For Quick Alerts
ALLOW NOTIFICATIONS  
For Daily Alerts

ನಮ್ಮ ಮೆದುಳು ಒಂದಲ್ಲಾ ಎರಡಲ್ಲಾ ಬರೋಬ್ಬರಿ 8 ಅಲೌಕಿಕ ಶಕ್ತಿಗಳನ್ನು ಹೊಂದಿದೆ !!!

|

ನಮ್ಮ ದೇಹದಲ್ಲಿ ಇರುವ ಎಲ್ಲಾ ಭಾಗಗಳೂ ಅದರದೇ ಆದ ಕೆಲಸ ಕಾರ್ಯಗಳಿಗೆ ನೇಮಕಗೊಂಡಿವೆ .ನಮ್ಮ ಇಡೀ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಈ ಎಲ್ಲಾ ಭಾಗಗಳ ಅವಶ್ಯಕತೆ ಬೇಕೇ ಬೇಕು .ಯಾವೊಂದು ಊನವಾಗಿ ಕೆಲಸ ನಿಲ್ಲಿಸಿದರೂ ನಮ್ಮ ದೇಹಕ್ಕೇ ಹಾನಿ .ಈ ಎಲ್ಲಾ ಭಾಗಗಳನ್ನು ಹೇಳಿದಂತೆ ಕೇಳುವ ಹಾಗೆ ,ನೋಡಿಕೊಳ್ಳುವ ಹಾಗೆ ಯಾರಾದರೂ ಒಬ್ಬರು ಬೇಕಲ್ಲವೇ ? ಅದೇ ನಮ್ಮ ದೇಹದಲ್ಲಿ ಎಲ್ಲದಕ್ಕಿಂತ ಎತ್ತರವಾದ ಸ್ಥಾನದಲ್ಲಿ ಇರುವ ನಮ್ಮ ಮೆದುಳು .ಯಾವ ಅಂಗಗಳಿಗೆ ಅಥವಾ ಭಾಗಗಳಿಗೆ ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕೆಂದು ದಿನದ ಇಪ್ಪತ್ತ ನಾಲ್ಕು ಗಂಟೆಯೂ ದೇಹದದ ತುಂಬೆಲ್ಲಾ ಹಬ್ಬಿರುವ ನರಮಂಡಲದ ಮೂಲಕ ಸೂಚನೆ ಕೊಡುತ್ತಲೇ ಇರುತ್ತದೆ . ನಾವು ನಮ್ಮ ಪಾಡಿಗೆ ಮಲಗಿ ನಿದ್ದೆ ಮಾಡುತ್ತಿದ್ದರೂ ಸಹ.

ಎಂತಹ ಕಾರ್ಯ ದಕ್ಷತೆಯಲ್ಲವೇ ? ನಿಜಕ್ಕೂ ನಮ್ಮಲ್ಲಿ ಇಂತಹ ಒಂದು ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವಂತಹ ,ಅದರಲ್ಲಿ ಬುದ್ಧಿ ,ಜ್ಞಾನ ,ವಿವೇಚನೆ ಸುತ್ತಮುತ್ತ ನಡೆಯುವ ಸಂಗತಿಗಳ ಗ್ರಹಿಸುವ ಶಕ್ತಿ ,ಹೀಗೆ ಈ ಎಲ್ಲವನ್ನೂ ಒಂದೇ ಜಾಗದಲ್ಲಿ ತುಂಬಿ ಆ ಭಾಗವನ್ನು "ಮೆದುಳು " ಎಂದು ಅದನ್ನು ನಮಗೆ ವರದಾನವಾಗಿ ಕೊಟ್ಟಿರುವ ಆ ದೇವರಿಗೆ ನಮ್ಮ ನಮನ ಸಲ್ಲಿಸಲೇಬೇಕು . ಹಾಗೆ ನೋಡಿದರೆ ಮನುಷ್ಯ ಒಂದು ಯಂತ್ರ ಇದ್ದಂತೆ . ಯಾವ ರೀತಿ ಯಜಮಾನ ಅದನ್ನು ನಂಬಿ ಒಪ್ಪಿಸಿದ ಕೆಲಸವನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ತಿಯಾಗಿ ಮುಗಿಸಿ ಕೊಡುತ್ತದೆಯೋ ಅದೇ ರೀತಿ ನಮ್ಮ ಮೆದುಳಿನ ನಿಯಂತ್ರಣದಲ್ಲಿ ಪ್ರತಿದಿನವೂ ಕಾರ್ಯ ನಿರ್ವಹಿಸುವ ನಮ್ಮ ದೇಹವೂ ಅಷ್ಟೇ ಮೆದುಳು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತದೆ. ಹಾಗಾದರೆ ನಮ್ಮ ಮೆದುಳು ಹೇಗೆಲ್ಲ ನಮಗೆ ತಕ್ಕಂತೆ ಕಾರ್ಯದಕ್ಷತೆಯನ್ನು ತೋರಿಸುತ್ತದೆ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ನೋಡೋಣ....

ನಿಮ್ಮ ಯೋಚನೆಗೆ ತಕ್ಕಂತೆ ನಿಮ್ಮ ದೇಹ ಸ್ಪಂದಿಸುತ್ತದೆ

ನಿಮ್ಮ ಮೆದುಳಿನಿಂದ ಹೊರಡುವ ಯೋಚನಾ ಲಹರಿ ನಿಮಗೆ ಕೈ ಗನ್ನಡಿ ಇದ್ದಂತೆ . ನೀವು ಹೇಗೆ ಯೋಚನೆ ಮಾಡುತ್ತೀರೋ ಹಾಗೆ ನಿಮ್ಮ ದೇಹ ಪ್ರತಿಕ್ರಿಯಿಸುತ್ತದೆ . ಉದಾಹರಣೆಗೆ ನೀವು ಖುಷಿಯಾಗಿದ್ದರೆ ನಿಮ್ಮ ದೇಹ ಕೂಡ ಲವಲವಿಕೆಯಿಂದ ಕೂಡಿರುತ್ತದೆ . ಅದೇ ನೀವು ನೋವು ಅಥವಾ ದುಃಖದಲ್ಲಿದ್ದರೆ ನಿಮ್ಮ ದೇಹ ಯಾವುದೇ ಲವಲವಿಕೆ ಇಲ್ಲದೆ , ಯಾವುದೇ ಕೆಲಸ ಮಾಡಲೂ ಮನಸ್ಸಿಲ್ಲದೆ , ಯಾರು ಏನೇ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಒಂಟಿ ಆಗಿ ಇರಬೇಕೆನಿಸುತ್ತದೆ . ಇದಕ್ಕೆಲ್ಲಾ ಕಾರಣ ಮೆದುಳಿನಿಂದ ಇಡೀ ದೇಹದ ನರ ನಾಡಿಗಳಿಗೆಲ್ಲಾ ಸಂಚರಿಸುವ ಸಂಕೇತಗಳು . ಕಣ್ಣಿಗೆ ಕಾಣದೆ ವಿದ್ಯುತ್ತಿನ ರೀತಿ ಮೈ ಎಲ್ಲಾ ಸಂಚರಿಸುವ ಈ ಸಂಕೇತಗಳಿಗೆ ಇಡೀ ದೇಹವನ್ನೇ ನಿಯಂತ್ರಿಸುವ ಶಕ್ತಿ ಇರುತ್ತದೆ . ನಮ್ಮ ದೇಹದ ಎಲ್ಲಾ ಚಲನವಲನಗಳ ಮೇಲೆ ನಮ್ಮ ಮೆದುಳು ಸದಾ ಹದ್ದಿನ ಕಣ್ಣಿಟ್ಟಿರುತ್ತದೆ .

ಹಿಂಸೆಯ ಬಗ್ಗೆ ಯೋಚನೆ ಮಾಡುತ್ತ ಕುಳಿತರೆ ಸಂಕಟವೇ ಹೆಚ್ಚು

ನೀವು ಯಾವಾಗಲೂ ನಿಮ್ಮ ಜೀವನದಲ್ಲಿ ಎದುರಾದ ಕಹಿ ಘಟನೆಯನ್ನ ನೆನೆಯುತ್ತಾ ನೀವು ಪಟ್ಟ ನೋವು ಹಿಂಸೆಯನ್ನು ಮೆಲುಕು ಹಾಕುತ್ತಾ ಕುಳಿತಿದ್ದರೆ ನಿಮ್ಮ ದೇಹಕ್ಕೆ ಅದರಿಂದ ಸಂಕಟವೇ ಹೆಚ್ಚಾಗುತ್ತದೆ ಮತ್ತು ನಿಮ್ಮನ್ನು ಇನ್ನೂ ಕುಗ್ಗಿಸುತ್ತದೆ. ಹಿಂಸೆ ಎಂದರೆ ಸಾಮಾನ್ಯವಾಗಿ ಮನಸ್ಸಿಗೆ ನೋವಾಗುವುದು. ಮನಸ್ಸು ವ್ಯಥೆಪಟ್ಟರೆ ಅದನ್ನು ತಡೆದುಕೊಳ್ಳಲಾಗುವುದಿಲ್ಲ . ಉದಾಹರಣೆಗೆ ಯಾವಾಗಲಾದರೂ ಹಿಂದೆ ನೀವು ಅತಿಯಾಗಿ ಪ್ರೀತಿಸುವವರ ಬಳಿ ಏನಾದರೂ ಬಹಳ ಕೆಟ್ಟದ್ದಾಗಿ ಜಗಳ ಆಡಿದ್ದರೆ ಅವರು ಖಂಡಿತ ನಿಮ್ಮ ಮನಸ್ಸಿಗೆ ನೋವಾಗುವಂತೆ ಚುಚ್ಚಿ ಚುಚ್ಚಿ ಮಾತನ್ನಾಡಿರುತ್ತಾರೆ. ನೀವು ಎಂದಾದರೂ ಅಕಸ್ಮಾತಾಗಿ ಅದನ್ನು ನೆನೆಸಿಕೊಂಡರೆ ಅದರಿಂದ ನಿಮ್ಮ ಮನಸ್ಸಿಗೆ ಆಗುವ ಹಿಂಸೆ ಅಷ್ಟಿಷ್ಟಲ್ಲ . ಆ ಸಂಧರ್ಭ ಖಂಡಿತ ನಿಮ್ಮನ್ನು ಕೊರೆದು ತಿನ್ನುತ್ತದೆ. ನಿಮ್ಮನ್ನು ವಿವಾದಕ್ಕೆ ಈಡುಮಾಡಿದವರ ಅಂದಿನ ನಡೆ ಇಂದು ನಿಮ್ಮನ್ನು ಬೇರೊಬ್ಬರ ಬಳಿಯಲ್ಲಿ ನಡೆದ ಸಂದರ್ಭದ ಕ್ಷಣವನ್ನು ಮನಸಾರೆ ಹೇಳಿಕೊಂಡು ಪರಿಹಾರ ಮಾಡಿಕೊಳ್ಳಲೂ ಬಿಡುವುದಿಲ್ಲ .ನಿಮಗೆ ನೀವೇ ಸಾಂತ್ವನ ಹೇಳಿಕೊಂಡು ನಡೆದಿದ್ದನ್ನು ಮರೆಯಬೇಕು ಮತ್ತು ನಿಮ್ಮ ಮನಸ್ಸನ್ನು ಅದನ್ನೇ ಯೋಚನೆ ಮಾಡುವುದರಿಂದ ಬೇರೆಡೆಗೆ ತಿರುಗಿಸಿ ಹೊಸ ಆಲೋಚನೆಯ ಕಡೆ ಮುಖ ಮಾಡಬೇಕು .

ನಿಮಗೆ ಒಳ್ಳೆಯ ಆಲೋಚನೆಗಳು ಬಂದಷ್ಟೂ ನಿಮ್ಮ ಮೆದುಳಿನಲ್ಲಿ ಅದನ್ನು ಈಡೇರಿಸುವ ಉದ್ದೇಶಗಳು ಹೆಚ್ಚಾಗುತ್ತಾ ಹೋಗುತ್ತವೆ

ಬರೀ ನೋವುಗಳನ್ನು ನೆನೆದು ಕೊರುಗುವ ನಿಮ್ಮ ಮೆದುಳಿಗೆ ಒಂದಷ್ಟು ಬೇರೆ ಕೆಲಸ ಕೊಡಲು ಪ್ರಯತ್ನ ಮಾಡಿ .ಅಂದರೆ ಬೇರೆ ಯಾವುದಾದರೂ ವಿಷಯದ ಬಗ್ಗೆ ಚಿಂತನೆ ಮಾಡುವಂತೆ ಮಾಡಿ . ಆಗಲೂ ಕೂಡ ನಿಮ್ಮ ಮನಸ್ಸಿಗೆ ಮಂಕು ಕವಿದಂತೆ ಆಗಿ ಯಾವ ವಿಷಯದಲ್ಲೂ ಆಸಕ್ತಿಯೇ ಇಲ್ಲದಂತೆ ಆಗಬಹುದು . ಆದರೂ ಛಲ ಬಿಡದವರಂತೆ ಯಾವ ಕೆಟ್ಟ ಆಲೋಚನೆಗಳಿಗೂ ತಲೆ ಬಾಗದಂತೆ ನೀವು ನೀವಾಗಿ ಯೋಚಿಸಿ ನಿಮ್ಮ ಸುಂದರ ಜೀವನಕ್ಕೆ ಬೇಕಾದ ಮಾರ್ಗಗಳನ್ನು ಆಲೋಚಿಸುವುದನ್ನು ಪ್ರಯತ್ನಿಸಿದರೆ , ಖಂಡಿತ ನೀವು ಯಶಸ್ಸು ಕಂಡವರ ಪಟ್ಟಿಯಲ್ಲಿ ನಿಲ್ಲುತ್ತೀರಿ . ನಿಮ್ಮ ಭವಿಷ್ಯದ ನಡೆಗೆ ಬೇಕಾಗಿರುವುದು ಒಂದು ಗಟ್ಟಿಯಾದ ಮತ್ತು ಅಚಲವಾದ ಮನಸ್ಸು . ಅದು ನಿಮ್ಮಲ್ಲಿದ್ದರೆ ಖಂಡಿತ ಸಾಧನೆಯ ಉತ್ತುಂಗದ ಮೆಟ್ಟಿಲು ಹತ್ತುತ್ತೀರಿ .

ನಿಮ್ಮ ಭವಿಷ್ಯ ರೂಪುಗೊಳ್ಳಲು ಮುಖ್ಯ ಕಾರಣವೇ ನಿಮ್ಮ ಮೆದುಳು

ನಮ್ಮ ಜೀವನ ನಾವು ಹೇಗೆಲ್ಲಾ ಇರಬೇಕು ಅಂದುಕೊಳ್ಳುತ್ತೇವೆಯೋ ಮತ್ತು ಅದಕ್ಕಾಗಿ ಯಾವ ರೀತಿ ಪ್ರಾಮಾಣಿಕ ಪ್ರಯತ್ನ ಪಡುತ್ತೇವೆಯೋ ಆ ರೀತಿಯೇ ನಡೆದುಕೊಂಡು ಸಾಗುತ್ತಿರುತ್ತದೆ . ಭವಿಷ್ಯದ ಕನಸು ಕಂಡವರಲ್ಲಿ ಎಷ್ಟೋ ಜನ ತಮ್ಮ ಗುರಿ ಮುಟ್ಟಲಾಗದೆ ಅರ್ಧಕ್ಕೇ ಬೇರೆ ದಾರಿ ಹಿಡಿದು ಬದುಕುತ್ತಿರುತ್ತಾರೆ . ಅದಕ್ಕೆ ಕಾರಣ ಅವರ ಮನಸ್ಸಿನಲ್ಲಿ ಯಾವುದೇ ದೃಢವಾದ ಆಲೋಚನೆ ಇಲ್ಲದಿರುವುದು ಮತ್ತು ಅವರ ಮೇಲೆ ಅವರಿಗೇ ನಂಬಿಕೆ ಇಲ್ಲದಿರುವುದು . ಒಂದು ಸಣ್ಣ ಉದಾಹರಣೆ ತೆಗೆದುಕೊಂಡು ಹೇಳಬೇಕೆಂದರೆ , ನೀವು ಗಮನಿಸಿರಬಹುದು ಬೆಳಗ್ಗೆ ನೀವು ಎದ್ದ ತಕ್ಷಣ ಯಾವುದಾದರೂ ಸಂತೋಷಕ್ಕೆ ಕಾರಣವಾಗಿರುವ ವಿಷಯವನ್ನು ನೋಡಿದ್ದೇ ಅಥವಾ ಕೇಳಿದ್ದೇ ಆದರೆ , ಆ ಇಡೀ ದಿನ ನೀವು ಉಲ್ಲಾಸ ಭರಿತರಾಗಿ ಇರುತ್ತೀರಿ . ಅದೇ ಎದ್ದ ತಕ್ಷಣ ಏನಾದರೂ ನಿಮಗೆ ಆಗದವರ ಮುಖ ನೋಡಿದರೆ ಅಥವಾ ಯಾವುದಾದರೂ ಕೆಟ್ಟ ಸುದ್ಧಿ ಕೇಳಿದರೆ ಅಥವಾ ನೋಡಿದರೆ ಆ ದಿನ ಪೂರ್ತಿ ನಿಮಗೆ ಕೆಟ್ಟ ದಿನವೇ ಆಗಿರುತ್ತದೆ . ಇದಕ್ಕೆ ಕಾರಣ ನಿಮ್ಮ ಮೆದುಳು ಆ ರೀತಿ ಎಲ್ಲದಕ್ಕೂ ಸ್ಪಂದಿಸುತ್ತದೆ ಮತ್ತು ಅದೇ ಸಂದರ್ಭಗಳಿಗೆ ಹೋಲುವಂತೆ ಬದಲಾಗಿರುತ್ತದೆ .

Most Read: ಮೆದುಳನ್ನು ಚುರುಕಾಗಿಸುವ ಪ್ರಭಾವಶಾಲಿ ತಂತ್ರಗಳು

ನಿಮ್ಮ ಮೆದುಳನ್ನು ನೀವೇ ನಿಯಂತ್ರಿಸಬೇಕು

ನಿಮ್ಮ ಮೆದುಳು ಸದಾ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ . ಅದು ಒಂದು ರೀತಿಯ ಹುಚ್ಚು ಕುದುರೆ ಇದ್ದಂತೆ . ಮೆದುಳಿನಲ್ಲಿ ಅನೇಕ ರೀತಿಯ ಯೋಚನೆಗಳು ಬರುತ್ತಿರುತ್ತವೆ , ಹೋಗುತ್ತಿರುತ್ತವೆ . ಅವು ಕೆಟ್ಟ ಆಲೋಚನೆಗಳಾಗಿರಬಹುದು ಅಥವಾ ಒಳ್ಳೆಯ ಆಲೋಚನೆಗಳೂ ಕೂಡ ಆಗಿರಬಹುದು . ಯಾವುದನ್ನು ನೀವು ಸರಿಯಾಗಿ ಗ್ರಹಿಸಿ ಅದರ ಬಗ್ಗೆ ನಿಮ್ಮ ಅನುಭವ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟ ವಿಚಾರ . ಏಕೆಂದರೆ ಮನುಷ್ಯ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡರೆ ಮುಂದೆ ಒಳ್ಳೆಯ ದಾರಿಯಲ್ಲಿ ನಡೆಯುತ್ತಾನೆ . ಅದೇ ಕೆಟ್ಟ ಆಲೋಚನೆಯಲ್ಲಿ ಮೈ ಮರೆತನೆಂದರೆ ಕೆಟ್ಟವರ ಸಹವಾಸ ಮಾಡಿ ಗುರುತು ಸಿಗದಷ್ಟು ಹಾಳಾಗಿ ಹೋಗುತ್ತಾನೆ . ಆದ್ದರಿಂದ ನಿಮ್ಮ ಮುಂದೆಯೇ ಅನೇಕ ಆಯ್ಕೆಗಳಿದ್ದರೂ ಅವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ವಿವೇಚಿಸಿ ನಿಮ್ಮ ಮೆದುಳಿಗೆ ಒಂದು ಲಗಾಮು ಹಾಕಿ ನೀವು ಹೇಳಿದಂತೆ ನಿಮ್ಮ ಮೆದುಳು ಕೇಳಬೇಕು ಆ ರೀತಿ ನೀವು ನಿಮ್ಮ ಮೆದುಳನ್ನು ನಿಯಂತ್ರಿಸಬಹುದು .

ನಿಮ್ಮ ಮೆದುಳು ನೀವು ಯಾವ ರೀತಿ ಪ್ರೋಗ್ರಾಮ್ ಮಾಡಿ ಪಾಲಿಸುವಂತೆ ಹೇಳುತ್ತೀರೋ ಅದೇ ರೀತಿ ನಡೆಯುತ್ತದೆ

ಮನುಷ್ಯನ ಮೆದುಳನ್ನು ಕಂಪ್ಯೂಟರ್ ಗೆ ಹೋಲಿಸಲಾಗಿದೆ . ಏಕೆಂದರೆ ಕಂಪ್ಯೂಟರ್ ಅಥವಾ ಗಣಕ ಯಂತ್ರ ಮೊದಲೇ ಯಾವ ರೀತಿ ಅದರಲ್ಲಿ ಪ್ರೋಗ್ರಾಮ್ ಮಾಡಿ ತಯಾರಿಸಿರುತ್ತಾರೋ ಅದೇ ರೀತಿ ಮತ್ತು ಅದೇ ಸಾಫ್ಟ್ವೇರ್ ನ ಅನುಸಾರವಾಗಿಯೇ ಕೆಲಸ ಮಾಡುತ್ತದೆ . ನಮಗೆ ಬೇಕಾದ ಪ್ರೋಗ್ರಾಮ್ ಅನ್ನು ಇನ್ಸ್ಟಾಲ್ ಮಾಡುತ್ತೇವೆ ಮತ್ತು ಬೇಡದಿರುವ ಪ್ರೋಗ್ರಾಮ್ ಅನ್ನು ಅನ್ಇನ್ಸ್ಟಾಲ್ ಮಾಡುತ್ತೇವೆ . ಹಾಗೆಯೇ ನಮ್ಮ ಮೆದುಳು ಕೂಡ . ನಾವು ಇಂದು ಇಂತಹ ಕೆಲಸ ಮಾಡಬೇಕೆಂದು ಮೊದಲೇ ಅದಕ್ಕೆ ಮುನ್ಸೂಚನೆ ಕೊಟ್ಟಿರುತ್ತೇವೆ . ಅದರಂತೆಯೇ ಆ ಕೆಲಸಕ್ಕೆ ಬೇಕಾದ ಪೂರ್ವ ತಯಾರಿಯನ್ನು ನಮ್ಮ ಮೆದುಳು ಮೊದಲೇ ಯೋಚನೆ ಮಾಡಿಕೊಂಡು ಅದರಂತೆಯೇ ನಮಗೆ ಆ ಸಮಯಕ್ಕೆ ಸರಿಯಾಗಿ ಜ್ಞಾಪಿಸುತ್ತದೆ ಮತ್ತು ಕೆಲಸ ಮಾಡಬೇಕಾದರೆ ಸೂಕ್ತ ಸಲಹೆಗಳನ್ನು ಕೊಟ್ಟು ಸಹಾಯ ಮಾಡುತ್ತದೆ . ಅದೇ ಬೇಡದಿರುವ ಕೆಲಸಕ್ಕೆ ಹೋಗಬೇಡವೆಂದು ನಮಗೆ ಮುನ್ಸೂಚನೆ ಕೊಡುತ್ತದೆ .

ನಿಮ್ಮ ಸೆಂಟಿಮೆಂಟ್ ಗಳ ಮೂಲ ನಿಮ್ಮ ಮೆದುಳೇ

ಸಾಮಾನ್ಯವಾಗಿ ಭಾವನೆಗಳಿಗೂ ಮತ್ತು ಭಾವೋದ್ರೇಕಗಳಿಗೂ ಬಹಳ ವ್ಯತ್ಯಾಸವಿದೆ . ನಾವು ಏನನ್ನಾದರೂ ನೋಡಿದರೆ ಅದರ ಬಗ್ಗೆ ಕೆಲವು ಭಾವನೆಗಳು ಬರುವುದು ಸಹಜ . ಅದೇ ವಸ್ತುವನ್ನು ಅಥವಾ ವಿಷಯವನ್ನು ತಲೆಗೆ ಹಚ್ಚಿಕೊಂಡು ಯೋಚಿಸತೊಡಗಿದರೆ ಅದು ಆ ವಸ್ತುವಿನ ಮೇಲೆ ಅಥವಾ ವಿಷಯದ ಮೇಲೆ ಭಾವೋದ್ರೇಕವಾಗಿ ಬದಲಾಗುವುದು . ಅಚ್ಚರಿ ಎಂದರೆ ಎಲ್ಲಾ ಭಾವನೆಗಳೂ ಭಾವೋದ್ರೇಕಗಳಾಗಿ ಬದಲಾಗುವುದಿಲ್ಲ , ಆದರೆ ಎಲ್ಲಾ ಭಾವೋದ್ರೇಕಗಳಿಗೂ ಭಾವನೆಗಳೇ ಮೂಲ . ಇದಕ್ಕೆಲ್ಲಾ ಸೂತ್ರದಾರ ನಮ್ಮ ಮೆದುಳು ಯಾವ ಭಾವನೆಗಳನ್ನು ಭಾವೋದ್ರೇಕಗಳಾಗಿ ಬದಲಾಯಿಸಬೇಕು ಎಂಬುದನ್ನು ಚೆನ್ನಾಗಿ ಆಲೋಚಿಸಿ ನಮ್ಮನ್ನು ಆಂತಹ ವಿಷಯಗಳಿಗೆ ಹೆಚ್ಚು ಒತ್ತು ಕೊಟ್ಟು ಅದರ ಬಗ್ಗೆ ವಿಶೇಷ ಕಾಳಜಿ ಹುಟ್ಟುವಂತೆ ಮಾಡುತ್ತದೆ .

ನೀವು ನಿಮ್ಮ ಮೆದುಳಿನಿಂದ ಏನನ್ನು ಬೇಕಾದರೂ ಸಾಧಿಸಬಹುದು :

ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಮನುಷ್ಯ ಮಾತ್ರ ಹಾಗೆ ಇರಲು ಸಾಧ್ಯವೇ ? ಮನುಷ್ಯನೂ ಸಹ ಬದಲಾವಣೆ ಬಯಸುವುದು ಸಹಜ . ಅದರಂತೆಯೇ ತಾನಿರುವ ಪರಿಸ್ಥಿತಿಗಿಂತ ಇನ್ನೂ ಉತ್ತಮ ರೀತಿಯಲ್ಲಿ ಬದುಕಬೇಕೆಂದು ಕನಸು ಕಾಣುತ್ತಾನೆ .ಕನಸಿಗೆ ಕಾಸಿಲ್ಲ ಎಂಬಂತೆ ಅವನಿಗೆ ನನ್ನ ಮುಂದಿನ ಜೀವನ ಇಂತಹ ಎತ್ತರದ ಮಟ್ಟದಲ್ಲಿರಬೇಕು ಎಂಬ ಆಸೆ ಇರುತ್ತದೆ . ಅದರಂತೆಯೇ ಅದೆಷ್ಟೇ ಅಗಾಧವಾದ ಕೆಲಸವಾದರೂ ಗಟ್ಟಿ ಮನಸ್ಸು ಮಾಡಿ ತನಗೆ ಬರುವ ಅಡೆ ತಡೆಗಳನ್ನು ತನ್ನ ಮೆದುಳಿನ ಬುದ್ಧಿ ಶಕ್ತಿಯಿಂದ ಗೆದ್ದು ತಾನು ಅಂದುಕೊಂಡಿರುವ ಗುರಿಯನ್ನು ಮುಟ್ಟುತ್ತಾನೆ . ಅವನ ದೇಹ ಎಷ್ಟು ಚಿಕ್ಕದು ಅಥವಾ ದೊಡ್ಡದು ಎಂಬ ಪ್ರಶ್ನೆಯೇ ಬರುವುದಿಲ್ಲ .ಕೇವಲ ಆತನ ಸಾಧನೆಯೇ ಎಲ್ಲರ ಮನ ಮುಟ್ಟುತ್ತಿರುತ್ತದೆ . ಅದಕ್ಕೆ ಸಹಾಯ ಮಾಡಿರುವುದು ಮಾತ್ರ ಆತನ ಮೆದುಳು ಮತ್ತು ಅದರಲ್ಲಿರುವ ಬುದ್ಧಿ ಶಕ್ತಿ

ಈ ಲೇಖನದ ಮುಖ್ಯ ಅಂಶ

ನಿಮ್ಮ ದೇಹ ಒಂದು ಯಂತ್ರವಿದ್ದಂತೆ . ಅದರಲ್ಲಿರುವ ಮೆದುಳು ಒಂದು ಕಂಪ್ಯೂಟರ್ ಇದ್ದಂತೆ . ಅದನ್ನು ನೀವು ನಿಮಗೆ ಬೇಕಾದ ಹಾಗೆ ಪ್ರೋಗ್ರಾಮ್ ಮಾಡಿ ಉಪಯೋಗಿಸಬಹುದು . ಮನುಷ್ಯ ಇತರ ಎಲ್ಲಾ ಪ್ರಾಣಿಗಳಿಗೆ ಹೋಲಿಸಿದರೆ ಬುದ್ಧಿವಂತ ಎಂದು ಸಾಬೀತಾಗಿದೆ. ಹಾಗಿದ್ದ ಮೇಲೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬ ಸಾಮಾನ್ಯ ಪ್ರಜ್ಞೆ ಎಲ್ಲರಿಗೂ ಇದ್ದೆ ಇರುತ್ತದೆ .ಆದ್ದರಿಂದ ನಿಮ್ಮ ಮುಂದಿನ ಜೀವನ ಹೇಗಿರಬೇಕು, ಹೇಗಿದ್ದರೆ ನೀವು ಒಂದು ಗಟ್ಟಿಯಾದ ನೆಲೆಯಲ್ಲಿರುತ್ತೀರಿ ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ . ಅದರಂತೆ ನಿಮ್ಮ ಮೆದುಳನ್ನು ಉಪಯೋಗಿಸಿಕೊಳ್ಳಿ.

Most Read: ಮೆದುಳು ಎಂಬ ಬ್ರಹ್ಮಾಂಡದಲ್ಲಿ ಅಚ್ಚರಿಯ ಸಂಗತಿ

ಪುನರಾವರ್ತನೆ

ನೆನಪಿರಲಿ ನಿಮ್ಮ ಮೆದುಳು ನೀವು ಹೇಳಿದ ಹಾಗೆ ಕೇಳಿದರೆ , ನಿಮಗೆ ಇಷ್ಟವಾಗುವ ಒಬ್ಬ ಒಳ್ಳೆಯ ಕೆಲಸಗಾರ .ಅದೇ ಒಂದು ವೇಳೆ ಅದು ಹೇಳಿದ ಹಾಗೆಲ್ಲಾ ನೀವು ಕೇಳುತ್ತಾ ಹೋದರೆ ನಿಮ್ಮ ಜೀವನ ಕರುಣೆ ಇಲ್ಲದ ಒಂದು ಕತ್ತಲೆ ಕೋಣೆಯಾಗಿ ಬದಲಾಗುವುದಂತೂ ಸತ್ಯ . ಮರದಿಂದ ಮರಕ್ಕೆ ಹಾರುವ ಕೋತಿಯ ಹಾಗೆ ಸದಾ ಚಂಚಲವಾಗಿರಲು ಬಯಸುವ ಈ ಮನಸ್ಸಿಗೆ ಮೂಗು ದಾರ ಹಾಕಿ ನಿಮಗೆ ಬೇಕಾದ ಹಾಗೆ ಅದನ್ನು ಬಳಸಿಕೊಳ್ಳುವುದನ್ನು ರೂಡಿ ಮಾಡಿಕೊಳ್ಳಬೇಕು .

English summary

Our mind has not one but 8 supernatural powers!

Typically we are not cognizant how our cerebrum functions and now and then we simply let different conditions program us. There are a considerable measure of studies that demonstrated to us how the human mind functions. The human cerebrum is equipped for anything!The psyche has an unbounded stockpiling where the majority of our recollections and encounters go and remain. This shows us precisely with what sort of speed and memory our mind really works at. In any case, more often than not that is something that individuals don't know about. Give us a chance to investigate the otherworldly forces of our psyche…
X