For Quick Alerts
ALLOW NOTIFICATIONS  
For Daily Alerts

ರಂಜಾನ್ 2022: ಈ ತಿಂಗಳಿನ ಮಹತ್ವವೇನು? ಉಪವಾಸದ ನಿಯಮಗಳೇನು?

|

ಮುಸ್ಲಿಂರ ಪವಿತ್ರ ಮಾಸ ರಂಜಾನ್. ಇದನ್ನು ರಮದಾನ್ ಎಂದೂ ಕರೆಯಲಾಗುವುದು. ಈ ತಿಂಗಳಿನಲ್ಲಿ ಕಟ್ಟು ನಿಟ್ಟಿನ ಉಪವಾಸ ಆಚರಿಸಿ ಅಲ್ಲಾನಿಗೆ ಹತ್ತಿರವಾಗುತ್ತಾರೆ. ಈ ಸಮಯದಲ್ಲಿ ಮನಸ್ಸನ್ನು ಕೂಡ ಕಡಿವಾಣದಲ್ಲಿ ಇಡಲಾಗುವುದು.

ಆ ಒಂದು ತಿಂಗಳು ಪೂರ್ತಿ ಸೂರ್ಯೋದಕ್ಕೂ ಮುನ್ನ ಆಹಾರ ಸೇವಿಸಿ ರೋಜಾ ಹಿಡಿಯಲಾಗುವುದು, ದಿನವಿಡೀ ಎಂಜಲು ಕೂಡ ನುಂಗುವಂತಿಲ್ಲ, ನಂತರ ಸೂರ್ಯಾಸ್ತದ ಸಮಯದಲ್ಲಿ ಉಪವಾಸವನ್ನು ಮುರಿಯಲಾಗುವುದು.

ಈ ವರ್ಷ ಅಂದರೆ 2022ರಲ್ಲಿ ರಂಜಾನ್ ಮಾಸ ಪ್ರಾರಂಭ ಯಾವಾಗ, ಯಾವಾಗ ಮುಕ್ತಾಯ, ರೋಜಾ ನಿಯಮಗಳೇನು, ಮಹತ್ವವೇನು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

2022ರಲ್ಲಿ ರಂಜಾನ್ ಯಾವಾಗ?

2022ರಲ್ಲಿ ರಂಜಾನ್ ಯಾವಾಗ?

ಭಾರತದಲ್ಲಿ ರಂಜಾನ್ ಮಾಸ ಏಪ್ರಿಲ್ 2 ಸಂಜೆಯಿಂದ ಪ್ರಾರಂಭ, ಆದ್ದರಿಂದ ಭಾರತದಲ್ಲಿ ಏಪ್ರಿಲ್ 3ಕ್ಕೆ ರೋಜಾ ಹಿಡಿಯಲಾಗುವುದು.

ರಂಜಾನ್ ಮಾಸ ಮೇ 2ರವರೆಗೆ ಇದೆ.

ಭಾರತದಲ್ಲಿ 2022ರ ಸೆಹ್ರಿ ಹಾಗೂ ಇಫ್ತಾರ್ ಸಮಯ

ಭಾರತದಲ್ಲಿ 2022ರ ಸೆಹ್ರಿ ಹಾಗೂ ಇಫ್ತಾರ್ ಸಮಯ

ಹೈದ್ರಾಬಾದ್‌ ಬೆಳಗ್ಗೆ 05:01ಕ್ಕೆ ಸೆಹ್ರಿ ಸಂಜೆ 06:30ಕ್ಕೆ ಇಫ್ತಾರ್

ದೆಹಲಿ: ಬೆಳಗ್ಗೆ 04:56ಕ್ಕೆ ಸೆಹ್ರಿ, 06:38ಕ್ಕೆ ಇಫ್ತಾರ್

ಅಹ್ಮದಾಬಾದ್ ಬೆಳಗ್ಗೆ 05:20ಕ್ಕೆಸೆಹ್ರಿ, ಇಫ್ತಾರ್ 06:55ಕ್ಕೆ

ಸೂರತ್ ಬೆಳಗ್ಗೆ 05:21ಕ್ಕೆ ಸೆಹ್ರಿ, ಸಂಜೆ 06:53ಕ್ಕೆ ಇಫ್ತಾರ್

ಮುಂಬಯಿನಲ್ಲಿ ಬೆಳಗ್ಗೆ 05:22ಕ್ಕೆ ಸೆಹ್ರಿ ಸಂಜೆ 06:25ಕ್ಕೆ ಇಫ್ತಾರ್

ಪುಣೆ ಬೆಳಗ್ಗೆ 05:19ಕ್ಕೆ ಸೆಹ್ರಿ ಸಂಜೆ 06:48ಕ್ಕೆ ಇಫ್ತಾರ್

ಬೆಂಗಳೂರು ಬೆಳಗ್ಗೆ 05:07ಕ್ಕೆ ಸೆಹ್ತಿ ಸಂಜೆ 06:32ಕ್ಕೆ ಇಫ್ತಾರ್

ಚೆನ್ನೈ: ಬೆಳಗ್ಗೆ 04:56ಕ್ಕೆ ಸೆಹ್ರಿ ಸಂಜೆ 06:21ಕ್ಕೆ ಇಫ್ತಾರ್

ಕ್ಯಾಲಿಕಟ್:ಬೆಳಗ್ಗೆ 04:17ಕ್ಕೆ ಸೆಹ್ರಿ ಸಂಜೆ 05:51ಕ್ಕೆ ಇಫ್ತಾರ್

ಕಾನ್ಪುರ್ ಬೆಳಗ್ಗೆ 04:46ಕ್ಕೆ ಇಫ್ತಾರ್ ಸಜೆ 06:25ಕ್ಕೆ

ರೋಜಾ ಉಪವಾಸ ನಿಯಮ:

ರೋಜಾ ಉಪವಾಸ ನಿಯಮ:

ರೋಜಾ ಸೂರ್ಯೋದಯಕ್ಕೆ ಮುನ್ನ ಪ್ರಾರಂಭ, ಸೂರ್ಯ ಉದಯಿಸಿದ ಮೇಲೆ ಏನೂ ತಿನ್ನುವಂತಿಲ್ಲ. ಮುಸ್ಲಿಂರು ರೋಜಾ ಸಮಯದಲ್ಲಿ ಬೆಳಗ್ಗೆ ಮಾಡುವ ಊಟಕ್ಕೆ ಸೆಹ್ರಿ ಎಂದು ಕರೆಯಲಾಗುವುದು. ಬೆಳಗ್ಗೆ ಬೇಗ ಎದ್ದು ಆಹಾರ ಸೇವಿಸಿ ರೋಜಾ ಹಿಡಿಯುತ್ತಾರೆ ಮತ್ತೆ ಸಂಜೆಯವರೆಗೆ ಏನೂ ತಿನ್ನುವಂತಿಲ್ಲ ಸಂಜೆ ಇಫ್ತಾರ್ ದೊಂದಿಗೆ ಉಪವಾಸವನ್ನು ಮುರಿಯುತ್ತಾರೆ . ಈ ತಿಂಗಳು ಮುಸ್ಲಿಂರಿಗೆ ತುಂಬಾ ಪವಿತ್ರವಾಗಿದೆ.

ಉಪವಾಸದ ಮಹತ್ವ:

ಉಪವಾಸದ ಮಹತ್ವ:

ರಂಜಾನ್ ದಿನಾಂಕಗಳು ಪ್ರತಿವರ್ಷ ಬದಲಾಗುತ್ತವೆ ಏಕೆಂದರೆ ಅವು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ. ರಂಜಾನ್ ಅರೇಬಿಕ್ ಪದವಾದ 'ಅರ್-ರಾಮದ್' ನಿಂದ ಹುಟ್ಟಿಕೊಂಡಿದೆ , ಇದರರ್ಥ ಶಾಖವನ್ನು ಸುಡುವುದು. ಈ ಅವಧಿಯಲ್ಲಿಯೇ ಗೇಬ್ರಿಯಲ್ ದೇವತೆ ಕುರಾನ್‌ನ ಮಾತುಗಳನ್ನು ಮುಹಮ್ಮದ್‌ಗೆ ಬಹಿರಂಗಪಡಿಸಿದನೆಂದು ನಂಬಲಾಗಿದೆ. ಇದನ್ನು ನಂಬುವವರು ಉಪವಾಸ ಮಾಡುತ್ತಾರೆ. ಉಪವಾಸವನ್ನು ಮಾಡುವಾಗ ಮುಸ್ಲಿಂರು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಸಮಯದಲ್ಲಿ ಬಡವರಿಗೆ ದಾನವನ್ನು ಹೆಚ್ಚಾಗಿ ಮಾಡುತ್ತಾರೆ.

English summary

Ramadan 2022: Date, Time, History, Significance and Why we celebrate in Kannada

Ramadan 2022: Date, Time, History, Significance and Why we celebrate in Kannada, Read on...
Story first published: Thursday, March 31, 2022, 10:43 [IST]
X
Desktop Bottom Promotion