯನ್ನು ಪೂಜಿಸುತ್ತಾರೆ. ಕೆಟ್ಟ ದುಷ್ಟ ಶಕ್ತಿಯ ವಿರುದ್ಧ ಉತ್ತಮ ಅಂಶಗಳ ಗೆಲುವು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ

ಹೊಸ ವರ್ಷ

ಭಾರತದ ಕೆಲವು ಸ್ಥಳಗಳಲ್ಲಿ ದೀಪಾವಳಿಯನ್ನು ಹೊಸ ವರ್ಷ ಎಂಬುದಾಗಿ ಕೂಡ ಪರಿಗಣಿಸಲಾಗಿದೆ. ಲಕ್ಷ್ಮೀಯೊಂದಿಗೆ ವಿಘ್ನ ವಿನಾಶಕ ಗಣಪನನ್ನೂ ಪೂಜಿಸಿ ಸ್ಮರಿಸಲಾಗುತ್ತದೆ. ಹಿಂದೂ ಹೊಸ ವರ್ಷದ ಆರಂಭದ ಸಲುವಾಗಿ ಗಣಪನನ್ನು ಪೂಜಿಸಲಾಗುತ್ತದೆ.

ಜೈನ ಧರ್ಮದಲ್ಲಿ ದೀಪಾವಳಿಯ ಮಹತ್ವ

ಜೈನ ಧರ್ಮದಲ್ಲಿ ಕೂಡ ದೀಪಾವಳಿ ಮಹತ್ವದ್ದಾಗಿದೆ. ಭಗವಾನ್ ಮಹಾವೀರನು ಕಾರ್ತಿಕ ಚತುರ್ದಶಿಯಂದು ಮೋಕ್ಷವನ್ನು ಪಡೆದರೆಂದು ನಂಬಿದ್ದು, ದೀಪಾವಳಿಯ ಆರನೆಯ ದಿನ ಮಹತ್ವದ್ದಾಗಿದೆ. ಭಗವಾನ್ ಮಹಾವೀರನಿಗೆ ಜ್ಞಾನೋದಯವಾಗಿದ್ದು 15 ನೇ ಅಕ್ಟೋಬರ್, 527 ಬಿಸಿಯಂದಾಗಿದೆ ಈ ದಿನ ಕಾರ್ತಿಕ ಚತುರ್ದಶಿಯಾಗಿದೆ.

ಸಿಖ್ಖರಿಗೆ ದೀಪಾವಳಿ ಏಕೆ ಪ್ರಾಮುಖ್ಯವಾದುದು

ಬಂದಿ ಖೋರ್ ದಿವಸ್ ಸಿಖ್ಖರಿಗೆ ಅತಿ ಮಹತ್ವದ್ದಾಗಿದೆ. ದೀಪಾವಳಿಯಂದೇ ಇದನ್ನು ಆಚರಿಸಲಾಗುತ್ತದೆ. ಗುರು ಹರ್ ಗೋಬಿಂದ್ ಸಿಂಗ್ ತಮ್ಮನ್ನು ತಾವೇ ಬಿಡುಗಡೆ ಮಾಡಿದ್ದು ಮತ್ತು ಸೆರೆಯಿಂದ ಹಿಂದೂ ರಾಜರುಗಳನ್ನು ಬಂಧಮುಕ್ತಗೊಳಿಸಿದ ದಿನ ಇದಾಗಿದೆ. ರಾಜ ಜಹಾಂಗೀರನು ಈ ರಾಜರುಗಳನ್ನು ಬಂಧಿಸಿದ್ದನು ಮತ್ತು ಗ್ವಾಲಿಯರ್‎ನಲ್ಲಿ ಕೂಡಿ ಹಾಕಿದ್ದನು. ಅದೂ ದೀಪಾವಳಿಯ ಸಮಯವೇ ಆಗಿದೆ. ಗುರು ಗೋಬಿಂದ್ ಸಿಂಗ್ ಈ ರಾಜರುಗಳನ್ನು ಸರೆಯಿಂದ ಬಿಡಿಸಿದ್ದರು. ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ

English summary

Shocking Facts About Diwali You Probably Didn't Know

In this article, we look to do just that- we reveal startling facts about Diwali you probably didn't know. As such, it is important for us to know the important facts behind celebration of the festival, isn't it? So let us go ahead and explore some incredible facts about Diwali you probably didn't know.
X
Desktop Bottom Promotion