Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'
ವಿಜಯ ದಶಮಿಯ ಈ ಶುಭ ಸಮಾರಂಭದಲ್ಲಿ ನವಶಕ್ತಿ ದುರ್ಗೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಮಹತ್ತರ ಯಶಸ್ಸನ್ನು ಸಾಧಿಸಬಹುದಾಗಿದೆ. ಅಕ್ಟೋಬರ್ 10 ರಿಂದ ಆರಂಭಗೊಂಡು 18 ಕ್ಕೆ ಸಮಾಪ್ತಿಯಾಗಲಿರುವ ನವರಾತ್ರಿಯಲ್ಲಿ ದೇವಿಯು ಒಂಭತ್ತು ಅವತಾರಗಳಲ್ಲಿ ಕಾಣಿಸಿಕೊಂಡು ಭಕ್ತರನ್ನು ಪೊರೆಯಲಿದ್ದಾರೆ.
ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ, ಕೆಡುಕುಗಳನ್ನು ದುರ್ಗಾ ಮಾತೆ ನಿವಾರಣೆ ಮಾಡಿ ಅಲ್ಲಿ ಪ್ರೀತಿ, ಕರುಣೆ, ಅನುಕಂಪವೆಂಬ ಮಧುರಾಮೃತವನ್ನು ತುಂಬಲಿದ್ದಾರೆ. ಜ್ಞಾನವೆಂಬ ಭಕ್ತಿಯನ್ನು ನಮ್ಮ ಮನದಲ್ಲಿ ತುಂಬಲಿದ್ದಾರೆ. ಅಹಂಕಾರ, ಮತ್ಸರ, ಹಗೆತನ ಮತ್ತು ಮನುಕುಲಕ್ಕೆ ಕಳಂಕವನ್ನುಂಟು ಮಾಡುತ್ತಿರುವ ಕೆಟ್ಟ ಶಕ್ತಿಗಳನ್ನು ಮಾತೆ ಬಡಿದೋಡಿಸಲಿದ್ದಾರೆ.
ಇಂತಹ ಶಕ್ತಿ ದೇವತೆಯನ್ನು ಮೆಚ್ಚಿಸುವುದು ಕಷ್ಟವಲ್ಲದಿದ್ದರೂ ಅಂತಃಕರಣದಲ್ಲಿ ಭಕ್ತಿ ಇರಬೇಕು. ನಿಮ್ಮ ಮನಸ್ಸಿನಲ್ಲಿ ಪ್ರೀತಿ ತುಂಬಿದ್ದರೆ ಮಾತ್ರವೇ ಆಕೆ ತಾಯಾಗಿ ಬಂದು ನಿಮ್ಮನ್ನು ಮಗುವಿನಿಂತೆ ಪೊರೆಯುತ್ತಾರೆ. ಈ ಒಂಭತ್ತು ದಿನಗಳ ಕಾಲ ಉಪವಾಸವನ್ನು ಕೈಗೊಂಡು ಆಕೆಯನ್ನು ಹೂವು, ಸೀರೆ, ತೆಂಗಿನ ಕಾಯಿ ಮತ್ತು ಇನ್ನಿತರ ಪೂಜಾ ಸಾಮಾಗ್ರಿಗಳೊಂದಿಗೆ ಪೂಜಿಸಬೇಕು. ಆಕೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಮಂತ್ರವನ್ನು ಪಠಿಸಬೇಕು.

ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ಧ್ಯಾನ ಮಂತ್ರವಾಗಿರುವ ಇದು ಪೂಜೆಯ ಸಮಯದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕಲಿಕೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.

ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್‌ಮನ್
ಇದು ದುರ್ಗಾ ಶತ್ರು ಶಾಂತಿ ಮಂತ್ರವಾಗಿದ್ದು ಯಾವುದೇ ದುರುದ್ದೇಶಗಳನ್ನು ಭಕ್ತರು ಹೊಂದಿದ್ದರೆ ಅದನ್ನು ಸೋಲಿಸಲು ಪಠಿಸುವುದಾಗಿದೆ. ನಿಮ್ಮ ಬಗ್ಗೆ ಮತ್ಸರ ಹೊಂದಿರುವವರಿಂದ ಸಂರಕ್ಷಣೆ ಪಡೆಯಲು ಈ ಮಂತ್ರ ಸಹಕಾರಿ ಜೊತೆಗೆ ದುಷ್ಟ ಶಕ್ತಿಯನ್ನು ತೊಡೆದು ಹಾಕುತ್ತದೆ.

ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್‌ಮುಕ್ತೊ ಧನ ಧ್ಯಾನ ಸುತನ್‌ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‌ಶಯಃ
ಈ ಮಂತ್ರವನ್ನು ಸರ್ವ ಬಾಧಾ ಮುಕ್ತಿ ಮಂತ್ರವೆಂದು ಕರೆಯಲಾಗುತ್ತದೆ. ಭಕ್ತರ ಜೀವನದಲ್ಲಿರುವ ಸಕಲ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಈ ಮಂತ್ರಕ್ಕಿದೆ. ನಿಮಗೆ ಮಕ್ಕಳಾಗಬೇಕೆಂಬ ಉದ್ದೇಶವಿದ್ದು ಆದರೆ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಎಂದಾದಲ್ಲಿ ಈ ಮಂತ್ರವನ್ನು ಪಠಿಸಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಶಾಂತಿ ಮತ್ತು ಉನ್ನತಿಯನ್ನು ಪಡೆದುಕೊಳ್ಳಲು ಈ ಮಂತ್ರವನ್ನು ಪಠಿಸಬೇಕು.

ದುರ್ಗಾ ದುಸ್ವಪ್ನ ನಿವಾರಣೆ ಮಂತ್ರ
ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ
ಗೃಹ ಪೀಡಸು ಚೊಗ್ರಾಸು ಮಹಾತ್ಮಯಾನ್ ಶ್ರೀನು ಯಾನ್‌ಮಮ್
ಈ ಮಂತ್ರವನ್ನು ದುಃಸ್ವಪ್ನ ನಿವಾರಣೆ ಮಂತ್ರವೆಂದು ಕರೆಯಲಾಗುತ್ತದೆ ಮತ್ತು ಕೆಟ್ಟ ಕನಸುಗಳಿಂದ ಮುಕ್ತಿ ಹೊಂದಲು ಈ ಮಂತ್ರವನ್ನು ಪಠಿಸಬೇಕು. ನಿಮ್ಮ ಜನ್ಮ ಕುಂಡಲಿಯಲ್ಲಿ ಗ್ರಹಗಳ ಗತಿ ನಿಮಗೆ ಪ್ರಯೋಜನಕರವಾಗಿಲ್ಲದಿದ್ದರೆ ಈ ಮಂತ್ರದ ಶಕ್ತಿಯಿಂದ ನಿವಾರಣೆಯಾಗುತ್ತದೆ. ನಿಮಗೆ ಆತ್ಮವಿಶ್ವಾಸವನ್ನು ನೀಡಿ ಭಯ ದೂರಾಗುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳಿದ್ದರೆ ಈ ಮಂತ್ರವನ್ನು ಪಠಿಸಿ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ.



Click it and Unblock the Notifications