ನವರಾತ್ರಿ ವಿಶೇಷ: ಒಂಬತ್ತು ದಿನ ತಪ್ಪದೇ ಪಠಿಸಿ ಈ ಪೂಜಾ ಮಂತ್ರಗಳು

By: Jayasubramanya
Subscribe to Boldsky

ನವರಾತ್ರಿ ಪೂಜೆಯನ್ನು ಒಂಬತ್ತು ದಿನಗಳ ಕಾಲ ಆಚರಿಸುವುದರ ಹಿಂದೆ ಐತಿಹಾಸಿಕ ಅಂಶವೊಂದಿದ್ದು ದುರ್ಗಾ ಮಾತೆಯು ದುಷ್ಟರನ್ನು ದಮನ ಮಾಡುವುದಕ್ಕಾಗಿ ಒಂಬತ್ತು ಅವತಾರಗಳಲ್ಲಿ ಧರೆಗಿಳಿದರು ಎಂಬ ನಂಬಿಕೆ ಇದೆ. ಈ ಒಂಭತ್ತು ಅವತಾರಗಳೂ ದೇವಿಗಿರುವ ಮಹತ್ವವನ್ನು ಸಾರಿ ಹೇಳುತ್ತಿದ್ದು ದೇಶದೆಲ್ಲೆಡೆ ದೇವಿಯನ್ನು ಈ ಒಂಭತ್ತು ದಿನಗಳ ಕಾಲ ಒಂಬತ್ತು ಬಗೆಯ ಅಲಂಕಾರಗಳಲ್ಲಿ ಪ್ರತಿಷ್ಠಾಪಿಸುತ್ತಾರೆ.

ನವರಾತ್ರಿ ಹಬ್ಬದಂದು ಹೀಗೆಲ್ಲಾ ಮಾಡಬೇಡಿ! ದುರ್ಗೆ ಕುಪಿತಳಾಗುವಳು!

ಪ್ರತಿಯೊಂದು ದಿನವೂ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ನಡೆಸುತ್ತಾರೆ ಮತ್ತು ದೇವಿಗೆ ಸೀಮಿತವಾದ ಮಂತ್ರಗಳನ್ನು ಪಠಿಸುತ್ತಾರೆ. ನಮ್ಮ ದೇಶದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸಂಪ್ರದಾಯಗಳನ್ನು ಆಚರಿಸುವುದರಿಂದ ಅಲ್ಲಿನ ರೀತಿ ರಿವಾಜುಗಳಿಗೆ ಪೂರಕವಾಗಿ ನವರಾತ್ರಿಯನ್ನು ಆಚರಿಸುತ್ತಾರೆ. ಆದರೆ ದುರ್ಗಾಮಾತೆಯನ್ನು ಒಂಬತ್ತು ದಿನವೂ ಪೂಜಿಸುವ ಕ್ರಮ ಎಲ್ಲೆಡೆ ಸರ್ವೇ ಸಾಮಾನ್ಯವಾಗಿರುತ್ತದೆ. ಇಂದಿನ ಲೇಖನದಲ್ಲಿ ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ....

ನವರಾತ್ರಿ ಹಬ್ಬ

ನವರಾತ್ರಿ ಹಬ್ಬ

ಮಾತೆ ದುರ್ಗೆಯನ್ನು ಈ ಒಂಬತ್ತು ದಿನವೂ ಪೂಜಿಸುವುದರಿಂದ ದೇವಿಗೆ ಸಂಬಂಧಪಟ್ಟ ಮಂತ್ರಗಳನ್ನು ಪಠಿಸಿ ಅವರನ್ನು ಬೇರೆ ಬೇರೆ ಬಗೆಯಲ್ಲಿ ಪೂಜಿಸಲಾಗುತ್ತದೆ.

ನವರಾತ್ರಿ ಪೂಜೆ

ನವರಾತ್ರಿ ಪೂಜೆ

ಈ ಒಂಬತ್ತು ದಿನಗಳಲ್ಲೂ ವಿಧಿವಿಧಾನವಾಗಿ ನವರಾತ್ರಿ ಪೂಜೆಯನ್ನು ನೆರವೇರಿಸಲಾಗುತ್ತದೆ. ದೀಪವನ್ನು ಬೆಳಗಿ ದೇವಿಗೆ ಪ್ರಸಾದವನ್ನು ಅರ್ಪಿಸಿ ಪೂಜೆಯನ್ನು ಮಾಡಲಾಗುತ್ತದೆ. ಕರ್ಪೂರವನ್ನು ಹಚ್ಚಿ ಆರತಿ ಬೆಳಗಿ ಭಕ್ತರಿಗೆ ಆರತಿಯನ್ನು ಮತ್ತು ಪ್ರಸಾದವನ್ನು ಹಂಚಲಾಗುತ್ತದೆ.

ಪ್ರಥಮ ದಿನ: ಶಿಲ್ಪಪುತ್ರಿ ಪೂಜೆ

ಪ್ರಥಮ ದಿನ: ಶಿಲ್ಪಪುತ್ರಿ ಪೂಜೆ

ಪರ್ವತಗಳ ಪುತ್ರಿ ಶಿಲ್ಪಪುತ್ರಿಯ ಅವತಾರದಲ್ಲಿ ಈ ದಿನ ದೇವಿಗೆ ಪೂಜೆಯನ್ನು ನಡೆಸಲಾಗುತ್ತದೆ. ದೇವಿಯನ್ನು ಶಿಲ್ಪಪುತ್ರಿಯ ರೂಪದಲ್ಲಿ ಪ್ರತಿಷ್ಠಾಪಿಸಿ ಹಿಂಭಾಗದಲ್ಲಿ ಪರ್ವತ, ಪರಿಸರ, ದನಕರುಗಳ ಪ್ರತಿಮೆಗಳನ್ನು ಇರಿಸಲಾಗುತ್ತದೆ. ಆಕೆಯ ಶಿರಭಾಗದಲ್ಲಿ ಅರ್ಧಚಂದ್ರ ಆಕೃತಿ ಇರುತ್ತದೆ. ಮಂತ್ರ: ಓಂ ದೇವಿ ಶಿಲ್ಪಪುತ್ರಿಯೇ ಸ್ವಾಹಾ ವಂದೇ ವಂಚಿತ್ ಲಾಭಾಯ, ಚಂದ್ರಕೃತಿಶೇಖರಂ ವೃಷಾರುಧಂ ಶೂಲಧಾರಂ ಶಿಲ್ಪಪುತ್ರಿಂ ಯಶಸ್ವಿನಿಂ

ಎರಡನೇ ದಿನ: ಬ್ರಹ್ಮಚಾರಿಣಿ ಪೂಜೆ

ಎರಡನೇ ದಿನ: ಬ್ರಹ್ಮಚಾರಿಣಿ ಪೂಜೆ

ತನ್ನ ಕೈಗಳಲ್ಲಿ ಗುಲಾಬಿ ಮತ್ತು ಕಮಂಡಲವನ್ನು ಹಿಡಿದುಕೊಂಡು ಜ್ಞಾನದ ಸ್ವರೂಪವಾಗಿ ಈ ದಿನ ಕಂಡುಬರುತ್ತಾರೆ. ಮಂತ್ರ: ಓಂ ದೇವಿ ಬ್ರಹ್ಮಚಾರಿಣಿ ನಮಃ ದಧನ ಕರ ಪದ್ಮಾಭಯಮಕ್ಷಮಾಲಾ ಕಮಂಡಲೂ ದೇವಿ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ

ಮೂರನೇ ದಿನ: ಚಂದ್ರಗಂಟ ಪೂಜೆ

ಮೂರನೇ ದಿನ: ಚಂದ್ರಗಂಟ ಪೂಜೆ

ಹುಲಿಯ ಮೇಲೆ ಕುಳಿತುಕೊಂಡು ತನ್ನ ಕೈಯಲ್ಲಿ ದೊಡ್ಡ ಘಂಟೆಯನ್ನು ಹಿಡಿದುಕೊಂಡ ಅವತಾರದಲ್ಲಿ ದೇವಿ ಈ ದಿನ ಕಾಣಿಸಿಕೊಳ್ಳುತ್ತಾರೆ. ಮಂತ್ರ: ಓಂ ದೇವಿ ಚಂದ್ರಘಂಟಾಯ ನಮಃ ಪಿಂಡಜ್ ಪ್ರವರ್ಧ್ ಚಂದ್ರಕೋಪಾಸ್ತ್ರಕರಿಯುತ ಪ್ರಸಾದಂ ತನುತೇ ಮಧ್ಯಂ ಚಂದ್ರಘಂಟೇತಿ ವಿಶ್ರುತಾ

ನಾಲ್ಕನೇ ದಿನ: ಕೂಷ್ಮಾಂಡಾ ಪೂಜೆ

ನಾಲ್ಕನೇ ದಿನ: ಕೂಷ್ಮಾಂಡಾ ಪೂಜೆ

ವಿಶ್ವವನ್ನು ರಚಿಸಿದ ಕೂಷ್ಮಾಂಡಾ ರೂಪದಲ್ಲಿ ಈ ದಿನ ದೇವಿಗೆ ಪೂಜೆಯನ್ನು ನಡೆಸಲಾಗುತ್ತದೆ. ಸಿಂಹಧಾರಿಣಿಯಾಗಿ ಏಳು ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು ದೇವಿ ಇಂದು ಕಂಡು ಬರುತ್ತಾರೆ. ತನ್ನ ಎಂಟನೇ ಕೈಯಲ್ಲಿ ಗುಲಾಬಿಯನ್ನು ದೇವಿ ಹಿಡಿದುಕೊಂಡಿರುತ್ತಾರೆ. ಆಕೆಯ ಮಂತ್ರ ಓಂ ದೇವಿ ಕೂಷ್ಮಾಂಡಾಯ ನಮಃ ಸುರಸಂಪೂರ್ಣ ಕಲಶಂ ರುಧಿರಾಪ್ಲುತುಮೇವ ಚ ದಧನ ಹಸ್ತಪದ್ಮಭಯಮ್ ಕುಶ್ಮಾಂಡಾ ಶುಭದಸ್ತು ಮೇ

ನವರಾತ್ರಿ ವಿಶೇಷ: ದೇವಿಯ ಕೂಷ್ಮಾಂಡಾ ಅವತಾರದ ಹಿನ್ನೆಲೆ....

ಐದನೇ ದಿನ: ಸ್ಕಂದಮಾತಾ ಪೂಜೆ

ಐದನೇ ದಿನ: ಸ್ಕಂದಮಾತಾ ಪೂಜೆ

ಈ ದಿನ ಸ್ಕಂದ ಮಾತಾ ರೂಪದಲ್ಲಿ ದೇವಿ ಕಾಣಿಸಿಕೊಳ್ಳುತ್ತಾರೆ. ಕಾರ್ತಿಕೇಯನ ತಾಯಿಯಾಗಿ ದೇವಿ ಈ ಅವತಾರದಲ್ಲಿ ಪೂಜಿಸಲ್ಪಡುತ್ತಾರೆ. ಆರು ಮುಖದ ಕಾರ್ತಿಕೇಯ ಆಕೆಯ ಮಂಡಿಲಲ್ಲಿ ಇರುತ್ತಾರೆ. ಮಂತ್ರ: ಓಂ ದೇವಿ ಸ್ಕಂದಮಾತೆಯೇ ನಮಃ ಸಿನ್ಹಸಂಘೂತಂ ನಿತ್ಯಂ ಪದ್ಮನಚಿತ್ ಕರ್ಡವಾಯಾ ಶುಭಾಸ್ತು ಸದಾ ದೇವಿ ಸ್ಕಂದಮಾತಾಯ ಯಶಸ್ವಿನಿ

ಆರನೇ ದಿನ: ಕಾತ್ಯಾಯಿನೀ ಪೂಜೆ

ಆರನೇ ದಿನ: ಕಾತ್ಯಾಯಿನೀ ಪೂಜೆ

ಆರನೇ ದಿನ ದೇವಿ ಕಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ. ಕಾರ್ತಿಕೇಯ ಋಷಿಯ ಪ್ರಾರ್ಥನೆಯಿಂದ ದೇವಿ ಕಾತ್ಯಾಯಿನೀ ಅವತಾರವನ್ನು ಎತ್ತಿದರು ಎಂಬುದಾಗಿ ಪುರಾಣ ಹೇಳುತ್ತದೆ. ಸಿಂಹದ ಮೇಲೆ ಆಕೆ ಕುಳಿತಿರುತ್ತಾರೆ ಮತ್ತು ಮೂರು ಕಣ್ಣುಗಳನ್ನು ಹೊಂದಿರುತ್ತಾರೆ ಆಕೆಯ ತಲೆಯಲ್ಲಿ ಅರ್ಧಚಂದ್ರನ ಆಕೃತಿ ಇರುತ್ತದೆ. ಮಂತ್ರ: ಓಂ ದೇವಿ ಕಾತ್ಯಾಯಿನೀ ನಮಃ ಚಂದ್ರಹಾಸೊಜ್ಜವಿ ಕಾರಾ ಶಾರ್ದೂಲವರವಾಹನ ಕಾತ್ಯಾಯಿನೀ ಶುಭಂ ದದ್ಯಾದ್ ದೇವಿ ದಾನಾವಾಗಾತಿನಿ

ಏಳನೇ ದಿನ: ಕಾಲರಾತ್ರಿ ಪೂಜೆ

ಏಳನೇ ದಿನ: ಕಾಲರಾತ್ರಿ ಪೂಜೆ

ಕಾಳಿಯ ರೂಪದಲ್ಲಿ ಈ ದಿನ ದೇವಿ ಅವತಾರವನ್ನು ಎತ್ತಿರುತ್ತಾರೆ. ಯಾವುದೇ ಆಭರಣಗಳನ್ನು ಧರಿಸದೆಯೇ ರುಂಡಗಳನ್ನೇ ಹಾರವನ್ನಾಗಿ ದೇವಿ ಈ ದಿನ ಕಂಡುಬರುತ್ತಾರೆ. ಮಂತ್ರ: ಓಂ ದೇವಿ ಕಾಲಾರಾತ್ರಾಯೇ ನಮಃ ಏಕವೇಣಿ ಜಪಕರ್ಣಪೂರಾ ನಗ್ನ ಕರಾಸ್ಥಿತಾ ಲಂಭೋಷ್ಟಿ ಕಾರ್ಣಿಕಾ ಕರ್ಣಿ ತೈಲಾಭಯಾಕ್ಷರಿರಿಣಿ ವಾಂ ಪಾದಾಲ್ಲೋಲ್ಲೊಹಲ್ಲತಾ ಕಂಠಕುಭೂಷಣ ಭರ್ಧನಾ ಮೂರ್ಧಂ ಧವಾಜಾ ಕೃಷ್ಣ ಕಾಲಾರಾತ್ರಿಭಯಂಕರಿ

ಎಂಟನೇ ದಿನ: ಮಹಾಗೌರಿ ಪೂಜೆ

ಎಂಟನೇ ದಿನ: ಮಹಾಗೌರಿ ಪೂಜೆ

ಎಂಟನೇ ದಿನ ಮಾಹಾಗೌರಿಯನ್ನು ಪೂಜಿಸಲಾಗುತ್ತದೆ. ತನ್ನ ಹದಿನಾರನೇ ವಯಸ್ಸಿನಲ್ಲಿ ಆಕೆ ಯವ್ವೌನಕ್ಕೆ ಕಾಲಿರಿಸಿದ್ದರು. ಕೈಯಲ್ಲಿ ಡಮರುವನ್ನು ಆಕೆ ಹಿಡಿದುಕೊಂಡಿದ್ದಾರೆ. ಬಿಳಿ ದಿರಿಸನ್ನು ಆಕೆ ಧರಿಸಿದ್ದಾರೆ ಮಂತ್ರ ಓಂ ದೇವಿ ಮಹಾಗೌರಿ ನಮಃ ಶ್ವೇತೇ ವೃಷೇ ಸಮುದ್ರ ಶ್ವೇತಾಂಭರ್ಧರ ಶುಚಿನ್ ಮಹಾಗೌರಿ ಶುಭಂ ದದ್ಯಾನ್‌ಮಹಾದೇವ್ ಪ್ರಮೋಧಾ

ಒಂಬತ್ತನೇ ದಿನ: ಸಿದ್ಧಿದಾತ್ರಿ ಪೂಜೆ

ಒಂಬತ್ತನೇ ದಿನ: ಸಿದ್ಧಿದಾತ್ರಿ ಪೂಜೆ

ಈ ದಿನ ಸಿದ್ಧಿದಾತ್ರಿ ಹೆಸರಿನಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಅರ್ಧನಾರೀಶ್ವರ ರೂಪದಲ್ಲಿ ದೇವಿ ಅವತಾರವನ್ನೆತ್ತಿರುತ್ತಾರೆ. ಶಿವ ಮತ್ತು ಪಾರ್ವತಿ ದೇವಿಯ ಒಂದಾದ ರೂಪ ಅರ್ಧನಾರೀಶ್ವರ. ಸಿಂಹದ ಮೇಲೆ ಆಸೀನರಾಗಿ ಕೈಯಲ್ಲಿ ತಾವರೆ ಹೂವನ್ನು ದೇವಿ ಹಿಡಿದುಕೊಂಡಿರುತ್ತಾರೆ. ಮಂತ್ರ: ಓಂ ದೇವಿ ಸಿದ್ಧಿದಾತ್ರೆಯೇ ನಮಃ ಸಿದ್ಧ ಗಂಧರ್ವ ಯಕ್ಷಾಧೈರ್ಯಸುರೈಮರಾಪಿ ಸೇವ್ಯಾಮಾನಾ ಸದಾಭುಯಾತ್ ಸಿದ್ಧಿದಾಯಿನಿ

ಬೇರೆ ಬೇರೆ ವಿಧಾನದಲ್ಲಿ ನವರಾತ್ರಿ ಪೂಜೆ

ಬೇರೆ ಬೇರೆ ವಿಧಾನದಲ್ಲಿ ನವರಾತ್ರಿ ಪೂಜೆ

ಒಂಬತ್ತನೇ ದಿನ ಸಿದ್ಧಿದಾತ್ರಿ ಪೂಜೆಯನ್ನು ನೆರವೇರಿಸಿ ದುರ್ಗಾಪೂಜೆಯನ್ನು ಮುಗಿಸಲಾಗುತ್ತದೆ. ಈ ದಿನ 5 ಮತ್ತು 12 ಹುಡುಗಿಯರನ್ನು ಆಹ್ವಾನಿಸಿ ಅವರ ಕಾಲುಗಳನ್ನು ತೊಳೆದು ಅರಶಿನ ಗಂಧವನ್ನು ಹಚ್ಚಲಾಗುತ್ತದೆ. ದುರ್ಗಾ ಮಾತೆಯಂತೆ ಆ ಕನ್ಯೆಯರನ್ನು ಕಂಡು ಅವರಿಗೆ ವಿಶೇಷ ತಿನಿಸನ್ನು ನೀಡಲಾಗುತ್ತದೆ. ನಂತರ ಅವರಿಗೆ ಕಾಣಿಕೆಗಳನ್ನು ಅರ್ಪಿಸಲಾಗುತ್ತದೆ. ಅವರಿಗೆ ನೀಡುವ ಯಾವುದೇ ವಸ್ತುಗಳು ದುರ್ಗೆಗೆ ಸೇರುತ್ತದೆ ಎಂಬ ನಂಬಿಕೆ ಇದೆ.

ನವರಾತ್ರಿ ದಿನಗಳ ಪ್ರಯೋಜನಗಳು

ನವರಾತ್ರಿ ದಿನಗಳ ಪ್ರಯೋಜನಗಳು

ಒಂಭತ್ತು ದಿನ ದುರ್ಗಾ ಸಪ್ತಸತಿಯನ್ನು ಓದುವುದರಿಂದ ದೇವಿಯ ಆಶೀರ್ವಾದವನ್ನು ನಾವು ಪಡೆದುಕೊಳ್ಳಬಹುದಾಗಿದೆ ಮತ್ತು ಇದು ತುಂಬಾ ಪವಿತ್ರವಾದುದಾಗಿದೆ. ಅಂಗಡಿಯಿಂದ ಈ ಪುಸ್ತಕವನ್ನು ಹೊಸದಾಗಿ ಕೊಂಡುಕೊಳ್ಳುತ್ತಾರೆ ಮತ್ತು ಪೂಜೆಯ ಆರಂಭ ದಿನ ಪುಸ್ತಕಕ್ಕೂ ಪೂಜೆಯನ್ನು ನಡೆಸಲಾಗುತ್ತದೆ. ಇದರಲ್ಲಿರುವ ಅಧ್ಯಾಯಗಳನ್ನು ಒಂಭತ್ತು ಭಾಗಗಳನ್ನಾಗಿ ಮಾಡಲಾಗುತ್ತದೆ ಮತ್ತು ಒಂಭತ್ತು ದಿನ ಪೂರ್ಣಗೊಳ್ಳುವಂತೆ ಓದಲಾಗುತ್ತದೆ.

ದುರ್ಗಾ ಸಪ್ತಸತಿ ಪೂಜೆ

ದುರ್ಗಾ ಸಪ್ತಸತಿ ಪೂಜೆ

ಈ ಪುಸ್ತಕದಲ್ಲಿ ದುರ್ಗಾಮಾತೆಯ ಶಕ್ತಿಯನ್ನು ಅವರು ಅವತಾರವೆತ್ತಿರುವ ಕಾರಣವನ್ನು ಅವರ ಸಾಹಸವನ್ನು ಬರೆಯಲಾಗಿದೆ. ಈ ಪುಸ್ತಕವನ್ನು ಓದಿದವರನ್ನು ದೇವಿಯು ಅನುಗ್ರಹಿಸುತ್ತಾರೆ ಮತ್ತು ಕಷ್ಟದ ಸಮಯದಲ್ಲಿ ಅವರ ಕೈಹಿಡಿಯುತ್ತಾರೆ. ನವರಾತ್ರಿ ಪೂಜೆಯು ತುಂಬಾ ಪವಿತ್ರ ಮತ್ತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ.

English summary

Navratri Puja: Mantras and Vidhi

Navratri festival is dedicated to worshipping the nine forms of Durga. Every day during the nine days of navratri, one particular form is made the central deity and pujas are performed with the chanting of the mantra meant for the specific deity.
Subscribe Newsletter