'ಓಂ ನಮಃ ಶಿವಾಯ' ಪಠಿಸಿದರೆ, ಸಮಸ್ಯೆಗಳು ದೂರ ಬಲುದೂರ...

Posted By: manu
Subscribe to Boldsky

ಹಿಂದೂ ಪುರಾಣಗಳ ಪ್ರಕಾರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಭೂಮಿಯನ್ನು ಸೃಷ್ಟಿಸಿದ್ದಾರೆ. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ವಿಷ್ಣು ಅದಕ್ಕೆ ಜೀವ ನೀಡುತ್ತಾನೆ ಮತ್ತು ಮಹೇಶ್ವರ ಎಲ್ಲವನ್ನೂ ಲಯಗೊಳಿಸುತ್ತಾನೆ ಎಂದು ನಂಬಲಾಗಿದೆ. ಈಶ್ವರ ಸೃಷ್ಟಿಯಲ್ಲಿ ಇರುವ ಕೆಟ್ಟದನ್ನು ತನ್ನ ಮೂರನೇ ಕಣ್ಣಿನಿಂದ ನಾಶಗೊಳಿಸುತ್ತಾನೆ ಎನ್ನಲಾಗುತ್ತದೆ. ಇದಕ್ಕಾಗಿಯೇ ಆತನಿಗೆ ದೇವಾದಿದೇವ ಎನ್ನಲಾಗುತ್ತದೆ.   ಮಹಾನ್ ಶಕ್ತಿಸ್ವರೂಪ ಮಹಾಮೃತ್ಯುಂಜಯ ಮಂತ್ರದ ಮಹತ್ವ

ಶಿವನನ್ನು ಪೂಜಿಸುವವರು ಹೆಚ್ಚಾಗಿ ನಮಃ ಶಿವಾಯ ಎನ್ನುವ ಮಂತ್ರವನ್ನು ಪಠಿಸುತ್ತಾ ಇರುತ್ತಾರೆ. ಆದರೆ ಈ ಮಂತ್ರ ಕೇವಲ ಶಿವನ ಭಕ್ತರಿಗಾಗಿ ಮಾತ್ರವಲ್ಲ. ಇದನ್ನು ಪಠಿಸಿದರೆ ಇತರರಿಗೂ ಲಾಭವಿದೆ. ಓಂ ನಮಃ ಶಿವಾಯ ಮಂತ್ರವನ್ನು ಬದ್ಧತೆ ಮತ್ತು ಏಕಾಗ್ರತೆಯಿಂದ ಪಠಿಸಿದರೆ ಆಗ ನಮಗೆ ಮಾನಸಿಕ ಬಲ, ಶಕ್ತಿ ಮತ್ತು ಪ್ರೇರಣೆ ಸಿಗುತ್ತದೆ. ಇದರಿಂದ ನೀವು ಜೀವನದ ಗುರಿಯನ್ನು ತಲುಪಬಹುದಾಗಿದೆ.  ಆರೋಗ್ಯದ ಗುಟ್ಟು-ಸರ್ವಂ ಶಿವ ಮಯಂ

ಜೀವನದಲ್ಲಿ ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ ಆ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿದರೆ ಆಧ್ಯಾತ್ಮಿಕ ಶಕ್ತಿ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಇದರಿಂದ ಜೀವನದ ಸಂಕಷ್ಟದಿಂದ ಪಾರಾಗಬಹುದು. ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳಲು ಮುಂದಕ್ಕೆ ಓದಿ...   

ಓಂ ನಮಃ ಶಿವಾಯ ಹೆಚ್ಚು ಶಕ್ತಿಯುತ ಮಂತ್ರ

ಓಂ ನಮಃ ಶಿವಾಯ ಹೆಚ್ಚು ಶಕ್ತಿಯುತ ಮಂತ್ರ

ಹಿಂದೂ ಮಂತ್ರಗಳಲ್ಲಿ ಹೆಚ್ಚು ಶಕ್ತಿಶಾಲಿ ಮಂತ್ರವಾಗಿರುವ ಓಂ ನಮಃ ಶಿವಾಯ ಹೆಚ್ಚು ಶಕ್ತಿಯುಳ್ಳದ್ದು. ಈ ಮಂತ್ರವು ಅದ್ಭುತಗಳನ್ನು ಹೊಂದಿದೆ.

ನಾನು ಶಿವನಿಗೆ ನಮಿಸುತ್ತೇನೆ

ನಾನು ಶಿವನಿಗೆ ನಮಿಸುತ್ತೇನೆ

ಓಂ ನಮಃ ಶಿವಾಯ ಎಂದರೆ ನಾನು ಶಿವನಿಗೆ ವಂದಿಸುತ್ತೇನೆ ಎಂದಾಗಿದೆ. ನಿಮ್ಮಲ್ಲಿರುವ ನೈಜ ಗುರುತನ್ನು ಶಿವನು ಪ್ರತಿಪಾದಿಸುತ್ತಾರೆ. ಹಿಂದೂ ಧರ್ಮಗಳ ಪ್ರಕಾರ ಸೃಷ್ಟಿಯನ್ನು ರಚಿಸುವವರು ಬ್ರಹ್ಮ, ಸೃಷ್ಟಿಯನ್ನು ರಕ್ಷಿಸುವವರು ವಿಷ್ಣು ಅಂತೆಯೇ ಸೃಷ್ಟಿ ನಾಶಕ್ಕೆ ಕಾರಣರಾಗಿರುವವರು ಶಿವ ಎಂದಾಗಿದೆ.

ಮಂತ್ರದ ಶಕ್ತಿ

ಮಂತ್ರದ ಶಕ್ತಿ

ಮೂರು ದೇವರುಗಳಲ್ಲಿ ಶಿವನನ್ನು ವಿನಾಶಕ ಎಂದು ಕರೆಯುತ್ತಾರೆ. ಇದರರ್ಥ ನಮ್ಮ ಅಂತರಾತ್ಮದಲ್ಲಿರುವ ಪ್ರತಿಯೊಂದರ ವಿನಾಶಕ ಶಿವನಾಗಿದ್ದಾರೆ ಎಂದಾಗಿದೆ. ಈ ಮಂತ್ರವನ್ನು ಪುನಃ ಉಚ್ಛರಿಸುವವರು ತಮ್ಮನ್ನು ತಾವೇ ಶಿವನಿಗೆ ಅರ್ಪಿಸಿದಂತೆ.

ಹೆಚ್ಚು ಶಕ್ತಿಯುತ ಮಂತ್ರ

ಹೆಚ್ಚು ಶಕ್ತಿಯುತ ಮಂತ್ರ

ಓಂ ನಮಃ ಶಿವಾಯ ಎಂಬುದು ಹೆಚ್ಚು ಶಕ್ತಿಯುತ ಮಂತ್ರವಾಗಿದೆ. ಈ ಮಂತ್ರವು ನಿಮ್ಮ ಹೃದಯದಲ್ಲಿ ವೈಬ್ರೇಶನ್ ಅನ್ನು ಉಂಟುಮಾಡುವುದರಿಂದ ನೀವು ಧ್ಯಾನ ಇಲ್ಲವೇ ಯೋಗವನ್ನು ಅಭ್ಯಾಸ ಮಾಡಬೇಕಾಗಿಲ್ಲ. ಈ ಮಂತ್ರವನ್ನು ಉಚ್ಛರಿಸುವುದು ಉತ್ತಮ ವೇಳೆಯಲ್ಲಾಗಿರಬೇಕು. ಎಲ್ಲಾ ನಿರ್ಬಂಧನೆಗಳು ಈ ಮಂತ್ರಕ್ಕೆ ಮುಕ್ತವಾಗಿದೆ.

ಓಂ ನಮಃ ಶಿವಾಯ ಮಂತ್ರವನ್ನು ಪುನಃರುಚ್ಛರಿಸುವುದು ಹೇಗೆ?

ಓಂ ನಮಃ ಶಿವಾಯ ಮಂತ್ರವನ್ನು ಪುನಃರುಚ್ಛರಿಸುವುದು ಹೇಗೆ?

ಇದನ್ನು ಯಾರೂ ಬೇಕಾದರೂ ಪಠಿಸಬಹುದಾಗಿದೆ. ಬಡವ, ಶ್ರೀಮಂತ, ಯುವಕರು, ಹಿರಿಯರು, ಕಿರಿಯರು ಹೀಗೆ ಯಾರು ಬೇಕಾದರೂ ಮಂತ್ರವನ್ನು ಪಠಿಸಬಹುದಾಗಿದೆ. ನಿಮಗೆ ಆರಾಮದಾಯಕವಾಗಿರುವ ಮತ್ತು ಶಾಂತಿಯುತ ಸ್ಥಳದಲ್ಲಿ ಕೂತು ಈ ಮಂತ್ರವನ್ನು ಪಠಿಸಬೇಕು. ನೀವು ಮಂತ್ರವನ್ನು ಉಚ್ಛರಿಸುವುದು ಒಂದೇ ವೇಗದಲ್ಲಾಗಿರಬೇಕು.

ನಂಬಿಕೆಯೊಂದಿಗೆ ಮಂತ್ರವನ್ನು ಉಚ್ಛರಿಸಿ

ನಂಬಿಕೆಯೊಂದಿಗೆ ಮಂತ್ರವನ್ನು ಉಚ್ಛರಿಸಿ

ನಿಮ್ಮೊಳಗಿನ ಆತ್ಮಕ್ಕೆ ಶಿವನಿಗೆ ನೀವು ನಿಮ್ಮದೆಲ್ಲವನ್ನೂ ಅರ್ಪಿಸುತ್ತಿದ್ದೀರಿ ಎಂಬ ನಂಬಿಕೆಯೊಂದಿಗೆ ಈ ಮಂತ್ರವನ್ನು ಉಚ್ಛರಿಸಿ.

ನಿಮ್ಮನ್ನು ನೀವೇ ಅರಿತುಕೊಳ್ಳುವುದು

ನಿಮ್ಮನ್ನು ನೀವೇ ಅರಿತುಕೊಳ್ಳುವುದು

ಮಂತ್ರವನ್ನು ಉಚ್ಛರಿಸುವಾಗ ನಿಮ್ಮೊಳಗಿನ ಚೈತನ್ಯ ಶಕ್ತಿಯನ್ನು ನೀವೇ ಅರಿತುಕೊಳ್ಳಲು ಸಮರ್ಥರಾಗಿರುತ್ತೀರಿ. ನಿಮಗೆ ಶಿವನ ಸಾಕ್ಷಾತ್ಕಾರವಾಗುತ್ತದೆ. ಇದು ನಿಮ್ಮಲ್ಲಿ ವೈಬ್ರೇಶನ್ ಅನ್ನು ಉಂಟುಮಾಡುತ್ತದೆ. ಲೋಕಲ್ಲಿರುವ 99% ದಷ್ಟು ಋಣಾತ್ಮಕ ಅಂಶಗಳನ್ನು ದೂರಮಾಡುತ್ತದೆ.

ಮಂತ್ರದೊಂದಿಗೆ ದೇವರ ಆರಾಧನೆ

ಮಂತ್ರದೊಂದಿಗೆ ದೇವರ ಆರಾಧನೆ

ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರೊಂದಿಗೆ ದೇವರಿಗೆ ಇತರ ಪೂಜೆಗಳನ್ನು ನಡೆಸಬಹುದಾಗಿದೆ. ಲೋಕದಲ್ಲಿರುವ ಋಣಾತ್ಮಕ ಅಂಶಗಳನ್ನು ಕಡಿಮೆ ಮಾಡಲು ಹಿರಿಯರು ಪೂಜೆ ಹವನಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಶಕ್ತಿಯುತ ಮಂತ್ರ

ಶಕ್ತಿಯುತ ಮಂತ್ರ

ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿಮಿತವನ್ನು ಇದು ನಿಯಂತ್ರಿಸುತ್ತದೆ. ನಿಮ್ಮ ದೇಹಕ್ಕೆ ಮನಸ್ಸಿಗೆ ಇದು ಶಾಂತಿಯನ್ನು ಸಂತಸವನ್ನು ನೀಡುತ್ತದೆ.

ನಿಮ್ಮನ್ನು ನೀವೇ ಎತ್ತರಕ್ಕೆ ಕಂಡುಕೊಳ್ಳುವುದು

ನಿಮ್ಮನ್ನು ನೀವೇ ಎತ್ತರಕ್ಕೆ ಕಂಡುಕೊಳ್ಳುವುದು

ನಿಮ್ಮನ್ನು ನೀವೇ ಎತ್ತರಕ್ಕೆ ಕಂಡುಕೊಳ್ಳುವ ಸಾಮರ್ಥ್ಯವನ್ನು ಮಂತ್ರವು ನಿಮಗೆ ನೀಡುತ್ತದೆ. ನಿಮ್ಮ ಆತ್ಮವನ್ನು ಶುದ್ಧೀಕರಿಸುವ ಶಕ್ತಿಯನ್ನು ಚೈತನ್ಯವನ್ನು ಇದು ನಿಮಗೆ ದಯಪಾಲಿಸುತ್ತದೆ.

ಮನಸ್ಸಿನ ಶಾಂತಿ ಮರಳುವುದು

ಮನಸ್ಸಿನ ಶಾಂತಿ ಮರಳುವುದು

ಜೀವನ ಯಾವತ್ತೂ ಹೂವಿನ ಹಾದಿಯಾಗಿರುವುದಿಲ್ಲ. ಸಮಸ್ಯೆಗಳೆಂಬ ಮುಳ್ಳುಗಳೇ ಅತಿಯಾಗಿ ನಿಮ್ಮನ್ನು ಚುಚ್ಚುತ್ತಾ ಇದ್ದರೆ ಆಗ ಇಡೀ ವಿಶ್ವವೇ ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದೆಯೆಂದು ನಿಮಗನಿಸುತ್ತದೆ. ಇದರಿಂದ ಮಾನಸಿಕ ಶಾಂತಿ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ. ಈ ಮಂತ್ರವೇ ನಿಮ್ಮ ಮನಶಾಂತಿಯನ್ನು ಮರಳಿ ತರುತ್ತದೆ ಇದರ ಬಗ್ಗೆ ನೀವು ಯೋಚಿಸಿ.

ಐದು ಅಕ್ಷರಗಳ ಮಹತ್ವ

ಐದು ಅಕ್ಷರಗಳ ಮಹತ್ವ

ಇದರಲ್ಲಿ ಐದು ಅಕ್ಷರಗಳ ಮಹತ್ವವಿದೆ. ನ, ಮ, ಶಿ, ವಾ ಮತ್ತು ಯ. ಹಿಂದೂ ಪುರಾಣಗಳ ಪ್ರಕಾರ ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ನೀರು ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ. ಇದನ್ನು ಪಠಿಸುತ್ತಾ ಇದ್ದರೆ ದೇವರು ಎಲ್ಲಾ ಕಡೆ ಇದ್ದಾನೆಂದು ನಿಮಗನಿಸುತ್ತದೆ.

ಓಂ ನಮಃ ಶಿವಾಯ ಮಂತ್ರ

ಓಂ ನಮಃ ಶಿವಾಯ ಮಂತ್ರ

ಇನ್ನು ಮುಂದೆ ದಿನದ ಆರಂಭಕ್ಕೆ ಮೊದಲು ಶಿವನನ್ನು ನೆನೆದು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಮನಶಾಂತಿ ಮರಳುತ್ತದೆ

For Quick Alerts
ALLOW NOTIFICATIONS
For Daily Alerts

    English summary

    Miracles of Om Namah Shivaya powerful Mantra

    Om Namah Shivaya is known as the great redeeming powerful mantra also known as five-syllable mantra. Om Namah Shivaya is one of the most popular Hindu mantras and the most important mantra in Shaivism. You may not be knowing many miracles of this mantra.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more