Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ!
ಶನಿ ಜಯಂತಿ 2022: ಶನಿ ಸಾಡೇಸಾತಿ, ಶನಿ ಧೈಯ್ಯಾದ ಸೂಚನೆಗಳಿವು, ಶನಿ ದೋಷಕ್ಕೆ ಪರಿಹಾರವೇನು?
ಸೌರಮಂಡಲದಲ್ಲಿ ಅತ್ಯಂತ ನಿಧಾನಗತಿಯಲ್ಲಿ ಸಾಗುವ ಗ್ರಹವೆಂದರೆ ಅದು ಶನಿ. ಜ್ಯೊತಿಷ್ಯ ಪ್ರಕಾರ ಶನಿಯ ನಮ್ಮ ಕರ್ಮಗಳಿಗೆ ಅನುಸಾರ ಫಲವನ್ನು ನೀಡುವ ದೇವ. ಒಳ್ಳೆಯ ಕಾರ್ಯ ಮಾಡಿದರೆ ಶನಿಯ ಕೃಪೆ ಸಿಗುವುದು, ಅದೇ ಕೆಟ್ಟ ಕಾರ್ಯಗಳಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಇನ್ನು ಪ್ರತಿಯೊಬ್ಬರ ಜೀವಿತಾವಧಿಯಲ್ಲಿ ಶನಿ ಸಾಡೇಸಾತಿ ಒಮ್ಮೆ ಬಂದೇ ಬರುತ್ತದೆ, ಶನಿ ದೈಯ್ಯಾ ಕೂಡ. ಈ ಸಮಯದಲ್ಲಿ ಹುಷಾರಾಗಿರಬೇಕು. ಈ ಅವಧಿಯಲ್ಲಿ ಶನಿಯನ್ನು ಪೂಜಿಸಿ ಹಾಗೂ ಅವನು ಮೆಚ್ಚುವ ಕಾರ್ಯಗಳನ್ನು ಮಾಡಿದರೆ ಶನಿಯ ಕೆಟ್ಟ ಪ್ರಭಾವ ತಗ್ಗಿಸಬಹುದು.

ಶನಿಯ ರಾಶಿ ಬದಲಾವಣೆ
ಪ್ರತೀ ಎರಡೂವರೆ ವರ್ಷಕ್ಕೊಮ್ಮೆ ಶನಿಯು ತನ್ನ ರಾಶಿ ಬದಲಾಯಿಸುತ್ತಾನೆ, ಆಗ ರಾಶಿಗಳ ಮೇಲೆ ಶನಿಯ ಪ್ರಭಾವ ಉಂಟಾಗುವುದು. ಕೆಲವೊಂದು ರಾಶಿಗಳು ಶನಿ ಸಾಡೇಸಾತಿಯಿಂದ ಬಿಡುಗಡೆಯಾದರೆ ಇನ್ನು ಕೆಲವು ರಾಶಿಗಳಲ್ಲಿ ಶುರುವಾಗುವುದು. ಇದೀಗ ಶನಿಯು ಕುಂಭ ರಾಶಿಯಲ್ಲಿದ್ದಾನೆ.

ಈಗ ಯಾವೆಲ್ಲಾ ರಾಶಿಗೆ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯಾ ಇದೆ?
ಏಪ್ರಿಲ್ 29, 2022ಕ್ಕೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿತ್ತು. ಇದರ ಪ್ರಭಾವದಿಂದಾಗಿ ಮೀನ, ಮಕರ ಮತ್ತು ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಇದೆ.
ಕರ್ಕ ಮತ್ತು ವೃಶ್ಚಿಕ ರಾಶಿಯಲ್ಲಿ ಶನಿ ಧೈಯ್ಯಾ ಇದೆ.

ಶನಿ ಸಾಡೇಸಾತಿ ಎಂದರೇನು?
ಶನಿಯು ಏಕ ಕಾಲದಲ್ಲಿ ಮೂರು ರಾಶಿಗಳಲ್ಲಿ ಸೇರಿದಾಗ ಶನಿ ಸಾಡೇಸಾತಿ ಉಂಟಾಗುತ್ತದೆ. ಯಾವಾಗ ಶನಿಯು ತನ್ನ ರಾಶಿ ಬದಲಾಯಿಸುತ್ತಾನೆ ಆಗ ದ್ವಾದಶ ರಾಶಿಗಳಲ್ಲಿ ಮೂರು ರಾಶಿಗಳಲ್ಲಿ ಶನಿ ಸಾಡೇಸಾತಿ ಪ್ರಾರಂಭವಾಗುತ್ತದೆ. ಆಗ ಶನಿಯ ಕಾಟ ಪ್ರಾರಂಭವಾಗುವುದು. ಈ ಶನಿ ಸಾಡೇಸಾತಿಗೆ ಶನಿಯ ಏಳರಾಟವೆಂದೂ ಕೂಡ ಕೂಡ ಕರೆಯಲಾಗುವುದು.

ಶನಿ ಸಾಡೇಸಾತಿಯೆಂದರೆ ಜನ ಭಯ ಬೀಳುತ್ತಾರೆ ಏಕೆ?
ಶನಿ ಸಾಡೇಸಾತಿ ಎಂದರೆ ಸಾಕು ಜನ ಭಯ ಬೀಳುತ್ತಾರೆ, ಏಕೆಂದರೆ ಅದರ ಪ್ರಭಾವ ಆ ರೀತಿ ಇರುತ್ತದೆ. ಒಂದರ ಹಿಂದೆ ಒಂದು ಹೊಡೆತ ಬೀಳುವುದು ಎಂದು ಹೇಳ್ತಾರಲ್ಲಾ ಅದು ಶನಿ ಸಾಡೇಸಾತಿ ಇರುವಾಗ ಅನುಭವಕ್ಕೆ ಬರುತ್ತದೆ. ಈ ಸಮಯದಲ್ಲಿ ಹಣದ ತೊಂದರೆ, ಕುಟುಂಬದಲ್ಲಿ ಸಮಸ್ಯೆ, ಅವಮಾನ, ಆರೋಗ್ಯ ಸಮಸ್ಯೆ ಹೀಗೆ ಒಂದಾ-ಎರಡಾ ಸಮಸ್ಯೆಗಳು ಸುರಿಮಳೆ. ಒಮ್ಮೆ ಈ ಶನಿ ಸಾಡೇಸಾತಿ ಮುಗಿದರೆ ಸಾಕು ಎಂದು ಬೇಡಿಕೊಳ್ಳುವಷ್ಟರ ಮಟ್ಟಿಗೆ ಬಸವಳಿದು ಬಿಡುತ್ತಾನೆ ಮನುಷ್ಯ.

ಶನಿ ಸಾಡೇಸಾತಿ ಪ್ರಾರಂಭವಾಗುವ 7 ತಿಂಗಳ ಮುಂದೆಯೇ ಸಿಗುವುದು ಮುನ್ಸೂಚನೆ
ಶನಿ ಸಾಡೇಸಾತಿ ಪ್ರಾರಂಭವಾಗುವ ಏಳು ತಿಂಗಳ ಮುಂಚೆಯೇ ಆ ರಾಶಿಯವರಿಗೆ ಸೂಚನೆ ಸಿಗುವುದು. ಶನಿಯು ನಿಧಾನಕ್ಕೆ ಚಲಿಸುವ ಗ್ರಹವಾಗಿದೆ, ಅದರಂತೆ ಕಷ್ಟಗಳು ಕೂಡ ನಿಧಾನಕ್ಕೆ ಹೆಚ್ಚುವುದು.

ಶನಿ ಸಾಡೇಸಾತಿ ಮತ್ತು ಶನಿ ಧೈಯ್ಯಾ ನೀಡುವ ಎಚ್ಚರಿಕೆಯ ಸೂಚನೆಗಳೇನು?
* ನಿಮ್ಮ ಪಾದಗಳು ಹಾಗೂ ಚಪ್ಪಲಿ ಸೂಚನೆ ನೀಡುತ್ತದೆ: ಶನಿ ಸಾಡೇಸಾತಿ ಸಮಯದಲ್ಲಿ ಪಾದಗಳಲ್ಲಿ ಬಿರುಕು ಕಂಡು ಬರುತ್ತದೆ ಹಾಗೂ ಪದೇ ಪದೇ ಚಪ್ಪಲಿ ಕಟ್ ಆಗುವುದು
* ಮನಸ್ಸಿನಲ್ಲಿ ಭಯ ತುಂಬಿಕೊಳ್ಳುವುದು
* ವ್ಯಕ್ತಿ ವಾಸ್ತವದಲ್ಲಿ ಇರುವುದೇ ಇಲ್ಲ, ಭವಿಷ್ಯದ ಭಯ ತುಂಬಾ ಕಾಡಲಾರಂಭಿಸುವುದು.
* ಆರೋಗ್ಯ ಸಮಸ್ಯೆಗಳು ಉಂಟಾಗುವುದು. ನರಕ್ಕೆ ಸಂಬಂಧಿಸಿದ ಉಂಟಾಗುವುದು
* ಕಾನೂನು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ
* ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುವುದು
* ಆರ್ಥಿಕ ಸಂಕಷ್ಟ ಎದುರಾಗುವುದು.

ಶನಿಯ ಕೆಟ್ಟ ಪ್ರಭಾವಗಳಿಂದ ಪಾರಾಗುವುದು ಹೇಗೆ?
* ಶನಿ ದೇವಾಲಯ ಅಥವಾ ಕಾಳಿಯ ದೇವಾಲಯಕ್ಕೆ ಭೇಟಿ ನೀಡಿ ತ ಹಣ್ಣುಗಾಯಿ ಅರ್ಪಿಸಿ.
* ತಂತ್ರೋಕ್ತ ದೇವಿ ಸೂಕ್ತಮ್ ಪಠಿಸಿ, ಪ್ರತಿದಿನ ಸಾಧ್ಯವಾಗದಿದ್ದರೆ ಶನಿವಾರ ಪಠಿಸಿ.
* ಶನಿ ಮಂತ್ರಗಳನ್ನು ಪಠಿಸಿ
* ಓಂ ಶನಿಶ್ಚರಾಯ ನಮಃ ಮಂತ್ರ ಪಠಿಸಿ.
* ಭವಿಷ್ಯದ ಚಿಂತೆ ಬಿಡಿ, ವಾಸ್ತವದ ಕಡೆ ಗಮನ ನೀಡಿ, ಸಮಸ್ಯೆಗಳು ಶಾಶ್ವತವಲ್ಲ ಶನಿ ಸಾಡೇಸಾತಿ ಮುಗಿದ ಬಳಿಕ ಎಲ್ಲವೂ ಸರಿಹೋಗುವುದು, ಧೈರ್ಯ ತೆಗೆದುಕೊಳ್ಳಿ.

ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications
