Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಶನಿದೋಷ ಇದ್ದವರು ಶ್ರಾವಣ ಶನಿವಾರ ಶನಿ ಹಾಗೂ ಶಿವನಿಗೆ ಪೂಜೆ ಮಾಡಿ- ಎಲ್ಲವೂ ಒಳ್ಳೆಯದಾಗುವುದು

ಶ್ರಾವಣ ಮಾಸ ಎಂದರೆ ಶಿವನಿಗೆ ಮೀಸಲಾದ ತಿಂಗಳು. ಮಹಿಳೆಯರು ಸೌಭಾಗ್ಯಕ್ಕೆ, ಅವಿವಾಹಿತರು ವಿವಾಹ ಯೋಗಕ್ಕೆ, ಪುರುಷರು ಆರೋಗ್ಯಕರ ಕುಟುಂಬಕ್ಕಾಗಿ ದೇವತೆಗಳನ್ನು ಆರಾಧಿಸುತ್ತಾರೆ. ವೃತ್ತಿಯಲ್ಲಿ ಯಶಸ್ಸು, ಕುಟುಂಬದಲ್ಲಿ ಸಂತೋಷ, ಆಯುಷ್ಯ, ಆರೋಗ್ಯ ಹಾಗೂ ಸಂಪತ್ತನ್ನು ಶಿವನು ಕರುಣಿಸುತ್ತಾನೆ ಎಂದು ಹೇಳಲಾಗುವುದು.
ಕುಂಡಲಿಯಲ್ಲಿರುವ ದೋಷ ಪರಿಹಾರಕ್ಕಾಗಿ ಶ್ರಾವಣ ಸೋಮವಾರದ ವ್ರತ ಹಾಗೂ ಉಪವಾಸವನ್ನು ಕೈಗೊಳ್ಳುತ್ತಾರೆ. ಹಾಗೆಯೇ ಶ್ರಾವಣ ಶನಿವಾರವೂ ಶನಿ ದೋಷ ಅಥವಾ ಇನ್ಯಾವುದೇ ಶನಿ ತೊಂದರೆಯ ಪರಿಹಾರಕ್ಕೆ ಪೂಜೆ ಸಲ್ಲಿಸುತ್ತಾರೆ ಎನ್ನುವುದು ನಿಮಗೆ ಗೊತ್ತಾ?
ಹೌದು, ಸಾಡೇ ಸಾತು, ಅಷ್ಟಮ ಶನಿ, ಪಂಚಮ ಶನಿ, ಶನಿ ದೆಸೆ, ಶನಿ ದೋಷಗಳಿದ್ದರೆ ಪ್ರತಿ ಶ್ರಾವಣ ಶನಿವಾರ ಶನಿ ದೇವರಿಗೆ ಹಾಗೂ ಶಿವನಿಗೆ ಪೂಜೆ ಸಲ್ಲಿಸಬೇಕು. ಶನಿ ಮತ್ತು ಶಿವನ ಪ್ರಾರ್ಥನೆ ಮಾಡುವುದರಿಂದ ಮಂಗಳವಾಗುವುದು. ಶಿವನ ಆಶೀರ್ವಾದವು ವರ್ಷ ಪೂರ್ತಿ ದೊರೆಯುವುದು ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಾಡೇ ಸಾತ್ ಶನಿ ಇರುವವರು ಕೆಲವು ಪ್ರಮುಖ ಧಾರ್ಮಿಕ ಆಚರಣೆ ಮಾಡಬೇಕು. ಆಗ ಕಷ್ಟಗಳ ಪ್ರಮಾಣ ತಗ್ಗುವುದು ಎಂದು ಹೇಳಲಾಗುವುದು. ಹಾಗಾದರೆ ಆ ವಿಧಿ-ವಿಧಾನಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....
ಸಾಡೇ ಸಾತ್ ಶನಿ
ಸಾಡೇ ಸಾತ್ ಶನಿಯು ಏಳು ವರ್ಷಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ವ್ಯಕ್ತಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನೆ. ಜೊತೆಗೆ ಜೀವನದ ಆಗು-ಹೋಗುಗಳ ಬಗ್ಗೆ ತಿಳಿಯುತ್ತಾನೆ. ಜೀವನದಲ್ಲಿ ಸತ್ಯ ಧರ್ಮದಲ್ಲಿ ನಡೆಯುವುದು ಹೇಗೆ? ಎನ್ನುವುದು ತಿಳಿಯುತ್ತದೆ ಎಂದು ಹೇಳಲಾಗುವುದು. ಈ ಅವಧಿಯಲ್ಲಿ ವೈಯಕ್ತಿಕ ವಿಚಾರದಲ್ಲಿ ಹಾಗೂ ವೃತ್ತಿಯಲ್ಲಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುವುದು ಎಂದು ಹೇಳಲಾಗುತ್ತದೆ. ಆರ್ಥಿಕ ವಿಷಯ ಸೇರಿದಂತೆ ಎಲ್ಲಾ ವಿಚಾರದಲ್ಲೂ ವಿವಿಧ ತೊಂದರೆಗಳು ಎದುರಾಗುವುದು.
ರುದ್ರಾಭಿಷೇಕ ಮಾಡಿಸಿ
ಶಿವನ ಪೂಜೆ ಹಾಗೂ ರುದ್ರಾಭೀಷೇಕ ಮಾಡಿಸುವುದರಿಂದ ಸಾಡೇಸಾತ್ ಶನಿಯಿಂದ ಉಂಟಾಗುವ ತೊಂದರೆಗಳಿಂದ ಪಾರಾಗಬಹುದು. ಶನಿ ದೇವನು ನ್ಯಾಯಾಧಿಪತಿ ಹಾಗೂ ಶಿವನು ಸೂಕ್ಷ್ಮ ದೇವರು ಎಂದು ಹೇಳಲಾಗುವುದು. ಹಾಗಾಗಿಯೇ ಶ್ರಾವಣ ಮಾಸದಲ್ಲಿ ಶ್ರಾವಣ ಶನಿವಾರದ ವ್ರತ, ಪೂಜೆ, ಉಪವಾಸ ಕೈಗೊಳ್ಳಬೇಕು. ರುದ್ರಾಭಿಷೇಕ ಹಾಗೂ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು ಎಂದು ಹೇಳಲಾಗುವುದು.
ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು
ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮಹಾಮೃತ್ಯುಂಜಯ ಮಂತ್ರವನ್ನು ಖಂಡಿತವಾಗಿಯೂ ಮಾಡಬೇಕು. ವೃತ್ತಿ ಕ್ಷೇತ್ರದಲ್ಲಿ ಉಂಟಾಗುವ ಸಮಸ್ಯೆಗಳನ್ನು ತೆಗೆದುಹಾಕಲು ಮತ್ತು ಯಶಸನ್ನು ಹೊಂದಲು ಅನುಕೂಲವಾಗುವುದು. ಈ ಪವಿತ್ರ ಮಾಸದಲ್ಲಿ ಬೀಜ್ ಮಂತ್ರವನ್ನು ಪಠಿಸುವುದರ ಮೂಲಕ ಶನಿದೇವರ ಕೃಪೆಯನ್ನು ಪಡೆಯಬಹುದು. ಶ್ರಾವಣ ಶನಿವಾರ ಶನಿ ಶಾಂತಿ ಪೂಜೆಯನ್ನು ನಡೆಸಬೇಕು. ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುವುದು. ಮಹಾರಾಷ್ಟ್ರದಲ್ಲಿ ಒಂದು ಅಶ್ವತ್ತ್ಥ ಮರಕ್ಕೆ ಪೂಜೆಯನ್ನು ಮಾಡುವರು. ಶ್ರಾವಣ ಶನಿವಾರ ಹನುಮಂತನನ್ನು ಪೂಜಿಸಲಾಗುತ್ತದೆ. ಭಾರತದ ಕೆಲವೆಡೆ ವೆಂಕಟೇಶ್ವರ ಸ್ವಾಮಿಗೂ ಪೂಜೆಯನ್ನು ಮಾಡುತ್ತಾರೆ.
ಶ್ರಾವಣ ಶನಿವಾರ
ಹಿಂದೂ ಪಂಚಾಗಂಗದ ಪ್ರಕಾರ ಶ್ರಾವಣ ಶನಿವಾರ ಆಗಸ್ಟ್ 18, ಆಗಸ್ಟ್ 25, ಸೆಪ್ಟೆಂಬರ್ 1 ಮತ್ತು ಸೆಪ್ಟೆಂಬರ್8ರಂದು ಪೂರ್ಣಗೊಳ್ಳುತ್ತದೆ. ಪೂರ್ಣಿಮಾಂತ್ ಪಂಚಾಂಗದ ಪ್ರಕಾರ ಜುಲೈ 28, ಆಗಸ್ಟ್4, ಆಗಸ್ಟ್11, ಆಗಸ್ಟ್18 ಮತ್ತು ಆಗಸ್ಟ್ 25 ಎಂದು ಹೇಳಲಾಗುವುದು.
ಮಹಾಮೃತ್ಯುಂಜಯ ಮತ್ತು ಬೀಜ ಮಂತ್ರ
ಮಹಾಮೃತ್ಯುಂಜಯ ಮಂತ್ರ :
"ಓಂ ತ್ರಯಂಬಕಮ್ ಯಜಮಾಹೇ ಸುಗಂಧಿಮ್ ಪುಷ್ಟಿ ವೃಧಾನಾಮ್,
ಉರ್ರುರುಕಮೇವ ಬಂಧನಮ್ ಮೃತ್ಯೂರ್ಮೋಕ್ಷಿಯೇ ಮಮೃತಾತ್."
ಶನಿ ಬೀಜ್ ಮಂತ್ರ:
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಶಾಹ ಶನಿಶ್ಚರಾಯೈ ನಮಃ"
ಮಹಾಮೃತ್ಯುಂಜಯ ಮಂತ್ರದ ಮಹತ್ವ
" ಓಂ, ನಾವು ಮೂರು ಕಣ್ಣಿನ ದೇವರರನ್ನು (ಶಿವ) ಪೂಜಿಸುತ್ತೇವೆ. ಸುಗಂಧ ಭರಿತ ಮತ್ತು ಪೋಷಣಾತ್ಮ ಗುಳವುಳ್ಳ ಶಿವನು ಮೃತ್ಯುವಿನಿಂದ ಪಾರುಮಾಡುತ್ತಾನೆ. ಒಂದು ಸೌತೆಕಾಯಿ ಹೇಗೆ ತನ್ನಿಂದ ತಾನೆ ಬಳ್ಳಿಯಿಂದ ಹೇಗೆ ಕಳಚಲ್ಪಡುತ್ತದೆಯೋ ಹಾಗೆಯೇ ಈ ಜಗದ ವ್ಯಾಮೋಹದಿಂದ ನಮ್ಮನ್ನು ನಾವೇ ಪ್ರತ್ಯೇಕಿಸುವಂತಾಗಲಿ. ಅವನು ನಮ್ಮನ್ನು ಮರಣದ ಹಿಡಿತದಿಂದ ಮುಕ್ತಗೊಳಿಸಬಹುದು ಮತ್ತು ಅಮರತ್ವದ ಕಡೆಗೆ ನಮ್ಮನ್ನು ತೆಗೆದುಕೊಳ್ಳಬಹುದು" ಎನ್ನುವ ಅರ್ಥವನ್ನು ಅನುವಾಧಿಸುತ್ತದೆ.
ಮಹಾಮೃತ್ಯುಂಜಯ ಮಂತ್ರದ ಮಹತ್ವ
ಈ ಮಹಾ ಮೃತ್ಯುಂಜಯ ಮಂತ್ರವು ಶಿವನ ಎರಡು ಅಂಶಗಳನ್ನು ವಿವರಿಸುತ್ತದೆ. ಒಂದು ಕಣ್ಣು ಮೂರು ಕಣ್ಣುಗಳಿಂದ ಉರಿಯುತ್ತಿರುವ ದೇವರನ್ನು ತೋರಿಸುತ್ತದೆ. ಇತರ ಅಂಶವು ರಕ್ಷಕನ ಅಂಶವನ್ನು ಒಳಗೊಂಡಿದೆ. ಮರಣದ ಪರಿಕಲ್ಪನೆ ಇಲ್ಲವಾದ ಸಮಯ ಇತ್ತು ಎಂದು ನಂಬಲಾಗಿದೆ. ಸಂಚರಿಸುತ್ತಿದ್ದ ಭೂಮಿಯಲ್ಲಿ ಸಂಪನ್ಮೂಲಗಳು ಖಾಲಿಯಾದವು. ಆದ್ದರಿಂದ ಪ್ರಕೃತಿಯಲ್ಲಿ ಸಂಪತ್ತನ್ನು ಸಮತೋಲನದಲ್ಲಿ ಇರುವಂತೆ ನಿರ್ವಹಿಸಬೇಕೆಂದು ಯಮ ಮನುಷ್ಯರಿಗೆ ಮರಣವನ್ನು ತಂದು ಜವಾಬ್ದಾರಿಯನ್ನು ಪುನಃ ಸ್ಥಾಪಿಸಿದನು ಎನ್ನಲಾಗುವುದು.