For Quick Alerts
ALLOW NOTIFICATIONS  
For Daily Alerts

  ರಾವಣನ ಬಗ್ಗೆ ನೀವು ತಿಳಿದಿರದ ರಹಸ್ಯ ಸಂಗತಿಗಳು

  |

  ರಾಮಾಯಣದಲ್ಲಿ ರಾವಣನು ನಕಾರಾತ್ಮಕ ಪಾತ್ರವಾಗಿ ಚಿತ್ರಿಸಲ್ಪಟ್ಟಿದ್ದರೂ, ಅವನು ನಿಜವಾಗಿಯೂ ಗೌರವಾನ್ವಿತ ಬ್ರಾಹ್ಮಣನಾಗಿದ್ದನು. ಅವನು ಒಬ್ಬ ಮಹಾನ್ ಪಂಡಿತರಾಗಿದ್ದನು, ಒಬ್ಬ ಮಹಾನ್ ರಾಜ ಮತ್ತು ವೀಣೆಯಲ್ಲಿ ಹೆಚ್ಚಿನ ಪಾಂಡಿತ್ಯವನ್ನು ಹೊಂದಿದ್ದನು. ಅವನು ಓರ್ವ ಪಾಂಡಿತ್ಯ ಹೊಂದಿದ ಬ್ರಾಹ್ಮಣ,ಸಿದ್ಧ (ಜ್ಞಾನದ ವಿವಿಧ ರೂಪಗಳಲ್ಲಿ ಪಾರಂಗತರಾಗಿರುವವರು) ಮತ್ತು ಭಗವಾನ್ ಶಿವನ ಭಕ್ತನಾಗಿದ್ದನು.ಭಾರತದಲ್ಲಿ ಹಲವು ಪ್ರದೇಶಗಳ ಬ್ರಾಹ್ಮಣ ಸಮುದಾಯವು ದೀಪಾವಳಿಯನ್ನು ಆಚರಿಸುವುದಿಲ್ಲ.

  ಬದಲಾಗಿ, ಅವರು ಭೂಮಿಯ ಮೇಲೆ ಜನಿಸಿದ ಒಬ್ಬ ಬುದ್ಧಿವಂತ ಬ್ರಾಹ್ಮಣನಿಗೆ ಗೌರವವನ್ನು ನೀಡುತ್ತಾರೆ. ರಾವಣನನ್ನು ಶ್ರೀಲಂಕಾ ಮತ್ತು ಬಾಲಿಯಲ್ಲಿ ಸಹ ಪೂಜಿಸುತ್ತಾರೆ. ರಾವಣನು ತಮ್ಮ ಪೂರ್ವಜನೆಂದು ಅವರು ನಂಬುತ್ತಾರೆ ಮತ್ತು ಆದ್ದರಿಂದ, ತಮ್ಮ ಪೂರ್ವಜನ ಮರಣ ವಾರ್ಷಿಕೋತ್ಸವ ದಿನವನ್ನು ನೆನಪಿಸಿಕೊಳ್ಳುತ್ತಾರೆ.

  ರಾವಣ - ಒಬ್ಬ ವಿದ್ವಾಂಸನಾಗಿ

  ರಾವಣ ಎಂದರೆ "ಘರ್ಜನೆ". ಲಂಕಾದ ಈ ಪ್ರಬಲ ರಾಜನನ್ನು ಸಾಮಾನ್ಯವಾಗಿ ಒಂಬತ್ತು ತಲೆಗಳೊಂದಿಗೆ ಚಿತ್ರಿಸಲಾಗಿದೆ. ಅವನು ಮೊದಲು ಹತ್ತು ತಲೆಗಳನ್ನು ಹೊಂದಿದ್ದನೆಂದು ನಂಬಲಾಗಿದೆ, ಅದರಲ್ಲಿ ಒಂದನ್ನು ಪೂಜಿಸುವಾಗ, ಶಿವನಿಗೆ ಬಲಿ ನೀಡಲಾಗುತ್ತದೆ. ಬ್ರಹ್ಮನಿಂದ ನೀಡಲ್ಪಟ್ಟಂತೆ, ಅವನು ಅಮರತ್ವದ ಆಶೀರ್ವಾದವನ್ನು ಹೊಂದಿದ್ದನು.

  ರಾವಣನು 'ರಾವಣ ಸಂಹಿತ' ಮತ್ತು 'ಅರ್ಕಾ ಪ್ರಕಾಶಂ' ನ ಲೇಖಕ ಎಂದು ನಂಬಲಾಗಿದೆ. ಮೊದಲನೆಯದು ಜ್ಯೋತಿಷ್ಯ ಪುಸ್ತಕವಾಗಿದ್ದು, ಎರಡನೆಯದು ಸಿದ್ಧ ಔಷಧದ ಪುಸ್ತಕವಾಗಿದೆ. ಸಿದ್ಧ ಔಷಧವು ಆಯುರ್ವೇದವನ್ನು ಹೋಲುವ ರೀತಿಯ ಸಾಂಪ್ರದಾಯಿಕ ಔಷಧಿಯಾಗಿದೆ.  ರಾವಣನು ಮೂರು ಲೋಕಗಳನ್ನು ಸೋಲಿಸಿದ್ದನು, ಇದಲ್ಲದೇ ಅವನು ಪ್ರಬಲ ಪುರುಷರನ್ನು ಮತ್ತು ಇತರ ರಾಕ್ಷಸರನ್ನು ಕೂಡಾ ವಶಪಡಿಸಿಕೊಂಡಿಸಿದ್ದನು.

  Ravana

  ರಾವಣನ ಏಕೈಕ ತಪ್ಪು

  ಅವನು ಮಾಡಿದ ಏಕೈಕ ತಪ್ಪೆಂದೆರೆ ಸ್ವತಃ ಹೆಮ್ಮೆಯನ್ನು ಹೊಂದಿದ್ದು. ಹಿಂದೂ ಧರ್ಮದ ಪ್ರಕಾರ ತನ್ನ ಬಗ್ಗೆ ತನಗೇ ಇರುವ ಹೆಮ್ಮೆಯು ಆ ವ್ಯಕ್ತಿಯ ಸ್ವಂತ ವಿನಾಶಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದಾಗಿದೆ. ಹಿರಿಮೆ ಮತ್ತು ಶಕ್ತಿಯಲ್ಲಿ ಮೇಲುಗೈ ಸಾಧಿಸಿದ ಅವನು, ಅತಿಯಾದ ಹೆಮ್ಮೆಯಿಂದ ದೇವರುಗಳನ್ನು ಸೋಲಿಸುವ ಗುರಿಯನ್ನು ಹೊಂದಿದ್ದನು, ಈ ಗುರಿಯೋ ಸಾಧಿಸಲು ಅತ್ಯುನ್ನತವಾದುದಾಗಿತ್ತು.

  ಈ ಗುರಿ, ದೇವತೆ ಸೀತಾಳನ್ನು ಅಪಹರಿಸುವಂತಹ ಇನ್ನಷ್ಟು ದೊಡ್ಡ ತಪ್ಪುಗಳನ್ನು ಮಾಡಲು ಅವನಿಗೆ ದಾರಿ ಮಾಡಿಕೊಡುತ್ತದೆ. ಇದು ಸರ್ವಶಕ್ತನ ಕೈಯಿಂದ ಅವನ ಸೋಲಿಗೆ ಕಾರಣವಾಯಿತು,

  ಅಂತಹ ಪಾಂಡಿತ್ಯ ಹೊಂದಿದ ವ್ಯಕ್ತಿಯು ದೇವತೆ ಸೀತೆಯನ್ನು ಅಪಹರಿಸಿ, ರಾಮನಿಗೆ ಸವಾಲು ಹಾಕಿ ಮತ್ತು ತನ್ನ ಖಂಡನೆಯನ್ನು ಆಹ್ವಾನಿಸುವ ತಪ್ಪನ್ನು ಹೇಗೆ ಮಾಡಬಲ್ಲನು? ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ವಾಸ್ತವ ರಹಸ್ಯ ಮತ್ತು ಹಿಂದೂ ಧರ್ಮದ ಪ್ರಕಾರ ಹೆಮ್ಮೆಯು ಶಕ್ತಿಯೊಂದಿಗೆ ಬರುತ್ತದೆ.

  ಇದು ಈ ಮಹಾನ್ ಮತ್ತು ಪಾಂಡಿತ್ಯ ಹೊಂದಿದ ರಾಜನ ಜೀವನದಿಂದ ಒಬ್ಬರು ಕಲಿಯಬೇಕಾದ ಪಾಠಗಳಲ್ಲಿ ಒಂದಾಗಿದೆ. ಇದು ಮಾತ್ರವಲ್ಲ, ಕೆಲವು ಇತರ ಪಾಠಗಳೂ ಇದೆ, ಇವುಗಳು ಬಹಳ ಮುಖ್ಯವಾದವು ಮತ್ತು ಯಶಸ್ಸನ್ನು ಸಾಧಿಸಲು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದಂತವು. ವಾಸ್ತವವಾಗಿ, ಈ ರಹಸ್ಯಗಳನ್ನು ರಾವಣನು ನೀಡಿದ್ದಾನೆ.

  ರಾವಣರಿಂದ ನೀಡಲ್ಪಟ್ಟ ರಹಸ್ಯಗಳು

  ರಾಮನು ರಾವಣನನ್ನು ಕೊಲ್ಲುವಲ್ಲಿ ಯಶಸ್ವಿಯಾದ ನಂತರ, ಕಥೆಯು ರಾವಣನು ಸಾಯುವ ಘಟನೆಗೆ ಹಿಂದಿರುಗಿತು. ಮರಣ ಹಾಸಿಗೆಯ ಮೇಲೆ ಮಲಗಿರುವ ಅವನು ಜೀವನದಲ್ಲಿ ಕಲಿತ ಅತ್ಯಂತ ಪ್ರಮುಖ ಪಾಠಗಳ ಬಗ್ಗೆ ಮಾತನಾಡುತ್ತಿದ್ದನು.

  ಈ ಪಾಂಡಿತ್ಯ ಹೊಂದಿದ ರಾಜನ ಮಹತ್ವವನ್ನು ರಾಮನು ತಿಳಿದಿದ್ದನು ಮತ್ತು ಲಕ್ಷ್ಮಣನನ್ನು ರಾವಣನ ಬಳಿ ಹೋಗಲು ಅವನು ಆದೇಶಿಸಿದನು.

  ಭಗವಾನ್ ರಾಮನ ಸಹೋದರನು ತನ್ನನ್ನು ನೋಡಲು ಬಂದಾಗ ರಾವಣನಿಗೆ ಸ್ವಲ್ಪ ತೃಪ್ತಿಯಾಯಿತು. ರಾಮ ಮತ್ತು ಲಕ್ಷ್ಮಣರು ದೈವಿಕ ಅವತಾರಿಗಳೆಂದು ರಾವಣನು ಅರಿತುಕೊಂಡನು. ಲಕ್ಷ್ಮಣನು, ವಿಷ್ಣುವಿನೊಂದಿಗೆ ಇರುವ ಸರ್ಪ- ಶೇಷನಾಗನ ಅವತಾರ. ಲಕ್ಷ್ಮಣನು ರಾವಣನ ಹತ್ತಿರ ಬಂದಾಗ, ರಾವಣನು ಜೀವನದಲ್ಲಿ ಬಹಳ ಮುಖ್ಯವಾದ ಮೂರು ದೊಡ್ಡ ಪಾಠಗಳನ್ನು ಹೇಳಿದನು, ಆ ಮೂರು ಪಾಠಗಳು ಹೀಗಿವೆ:

  ನೀವು ಮಾಡಬೇಕಾದ ಸರಿಯಾದ ವಿಷಯಗಳನ್ನು ವಿಳಂಬ ಮಾಡಬೇಡಿ

  ರಾಮನಲ್ಲಿನ ದೈವತ್ವವನ್ನು ಅರಿತುಕೊಳ್ಳಲು ತುಂಬಾ ತಡವಾಯಿತೆಂದು ರಾವಣನು ಹೇಳಿದನು. ರಾಮನು ದೇವರ ಅವತಾರವೆಂಬುದು ಮೊದಲೇ ತಿಳಿಯಬೇಕಾಯಿತು. ದೇವರನ್ನು ಸೋಲಿಸುವುದು ಅಸಾಧ್ಯ. ರಾಮನು ಒಳ್ಳೆಯವನು ಮತ್ತು ಒಳ್ಳೆಯತನ ಶಾಶ್ವತವಾಗಿ ಉಳಿಯುವುದು. ರಾವಣನು ಸ್ವಲ್ಪ ಸಮಯದ ನಂತರ ರಾಮನ ಪಾದದ ಬಳಿ ಬಂದನು. ಆದ್ದರಿಂದ, ಲಕ್ಷ್ಮಣನಿಗೆ, ಮಾಡಬೇಕಾದ ಸರಿಯಾದ ವಿಷಯಗಳನ್ನು ವಿಳಂಬ ಮಾಡಬೇಡ ಎಂದು ಸಲಹೆ ನೀಡಿದನು; ನೀವು ಮಾಡಬೇಕು ಎಂದುಕೊಂಡ ಕೆಟ್ಟ ಕೆಲಸವನ್ನು. ಸಾಧ್ಯವಾದಷ್ಟು ವಿಳಂಬಿಸಲು ಪ್ರಯತ್ನಿಸಬೇಕು ಎಂದು ರಾವಣನು ಸಲಹೆ ನೀಡಿದನು.

  ಉದಾಹರಣೆಗೆ, ಸೀತಾಳನ್ನು ಅಪಹರಿಸಬೇಕೆಂಬ ಆಶಯ ಅವನಿಗೆ ಇಲ್ಲದಿದ್ದರೆ, ರಾಮನು ಆ ಬಂಗಾರದ ಜಿಂಕೆಯೊಂದಿಗೆ ಹಿಂದಿರುಗುತ್ತಿದ್ದನು, ಮತ್ತು ರಾವಣ ಅವಳನ್ನು ಅಪಹರಣ ಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದನು. ಈ ಘಟನೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಇದು ನೆರವಾಗುತ್ತಿತ್ತು, ಇದು ಅವನನ್ನು ಅವನತಿಗೆ ಒಳಗಾಗಿಸಿದ ಪ್ರಮುಖ ಕಾರಣವಾಗಿದೆ.

  ನಿಮ್ಮ ಶತ್ರುಗಳನ್ನು ಎಂದಿಗೂ ಕಡೆಗಣಿಸಬೇಡಿ

  ಒಬ್ಬ ವ್ಯಕ್ತಿಯು, ಶತ್ರುಗಳನ್ನು ಎಂದಿಗೂ ಕಡೆಗಣಿಸಬಾರದು ಎಂದು ಅವನು ಹೇಳಿದನು. ಮಂಗಗಳು ಮತ್ತು ಹಿಮಕರಡಿಗಳು ಎಂದಿಗೂ ಅವನನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವನು ನಂಬಿದ್ದನು, ಆದರೆ ಅದೇ ಕೋತಿಗಳು ಮತ್ತು ಹಿಮಕರಡಿಗಳು ರಾಮನ ಪ್ರಮುಖ ಬೆಂಬಲಿಗರಾಗಿದ್ದರು. ಇವುಗಳು ದೈವಿಕ ಅವತಾರವೆಂದು ಅವನಿಗೆ ತಿಳಿದಿರಲಿಲ್ಲ. ಒಳ್ಳೆಯತನ, ಅವನ ಹೆಮ್ಮೆಯನ್ನು ಅಂತ್ಯಕ್ಕೆ ತರುವಲ್ಲಿ ಯಶಸ್ವಿಯಾಯಿತು. ರಾವಣನು ತನ್ನ ತಪ್ಪನ್ನು ಅರಿತುಕೊಂಡನು. ಆದ್ದರಿಂದ ಒಬ್ಬನು ಅವನ ಶತ್ರುವನ್ನು ಎಂದಿಗೂ ಕಡೆಗಣಿಸಬಾರದು. ಒಳ್ಳೆಯತನ, ಅವನ ಹೆಮ್ಮೆಯನ್ನು ಅಂತ್ಯಕ್ಕೆ ತರುವಲ್ಲಿ ಯಶಸ್ವಿಯಾಯಿತು. ರಾವಣನು ತನ್ನ ತಪ್ಪನ್ನು ಅರಿತುಕೊಂಡನು. ಆದ್ದರಿಂದ ಒಬ್ಬನು ಅವನ ಶತ್ರುವನ್ನು ಎಂದಿಗೂ ಕಡೆಗಣಿಸಬಾರದು.

  ಯಾರೊಬ್ಬರೂ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ

  ರಾವಣನು ಹಂಚಿಕೊಂಡ ಮೂರನೇ ದೊಡ್ಡ ಪಾಠ ಆಧುನಿಕ ಕಾಲಕ್ಕೆ ಸಾಕಷ್ಟು ಚೆನ್ನಾಗಿ ಅನ್ವಯಿಸುತ್ತದೆ. ತನ್ನ ಜೀವನದ ಒಂದು ಪ್ರಮುಖ ತಪ್ಪು ಏನೆಂದೆರೆ ವಿಭೀಷಣನಿಗೆ ಅವನ ಸಾವಿನ ರಹಸ್ಯವನ್ನು ಹೇಳಿದ್ದು ಎಂದು ತಿಳಿಸಿದನು, ಕಾರಣ ಅದನ್ನು ವಿಭೀಷಣನು ರಾಮನಿಗೆ ತಿಳಿಸಿದನು. ಆದ್ದರಿಂದ ಒಬ್ಬನು ಯಾರೊಬ್ಬರಿಗೂ ರಹಸ್ಯವನ್ನು ಬಹಿರಂಗಪಡಿಸಬಾರದು.

  English summary

  Secrets To Success Given By Ravana

  Ravana means "the roaring". This powerful king of Lanka is often depicted with nine heads. He is believed to have had ten heads earlier, one of which he sacrificed to Lord Shiva while worshipping. As given by Lord Brahma, he had the blessing of immortality. It is believed that Ravana was the author of Ravana Samhita and the Arka Prakasham. While the former is a book on astrology, the latter is a book on Siddha Medicine. Siddha medicine is a kind of traditional medicine much similar to the ayurveda. He overpowered the three worlds, he conquered the powerful men and the other demons.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more