For Quick Alerts
ALLOW NOTIFICATIONS  
For Daily Alerts

ಶ್ರಾವಣ ತಿಂಗಳು ಶಿವನಿಗೆ ಅಚ್ಚುಮೆಚ್ಚು ಯಾಕೆ ಗೊತ್ತೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ

By Hemanth
|

ಪುರಾಣಗಳ ಪ್ರಕಾರ ಬ್ರಹ್ಮ ದೇವನು ಈ ಭೂಮಿಯ ಸೃಷ್ಟಿಕರ್ತನಾದರೆ, ವಿಷ್ಣು ದೇವ ಜೀವ ನೀಡುವಾತ ಮತ್ತು ಶಿವ ದೇವರು ಧ್ವಂಸ ಮಾಡುವವರು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ದೇವದೇವತೆಗಳನ್ನು ಕೆಲವೊಂದು ವಿಶೇಷ ದಿನಗಳಂದು ಪೂಜಿಸಲಾಗುತ್ತದೆ.

ಅದೇ ರೀತಿ ಶ್ರಾವಣ ತಿಂಗಳಲ್ಲಿ ಶಿವ ದೇವರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶ್ರಾವಣ ತಿಂಗಳು ಶಿವ ದೇವರಿಗೆ ತುಂಬಾ ಪ್ರಿಯ ಮಾಸ. ಶಿವ ದೇವರಿಗೆ ಶ್ರಾವಣ ತಿಂಗಳು ಹೆಚ್ಚು ಪ್ರಿಯವಾಗಲು ಕಾರಣವೇನು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ....

ಶ್ರಾವಣದಲ್ಲಿ ಭೂಮಂಡಲವನ್ನು ರಕ್ಷಿಸಿದ್ದ ಶಿವ

ಶ್ರಾವಣದಲ್ಲಿ ಭೂಮಂಡಲವನ್ನು ರಕ್ಷಿಸಿದ್ದ ಶಿವ

ಲಕ್ಷ್ಮೀದೇವಿಯು ವಿಷ್ಣುವನ್ನು ಬಿಟ್ಟು ಹೋದಾಗ ಬ್ರಹ್ಮದೇವರಲ್ಲಿ ಬಂದ ವಿಷ್ಣು ನೆರವಾಗುವಂತೆ ಕೇಳಿಕೊಳ್ಳುವರು. ಸಮುದ್ರರಾಜನ ಮಗಳಾಗಿರುವ ಲಕ್ಷ್ಮೀ ದೇವಿಯು ಸಮುದ್ರದೊಳಗೆ ಕುಳಿತಿರುವ ಕಾರಣದಿಂದಾಗಿ ಆಕೆಯನ್ನು ಅಲ್ಲಿಂದ ಹೊರಗೆ ತರಲು ಎಲ್ಲಾ ದೇವದೇವತೆಗಳು ಹಾಗೂ ರಾಕ್ಷಸರು ಜತೆಯಾಗಿ ಕ್ಷೀರಸಾಗರವನ್ನು ಮಂಥನ ನಡೆಸಬೇಕೆಂದು ಬ್ರಹ್ಮದೇವರು ಸಲಹೆ ನೀಡುವರು. ದೇವಾನು ದೇವತೆಗಳು ಹಾಗೂ ರಾಕ್ಷಸರು ಕ್ಷೀರಸಾಗರದ ಮಂಥನ ಆರಂಭಿಸಿದ ಬಳಿಕ ವಿಷದ ಮಡಕೆಯೊಂದು ಹೊರಗೆ ಬರುವುದು. ಇದು ವಿಷದಲ್ಲಿಯೇ ಅತ್ಯಂತ ಶಕ್ತಿಶಾಲಿ ವಿಷವಾಗಿರುವ ಹಾಲಾಹಲ ವಿಷವೆಂದು ತಿಳಿದು ಎಲ್ಲರು ದಿಗಿಲುಗೊಳ್ಳುವರು. ಇದರ ಕಿರಣಗಳು ಕೂಡ ಸಂಪೂರ್ಣ ಸೃಷ್ಟಿಯನ್ನೇ ಧ್ವಂಸ ಮಾಡಬಲ್ಲದು ಎಂದು ನಂಬಲಾಗಿತ್ತು. ಆದರೆ ಎಲ್ಲಾ ರೀತಿಯ ವಿಷಗಳಿಗೆ ಹೊಂದಿಕೊಂಡಿರುವ ಶಿವ ದೇವರು ಈ ವಿಷವನ್ನು ಕುಡಿದು ಬ್ರಹ್ಮಾಂಡವನ್ನು ರಕ್ಷಿಸುವರು. ಈ ವಿಷದಿಂದಾಗಿ ಶಿವ ದೇವರ ಕಂಠವು ನೀಲಿಯಾಗಿದೆ. ಇದು ಶ್ರಾವಣ ತಿಂಗಳಲ್ಲಿ ನಡೆದಿರುವ ಕಾರಣ ಇದನ್ನು ಶಿವ ದೇವರಿಗೆ ಅರ್ಪಿಸಲಾಗಿದೆ.

ಶಿವನ ಉರಿಯವ ದೇಹವನ್ನು ಮುಂಗಾರಿನ ಮಳೆ ತಣ್ಣಗಾಗಿಸುವುದು

ಶಿವನ ಉರಿಯವ ದೇಹವನ್ನು ಮುಂಗಾರಿನ ಮಳೆ ತಣ್ಣಗಾಗಿಸುವುದು

ವಿಷ ಸೇವಿಸಿದ ಬಳಿಕ ಶಿವನ ದೇಹವು ಉರಿಯಲು ಆರಂಭವಾಗುತ್ತದೆ. ಈ ವೇಳೆ ಗಂಗಾ ನದಿಯ ನೀರಿನಿಂದ ದೇಹದ ಒಳಭಾಗವು ಶಾಂತವಾಯಿತು. ಮಳೆಯಿಂದ ದೇಹದ ಹೊರಭಾಗವು ತಂಪಾಯಿತು. ಶ್ರಾವಣ ತಿಂಗಳಲ್ಲೇ ಮುಂಗಾರು ಕೂಡ ಆರಂಭವಾಗುವುದು. ಇದರಿಂದಾಗಿ ಶ್ರಾವಣ ತಿಂಗಳ ಮಳೆಯು ಶಿವನಿಗೆ ತುಂಬಾ ಮೆಚ್ಚುಗೆ.

ಸನತ್ ಕುಮಾರ್ ಗೆ ಶಿವ ಕಥೆ ಹೇಳಿದ್ದ

ಸನತ್ ಕುಮಾರ್ ಗೆ ಶಿವ ಕಥೆ ಹೇಳಿದ್ದ

ಸಮುದ್ರ ಮಂಥನದ ಕಥೆಯನ್ನು ಶಿವನು ಸನತ್ ಕುಮಾರ್ ಗೆ ವಿವರಿಸಿದ್ದಾನೆ ಎಂದು ಹೇಳಲಾಗಿದೆ. ಸೂರ್ಯನು ತನ್ನ ಬಲ ಕಣ್ಣು, ಚಂದ್ರ ಎಡಗಣ್ಣು ಮತ್ತು ಹಣೆಯಲ್ಲಿರುವಂತಹ ಕಣ್ಣು ಅಗ್ನಿಯನ್ನು ಪ್ರತಿನಿಧಿಸುವುದು. ಇದು ಶ್ರಾವಣ ತಿಂಗಳಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಇದು ಶಿವನಿಗೆ ತುಂಬಾ ಪ್ರೀತಿಯ ತಿಂಗಳು.

ಶ್ರಾವಣದಲ್ಲಿ ಶಿವನ ಪೂಜಿಸುವ ಪಾರ್ವತಿ

ಶ್ರಾವಣದಲ್ಲಿ ಶಿವನ ಪೂಜಿಸುವ ಪಾರ್ವತಿ

ದೇವಿ ಸತಿಯು ತನ್ನ ತಂದೆಯ ಮನೆಯಲ್ಲಿ ತನ್ನ ದೇಹ ಬಿಟ್ಟು ಹೋದಾಗ(ಸತಿಯು ಯೋಗ ಶಕ್ತಿಯಿಂದ ದೇಹತ್ಯಾಗ ಮಾಡುವಳು) ತನ್ನ ಮುಂದಿನ ಜನ್ಮದಲ್ಲಿ ಶಿವನನ್ನು ಮದುವೆಯಾಗುವುದಾಗಿ ಹೇಳುವಳು. ಮುಂದಿನ ಜನ್ಮದಲ್ಲಿ ಆಕೆ ಪಾರ್ವತಿಯಾಗಿ ಜನ್ಮ ಪಡೆದು, ಶಿವನನ್ನು ಆರಾಧಿಸಿ ಶ್ರಾವಣ ತಿಂಗಳಲ್ಲಿ ಉಪವಾಸ ವ್ರತ ಮಾಡುವಳು. ಪಾರ್ವತಿಯ ವ್ರತದಿಂದ ಸಂತುಷ್ಟಗೊಂಡ ಶಿವನು ಆಕೆಯನ್ನು ಮದುವೆಯಾಗುವನು. ಈ ಕಾರಣದಿಂದಲೂ ಶಿವನಿಗೆ ಶ್ರಾವಣ ತಿಂಗಳು ತುಂಬಾ ಪ್ರಿಯವಾದದ್ದು. ಶ್ರಾವಣ ತಿಂಗಳ ಮೊದಲ ಸೋಮವಾರದಿಂದ ಸತತ 16 ಸೋಮವಾರಗಳ ಕಾಲ ವ್ರತಾಚರಣೆ ಮಾಡಿದರೆ ಆಗ ಬಯಸಿದ ಪತಿಯು ಸಿಗುವನು ಎಂದು ಹೇಳಲಾಗುತ್ತದೆ. ಶಿವನು ಮಾದರಿ ಪುರುಷನಾಗಿರುವ ಕಾರಣದಿಂದ ಪ್ರತಿಯೊಬ್ಬ ಮಹಿಳೆ ಕೂಡ ಶಿವನಂತಹ ಪತಿ ಸಿಗಲೆಂದು ಪ್ರಾರ್ಥಿಸುವಳು.

ದಂತಕತೆಗಳ ಪ್ರಕಾರ

ದಂತಕತೆಗಳ ಪ್ರಕಾರ

ದಂತಕತೆಗಳ ಪ್ರಕಾರ ಸತಿಯು ತನ್ನನ್ನು ತಾನು ಅಗ್ನಿಯಲ್ಲಿ ಸುಟ್ಟುಕೊಂಡ ಮೇಲೆ ಪಾರ್ವತಿ ದೇವಿಯಾಗಿ ಮರು ಅವತಾರವನ್ನು ಎತ್ತಿದಳು. ಆಗ ಆಕೆಯು ಶಿವನನ್ನು ಮದುವೆಯಾಗುವ ಸಲುವಾಗಿ ಘೋರ ತಪಸ್ಸನ್ನು ಆಚರಿಸಿದಳು. ಇದರಿಂದ ಸಂತುಷ್ಟನಾದ ಶಿವನು ಪಾರ್ವತಿಯನ್ನು ಮದುವೆಯಾಗಲು ಒಪ್ಪಿದನು.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಶ್ರಾವಣ ಮಾಸದಲ್ಲಿ ಶಿವನು ತನ್ನ ಅತ್ತೆ- ಮಾವನ ಮನೆಗೆ ಭೇಟಿ ನೀಡುವ ಮಾಸ ಇದಾಗಿದೆ. ಅವರು ಅಪರಿಮಿತವಾದ ಪ್ರೀತಿ ಮತ್ತು ವಾತ್ಸಲ್ಯದಿಂದ ಶಿವನನ್ನು ಬರಮಾಡಿಕೊಳ್ಳಲು ಕಾಯುತ್ತಿರುತ್ತಾರಂತೆ. ಈ ಕಾರಣಕ್ಕಾಗಿಯೂ ಸಹ ಶಿವನಿಗೆ ಶ್ರಾವಣ ಮಾಸವೆಂದರೆ ಅತ್ಯಂತ ಪ್ರೀತಿ. ಯಾವಾಗ ಶಿವನು ಕೈಲಾಸದಿಂದ ತನ್ನ ಅತ್ತೆ-ಮಾವನನ್ನು ನೋಡಲು ಇಳಿದು ಬರುತ್ತಾನೋ, ಆಗ ಆತನಿಗೆ ಅತ್ಯಂತ ಆದರದ ಸ್ವಾಗತವನ್ನು ನೀಡಲಾಗುತ್ತದೆಯಂತೆ. ಆತ ಭುವಿಗೆ ಇಳಿದು ಬರುವ ಸಂದರ್ಭವನ್ನು ಜಲಾಭಿಷೇಕದ ಮೂಲಕ ಆರಾಧಿಸಲಾಗುತ್ತದೆ. ಆದ್ದರಿಂದಲೇ ಶಿವಾಲಯಗಳಲ್ಲಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು ಇತ್ಯಾದಿಗಳಿಂದ ಅಭಿಷೇಕವನ್ನು ಮಾಡುತ್ತಾರೆ.

English summary

Reasons Why Shiva Loves Shravana

Among the holy trinity, Lord Vishnu is the nurturer of the universe and Lord Shiva is the destroyer, and as we know that it was Lord Brahma who created the universe. For all these deities, there are specific days when they are worshipped. Similarly, the whole month of Shravana is dedicated to Lord Shiva. In fact, Shravana is the favourite month of Lord Shiva. Wondering why this month is so dear to him? Here are the reasons. Take a look.
Story first published: Thursday, August 2, 2018, 18:00 [IST]
X
Desktop Bottom Promotion