For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ 'ಮೌಳಿ ದಾರ' ದ ಹಿಂದಿನ ವೈಜ್ಞಾನಿಕ ಸತ್ಯಾಸತ್ಯತೆಗಳು

|

ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವಾದ ಕಲಾವದಾರ ಅಥವಾ ಮೌಳಿ ದಾರ (Mauli thread)ಕ್ಕೆ ತನ್ನದೇ ಆದ ಮೌಲ್ಯಗಳಿವೆ. ಪ್ರತಿ ಪೂಜೆ ಹಾಗೂ ಪ್ರಮುಖ ಸಂದರ್ಭಗಳಲ್ಲಿ ಈ ದಾರವನ್ನು ಕಟ್ಟುವುದು ಸಾಮಾನ್ಯವಾಗಿ ಜರುಗುತ್ತದೆ ಹಾಗೂ ಇದನ್ನೊಂದು ಶುಭಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ಇದನ್ನು ಕಟ್ಟುವ ಮೂಲಕ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ತರ್ಕವೇನಿದೆ ಎಂದು ನಿಮಗೆ ಗೊತ್ತೇ?

ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡುವ ಕ್ರಮಗಳೇ ಆಗಿವೆ. ಆದರೆ ಇವುಗಳನ್ನು ನಾವು ಗೊತ್ತಿದ್ದೋ ಅಸಡ್ಡೆಯಿಂದಲೂ ಅಥವಾ ಮೂಢನಂಬಿಕೆ ಎಂದು ಭಾವಿಸಿ ಈ ವಿಧಾನಗಳನ್ನು ಅಲಕ್ಷಿಸಿಬಿಡುತ್ತೇವೆ. ಕಲಾವದಾರವನ್ನು ಕಟ್ಟುವುದು ನೂರಾರು ವರ್ಷಗಳಿಂದ ನಡೆದುಬಂದ ಭಾರತೀಯ ಸಂಸ್ಕೃತಿಯಾಗಿದೆ ಹಾಗೂ ಇದರಿಂದ ಕೆಲವಾರು ಪ್ರಯೋಜನಗಳಿವೆ. ಮೊದಲು ಈ ಸಂಪ್ರದಾಯದ ಮಹತ್ವವನ್ನು ಅರಿಯೋಣ...

ಕಲಾವದಾರವನ್ನು ಕಟ್ಟುವ ಹಿಂದಿರುವ ಧಾರ್ಮಿಕ ತತ್ವ

ಕಲಾವದಾರವನ್ನು ಕಟ್ಟುವ ಹಿಂದಿರುವ ಧಾರ್ಮಿಕ ತತ್ವ

ಹಿಂದೂ ಧರ್ಮದಲ್ಲಿ ಪ್ರತಿ ಸಾಂಸ್ಕೃತಿಕ ಉತ್ಸವವನ್ನು ಕಲಾವದಾರ ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಗ್ರಂಥಗಳಲ್ಲಿ ದೊರಕಿರುವ ವಿವರಗಳ ಪ್ರಕಾರ ಮಣಿಕಟ್ಟಿನ ಗಂಟಿನ ಭಾಗದಲ್ಲಿ (ನಾವು ವಾಚು ಕಟ್ಟುವಲ್ಲಿ) ಕಟ್ಟುವ ಈ ದಾರ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಹಾಗೂ ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿ ಎಂಬ ತ್ರಿದೇವತೆಯರ ಆಶೀರ್ವಾದ ಪಡೆಯಲು ನೆರವಾಗುತ್ತದೆ.ಈ ಆಶೀರ್ವಾದದ ಮೂಲಕ ಉತ್ತಮ ಆರೋಗ್ಯ ಲಭಿಸುತ್ತದೆ.

ಇದು ಲಕ್ಷ್ಮಿಯು ಬಾಲಿರಾಜನಿಗೆ ಕಟ್ಟುವ ಮೂಲಕ ಆರಂಭವಾಯಿತು

ಇದು ಲಕ್ಷ್ಮಿಯು ಬಾಲಿರಾಜನಿಗೆ ಕಟ್ಟುವ ಮೂಲಕ ಆರಂಭವಾಯಿತು

ಪುರಾಣಗಳಲ್ಲಿ ವಿವರಿಸಿರುವ ಪ್ರಕಾರ ಕಲಾವದಾರವನ್ನು ಕಟ್ಟುವ ಸಂಪ್ರದಾಯ ದೇವತೆ ಲಕ್ಷ್ಮಿಯು ಬಾಲಿರಾಜನಿಗೆ ಕಟ್ಟುವ ಮೂಲಕ ಆರಂಭವಾಯಿತು. ಈ ದಾರ ಸರಳವಾದ ದಾರವಾಗಿದ್ದರೂ ಪ್ರಭುವಿನ ಆಶೀರ್ವಾದ ಪಡೆಯಲು ಅರ್ಹತೆ ಹೊಂದಿದೆ.

Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

ಈ ದಾರವನ್ನು ಕಟ್ಟುವ ಹಿಂದಿರುವ ವೈಜ್ಞಾನಿಕ ತರ್ಕವನ್ನು ಅರಿಯೋಣ

ಈ ದಾರವನ್ನು ಕಟ್ಟುವ ಹಿಂದಿರುವ ವೈಜ್ಞಾನಿಕ ತರ್ಕವನ್ನು ಅರಿಯೋಣ

ಈ ದಾರವನ್ನು ಕಟ್ಟುವುದರಿಂದ ಪಡೆಯುವ ಲಾಭಗಳನ್ನು ವಿಜ್ಞಾನ ಪುರಸ್ಕರಿಸುತ್ತದೆ. ಮಾನವಶಾಸ್ತ್ರದ ಪ್ರಕಾರ ನಮ್ಮ ಮಣಿಕಟ್ಟಿನಲ್ಲಿ ಸೂಕ್ಷ್ಮನರಗಳ ಜಾಲವೇ ಹರಡಿಕೊಂಡಿದೆ. ದೇಹದ ಎಲ್ಲಾ ಪ್ರಮುಖ ರಕ್ತನಾಳಗಳು ಈ ಭಾಗದ ಮೂಲಕ ಹಾದು ಹೋಗುತ್ತವೆ.

Most Read: ಹಿಂದೂ ಧರ್ಮದ ಮಹಿಳೆಯರು, ಇಂತಹ ಕಾರ್ಯಗಳನ್ನು ಮಾಡಲೇಬಾರದಂತೆ!

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆಯಂತೆ

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆಯಂತೆ

ಈ ಭಾಗದಲ್ಲಿ ದಾರ ಕಟ್ಟಿಕೊಳ್ಳುವುದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಹೇಗೆ ಎಂದರೆ, ಈ ಮೂಲಕ ತ್ರಿದೋಶಗಳಾದ ವಾತ, ಪಿತ್ತ ಮತ್ತು ಕಫಗಳು ಸಮತೋಲನದಲ್ಲಿರುತ್ತವೆ. ಪರಿಣಾಮವಾಗಿ ದೇಹದ ವ್ಯವಸ್ಥೆಯೂ ಸಮತೋಲನ ಕಾಯ್ದು ಕೊಂಡು ಆರೋಗ್ಯಕರವಾಗಿರುತ್ತದೆ. ಅಲ್ಲದೇ ಈ ದಾರಕ್ಕೆ ಋಣಾತ್ಮಕ ಶಕ್ತಿಗಳನ್ನು ಸಂಹರಿಸುವ ಶಕ್ತಿಯೂ ಇದೆ.

ಪಾರ್ಶ್ವವಾಯು, ಮಧುಮೇಹ, ಹೃದಯ ರೋಗವನ್ನೂ ನಿಯಂತ್ರಿಸಬಹುದಂತೆ!

ಪಾರ್ಶ್ವವಾಯು, ಮಧುಮೇಹ, ಹೃದಯ ರೋಗವನ್ನೂ ನಿಯಂತ್ರಿಸಬಹುದಂತೆ!

ತನ್ನ ಮಣಿಕಟ್ಟಿನಲ್ಲಿ ಸದಾ ಕಲಾವದಾರವನ್ನು ಧರಿಸಿಯೇ ಇರುವ ವ್ಯಕ್ತಿಗೆ ಮಾರಣಾಂತಿಕ ರೋಗಗಳಾದ ಪಾರ್ಶ್ವವಾಯು, ಮಧುಮೇಹ, ಹೃದಯ ಸಂಬಂಧಿ ತೊಂದರೆ ಮೊದಲಾದವು ಕಾಡುವುದಿಲ್ಲ. ಅಲ್ಲದೇ ಮಣಿಕಟ್ಟಿನಲ್ಲಿ ಕಟ್ಟಿರುವ ದಾರದ ಮೂಲಕ ನರಗಳ ಮೇಲೆ ಬೀಳುವ ಒತ್ತಡದಿಂದಾಗಿ ರಕ್ತ ಅತಿಯಾಗಿ ಹರಿಯದೇ ಅಗತ್ಯವಿದ್ದಷ್ಟೇ ಹರಿಯುತ್ತದೆ, ತನ್ಮೂಲಕ ರೋಗ ನಿರೋಧಕ ಶಕ್ತಿ ಮತ್ತು ದೇಹದಾರ್ಢ್ಯತೆ ಅತ್ಯುತ್ತಮವಾಗಿರುತ್ತದೆ ಎಂದು Acupressure ವಿವರಿಸುತ್ತದೆ.

ಹಳದಿ ಮತ್ತು ಕೆಂಪು ದಾರ

ಹಳದಿ ಮತ್ತು ಕೆಂಪು ದಾರ

ಪುರಾತನ ಕಾಲದಿಂದಲೂ ಮಂಗಳಕರ ಎನ್ನುವ ಹಳದಿ ಮತ್ತು ಕೆಂಪು ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಅಲ್ಲದೆ ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರವನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಪರಿಗಣಿಸುತ್ತಾರೆ. ಇವು ಗುರು, ಮಂಗಳ ಮತ್ತು ಸೂರ್ಯನಿಗೆ ಹೆಚ್ಚು ಪ್ರಾಶಸ್ತ್ಯವಾದವು ಎನ್ನಲಾಗುತ್ತದೆ.

ಕಲಾವದಾರವನ್ನು ಸರಿಯಾಗಿ ಕಟ್ಟುವ ವಿಧಾನ

ಕಲಾವದಾರವನ್ನು ಸರಿಯಾಗಿ ಕಟ್ಟುವ ವಿಧಾನ

ಗ್ರಂಥಗಳಲ್ಲಿ ವಿವರಿಸಿರುವ ಪ್ರಕಾರ ಪುರುಷರು ಬಲಗೈಗೆ ಹಾಗೂ ಅವಿವಾಹಿತ ಯುವತಿಯರು ಎಡಗೈಗೆ ದಾರವನ್ನು ಕಟ್ಟಿಕೊಳ್ಳಬೇಕು. ಈ ದಾರವನ್ನು ಕಟ್ಟುವ ಸಮಯದಲ್ಲಿ ಮುಷ್ಟಿಯನ್ನು ಗಟ್ಟಿಯಾಗಿ ಕಟ್ಟಿಕೊಂಡಿರಬೇಕು ಹಾಗೂ ಇನ್ನೊಂದು ಕೈಯನ್ನು ತಲೆಯ ಮೇಲಿರಿಸಿಕೊಳ್ಳಬೇಕು. ಹಬ್ಬದ ದಿನಗಳನ್ನು ಹೊರತುಪಡಿಸಿ, ಶನಿವಾರ ಮತ್ತು ಮಂಗಳವಾರ ಈ ಕಾರ್ಯಕ್ಕೆ ಸೂಕ್ತವಾದ ದಿನಗಳಾಗಿವೆ. ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮ ಮತ್ತು ಹತ್ತಿರದ ಎಲ್ಲರ ಕಾಳಜಿ ವಹಿಸಿ, ಶುಭವಾಗಲಿ.

English summary

Scientific logic behind tying Mauli thread on hand

In Hindu culture, the red colored thread also called ‘Mauli thread‘ has its own respective value. In every puja and cultural occasion, tying Mauli is very common. It is also called Kalava. Do you know its benefits for health and scientific logic behind this? Indian traditions do always good for our well-being. Many of us knowingly or unknowingly classify these as backwardness or superstitions.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more