For Quick Alerts
ALLOW NOTIFICATIONS  
For Daily Alerts

ಶ್ರಾವಣ ತಿಂಗಳಲ್ಲಿ ಭಗವಾನ್ ಶಿವನ ಪೂಜೆ-ನೀವು ತಿಳಿಯಲೇಬೇಕಾದ ಸಂಗತಿಗಳು

|

ಹಿಂದೂ ಧರ್ಮದಲ್ಲಿ ಪ್ರತಿ ಘಳಿಗೆ, ದಿನ ಹಾಗೂ ಮಾಸಗಳಿಗೆ ಅದರದ್ದೇ ಆಗಿರುವಂತಹ ಮಹತ್ವವಿದೆ. ಸಾವಿರಾರು ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಶ್ರಾವಣ ತಿಂಗಳು ಹಿಂದೂಗಳಿಗೆ ಅತೀ ಪವಿತ್ರ ಎಂದು ನಂಬಲಾಗಿದೆ. ಶ್ರಾವಣ ತಿಂಗಳಲ್ಲಿ ಮಾಡುವಂತಹ ಆಚರಣೆ ಹಾಗೂ ಉಪವಾಸಗಳು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಈಶ್ವರ ದೇವರನ್ನು ಪೂಜಿಸಲಾಗುತ್ತದೆ.

ಇಂತಹ ಸಮಯದಲ್ಲಿ ಶಿವನನ್ನು ಆರಾಧಿಸಿದರೆ ಆಗ ಭಕ್ತರ ಎಲ್ಲಾ ಇಚ್ಛೆಗಳು ಪೂರೈಕೆ ಯಾಗುವುದು ಎಂದು ನಂಬಲಾಗಿದೆ. ಶಿವನ ಪೂಜೆಗೆ ತನ್ನದೇ ಆದ ಮಹತ್ವ ಮತ್ತು ಅದರಿಂದ ಲಾಭಗಳು ಸಿಗಲಿದೆ. ಈ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಶ್ರಾವಣ ಮಾಸ ಬಂದಿದೆ. ಈ ಮಾಸದಲ್ಲಿ ಶಿವನ ಪೂಜೆ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ತಿಂಗಳಲ್ಲಿ ಶ್ರಾವಣ ಮಾಸವು ಆರಂಭವಾಗುವುದು. ಸೂರ್ಯ ದೇವರು ಸಿಂಹ ರಾಶಿಗೆ ಪ್ರವೇಶ ಮಾಡುವ ತಿಂಗಳನ್ನು ಶ್ರಾವಣ ಎಂದು ಕರೆಯಲಾಗುತ್ತದೆ ಎಂದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಶ್ರಾವಣವು ಹುಣ್ಣಿಮೆಯಂದ ಆರಂಭವಾಗುತ್ತದೆ.

ಶ್ರಾವಣ ಮಾಸದಲ್ಲಿ ಶಿವನನ್ನು ತುಂಬಾ ಶ್ರದ್ಧಾಭಕ್ತಿಯಿಂದ ಆರಾಧಿಸಿದರೆ ಆಗ ಭಕ್ತರ ಎಲ್ಲಾ ಇಚ್ಛೆಗಳು ಈಡೇರುವುದು ಮತ್ತು ಶಿವನು ಅನುಗ್ರಹಿಸುವನು ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಶಿವ ದೇವರು ಸರ್ವಶಕ್ತರಾಗಿರುವರು ಮತ್ತು ಇದರಿಂದಾಗಿ ಈ ವೇಳೆ ನೀವು ಅವರನ್ನು ಪೂಜಿಸಿದರೆ, ಆಗ ಎಲ್ಲಾ ದೋಷಗಳು ನಿವಾರಣೆ ಆಗುವುದು ಮತ್ತು ಆಶೀರ್ವಾದ ಸಿಗುವುದು ಎಂದು ಹೇಳಲಾಗುತ್ತದೆ. ಇಲ್ಲಿ ರಾಹುಕೇತು, ಶನಿ ಮತ್ತು ಇತರ ಗ್ರಹಗಳ ದೋಷವಿದ್ದರೂ ನಿವಾರಣೆ ಸಾಧ್ಯವಿದೆ. ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಇದರಿಂದ ನಿವಾರಣೆ ಆಗುವುದು ಮತ್ತು ಜೀವನದಲ್ಲಿ ನೀವು ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು. ಇದರಿಂದಾಗಿ ಶ್ರಾವಣ ತಿಂಗಳಲ್ಲಿ ನೀವು ಶಿವ ದೇವರ ಆರಾಧನೆ ಮಾಡಿದರೆ ಆಗ ನಿಮಗೆ ಜೀವನದಲ್ಲಿ ಹೆಚ್ಚು ಯಶಸ್ಸು ಸಿಗುವುದು.

ಶ್ರಾವಣ ತಿಂಗಳು 2019

ಶ್ರಾವಣ ತಿಂಗಳು 2019

ಹಿಂದೂ ಪಂಚಾಂಗದ ಪ್ರಕಾರ ಚಾತುರ್ಮಾಸ ಮುಗಿದ ಬಳಿಕ ಬರುವ ಐದನೇ ತಿಂಗಳು ಶ್ರಾವಣ. ಶ್ರಾವಣ ತಿಂಗಳಲ್ಲಿ ಪ್ರಕೃತಿಯು ಹಸನಾಗಿರುತ್ತದೆ. ಹಿಂದೂಗಳ ಪಂಚಭೂತ ದೈವಗಳು ಹಾಗೂ ಪ್ರಕೃತಿ ದೇವತೆಯು ಅತ್ಯಂತ ಸಂತೋಷ ಹಾಗೂ ಸಮತೋಲನ ವನ್ನು ಹೊಂದುವಂತಹ ಸಮಯವಾಗಿರುತ್ತದೆ. ಈ ಸಮಯದಲ್ಲಿ ದೇವತೆಗಳ ಆರಾಧನೆ ಮಾಡಿದರೆ ದೇವತೆಗಳು ಹೆಚ್ಚು ಸಂತುಷ್ಟರಾಗುತ್ತಾರೆ. ಜೊತೆಗೆ ಭಕ್ತರ ಸಮಸ್ಯೆಗಳನ್ನು ಬಗೆಹರಿಸಿ ಸಂತೋಷ ಹಾಗೂ ಸುಖವನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ಇದೆ. ಆಷಾಢ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನುವ ನಕ್ಷತ್ರವು ಆಕಾಶವನ್ನು ಆಳುತ್ತದೆ. ಆದ್ದರಿಂದಲೇ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯಲಾಯಿತು. ಈ ಮಾಸದಲ್ಲಿ ವಿವಿಧ ಹಬ್ಬ ಹರಿದಿನಗಳು ಹಾಗೂ ವ್ರತ ಆಚರಣೆಗಳು ಜರುಗುತ್ತವೆ. ಈ ಬಾರಿ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ (ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು) ಶ್ರಾವಣ ಮಾಸವು 1ನೇ ಆಗಸ್ಟ್ 2019ರಂದು ಆರಂಭವಾಗಲಿದೆ ಮತ್ತು ಆಗಸ್ಟ್ 30, 2019ರಂದು ಕೊನೆಗೊಳ್ಳಲಿದೆ. ಶ್ರಾವಣ ಸೋಮವವಾರ ವ್ರತವು ಆಗಸ್ಟ್ 5, ಆಗಸ್ಟ್ 12, ಆಗಸ್ಟ್ 19 ಮತ್ತು ಆಗಸ್ಟ್ 26ರಂದು ನಡೆಯಲಿದೆ.

ಶ್ರಾವಣ ಸೋಮವಾರದಂದು ಶಿವಪೂಜೆಯ ಲಾಭಗಳು

ಶ್ರಾವಣ ಸೋಮವಾರದಂದು ಶಿವಪೂಜೆಯ ಲಾಭಗಳು

ಸರ್ವಶಕ್ತನಾಗಿರುವಂತಹ ಶಿವ ದೇವರನ್ನು ಶ್ರಾವಣ ಮಾಸದಲ್ಲಿ ಆರಾಧನೆ ಮಾಡಿದರೆ ಅದರಿಂದ ಭಕ್ತರಿಗೆ ಹೆಚ್ಚಿನ ಲಾಭಗಳು ಸಿಗುವುದು. ಇದರಿಂದ ಅವರು ಆಧ್ಯಾತ್ಮಿಕವಾಗಿಯೂ ಪರಿಶುದ್ಧವಾಗುವರು. ಗ್ರಹದೋಷಗಳಿಂದಾಗಿ ಆಗುವಂತಹ ಯಾವುದೇ ಸಮಸ್ಯೆಗಳನ್ನು ಶಿವನ ಆರಾಧನೆಯಿಂದ ತಟಸ್ಥ ಗೊಳಿಸಬಹುದು. ಶಿವನ ಆರಾಧನೆಗೆ ಮುಖ್ಯವಾಗಿ ರುದ್ರಾಕ್ಷ, ಜೇನುತುಪ್ಪ, ತುಪ್ಪ, ಬಿಲ್ವಪತ್ರೆ ಇತ್ಯಾದಿಗಳನ್ನು ಬಳಕೆ ಮಾಡಬೇಕು. ಇದನ್ನು ನೀವು ಹಿರಿಯರ ಮಾರ್ಗದರ್ಶನ ಪಡೆದು ಅನುಸರಿಸಬಹುದು.

ಶ್ರಾವಣ ಸೋಮವಾರ ಮತ್ತು ಶಿವ ಭಕ್ತಿಯ ಪ್ರಾಮುಖ್ಯತೆ

ಶ್ರಾವಣ ಸೋಮವಾರ ಮತ್ತು ಶಿವ ಭಕ್ತಿಯ ಪ್ರಾಮುಖ್ಯತೆ

*ಶ್ರಾವಣ ಸೋಮವಾರ ಅಥವಾ ಶ್ರಾವಣ ಮಾಸದ ಪ್ರಮುಖ ಉದ್ದೇಶವೆಂದರೆ ನಾವು ದೈವಿಕವಾಗಿ ಪರಿಶುದ್ಧರಾಗುವುದು. ಶಿವ ದೇವರನ್ನು ತುಂಬಾ ಭಯಭಕ್ತಿಯಿಂದ ಆರಾಧನೆ ಮಾಡಿದರೆ ಆಗ ನಿಮಗೆ ಇರುವ ಎಲ್ಲಾ ರೀತಿಯ ದೋಷಗಳು ನಿವಾರಣೆ ಆಗುವುದು ಮತ್ತು ಶಿವನ ಆಶೀರ್ವಾದದಿಂದಾಗಿ ಶಾಂತಿ, ಸಮೃದ್ಧಿ ಮತ್ತು ಜೀವನದಲ್ಲಿ ಮುಂದೆ ಸಾಗಲು ನೆರವಾಗುವುದು.

*ಇದೇ ವೇಳೆ ನೀವು ಆಧ್ಯಾತ್ಮಿಕವಾಗಿಯು ಹೆಚ್ಚು ಜ್ಞಾನ ಪಡೆಯಲಿದ್ದೀರಿ. ಇದರಿಂದ ನಿಮ್ಮ ಆತ್ಮವು ದೈವತ್ವ ಪಡೆಯುವುದು. ಇದರಿಂದಾಗಿ ಶ್ರಾವಣ ಮಾಸದಲ್ಲಿ ಶಿವಭಕ್ತಿಯನ್ನು ಮಾಡುವುದು ಎಷ್ಟು ಅಗತ್ಯವೆನ್ನುವುದು ನಮಗೆ ತಿಳಿದುಬರುತ್ತದೆ. ಶಿವನ ಭಕ್ತಿ ಮಾಡಿದರೆ ಆಗ ಸುತ್ತಲು ಧನಾತ್ಮಕತೆ ಬರುವುದು, ಗ್ರಹದೋಷಗಳು ನಿವಾರಣೆ ಆಗುವುದು, ಕರ್ಮದಿಂದ ಬಂದಿರುವ ನಕರಾತ್ಮಕತೆಯು ದೂರವಾಗುವುದು ಮತ್ತು ಎಲ್ಲಾ ಅನಾರೋಗ್ಯಗಳಿಗೆ ಇದರಿಂದ ಪರಿಹಾರ ಸಿಗುವುದು.

ಶ್ರಾವಣ ಸೋಮವಾರ ಶಿವನ ಪೂಜೆ ಮಾಡಿದರೆ ಸಿಗುವ ಲಾಭಗಳು

ಶ್ರಾವಣ ಸೋಮವಾರ ಶಿವನ ಪೂಜೆ ಮಾಡಿದರೆ ಸಿಗುವ ಲಾಭಗಳು

•ನಿಮ್ಮ ಆಧ್ಯಾತ್ಮಿಕವಾಗಿ ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು. ಇದು ದೈವಿಕ ಆತ್ಮದ ಬಾಹ್ಯೀಕರಣ ಮಾಡುವುದು.

•ರಾಹುಕೇತು ಸಹಿತ ಎಲ್ಲಾ ಗೃಹದೋಷ ನಿವಾರಣೆ ಮಾಡುವುದು.

•ಶನಿ ಮತ್ತು ಇತರ ಕೆಲವೊಂದು ದೋಷ ನಿವಾರಿಸುವುದು.

•ಶ್ರಾವಣದಲ್ಲಿ ಶಿವನ ಪೂಜೆ ಮಾಡಿದರೆ ಆಗ ಭಕ್ತರಿಗೆ ದೈಹಿಕ ಹಾಗೂ ಮಾನಸಿಕವಾಗಿ ಒಳ್ಳೆಯದಾಗುವುದು. ಮಾರಕ ಕಾಯಿಲೆಗಳಿಂದ ದೂರ ಮಾಡುವುದು.

•ಶಿವನಂತೆ ಇರುವ ಪತಿಯು ಅವಿವಾಹಿತ ಮಹಿಳೆಯರಿಗೆ ಸಿಗುವುದು.

•ಶಿವನ ಆರಾಧನೆ ಮಾಡಿದರೆ ಆಧ್ಯಾತ್ಮಿಕವಾಗಿ ಒಳ್ಳೆಯದಾಗುವುದು ಮತ್ತು ಮೋಕ್ಷ ಪ್ರಾಪ್ತಿಯಾಗುವುದು.

•ವ್ಯಾಪಾರ, ಉದ್ಯೋಗ ಇತ್ಯಾದಿಗಳಲ್ಲಿ ಸಮೃದ್ಧಿ ಸಿಗುವುದು. ಶಿವನ ಆರಾಧನೆ ಮತ್ತು ಶಿವನಾಮ ಜಪಿಸಿದರೆ ಆಗ ಎಲ್ಲದರಿಂದಲೂ ರಕ್ಷಣೆ ಸಿಗುವುದು.

•ಜೀವನದಲ್ಲಿ ಸಮೃದ್ಧಿ ಹಾಗೂ ಸುಖ ಪಡೆಯಲು ನೀವು ಶಿವನ ಪೂಜೆ ಮಾಡಲು ಬಯಸಿದ್ದರೆ ಆಗ ನೀವು ಹಿರಿಯ ಪಂಡಿತರನ್ನು ಭೇಟಿ ಮಾಡಿ ಮತ್ತು ಅವರು ಸೂಚಿಸಿದ ರೀತಿಯಲ್ಲಿ ಶಿವನ ಆರಾಧನೆ ಮಾಡಿ.

English summary

Shiv Puja during Shravan Month-Things You must know

The holiest Shravan month (Sawan Maas) is the most auspicious period the devotees of Lord Shiva can take advantage from Shiv Puja, as such worship of the Lord has its own importance and benefits. Among total of 12 months in a year, the periods of July-August hold special prominence because of religious and astrological auspiciousness due to importance of lord shiv puja. Days between these periods mark the beginning or ascent of Shravan, as per Hindi calendar.
X
Desktop Bottom Promotion