For Quick Alerts
ALLOW NOTIFICATIONS  
For Daily Alerts

ಪೊಂಗಲ್ 2022: ಪೊಂಗಲ್‌ನೊಂದಿಗೆ ಜೊತೆಗೂಡಿರುವ ಆಚರಣೆಗಳು

|

ದಕ್ಷಿಣ ಭಾತರದಲ್ಲಿ ಪೊಂಗಲ್ ಜನಪ್ರಿಯ ಹಬ್ಬವಾಗಿದೆ. ಬದಲಾಗುತ್ತಿರುವ ರೀತಿ ನೀತಿಗಳು ಮತ್ತು ಸಂಪ್ರದಾಯಗಳೊಂದಿಗೆ, ಈ ಹಬ್ಬದ ಸಂಭ್ರಮಾಚರಣೆಯು ಬಹುಕಾಲ ನೆನಪಿನಲ್ಲಿಳಿಯುತ್ತದೆ. ಸುಗ್ಗಿಯ ಕಾಲವಾದ್ದರಿಂದ, ಹೊಸ ಬೆಳೆಯನ್ನು ಸುಗ್ಗಿ ಮಾಡಲಾಗುತ್ತದೆ, ನಂತರ ಅದನ್ನು ಅಡುಗೆ ಮಾಡಿ ದೇವರಿಗೆ ಸಮರ್ಪಿಸಲಾಗುತ್ತದೆ.

ಈ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಪೊಂಗಲ್‌ನ ಪ್ರತಿಯೊಂದು ದಿನವೂ ಅನನ್ಯ ಕಟ್ಟುಪಾಡುಗಳು ಮತ್ತು ಸಂಪ್ರದಾಯಗಳನ್ನು ತನ್ನೊಂದಿಗೆ ಮೈಗೂಡಿಸಿಕೊಂಡಿದೆ.

ಸೂರ್ಯ ಪೂಜೆ

ಸೂರ್ಯ ಪೂಜೆ

ಪೊಂಗಲ್ ಹಬ್ಬದ ಮುಖ್ಯ ದೇವರು ಸೂರ್ಯ. ಎಲ್ಲಾ ಆಚರಣೆಗಳು ಸೂರ್ಯ ದೇವರನ್ನು ಪೂಜಿಸುವುದರ ಸುತ್ತ ಸುತ್ತಿಕೊಂಡಿದೆ. ಪೊಂಗಲ್‌ನಂದು ಮನೆಯ ಹೊರಗೆ ಸೂರ್ಯ ದೇವರನ್ನು

ಪೂಜಿಸಲಾಗುತ್ತದೆ.

ಪೊಂಗಲ್ ರಂಗೋಲಿ ಬಿಡಿಸುವುದು

ಪೊಂಗಲ್ ರಂಗೋಲಿ ಬಿಡಿಸುವುದು

ಈ ರಂಗೋಲಿ ಬಿಡಿಸುವುದಕ್ಕಾಗಿ ಸ್ವಚ್ಛವಾದ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಸೂರ್ಯ ರಂಗೋಲಿಯನ್ನು ಬಿಡಿಸಲಾಗುತ್ತದೆ. ಬಿಳಿ ಹುಡಿಯಿಂದ ಈ ರಂಗೋಲಿಯನ್ನು ಬಿಡಿಸಲಾಗುತ್ತದೆ. ಸೂರ್ಯ ದೇವರ ಮುಖವನ್ನು ರಂಗೋಲಿಯಲ್ಲಿ ನಾವು ಕಾಣಬಹುದು. ನವಿಲು, ಕಬ್ಬು, ಬೇಯುತ್ತಿರುವ ಪೊಂಗಲ್ ಮತ್ತು ಈ ದಿನವನ್ನು, ಆಚರಣೆಯ ಮಹತ್ವವನ್ನು ಬಿಂಬಿಸುವ ರಂಗೋಲಿಯನ್ನು ಜನರು ಬಿಡಿಸುತ್ತಾರೆ.

ಆಹಾರ

ಆಹಾರ

ಪೊಂಗಲ್ ಪೂಜೆಯಂದು ತಯಾರಿಸುವ ಆಹಾರ ಬಹು ಶ್ರೇಷ್ಟವಾದದ್ದು. ಈ ದಿನದಂದು ಆಹಾರವನ್ನು ಮನೆಯ ಹೊರಗೆ ತಯಾರಿಸಲಾಗುತ್ತದೆ. ಮೂರು ಕಬ್ಬನ್ನು ಜೊತೆಯಾಗಿ ಕಟ್ಟಿ ಪಾತ್ರೆಯ ಮೇಲಾವರಣಕ್ಕೆ ಸುತ್ತುವರಿಯಲಾಗುತ್ತದೆ. ಆಹಾರ ತಯಾರಿಸುವ ಮಡಿಕೆಯ ಸುತ್ತಲೂ ಹಳದಿ ಗಿಡವನ್ನು ಕಟ್ಟಿ ನಂತರ ಪೊಂಗಲ್ ಭಕ್ಷ್ಯವನ್ನು ತಯಾರಿಸಲಾಗುತ್ತದೆ.

ಪ್ರಾರ್ಥನೆ

ಪ್ರಾರ್ಥನೆ

ಪೊಂಗಲ್ ದಿನದಂದು ಸೂರ್ಯ ಅಷ್ಟೋತ್ತರ ಅಥವಾ ಗಾಯತ್ರಿ ಮಂತ್ರವನ್ನು ಪಠಿಸಲಾಗುತ್ತದೆ.

.ಪೂಜೆ ಆಚರಣೆಗಳ ನಂತರ

.ಪೂಜೆ ಆಚರಣೆಗಳ ನಂತರ

ಪೂಜೆಯ ನಂತರ ಪವಿತ್ರ ತೀರ್ಥ ಮತ್ತು ಹೂಗಳನ್ನು ರಂಗೋಲಿ ಹಾಗೂ ಪೊಂಗಲ್ ತಿನಿಸಿನ ಸುತ್ತ ಪ್ರೋಕ್ಷಿಸಲಾಗುತ್ತದೆ. ಕೊನೆಯ ಪ್ರಾರ್ಥನೆಯನ್ನು ಮಾಡಿ, ಎಲ್ಲರಿಗೂ ಈ ತಿನಿಸನ್ನು ಹಂಚಲಾಗುತ್ತದೆ.

ಸೂರ್ಯನ ಪ್ರತಿಫಲನ

ಸೂರ್ಯನ ಪ್ರತಿಫಲನ

ದಕ್ಷಿಣ ಭಾರತದ ಕೆಲವೆಡೆಗಳಲ್ಲಿ ನೀರಿನಿಂದ ತುಂಬಿದ ಪಾತ್ರೆಯಲ್ಲಿ ಸೂರ್ಯನ ಪ್ರತಿಫಲನವನ್ನು ಕಾಣುವ ಆಚರಣೆ ಇದೆ. ಕೆಲವು ಸಮುದಾಯದವರು ಈ ನೀರಿಗೆ ಕುಂಕುಮ ಮತ್ತು ಹಳದಿಯನ್ನು ಸೇರಿಸಿ ಪ್ರತಿಫಲನವನ್ನು ನೋಡುತ್ತಾರೆ. ಬೆರಳುಗಳ ನಡುವಿನ ಅಂತರದಲ್ಲಿ ಸೂರ್ಯನನ್ನು ನೋಡುವುದು ಇನ್ನೊಂದು ಅನನ್ಯ ಸಂಪ್ರದಾಯವಾಗಿದೆ.

ಪೊಂಗಲ್‌ನ ಮೊದಲ ದಿನದಂದು ಭೋಗಿ ಪೊಂಗಲ್ ಅನ್ನು ಆಚರಿಸುತ್ತಾರೆ ಈ ದಿನದಂದು ಕುಟುಂಬದ ಎಲ್ಲರೂ ಜೊತೆಗೂಡಿ ಇಂದ್ರ ದೇವರನ್ನು ನೆನೆಯುತ್ತಾರೆ ಮತ್ತು ವರ್ಷ ಪೂರ್ತಿ ಮಳೆ ಬೆಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

You might like this: ಸಂಕ್ರಾಂತಿ ವಿಶೇಷ : ಎಳ್ಳು ಮತ್ತು ಬೆಲ್ಲದ ಲಾಡು ರೆಸಿಪಿ

ಎರಡನೇ ದಿನವನ್ನು ಸೂರ್ಯ ಪೊಂಗಲ್ ಎಂದು ಕರೆಯುತ್ತಾರೆ. ಈ ದಿನದಂದು ಸೂರ್ಯನನ್ನು ನೆನೆದು ಸುಖ ಶಾಂತಿ ನೆಮ್ಮದಿಗಾಗಿ ಸೂರ್ಯನನ್ನು ಪ್ರಾರ್ಥಿಸಲಾಗುತ್ತದೆ.

ಮೂರನೇ ದಿನದ ಹಬ್ಬವನ್ನು ಮಟ್ಟು ಪೊಂಗಲ್ ಎಂದು ಕರೆಯುತ್ತಾರೆ. ಗೋಪಾಲಕರು ಮತ್ತು ಕುರುಬರು ದನ ಹಾಗೂ ಎತ್ತುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ದಿವಸವಾಗಿದೆ.

ಪೊಂಗಲ್‌ನ ನಾಲ್ಕನೇ ದಿನವನ್ನು ಕಾಣುಮ್ ಪೊಂಗಲ್ ಎಂದು ಕರೆಯುತ್ತಾರೆ. ಈ ದಿನ ಪೊಂಗಲ್‌ನ ಕಡೆಯ ದಿನವಾಗಿದ್ದು ಜನರು ಕುಟುಂಬದ ಇತರ ಸದಸ್ಯರನ್ನು ಕಾಣಲು ತೆರಳುತ್ತಾರೆ.

ಭಾರತದ ಪ್ರತಿಯೊಂದು ಹಬ್ಬವೂ ತನ್ನೊಂದಿಗೆ ಹಲವಾರು ಆಚರಣೆಗಳನ್ನು ಸಹಯೋಗಿಸಿಕೊಂಡಿದೆ. ಈ ಹಳೆಯ ಕಾಲದ ಆಚರಣೆಗಳು ಹಬ್ಬದ ಸಂಸ್ಕೃತಿ, ಕ್ರಮ, ವಿಧಿ ವಿಧಾನಗಳನ್ನು ಎತ್ತಿತೋರಿಸಿವೆ. ಇದಕ್ಕೆ ಪೊಂಗಲ್ ಕೂಡ ಹೊರತಲ್ಲ. ಹಾಗಿದ್ದರೆ ಪೊಂಗಲ್‌ನೊಂದಿಗೆ ಸಹಯೋಗ ಹೊಂದಿರುವ ಆಚರಣೆಗಳತ್ತ ಗಮನ ಹರಿಸೋಣ.

English summary

Rituals Associated With Pongal

Pongal is a popular harvest festival of South India. Even with the changing customs and traditions, the spirit of the festival has survived over time. Since it is the harvest festival, the new crop is harvested, cooked and offered first to God.
X
Desktop Bottom Promotion